ಕಾವ್ಯಯಾನ
ಇದ್ದುಬಿಡು..
ಪ್ರೋ ವಿಜಯಲಕ್ಷ್ಮಿ ಪುಟ್ಟಿ
ಕ್ಷಣಕ್ಷಣಕ್ಕೂ
ಇದ್ದುಬಿಡು
ನೀ ನನ್ನ ಜೊತೆ
ಹೃದಯಕ್ಕೆ ಗೊತ್ತಿಲ್ಲ ಸಂಭಾಳಿಸುವುದು
ಹೇಗೆಂದು
ನೀನಿರದ ಕೊರತೆಯ
ನಿಲ್ಲಿಸಿಕೊಳ್ಳಲಿ
ಹೇಗೆ ನಿನ್ನ
ತುಸು ಹೊತ್ತು
ಭಿನ್ನವಿಸಲಿ ಹೇಗೆ
ಪ್ರೀತಿಯ ಆ ಷರತ್ತು
ನನ್ನೆಡೆಗೆ ನೀ ಬಂದರೆ
ತುಂಬಿಟ್ಟುಕೊಳ್ಳುವೆ
ಕಣ್ಣಲ್ಲಿಯೇ
ಏನಿಲ್ಲ ತೊಂದರೆ
ಮಾತನಾಡದೆ
ಹೇಳಬೇಕಿದೆ
ನಾ ಎಲ್ಲವ
ನೀ ಕೇಳದೆ
ಅರ್ಥಮಾಡಿಕೋ
ನನ್ನೆಲ್ಲವ…