ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಭಾವ ಒಡಲು..

ಪ್ರೊ ವಿಜಯಲಕ್ಷ್ಮಿ ಪುಟ್ಟಿ

Love Painting Wallpapers - Top Free Love Painting Backgrounds -  WallpaperAccess

ಕೆಲದಿನಗಳಿಂದ ಮುನಿಸು
ಅದೇನು ಗೊತ್ತಿಲ್ಲದೆ ಮೈತುಂಬಿಕೊಂಡ ತುಸು ಹಠ
ಮಾತು ಮಾತಿನಲ್ಲಿ
ನನ್ನ ಸಿಡಿಮಿಡಿ
ಅದಕುತ್ತರವೆಂಬಂತೆ
ನಿನ್ನ ಮಾತು ಕಿಡಿಕಿಡಿ
ಮೈ ಮನಸುಗಳು
ದೂರ ದೂರ
ಹೆಜ್ಜೆಹೆಜ್ಜೆಗೂ ಭಾರ
ನಿನ್ನ ಕರ್ತವ್ಯ
ಗೆಳೆಯ ಗೆಳತಿಯರು
ದಿನಚರಿ ಕಷ್ಟ ಸುಖ
ಫೋನ್ ಕಾಲುಗಳು
ನಿನ್ನ ಪ್ರಪಂಚದಲ್ಲಿ
ಸದಾ ನೀ ತಲ್ಲೀನ
ನನ್ನ ಪ್ರಪಂಚದಲ್ಲಿ ನಾನು
ಬೇಕೆಂತಲೇ ತನ್ಮಯ
ಅದೊಮ್ಮೆ ನೀನು
ಮುರಿದೆ ಮೌನ
ಹತ್ತಿರ ಕರೆದೆ
ಬರಲೇ ಬೇಡವೋ
ಎಂಬಂತೆ ನಿನ್ನತ್ತ ನಾ ಸರಿದೆ
ಪ್ರೀತಿಸ್ಪರ್ಶ ಮೈದುಂಬಿ
ಭಾವಗಳು ಜೇಂಕರಿಸಿ
ಮನ ನಿನಗಾಗಿ ಮೀಟಿ
ಹೆಪ್ಪುಗಟ್ಟಿದ ಕೋಪ
ಕ್ಷಣಮಾತ್ರದಲ್ಲಿ ಸಡಿಲ
ನಿಧಾನವಾಗಿ ಹರಿದ ಭಾವ
ಮೈಮನವನ್ನೆಲ್ಲ ವ್ಯಾಪಿಸಿ
ಆವರಿಸಿ ಭೋರ್ಗರೆದು
ನಿನ್ನ ಪಕ್ಕದಲ್ಲಿ
ಇದೀಗ ನಾ
ಶಾಂತ ಕಡಲು
ಪ್ರೀತಿ ತುಂಬಿದ
ಭಾವ ಒಡಲು..

***************

About The Author

Leave a Reply

You cannot copy content of this page

Scroll to Top