ಕಾವ್ಯಯಾನ
ಗಾಂಧಿ
ನಾಗರತ್ನ ಎಂ ಜಿ
ಗಾಂಧಿ
ನಡೆದ ಹಾದಿ
ಸತ್ಯ ಅಹಿಂಸೆ ಎಂಬ
ಕಲ್ಲು ಮುಳ್ಳುಗಳ ಗಾದಿ
ನಗು ನಗುತ್ತಲೇ
ಸವೆಸಿದರು ತುಂಡು ಬಟ್ಟೆ
ಬಿದಿರು ಕೋಲಿನಲ್ಲಿ
ಜೀವಿತಾವಧಿ
ಬಿಡಿಸಿ ದಾಸ್ಯದ
ಸಂಕಲೆಯಿಂದ
ಭಾರತಾಂಬೆಯನು
ಹೊರಟರು ತಾ ತೊರೆದು
ಜಗದ ಬಂಧವನು
ಮಹಾನ್ ಚೇತನದ
ತ್ಯಾಗಮರೆತ ಜನ
ಕೊನೆಗಾಣಿಸಿದರು
ರಾಷ್ಟ್ರಪಿತನ ಜೀವನ
ನೆನೆಯೋಣ ವರ್ಷಕ್ಕೊಮ್ಮೆಯಾದರೂ
ಮಹಾತ್ಮನ
ನಡೆಯೋಣ ನಿಜದ
ದಾರಿಯಲಿ ಒಂದು ದಿನ