ಕಾವ್ಯಲೋಕ
ಭ್ರಮೆ
ವಿಜಯಲಕ್ಷ್ಮೀ ಪುಟ್ಟಿ


ನನ್ನೊಳಗೊಂದು ಭ್ರಮೆ
ನಿನ್ನೊಳಗೊಂದು ಭ್ರಮೆ
ನೀ ನನ್ನವಳೆಂಬ ಭ್ರಮೆ
ನಾ ನಿನ್ನವನೆಂಬ ಭ್ರಮೆ
ನಮ್ಮೊಳಗೆ ಪ್ರೀತಿಯ ಭ್ರಮೆ
ಪ್ರೀತಿ ಒಳಹೊಕ್ಕು
ವಿರಹದಲಿ
ಬಿಟ್ಟಿರಲಾರದ ಭ್ರಮೆ
ನಿನ್ನ ಹೃದಯಕ್ಕೆ
ನಾನೇ ಪಟ್ಟದರಸಿ
ಎನ್ನುವ ಭ್ರಮೆ
ನನ್ನ ತನುವಿಗೆ
ನೀನೇ ದೊರೆ ಎನ್ನುವ ಭ್ರಮೆ
ಇಬ್ಬರೂ ಸ್ವಚ್ಚಂದವಾಗಿ
ಹಕ್ಕಿಯಾಗಿ ಹಾರುವ ಭ್ರಮೆ
ವಾಸ್ತವವನ್ನು ಮರೆತ ಭ್ರಮೆ
ವಾಸ್ತವಕ್ಕಿಂತ ಬಲು ಸುಖ
ಈ ನಮ್ಮ
ಭ್ರಮೆ ನೀಡುವ ಭ್ರಮೆ
************************