ಕಾವ್ಯಯಾನ
ಪ್ರಕೃತಿ ವಿಕೋಪ
ಶಾಲಿನಿ ಕೆಮ್ಮಣ್ಣು
ಅಕಾಲದಲ್ಲಿ ಬಾನಿಂದ
ಆರ್ಭಟಿಸಿತು ಮೇಘ
ಅಪ್ಪಳಿಸಿತು ಬರಸಿಡಿಲು
ಅಮಾಯಕ ಜೀವದ ಮೇಲೆ
ತಿಂಗಳೆರಡಾಯಿತು
ಜೀವ ಉಳಿದರೂ ಚೇತರಿಸಲಿಲ್ಲ
ಜೀವ ಶವವಾದ ಯುವಕ
ಮತ್ತೆ ಸುಡಲು ಸೂರ್ಯ
ಉರಿಬಿಸಿಲಿಗೆ ಎಲ್ಲೆಡೆ
ಅನಾರೋಗ್ಯದ ತಾಂಡವ
ಮತ್ತೆ ಭೀತಿಯ ವಾತಾವರಣ
ಉರಿಬಿಸಿಲ ದಿನದ ಸಂಜೆ
ಸುರಿಯಿತು ಮುಗಿಲು
ನುಗ್ಗಿತು ರಭಸದಿ ಮನೆಗಳಿಗೆ ಜಲರಾಶಿ
ಗಂಟೆಗಳಲ್ಲಿ ನಗರಗಳು ನೀರಸಾಗರ
ಪ್ರಕೃತಿಯೇ ರೂಪಿಸಿದ
ಜನರ ಮೇಲೆದೌರ್ಜನ್ಯವೇ,
ಈ ರೀತಿ ತಿರುಗಿ ಬೀಳುವುದು ಸರಿಯೇ
ಸ್ವೇಚ್ಛಾಚಾರಿಯಂತೆ ವರ್ತಿಸುವ,
ಪದೇಪದೇ ಬಣ್ಣ ಬದಲಿಸುವ
ಸಮಯ ಸಾಧಿಸುವ ಜನತೆಗೆ ತಿರುಗೇಟೇ ?
nice lines