ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾಮ

ನಾಗೇಶ ಮೈಸೂರು

ನಿನ್ನ ನಾಮ ನನ್ನ ನಾಮ
ಕರಗಿ ಹೋದ ಚರಿತೆ
ಯಾಕೊ ಕಾಣೆನಲ್ಲ ಶಾಮ
ಮರೆಯಲಿಲ್ಲ ಜನತೆ ||

ನಾನು ನೀನು ಸೇರಲಿಲ್ಲ
ಸೇರಿ ಕಳೆದ ಹೊತ್ತು
ಇನಿತೆ ಇದ್ದರೇನು ಎಲ್ಲ
ನೆನೆಯುತದನೆ ಸುತ್ತು ||

ನಿನ್ನ ಮುರಳಿ ಹಾಡಿತಿಷ್ಟೆ
ಕೊಟ್ಟು ಹೋದೆ ನನಗೆ
ಹಾಡುತಿಹರು ಅಷ್ಟನಷ್ಟೆ
ಮರಳಿ ನುಡಿಸೊ ಬೆರಗೆ ||

ನಾನು ಸಹಜ ನೀನು ಸಹಜ
ಇರಲೆ ಇಲ್ಲ ಬೆಡಗು
ಬೆರೆತ ಬಾಳಲಿಲ್ಲ ಸಹಜ
ಹೇಳಲೊಂದು ಕೊರಗು ||

ನಾಮದಲ್ಲೆ ಕೋಟಿ ಧಾಮ
ಕಂಡುಕೊಂಡೆ ಖಾಸ
ಸುತ್ತಿ ಪರಿಧಿ ಅದದೆ ತಾಣ
ಬಿಂದು ದೂರ ವ್ಯಾಸ ||

*****************

About The Author

Leave a Reply

You cannot copy content of this page

Scroll to Top