ಕಾವ್ಯಯಾನ
ಕನ್ನಡಿ
ಎಂ. ಆರ್. ಅನಸೂಯ
ಬಂದು ಹೋದರು
ಎಲ್ಲರೂ ನಿನ್ನೊಳಗೆ
ಪರಿಚಿತರು ಅಪರಿಚಿತರು
ಸಮಾನ ದೃಷ್ಟಿ
ಪ್ರತಿಕೃತಿಯಿತ್ತು ಕಣ್ಣೊಳಗೆ
ಬರ ಮಾಡಲಿಲ್ಲ ಯಾರನ್ನೂ ಮನದೊಳಗೆ
ಬದ್ಧತೆ ಕರ್ತವ್ಯಕ್ಕಷ್ಟೆ
ಮೋಹವಿಲ್ಲದ ಆತ್ಮೀಯತೆ
ಕಲಿಯಬೇಕು ನಿನ್ನಿಂದ ನಿರ್ಲಿಪ್ತತೆ
ಕಂಡಂಥ
ತನುವಿನಂದ ಚಂದವ
ಕುಂದು ಕೊರತೆಗಳ ಜೊತೆಯಲ್ಲೇ
ತೋರುವ ಪಾರದರ್ಶಕ ನಿಷ್ಟತೆ
ಆಳಿನಿಂದರಸನ ತನಕ
ಅಂಜದ ನಿಷ್ಟುರವಾದಿ
ತಾವಿಲ್ಲ ಇಷ್ಟ ಕಷ್ಟಗಳಿಗೆ
ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ
ಗತ್ಯಂತರವಿಲ್ಲದೆ ಅಗತ್ಯವಾಗಿರುವೆ.
**********************