ಮಾನವರಾಗೋಣ

ಕಾವ್ಯಯಾನ

ಮಾನವರಾಗೋಣ

ಲೀಲಾ ಅ, ರಾಜಪೂತ

ನಾನು ಹಿಂದೂ ಎನ್ನುವ ಅಭಿಮಾನ ನನಗೆ
ನೀನು ಮುಸ್ಲಿಂ ಎನ್ನುವ ಹೆಮ್ಮೆ ನಿನಗೆ

ಆದರೆ ನನ್ನ ರಾಮ ನನ್ನಿಂದ ಅಸಂತುಷ್ಟನೂ
ನಿನ್ನ ಅಲ್ಲಾಹ್ ನಿನ್ನಿಂದ ಅತೃಪ್ತನೂ

ಪಾಪಗಳನು ನಾನು ಮಾಡಿರಬಹುದು
ಅಫರಾಧಗಳನು ನೀನು ಮಾಡಿರಬಹುದು

ಆದರಿಂದೂ ಮನುಷ್ಯತ್ವ ಮರೆತ ಎಮಗೆ
ಶಿಕ್ಷೆ ಆ ದೇವರು ನೀಡುತಿರುವನೇನೋ

ಇಂದು ರಾಮ ಮಂದಿರದೊಳು ನನ್ನ ಕರೆಯುತ್ತಿಲ್ಲ
ಖುದಾ ಮಸೀದಿಗೆ ನಿನ್ನ ಕರೆಯುತ್ತಿಲ್ಲ

ನಾ ಮಾಡಿದ ತಪ್ಪುಗಳೆಷ್ಟಿವೆಯೋ ಅಷ್ಟೇ
ನಿನ್ನ ತಪ್ಪುಗಳು ಇವೆಯೆನೋ

ಬಾ ಸಮಯವಿರುವಾಗಲೇ ಸುಧಾರಿಸಿಕೊಳ್ಳೋಣ
ಮಾನವಿಯತೆಯ ಧರ್ಮ ನಮ್ಮದಾಗಿಸಿಕೊಳ್ಳೋಣ

ನಾನು ಅವನಿಗೆ ಭಗವಾನ್ ಎಂದು ಕರೆದೆ
ನೀನು ಅವನಿಗೆ ಅಲ್ಲಾಹ್ ಎಂದು ಕೂಗಿ ಕರೆದೆ

ಇರುವವನೂ ಒಬ್ಬನೇ ಅಲ್ಲವೇ
ನಮ್ಮ ರಕ್ತದ ಬಣ್ಣ ಒಂದೇ ಅಲ್ಲವೇ

ಹಿಂದೂ ಮುಸ್ಲಿಂ ಭೇದವ ತೊರೆಯೋಣ
ಎಲ್ಲರೊಂದುಗೂಡಿ ಪ್ರೇಮದಿ ಬಾಳೋಣ

ಒಂದಾಗಿ ಚೆಂದಾಗಿ ಸತ್ಪ್ರಜೆಗಳಾಗೋಣ
ನಾವೆಲ್ಲರೂ ಭಾರತೀಯರೆನ್ನೋಣ

ಇಂದು ನಾ ರಾಮನನ್ನು ಪ್ರಸನ್ನಗೊಳಿಸುವೆ
ನೀನು ಅಲ್ಲಾಹ್ ನನ್ನು ಒಲಿಸಿಕೊಳ್ಳು

ಬೇಡೋಣ ಈ ಭೇದ ಭಾವದಿಂದ ಮುಕ್ತಿ ನೀಡೆಂದು
ಹೇ ಈಶ್ವರ ಅಲ್ಲಾಹ್ ಭಾತೃತ್ವದ ಭಾವ ಕರುಣಿಸೆಂದು

ಈ ಭೂಮಿಯ ಮೇಲೆ ಸಾವು ನೋವುಗಳಿಂದ ತತ್ತರಿಸುತ್ತಿದ್ದೇವೆ
ಹೇ ರಾಮ ಪರವರ್ದಿಗಾರ ಒಂದು ಸುಸಂಧಿ ನೀಡು

ಈ ಸಂಕಟದಿಂದ ಮುಕ್ತಿ ನೀಡು
ಮಾನವರಾಗಿ ಬಾಳುವಂತೆ ಆಶೀರ್ವದಿಸು

ನಾನು ನೀನು ಕೂಡಿ ಪ್ರಾರ್ಥಿಸೋಣ
ನರಕವಾದ ಈ ಧರೆಯನ್ನು ಸ್ವರ್ಗವಾಗಿಸೋಣ


***********************

Leave a Reply

Back To Top