ಹಾಗೊಂದು ವೇಳೆ ಗೆಳೆಯನಾಗುವಂತಿದ್ದರೆ

ಕಾವ್ಯಯಾನ

ಹಾಗೊಂದು ವೇಳೆ ಗೆಳೆಯನಾಗುವಂತಿದ್ದರೆ

ಅಶೋಕ ಹೊಸಮನಿ

ಹಾಗೊಂದು ವೇಳೆ ಉಸಿರಾಡುವುದಾದರೆ
ಗಳಿಗೆ ಗಳಿಗೆಗಳ ಲೆಕ್ಕವಿಡಬೇಕು
ರಾತ್ರಿಗಳ ಮಡಚಬೇಕು
ಹಗಲುಗಳ ನೇಯ್ದಿರಬೇಕು

ಹಾಗೊಂದು ವೇಳೆ ಕೊಂಡಾಡಬೇಕೆಂದರೆ
ಚಿತ್ರಗಳ ಪಟ್ಟಿಯಿಡಬೇಕು
ಅಂಗೀಕಾರದ ಮುದ್ರೆಯಿದ್ದರೆ

ಹಾಗೊಂದು ವೇಳೆ ಪ್ರೇಮವ ಅಪ್ಪಿಕೊಳ್ಳುವಂತಿದ್ದರೆ
ಕೀಳಿಸಿಕೊಳ್ಳಬೇಕು ಕಣ್ಣು
ಮಣ್ಣಿಗೂ ಹತ್ತಿರವಾಗಬೇಕು

ಹಾಗೊಂದು ವೇಳೆ ಆಕಾಶಕಾಯವಾಗುವಂತಿದ್ದರೆ
ಜೀವಕಾಯದ ಪೆಟ್ಟುಗಳಿಗೆ ಪಕ್ಕಾಗಬೇಕು

ಹಾಗೊಂದು ವೇಳೆ ಹಾಜರಾತಿಗೆ ಹಪಾಹಪಿಸುವಂತಿದ್ದರೆ
ಕತ್ತರಿಸಬೇಕು ದಾರಿಯನ್ನು
ಪ್ರೇಮವನ್ನೂ

ಕಪ್ಪು ಬಣ್ಣಕ್ಕೂ ಉಸಿರ ತುಂಬಬೇಕು
ಹಾಗೊಂದು ವೇಳೆ
ಗೆಳಯನಾಗುವಂತಿದ್ದರೆ
————————–

2 thoughts on “ಹಾಗೊಂದು ವೇಳೆ ಗೆಳೆಯನಾಗುವಂತಿದ್ದರೆ

  1. ಹೂನಗವಿನ ಕೊಡದಂತಿದೆ
    ಹೊಸ ದಾರಿ ತೋರುತ್ತಿದೆ ಕವಿತೆ
    ಅಭಿನಂದನೆಗಳು ಅಶೋಕ ಅವರೆ

Leave a Reply

Back To Top