ವ್ಯತ್ಯಾಸ

ಸಣ್ಣಕಥೆ

ವ್ಯತ್ಯಾಸ

ಸ್ಮಿತಾ ರಾಘವೇಂದ್ರ

Recreating Paintings With AI And 3D Printing

ಒಬ್ಬ ಎಪ್ಪತ್ತು ವರ್ಷದ ಮುದುಕ ಜೀವನದಲ್ಲಿ

ದುಡಿದು ದುಡಿದು ಸುಸ್ತಾಗಿ ಇನ್ನು ಜೀವನ ಸಾಕು. ತಾನು ತನ್ನವರು ತನ್ನದು ಎನ್ನುತ್ತಾ ಮಕ್ಕಳ ಸುಖ, ಮಡದಿಯ ಆಸೆ, ಬಂಧುಗಳ ಬಯಕೆ, ಸಮಾಜದ ಬದ್ಧತೆಗಳು,  ಒಂದಾ ಎರಡಾ ಎಲ್ಲವನ್ನೂ ಪೋರೈಸಿ ಪೋರೈಸಿ ಸಾಕಾಗಿದೆ.ಯಾರಿಗೂ ಇದರ ಮಹತ್ವವಾಗಲಿ ಇದರ ಹಿಂದಿರುವ ಪ್ರೀತಿಯಾಗಲಿ ತಿಳಿದಿಲ್ಲ. ಇದೆಲ್ಲ ನನ್ನ ಕರ್ತವ್ಯವಾಗಿತ್ತು ಅದಕ್ಕೆ ಮಾಡಿದೆ ಇದರಲ್ಲಿ ಹೆಚ್ಚುಗಾರಿಕೆ ಏನಿಲ್ಲ ಎನ್ನುವ ತೀರ್ಪು ಯಾವತ್ತೋ ಕೊಟ್ಟಿದ್ದಾರೆ.

 ಇನ್ನೂ  ನಾನು ಪ್ರೀತಿಯನ್ನು ಪೊರೆಯುವದರಲ್ಲಿ ಯಾವ ಅರ್ಥವೂ ಇಲ್ಲ ಅನ್ನಿಸುತ್ತಿದೆ.

 ಸರ್ವಸ್ವವನ್ನು ತ್ಯಾಗ ಮಾಡಬೇಕು ಎಂದು ಯೋಚಿಸಿ, ಮನೆಯಿಂದ ಹೊರಬಿದ್ದು ಸುಮ್ಮನೆ ನಡೆಯ ತೊಡಗಿದ. ಗುರಿ ಇರಲಿಲ್ಲ ದಾರಿ ಒಯ್ದಲ್ಲಿಗೆ ತಲುಪುವುದಷ್ಟೇ ಅವನ ಉದ್ದೇಶವಾಗಿತ್ತು.

ಹಾಗೆ ನಡೆಯುತ್ತಾ ನಡೆಯುತ್ತಾ ಒಂದು ಗುಹೆ ಕಂಡಿತು. ಮುಕ್ತಿಗೆ ಮನಸಿನ ನೆಮ್ಮದಿಗೆ ಇದೇ ಸರಿಯಾದ ಜಾಗ. ಯಾರಿಗೂ ನನ್ನ ಕುರುಹು ಕೂಡಾ ಸಿಗುವದಿಲ್ಲ ಎಂದು ಯೋಚಿಸಿ ಕೃಷ್ಣ ಶ್ಯಮಂತಕ ಮಣಿಗೆ ಗುಹೆಯ ಹೊಕ್ಕಷ್ಟೇ ನಿರ್ಲಿಪ್ತ ಮತ್ತು ಘಟ್ಟಿ ಮನಸಿನಲ್ಲಿ ಗುಹೆಯನ್ನು ಪ್ರವೇಶಿಸಿದ.ಮತ್ತು ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಧ್ಯಾನಕ್ಕೆ ಕುಳಿತ. ಜೀವವನ್ನು ಸ್ವತಃ ಹತ್ಯೆ ಮಾಡಿಕೊಳ್ಳುವಂತಹ ದುಶ್ಕ್ರತ್ಯಕ್ಕೆ ಅವನ ಮನಸು ಒಪ್ಪಲಿಲ್ಲ. ಪಾಪ ಪುಣ್ಯಗಳ ವಿವೇಚನೆ ಹೊಂದಿದ್ದ. ತಾನಾಗೇ ಸಾವು ಬರಲಿ ಎಂದು ಧ್ಯಾನಮಗ್ನನಾದ.

  ಸ್ವಲ್ಪ ದಿನಗಳ ನಂತರ ಅದೇ ಸ್ಥಳಕ್ಕೆ ಸುಮಾರು ನಲವತ್ತು ವರ್ಷದ ಯುವಕ ಆಗುಹೆಯನ್ನು ಪ್ರವೇಶಿಸಿದ. ತನ್ನ ಹೆಂಡತಿ ಮಕ್ಕಳು ಅಕ್ಕಪಕ್ಕದವರು ಎಲ್ಲರ ಮೇಲೂ ಅಧಿಕಾರ ಚಲಾಯಿಸುತ್ತ, ಊರು ಕೇರಿಗಳನ್ನು ನಡುಗಿಸುತ್ತಾ, ತಾನಂದಂತೆ ನಡೆಯಬೇಕು ಎಲ್ಲರೂ ಎಂದು ಅದೇಶಿಸುತ್ತಿದ್ದ.

ಒಂದುದಿನ ಅಧಿಕಾರ ಚಲಾಯಿಸಿ ಚಲಾಯಿಸಿ ಬೇಸತ್ತು ಎಲ್ಲವನ್ನೂ ತ್ಯಾಗಮಾಡಿ  ಕಾಡಿನ ಮಾರ್ಗ ಹಿಡುದು ಅದೇ ಗುಹೆ ಸೇರಿದ. ಅವನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬಲವಾಗಿ ಕಾಡುತ್ತಿತ್ತು.

