ಡಾ.ಸುಜಾತಾ.ಚಲವಾದಿಯವರ ಪ್ರಬಂಧ

ಲಲಿತ ಪ್ರಬಂಧ

ಮನುಷ್ಯ ಮತ್ತು ಪ್ರೀತಿ

ಒಂದು ದಿನ ಸಾಯಂಕಾಲದ ಹೊತ್ತಲ್ಲಿ ಅರ್ಜಂಟಾಗಿ ಕೆಲಸ ಬಂದ ಕಾರಣ ಬೇಗ ಬೇಗ ರಡಿಯಾಗಿ ಕೆಲಸವಿದ್ದ ಸ್ಥಳಕ್ಕೆ ಹೋಗಲು ಗಡಿಬಿಡಿಯಿಂದ ಗಾಡಿ ಹೊರತಗೆದು ಹೊರಟೆ . ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ಜೋರಾಗಿ ಮಳೆ ಬರಲು ಪ್ರಾರಂಭಿಸಿತು. ಮಳೆಯೆಂದರೆ ನನಗೂ ಇಷ್ಟಾನೇ ಆದರೆ ಅಂದು ಮಳೆಯಲ್ಲಿ ನೆನೆಯುವ ಹಾಗೆ ಸಂದರ್ಭವಿರಲಿಲ್ಲ.ಯಾರನ್ನೊ ಬೇಟಿಯಾಗಬೇಕಿತ್ತು ಹೀಗಾಗಿ ಹೊರಟೆ. ಗಾಡಿ ಜೊರಾಗಿ ಓಡಿಸುತ್ತಲೇ ಮುಂದೆ ಸಾಗಿದೆ ಮಳೆಯೋ ಮುನಿಸಿಕೊಂಡ ಹಾಗೆ ಮುಖಕ್ಕೆ ರಪ್ಪ ರಪ್ಪ ಎಂದು ಮಳೆಯ ಹನಿ ತನ್ನ ಸಾತ್ವಿಕ ಸಿಟ್ಟನ್ನು ತೊರುತ್ತಲೆ ಇತ್ತು. ಹೊಗುವ ಅವಸರದಲ್ಲಿ ಕನ್ನಡಕ ಕೂಡಾ ಹಾಕಿರಲಿಲ್ಲ .ಮಳೆರಾಯನ ಆರ್ಭಟಕ್ಕೆ ನಾನು ಕೂಡಾ ‘ಆಯ್ತು ಎಷ್ಟು ಮುಖಕ್ಕೆ ಹೊಡೊದುಕೊಳ್ಳವ ಆತುರ ಕಾತುರವಿದೆಯೋ ಇವತ್ತೇ ಮುಗಿಸಿಕೊ ‘ ಎಂದು ಹೇಳುತ್ತಲೆ ಸಾಗಿದೆ. ಮಳೆಯ ಹನಿಯಲ್ಲಿ ಸ್ವಲ್ಪ ಮಟ್ಟಿಗೆ ನೆನದದ್ದು ಆಯಿತು. ಗುಡುಗು ಸಿಡಿಲು ಒಂದರ ಹಿಂದೆ ಮತ್ತೊಂದು ಎನ್ನುವಂತೆ ಘರ್ಜಿಸುತ್ತಲೇ ಇತ್ತು. ಬೈಕನ್ನು ಜೊರಾಗಿ ಓಡಿಸಿದರೆ ಮಳೆಯಲ್ಲಿ ಸ್ಕಿಡ್ ಆಗುವ ಸಂಭವವೇ ಹೆಚ್ಚು ಎಂದು ಸ್ವಲ್ಪ ನಿಧಾನಕ್ಕೆ ಹೋಗುತ್ತಲೇ ಮಳೆಯಿಂದ ತಪ್ಪಿಸಿಕೊಳ್ಳಲು ಎಲ್ಲಿಯಾದರೂ ನಿಲ್ಲ ಬಹುದೇ ಎಂದು ಆಚೆ ಇಚೆ ನೊಡುತ್ತಲೇ ಮುಂದೆ ಹೋದೆ. ರಸ್ತೆ ಪಕ್ಕದಲ್ಲಿ ಒಬ್ಬ ಮಧ್ಯವಯಸ್ಕ ಮತ್ತೊಬ್ಬ ಹುಡುಗ ನಿಂತಿದ್ದರು. ಗಮನಿಸುತ್ತಲೇ ಮುಂದೆ ಹೋದೆ ಒಂದು ಪಕ್ಕದಲ್ಲಿ ತಗಡನಿ ಗ್ಯಾರೇಜ ಕಂಡೊಡನೆ ಮಳೆರಾಯನಿಗೆ ‘ಈಗ ಏನು ಮಾಡಿಕೊತಿ ನೀ’ ಎನ್ನುತ್ತಲೇ ಭರ್ರ್ ಎಂದು ಹೋಗಿ ಬೈಕ್‌ನ್ನು ನಿಲ್ಲಿಸಿ ಎರಡು ಸ್ಟೇಪ ಹತ್ತಿ ನೆನೆದ ಬಟ್ಟೆಯನ್ನು ನಿಧಾನಕ್ಕೆ ಹಿಂಡಿ ನೀರು ಹೊರಹಾಕಿ ಜಾಡಿಸಿ ಕೊಂಡು ನಿಂತೆ. ಮಳೆ ಮತ್ತಷ್ಟು ಜೋರಾಯಿತು. ಗ್ಯಾರೆಜ ಪಕ್ಕದಲ್ಲಿ ಒಂದಿಷ್ಟು ಆಡು ಮತ್ತು ದನಗಳು ಮಳೆಯಲ್ಲಿಯೇ ನೆನೆಯುತ್ತಿದ್ದವು. ಎಮ್ಮಿ, ದನ , ಕರು ಮಳೆಯನ್ನು ಲೆಕ್ಕಿಸದೇ ತಮ್ಮ ಪಾಡಿಗೆ ತಾವು ನಿಧಾನಕ್ಕೆ ಹೆಜ್ಜೆ ಹಾಕಿ ಒಂದರ ಹಿಂದೆ ಮತ್ತೊಂದು ಹೊಗುತ್ತಲೇ ಇದ್ದವು.ಅಷ್ಟರಲ್ಲಿ ಒಂದು ಆಡು ‘ಸಾಕಪ್ಪ ಈ ಮಳೆ’ ಎನ್ನುವಂತೆ ಓಡಿ ಬಂದು ನಾ ನಿಂತ ಜಾಗದಲ್ಲೆ ಬಂದು ನಿಂತಿತು. ನಿಧಾನಕ್ಕೆ ಮೈ ಕೊಡವಿಕೊಳ್ಳುತ್ತಾ ನಿಂತಿತು. ಅಷ್ಟೊಂದು ಗಮನಿಸದೇ ‘ನಾನು ಯಾಕಾದರೂ ಈಗ ಹೊರ ಬಂದೆ ನಾಳೆ ಬರುವೆ ಎಂದರೆ ಆಗುತ್ತಿತ್ತು’ ಎಂದು ಮನಸ್ಸಿನಲ್ಲಿ ಪಿಸುಗುಟ್ಟುತ್ತಲೇ ನಿಂತುಕೊಂಡೆ. ಹದಿಹರೆಯದ ಹುಡುಗರು ಮಳೆಯನ್ನು ಎಂಜಾಯ್ ಮಾಡುತ್ತ ಮಳೆಯಲ್ಲಿಯೇ ಬೈಕನ್ನು ಜೋರಾಗಿ ಓಡಿಸುತ್ತ ಮಳೆಯ ರಭಸಕ್ಕೆ ಜೊರಾಗಿ ಕೂಗು ಹಾಕುತ್ತ ಹೊಗುತ್ತಿದ್ದರು. ಇನ್ನೊಂದಿಷ್ಟು ಹುಡುಗರು ಮಳೆಯಲ್ಲಿ ತೊಯಿಸಿಕೊಂಡಾಗಿದೆ ಜೊರಾಗಿ ಯಾಕೆ ಹೊಗಬೇಕು ಎಂಬಂತೆ ನಿಧಾನಕ್ಕೆ ನೆನೆಯುತ್ತಲೇ ನಡೆದುಕೊಂಡು ಹೊಗುತ್ತಿದ್ದರು.ಮಳೆಯ ಜೊರಾದ ಹನಿಗಳಿಂದ ರಸ್ತೆಕೂಡ ಕಾಣುತ್ತಿರಲಿಲ್ಲ ಎದುರು ಬದುರು ಬಂದ ಗಾಡಿಯ ಹೆಡ್ ಲೈಟ ಗಳು ಅತ್ತಿಂದ ಇತ್ತ ,ಇತ್ತಿಂದ ಅತ್ತ ಓಡಾಡುತ್ತಲೇ ಇದ್ದವು. ಅಷ್ಟರಲ್ಲಿ ಪೋನ ರಿಂಗಾಯಿತು.ಮೆಡಮ್ ಎಲ್ಲಿ ಇದಿರಾ ಎಂದು ಕೇಳಿದರು ಮಳೆ ಬರತಾಇದೆ ಬರುವೆ ವೆಟ್ ಮಾಡಿ ಸರ್ ಎಂದು ಮಾತನಾಡುವಾಗ ರಸ್ತೆಯ ಪಕ್ಕದಲ್ಲಿ ನಿಂತ ಆ ಇಬ್ಬರು ನಾ ನಿಂತ ಜಾಗವನ್ನು ಆಶ್ರಯಿಸಿ ಬಂದು ನಿಂತುಕೊಂಡರು. ಪಕ್ಕದಲ್ಲಿನಿಂತ ಆಡಿಗೆ ತಾನು ಸುರಕ್ಷಿತ ಸ್ಥಳದಲ್ಲಿ ಇದ್ದೆನೆ ಎಂಬ ದೈರ್ಯ ಬಂದ ಹಾಗೆ ಆಯಿತು ಎನಿಸುತ್ತದೆ. ನಿಧಾನಕ್ಕೆ ಒಂದು ಸಲ ಬ್ಯಾಹಹಹಹಃ ಎಂದು ಕೂಗಿ ಸುಮ್ಮನಾಯಿತು. ಆಗ ನನ್ನ ಲಕ್ಷ ಅದರ ಕಡೆ ಹೋಯಿತು. ಮಳೆಯಲ್ಲಿ ನೆನೆದರಿಂದ ಹೀಗೆ ಕೂಗ ಬಹುದು ಎಂದು ನಿಧಾನಕ್ಕೆ ಅದರ ತಲೆಯ ಮೇಲೆ ಒಮ್ಮೆ ಕೈಯಾಡಿಸಿದೆ. ಮುಖ ಕೊಟ್ಟು ನನ್ನ ತೊಡೆಗೆ ಒಮ್ಮೆ ಉಜ್ಜಿ ಸುಮ್ಮನೆ ನಿಂತುಕೊಂಡಿತು. ನಾನು ಮಳೆರಾಯ ಯಾವಾಗ ತನ್ನ ಈ ನರ್ತನ ನಿಲ್ಲಿಸುತ್ತಾನೋ ಎಂದು ಆ ಕಡೆ ಈ ಕಡೆ ಹೊಗಿಬರುವವರನ್ನು ನೋಡುತ್ತಲೇ ನಿಂತ ಜಾಗದಲ್ಲೇ ನಿಂತು ಕೊಂಡೆ. ಮಳೆ ಹೆಚ್ಚಾಯಿತೇ ವಿನಃ ಕಡಿಮೆ ಯಾಗಲಿಲ್ಲ. ನಾ ನಿಂತ ಗ್ಯಾರೇಜ ತಗಡಿನದ್ದು ಮೇಲಿನಿಂದ ಒಂದೊಂದೇ ಹನಿ ಟಪ್ ಟಪ್ ಎಂದು ಸದ್ದು ಮಾಡುತ್ತಲೇ ನಿಂತ ಕಾಲ ಕೆಳಗೆ ಮಳೆನೀರು ಬರಲು ಪ್ರಾರಂಭಿಸಿತು. ಅದೇ ಗ್ಯಾರೇಜನಲ್ಲಿ ನಿಂತ ಹುಡುಗನ ಕಾಲಿಗೆ ಕೆಂಪುಇರುವೆ ಮುತ್ತಿಕೊಂಡು ಅವನಿಗೆ ಹಿಂಸೆ ಕೊಡಲು ಪ್ರಾರಂಭಿಸಿದವು. ಅವುಗಳದ್ದೆನು ತಪ್ಪರಲಿಲ್ಲ ಇರುವೆಯ ಗೂಡಿನ ಮೇಲೆ ಅವನು ನಿಂತ ಪರಿಣಾಮವದು. ನಾನು ಒಮ್ಮೆ ನೋಡಿ ಸುಮ್ಮನಾದೆ. ಘಳಿಗೆಗೊಮ್ಮೆ ಕೈಗಡಿಯಾರವನ್ನು ನೊಡುತ್ತಲೇ ಪೇಚಾಡುತ್ತಿದ್ದೆ. ಪೋನ ಹಾಗೆ ಬರತಾನೆ ಇತ್ತು. ಮಳೆಯ ಜೋರು ಪೋನ ಬಂದದ್ದನ್ನು ಕೇಳಿಸದ ಹಾಗೆ ಮಾಡಿತ್ತು. ಪಕ್ಕದಲ್ಲಿ ನಿಂತ ಆಡು ಮತ್ತೇ ಜೋರಾಗಿ ಬ್ಯಾಹಹಹಃ ಬ್ಯಾಹಹಹಃ ಎಂದು ಕೂಗಲು ಪ್ರಾರಂಬಿಸಿತು ಮರೆತು ನಿಂತ ನನಗೆ ಎಚ್ಚರಿಕೆ ಗಂಟೆ ಹೊಡೆದ ಹಾಗಾಯಿತು. ಮತ್ತೆ ತಲೆ ಮೇಲೆ ಕೈಯಾಡಿಸಿದೆ ಪಕ್ಕದಲ್ಲಿ ನಿಂತ ಇಬ್ಬರು ವ್ಯಕ್ತಿಗಳು ಏನೊ ಅಜಿಬ ( ವಿಚಿತ್ರ ಅಥವಾ ಹೊಸದನ್ನು) ನೋಡಿದ ಹಾಗೇ ನಿಂತುನೊಡುತ್ತಿದ್ದರು . ಆಡಿನ ಧ್ವನಿ ಮತ್ತಷ್ಟು ಜೋರಾಯಿತು ಯಾವದೋ ಸಂಕಟ ತಳಮಳ ಅದಕ್ಕೆ ಆದ ಹಾಗಾಯಿತು ಎನಿಸುತ್ತಿದೆ. ನಿಂತ ಜಾಗದಿಂದ ಒಂದು ಹೆಜ್ಜೆ ಮುಂದೆ ಹೋಗಿ ಅಕ್ಕ ಪಕ್ಕದ ರಸ್ತೆಗಳ ಕಡೆಗೆ ನೊಡುತ್ತಲೇ ಕೂಗ ಹತ್ತಿತ್ತು. ಇದು ಯಾಕೆ ಹೀಗೆ ಮಾಡುತ್ತಲೇ ಇದೆ ಎಂದು ಅದನ್ನೆ ನೊಡುತ್ತಲೇ ಇದ್ದೆ.

