ಮಮತಾ ಶಂಕರ್-ಮಾತು ಮೌನ

ಕಾವ್ಯಯಾನ

ಮಾತು ಮೌನ

ಮಮತಾ ಶಂಕರ್

ನೀನು ಪ್ರತಿ ಮಾತನ್ನೂ ವಾದವಾಗಿಸುವ

ಉಮೇದಿನಲ್ಲಿರುತ್ತೀ

ನಾನು ವಾದ ಬೇಡವೆಂದು ಸುಮ್ಮನಾಗುತ್ತೇನೆ

ನೀನು ನನ್ನ ಮಾತು ಸೋಲಿಸಿದೆನೆಂದು ಬೀಗುತ್ತೀಯ

ನಾನು ಮಾತುಗಳು ನೋಯಿಸಿದವೆಂದು ಮೌನವಾಗುತ್ತೇನೆ

ನಾನು ಪ್ರತಿಬಾರಿ ಮೌನದಿಂದ ನನ್ನನ್ನು ನಾನು

ಗೆಲ್ಲುತ್ತಾ ಹೋಗುತ್ತೇನೆ

ನೀನು ಬಾರಿಬಾರಿ ಮಾತಾಡಿ ಸೋಲುತ್ತಿರುತ್ತೀ

ನೀನು ನನ್ನ ಸೋಲಿಸಿ ಗೆದ್ದೆನೆಂದು ಬೀಗುತ್ತೀಯ

ನಾನು ಗೆದ್ದದ್ದು ತೋರಿಸದೆ ಕರಗುತ್ತೇನೆ

ನೀನು ಪ್ರತಿಬಾರಿ ಗೆದ್ದಂತೆ ಬೀಗುವಾಗ

ನಾನು ನಿನ್ನಿಂದ ದೂರಾಗುತ್ತಾ ಹೋಗುತ್ತೇನೆ

ನಾನು ದೂರಾದಂತೆ ನನ್ನಂತೆಯೇ ನೀನೂ

ಒಂಟಿಯಾಗುತ್ತಾ ಹೋಗುತ್ತೀ…

ದುರಾದೃಷ್ಟ…..

ನಿನಗೆ ಒಂಟಿಯಾಗುವುದರ ನೋವಿನ

ಅರಿವಿಲ್ಲದರ ಕುರಿತು ನನಗೆ ವಿಷಾದವೆನಿಸುತ್ತದೆ…

*********************

11 thoughts on “ಮಮತಾ ಶಂಕರ್-ಮಾತು ಮೌನ

  1. ಮಾತು ಮತ್ತು ಮೌನದ ಸಂವಾದಾತ್ಮಕ ಕವನ. ಪ್ರತೀ ಮೌನವೂ ಅರ್ಥಪೂರ್ಣ, ಸಂವಾದದಲ್ಲಿ ಮಾತಿಗೆ ಅರ್ಥ. ವಾದವಿವಾದದಲ್ಲಿ ಮಾತು ಅರ್ಥಹೀನ. ಸರಳವಾಗಿ ಸ್ಪರ್ಶಿಸುವ ಕವನ. ಅಭಿನಂದನೆಗಳು ಮಮತಾ ಅವರೇ.

Leave a Reply

Back To Top