ಗಜಲ್
ಡಾ.ಗೀತಾ ಪಾಟೀಲ
ಕಲ್ಲಾಗುವ ಕ್ರಿಯೆ ನಮಗೆ ಹೊಸತೇನು ಮಗಳೇ
ಆತ್ಮಘನತೆಯ ಬಾಳು ಕನಸಾಯಿತೇನು ಮಗಳೇ
ಮಾಡದ ತಪ್ಪಿಗೆ ಸಂಶಯದ ಶಾಪವದೇಕೋ
ಕಲ್ಲಾದ ಅಮಾಯಕಳ ಮರೆತೆಯೇನು ಮಗಳೇ
ಒಡಲ ಕುಡಿ ಹೊತ್ತಾಕೆ ಕಾನನದ ಕಲ್ಲಾದಳು
ಆದರ್ಶದ ಸೋಗು ಒಳ ಸಂಚಲ್ಲವೇನು ಮಗಳೇ
ಬಿಕರಿಯಾದಳು ಅರಸಿ ದಾಳದ ಪೇರುರಿಯಲಿ
ವ್ಯಸನಿಗೂ ‘ಧರ್ಮ’ಸಂಕಟವಾಯಿತೇನು ಮಗಳೇ
ಪಟ್ಟದರಸಿ ಕಡೆಗಣಿಸಿತು ಪರನಾರಿ ಮೋಹ
ಜಂಕಿಸಿದವಳ ವಿಲಾಪ ಕೇಳದಾಯಿತೇನು ಮಗಳೇ
ಸಂಕಟದಲಿ ನಲುಗಿತ್ತು ತಾರೆಯ ಅಂತರಂಗ
ಬಹು ಪತಿತ್ವದ ದಾಳ ಮುಸಿ ನಕ್ಕಿತೇನು ಮಗಳೇ
ಬರೆದಷ್ಟು ಕಡಿಮೆ ಬೆಂಕಿಯಲಿ ಬೆಂದವರ ಕಥೆ
‘ಗೀತೆ’ಗೆ ಪದಕೊರತೆ ನೀಗಿಸಬಾರದೇನು ಮಗಳೇ
************************
Sogasagi moodi bandide dr geeta patil
Tq U…
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗಜಲ್ ಮಗು ಅರ್ಥಪೂರ್ಣವಾಗಿದೆ
ಧನ್ಯವಾದಗಳು ಆಶಕ್ಕಾ…
ನಮ್ಮ ಸಮಾಜದಲ್ಲಿ ಹೆಣ್ಣು ಪಟ್ಟ ಪಾಡನ್ನು ತುಂಬಾ ಚೆನ್ನಾಗಿ ಬಿಂಬಿಸಿದ್ದೀರಾ ಗೀತಾ.
“ ಬೆಂಕಿಯಲಿ ಬೆಂದವರ ಕಥೆ “ ಚೆನ್ನಾಗಿದೆ .
ಇದೇ ರೀತಿ ನಿಮ್ಮ ಸಾಹಿತ್ಯ ರಚನೆ ಮುಂದುವರೆಯಲಿ ಎಂದು ಹಾರೈಸುತ್ತೇನೆ .
ನಮ್ಮ ಸಮಾಜದಲ್ಲಿ ಹೆಣ್ಣು ಪಟ್ಟ ಪಾಡನ್ನು ತುಂಬಾ ಚೆನ್ನಾಗಿ ಬಿಂಬಿಸಿದ್ದೀರಾ ಗೀತಾ.
“ ಬೆಂಕಿಯಲಿ ಬೆಂದವರ ಕಥೆ “ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ
ಇದೇ ರೀತಿ ನಿಮ್ಮ ಸಾಹಿತ್ಯ ರಚನೆ ಮುಂದುವರೆಯಲಿ ಎಂದು ಹಾರೈಸುತ್ತೇನೆ .
ಪ್ರೇಮಲತಾ ಚ ಪಾಟೀಲ
ಹುಮನಾಬಾದ
ಧನ್ಯವಾದಗಳು ಪ್ರೇಮಾ…
Super ghazal geeta awre
Mana muttava ghazal geeta avare
ಧನ್ಯವಾದಗಳು…