ಅದರ ಹಾವ ಭಾವ ಅದರ ತಳಮಳ ಸಂಕಟವನ್ನು ನೋಡಿ ಪಾಪ ಎಂದು ನಿಂತುಕೊಂಡೆ . ಇದು ಕೂಗಿದ ಧ್ವನಿ ಕೇಳಿಸಿಕೊಂಡಿರಬೇಕು. ಮತ್ತೊಂದು ಆಡುಮರಿ ಓಡಿಬಂದು ನಿಂತಿತು. ಗಾಬರಿಯಾದ ಆಡು ಮತ್ತೆ ಕೂಗತೊಡಗಿತು. ಆಡಿನ ದ್ವನಿ ತುಂಬಾ ಕರ್ಕಶವಾದ ದ್ವನಿಯನ್ನು ಹೊರಹಾಕಿ ಜೋರಾಗಿ ಕೂಗತೊಡಗಿತು. ಮತ್ತೇರಡು ಆಡುಗಳು ಬಂದು ನಿಂತವು.ಅದರೂ ಇದಕ್ಕೆ ಸಮಾಧಾನವಿರಲಿಲ್ಲ ಅವುಗಳ ಮುಖವನ್ನು ಒಮ್ಮೆ ನೋಡಿ ಮತ್ತೆ ಕೂಗಿತು.ಮತ್ತೇ ತಾನು ನಿಂತ ಜಾಗದಿಂದ ಮುಖವನ್ನು ಹೊರಚಾಚಿ ತಾನು ಬಂದ ರಸ್ತೆಯನ್ನೆ ನೋಡುತ್ತಿತ್ತು. ಗಾವರಿ ಕೂಡಾ ಆಗಿತ್ತು. ಆಗ ತಾನು ಹೆತ್ತ ಆಡಿನ ಮರಿ ಬಂದು ಎರಡು ಸ್ಟೇಪ್ ಜಿಗಿದು ಹಿಂದಕ್ಕೆ ಹೊಗಿ ನಿಲ್ಲುವಷ್ಟರಲ್ಲಿ ಇದು ಜೋರಾಗಿ ಕೂಗುವದನ್ನು ನಿಲ್ಲಿಸಿ, ‌ ನಿಧಾನಕ್ಕೆ ‘ಇಲ್ಲೆ ನನ್ನ ಹತ್ತಿರ ಬಾ ನಾ ಇಲ್ಲೆ ಇದ್ದೆನೆ ಎನ್ನುವಂತೆ ಬ್ಯಾಹಃ ಬ್ಯಾಹಃ ಎಂದು ತನ್ನ ಮರಿಯನ್ನು ನೊಡುತ್ತಲೇ ನಿಧಾನಕ್ಕೆ ಕೂಗಿದಾಗ ಆಡಿನ ಮರಿ ತಾಯಿಯ ಧ್ವನಿಯನ್ನು ಗಮನಿಸುತ್ತಿದ್ದಂತೆ ತಾಯಿಯ ತೆಕ್ಕೆಯಲ್ಲಿ ಬಂದುನಿಂತಾಗ ತಾಯಿಆಡಿಗೆ ಆದ ಖುಷಿ ಅಷ್ಟಿಷ್ಟಲ್ಲ. ಅದರ ಮೈತಿಕ್ಕ ತೊಡಗಿತ್ತು. ಮರಿಆಡಿಗೂ ಸಹ ತಾಯಿಯನ್ನು ಕಂಡ ಖುಷಿ. ಮುಖಕ್ಕೆ ಮುಖ ಕೊಟ್ಟು ಮೂಖಭಾಷೆಯಲ್ಲಿಯೇ ಸಂಭಾಷಣಿಗೆ ಇಳಿದಿದ್ದವು. ಪ್ರೀತಿ, ಕರುಣಿ,ಮಮಕಾರ ಒಟ್ಟೊಟ್ಟಿಗೆ ನೋಡಿ ಖುಷಿಯಾಯಿತು. ಮೂಕಪ್ರಾಣಿಗಳ ಪ್ರೀತಿಯನ್ನು ನೋಡಿ ಮೂಕವಿಸ್ಮಿತಳಾಗಿ ಒಂದು ಕ್ಷಣ ಕಣ್ಣು ತೇವವಾಯಿತು. ಬುದ್ದರ ಪ್ರೀತಿ ಕರುಣಿ ಮೈತ್ರಿ ಇದೆಯಲ್ಲವೇ. ಮನುಷ್ಯ ಮಾತು ಬಂದರೂ ಕೂಡಾ ಒಬ್ಬರಿಗೊಬ್ಬರು ಪ್ರೀತಿ ಕೊಡುವದರಲ್ಲಿ ಸೋತಿದ್ದಾನೆ.