 ಅಲ್ಲಿ ಕುಳಿತ ಮುದುಕನನ್ನು ಕಂಡು ಇವನು ಸನ್ಯಾಸಿ ಇರಬೇಕೆಂದು ಯೋಚಿಸಿ ತನ್ನ ನೋವನ್ನು ಆ ಮುದುಕನಲ್ಲಿ ತೋಡಿಕೊಂಡ. ಇಲ್ಲ ನಾನೂ ಕೂಡಾ ಎಲ್ಲವನ್ನೂ  ತ್ಯಾಗ ಮಾಡಿ ಬಂದಿದ್ದೇನೆ. ನನಗೆ ಬದುಕು ತೃಪ್ತಿಯಾಗಿದೆ ಎಂದ.

ಸರಿ ನಾವು ಯಾವುದಾದ್ರೂ ಮುನಿಗಳಲ್ಲಿಗೆ ಹೋಗೋಣ ನಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದ ನಲವತ್ತು ವರ್ಷದ ಯುವಕ. ಇಲ್ಲ ನಾನು ಬರಲಾರೆ ನಿರ್ಧಾರ ಮಾಡಿ ಆಗಿದೆ ಎಂದ ಮುದುಕ. ಇವರ ಮಾತುಗಳನ್ನೆಲ್ಲ ಕೇಳಿಸಿ ಕೊಳ್ಳುತ್ತಿದ್ದ ತಪಸ್ವಿಯೊಬ್ಬ  ಅವರಿಬ್ಬರೆದುದುರು ಕಾಣಿಸಿಕೊಂಡು, ನೋಡಿ ನಿಮಗಿಬ್ಬರಿಗೂ ಬದುಕು ಸಾಕಾಗಿದೆ.ತ್ಯಾಗ ಮಾಡುವ ಭಾವ ಇಬ್ಬರಿಗೂ ಬಂದಿದೆ.ಆದರೆ ನಿನಗೆ ನಲವತ್ತನೇ ವಯಸ್ಸಿಗೆ ಬಂದರೆ ಅವನಿಗೆ ಎಪ್ಪತ್ತನೆಯ  ವಯಸ್ಸಿಗೆ ಬಂದಿದೆ.ಯಾಕೆಂದರೆ ನೀವು ಬದುಕಿದ ರೀತಿ ವಿಭಿನ್ನವಾಗಿದೆ.

ನಿಜವಾದ ತ್ಯಾಗ ಎಂದರೆ ಎಪ್ಪತ್ತು ವಯಸ್ಸಿನ ಮುದುಕನದ್ದು  ಅವನಲ್ಲಿ ನಿಸ್ವಾರ್ಥ ಪ್ರೀತಿ ಇತ್ತು ಹಾಗಾಗಿ ಜೀವನದುದ್ದಕ್ಕೂ ಪ್ರತಿಯೊಂದನ್ನು ತ್ಯಾಗ ಮಾಡುತ್ತಲೇ ಜೀವಿಸಿದ. ಮಕ್ಕಳಿಗೆ ಚಾಕಲೇಟ್ ಇಷ್ಟ ಎಂದು ಅದನ್ನು ತ್ಯಜಿಸುವದರಿಂದ ಹಿಡಿದು ಇನ್ನು ಯಾರಿಗೂ ತೊಂದರೆ ಕೊಡಬಾರದು  ಅವರವರ ಬದುಕು ಅವರು ಮಾಡಿಕೊಂಡಿದ್ದಾರೆ ಎಂದು ಖಾತ್ರಿ ಪಡಿಸಿಕೊಂಡು ನಿರ್ಗಮಿಸಿದ. ಆದರೆ ನೀನು ನಿನ್ನ ಅಧಿಕಾರ ಲಾಲಸೆಗೆ ಎಲ್ಲರಿಂದಲೂ ತ್ಯಾಗವನ್ನು ನಿರೀಕ್ಷಿಸಿ ನೆಮ್ಮದಿ ಇಲ್ಲದೇ ಕಾಡು ಸೇರಿದೆ.ಈಗ ತಾನೇ ಎಲ್ಲವನ್ನೂ ತ್ಯಾಗ ಮಾಡುತ್ತೇನೆ ಎನ್ನುತ್ತಿರುವೆ.

“ತ್ಯಾಗ ಎಂದರೆ ಇಷ್ಟೇ ಪರುಶುದ್ಧ ಪ್ರೀತಿ”

ಸುಮ್ಮನೇ ಪ್ರೀತಿಸುತ್ತ ಹೋದರೆ ಸಾಕು ಖುಷಿ ನಮ್ಮ ಬೆನ್ನಿಗೆ ಅಂಟಿಕೊಂಡೇ ಬರುತ್ತದೆ.ತ್ಯಾಗ ಮತ್ತು ಪ್ರೀತಿ ಒಂದೇ ನಾಣ್ಯದ ಎರಡು ಮುಖಗಳಂತೆ.

 ನೀನು ಎಂತಹ ತ್ಯಾಗ ಮಾಡಿದರೂ  ಇವನಂತೆ ನಿನಗೆ ಬದುಕಿನಲ್ಲಿ ನೆಮ್ಮದಿ ಇಲ್ಲ.ಆತ ಬದುಕು ತೃಪ್ತಿ ಯಾಗಿದೆ ಅಂದ ನೀನು ಬದುಕು ಸಾಕಾಗಿದೆ ಎಂದೆ ಇಷ್ಟೇ ವತ್ಯಾಸ.


3 thoughts on “ವ್ಯತ್ಯಾಸ

Leave a Reply

Back To Top