ಗಜಲ್
ಅಂಬಮ್ಮ ಪ್ರತಾಪ್ ಸಿಂಗ್ ಮಾನ್ವಿ


ಒಲವು ತುಂಬಿದ ಹೃದಯವನು ನೋಯಿಸದಿರು ಗೆಳೆಯ
ಅಗಲಿಕೆಯ ಕಹಿ ಮಾತುಗಳನು ನುಡಿಯದಿರು ಗೆಳೆಯ
ಗಾಯದ ಹೃದಯಕ್ಕೆ ಒಲವಿನ ಮುಲಾಮನು ಸವರಿದ್ದೆ
ವಿರಹದ ನೋವಿನ ಚೂರಿಯನು ಇರಿಯದಿರು ಗೆಳೆಯ
ಬಾಡಿ ಹೊಗುತ್ತಿದ್ದ ಬಳ್ಳಿಗೆ ಮರದಂತೆ ತಬ್ಬಿಕೊಂಡೆ
ಬದುಕಿಗೆ ಭಾರವೆಂದು ಕಿತ್ತು ಬಿಸಾಕದಿರು ಗೆಳೆಯ
ಪ್ರೀತಿಗಾಗಿ ಹಂಬಲಿಸಿದೆ ಹಸುಗೂಸು ಎದೆಹಾಲಿಗೆ ತಡಕಾಡುವಂತೆ
ಪ್ರೇಮದ ಅಮೃತಧಾರೆಗೆ ಅಣೆಕಟ್ಟು ಕಟ್ಟದಿರು ಗೆಳೆಯ
ಮೊಹಬ್ಬತ್ ನ ನಶೆಯಲಿ ಜೋಲಿ ಹೊಡೆಯುತ್ತಿರುವಳು ವನಿತಾ
ಇಷ್ಕನ ಮಧು ಬಟ್ಟಲು ಬರಿದು ಮಾಡದಿರು ಗೆಳೆಯ
***********