ಅಹಮ್ಮಿಕೆ ಹೆಚ್ಚಾಗಿದೆ. ಮೈತ್ರಿಭಾವ ದೂರವಾಗಿದೆ. ಕರುಣಿ ಮನುಷ್ಯನಿಂದ ಆಚೆ ನಿಂತು ನಗುತ್ತಲಿದೆ. ಇಂತಹ ದಯೆ, ಕರುಣಿ, ಮೈತ್ರಿಯನ್ನು ಮನುಷ್ಯ ಕೊಂದು ತನ್ನ ವಿಕೃತಿಯನ್ನು ಮೆರೆಯುತ್ತಿರುವದನ್ನು ನೊಡಿ ಒಂದು ಕ್ಷಣ ನನಗೆ ಹೇಸಿಗೆ ಹುಟ್ಟಿದ್ದು ಸುಳ್ಳಲ್ಲ ಕ್ರೂರತನದಿಂದ ಮೆರೆಯುವ ಮಾನವರಿಗೆ ಪ್ರೀತಿ, ದಯೆ,ಕರುಣಿ,ಮೈತ್ರಿ,,ಶೀಲಗಳ ಸಂದೇಶ ಮುಟ್ಟಿಸಲು ಮತ್ತೇ ಬುದ್ದ ಬರಬೇಕೆ? ಎಂದು ಅವುಗಳನ್ನೆ ಗಮನಿಸುತ್ತ ನಿಂತಿದ್ದೆ ಅರ್ಜೆಂಟಾಗಿ ಹೊಗಬೇಕಾದ ಕೆಲಸವನ್ನು ಮರೆತಿದ್ದೆ. ಅಷ್ಡರಲ್ಲಿ ಇಬ್ಬರು ತಾಯಂದಿರು “ಒಯ್ ಬರ್ರೀ ಮಳಿನಿಂತತಿ ನಡಿರಿ ಹೊಗೊಣ” ಎಂದು ಎಲ್ಲ ಆಡುಗಳಿಗೆ ಕರೆದರು. ಒಂದರ ಹಿಂದೆ ಒಂದು ಅವಿತುಕೊಳ್ಳುವಂತೆ ದ್ವನಿ ಕೇಳಿದ ತಕ್ಷಣ ಹಿಂದೆ ಸರಿಯ ತೊಡಗಿದವು.” ಒದರಿದ್ದು ಕೇಳಿಸಲ್ಲ ಇವುಕ ನಿಂದರ್ರಿ ಬಂದೆ “ಎಂದು ಒಬ್ಬ ಹೆಣ್ಣು ಮಗಳು ಕಟ್ಟೆಯ ಮೇಲೆ ಹತ್ತಿ ಬಂದು ಆಡುಗಳಿಗೆ ಜಬರಿಯಿಂದ ಹೊಡೆಯಲು ಪ್ರಾರಂಬಿಸಿದಳು. ‘ಮಳೆಯಲ್ಲಿ ನಾವು ಬರಲ್ಲ’ ಎನ್ನುವ ರೀತಿಯಲ್ಲಿ ನಿಂತ ಎಲ್ಲ ಆಡುಗಳು ಒಮ್ಮೆ ಕಟ್ಟೆಯ ಕೆಳಗೆ ಜಿಗಿತ ಕೊಟ್ಟು ಓಡುತ್ತಿದ್ದಂತೆ, ಅವುಗಳ ಮೈ ಮೇಲೆ ಜೋರಾಗಿ ಏಟು ಬಿಳಲು ನನಗೇ ನೊಡಲು ಆಗದೇ ನಾನು ಅಲ್ಲಿಂದ ಕಾಲು ಕಿತ್ತೆ. ಮಳೆಹನಿ ಹಾಗೆ ಜಿನುಗುತ್ತಿತ್ತು ನನ್ನ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳ ಸುರಿಮಳೆ ಪ್ರಾರಂಭವಾಯಿತು. ಮಳೆ ನಿಂತಿತು ಪ್ರಶ್ನೆಗಳು ಮಾತ್ರ ನಿಲ್ಲಲಿಲ್ಲ. ಮತ್ತೆ ಬುದ್ದರ ಕಡೆ ಧ್ಯಾನಸ್ಥೆಯಂತೆ ಮೂಕಳಾದೆ.


10 thoughts on “ಡಾ.ಸುಜಾತಾ.ಚಲವಾದಿಯವರ ಪ್ರಬಂಧ

  1. ಮಾನವಿಯತೆ ತುಂಬಿದ ಮನ ಮುಟ್ಟುವಂತ ಒಳ್ಳೆಯ ಕಥೆ ..ತಮಗೆ ಧನ್ಯವಾದಗಳು ಮೆಡಮ.. ಜಿ

    1. ತುಂಬಾ ಚೆನ್ನಾಗಿ ಮೂಡಿ ಬಂದಿದೆ ತುಂಬಾ ಧನ್ಯವಾದಗಳು ಮೇಡಂ

  2. ತುಂಬ ಚೆನ್ನಾಗಿದೆ ಪ್ರಬಂಧ ಮೇಡಂ ಅವರೇ
    ಧನ್ಯವಾದಗಳು

  3. Superb visualization on every situation.. mesmerizing story… Explorer can not stop on exploring… You are a patriarchy of explorer mam… Budha bless you… Nice story

  4. ಪ್ರಬಂಧ ವಾಸ್ತವಿಕ ನೆಲೆಯಲ್ಲಿ ಅರ್ಥಪೂರ್ಣ.ಅಭಿನಂದನೆಗಳು ಮೇಡಂ.

Leave a Reply

Back To Top