ಅಡಿಗೆಯವಳ ಮಗಳು

ಕಾವ್ಯಯಾನ

ಅಡಿಗೆಯವಳ ಮಗಳು

ಸಂಧ್ಯಾ ನಾಯ್ಕ ಅಘನಾಶಿನಿ

83 Indian Woman Cooking Illustrations & Clip Art - iStock

ಬೇಯಿಸಿ ಬಡಿಸುವುದನ್ನೇ
ಬದುಕಾಗಿಸಿಕೊಂಡವಳ
ಮಗಳು
ಬರೀ ಅಡಿಗೆ ಮಾಡುವುದನ್ನು
ಮಾತ್ರ ಆಟವಾಡುತ್ತಿದ್ದಳು
ದೊಡ್ಡ ದೊಡ್ಡ ಬೊಂಬೆಗಳನ್ನು ಕುಣಿಸುವವರ ನಡುವೆ
ಇವಳೊಂದು ಚಿಕ್ಕ
ಗೆಜ್ಜೆಯನ್ನಾದರೂ ಕಟ್ಟಿ
ಕುಣಿಯಲೆಂದು ಎಣಿಸಿದವಳೇ
ಒಂದು ಸಂಜೆ
ಪುಟಾಣಿ ಕನಸುಗಳನ್ನು
ಕೊಟ್ಟು ಬಂದೆ ನಾನು
ಬೆಳಗ್ಗೆ ಹೋಗಿ ನೋಡಿದರೆ
ಅದನ್ನೂ
ಬಡಿಸಲೆಂದೇ ಹುರಿದುಬಿಟ್ಟಿದ್ದಳು
ಅವಳಿಗೆ ಕಲಿಸಿದ
ಅಕ್ಷರಗಳೂ ಅನ್ನವಾಗುವ
ಪರಿ ಕಂಡು
ಅಚ್ಚರಿಗೊಂಡ ನಾನೀಗ
ನನ್ನ ಭ್ರಮೆಗಳನ್ನು
ಅವಳ ತಲೆಗೆ ತುರುಕುವುದ ಬಿಟ್ಟೇ
ಬಿಟ್ಟಿದ್ದೇನೆ

*********************

8 thoughts on “ಅಡಿಗೆಯವಳ ಮಗಳು

  1. Wow teacher wow
    ಇದು ಕವಿತೆ ಅಂದ್ರೆ ಇದು ನಿಮ್ಮ ನಿಜ ಅನುಭವ ತರ ಇದೆ ಕಣ್ಣಿಗೆ ಕಟ್ಟು ತರ ಇದೆ ….ಮಾರ್ಮಿಕ ..

  2. ಅಕ್ಕಾ ಅದ್ಭುತ ಕವಿತೆ. ನಿಜಕ್ಕೂ ಹಲವು ಕವಿತೆ ಹುಟ್ಟಲು ನಿಮ್ಮ ಈ ಒಂದು ಕವಿತೆ ಸಾಕು.. ಸೊಗಸಾಗಿದೆ..

  3. ಕಥಾ ವಸ್ತುವನ್ನು ಕವಿತೆಯಾಗಿಸಿ ಬರೆದ ಶೈಲಿ ಉತ್ತಮವಾಗಿದೆ

  4. ಅನುಭವಕ್ಕಿಂತ ಅಮೋಘವಾದ ಪದಗಳು ಬೇರೆಲ್ಲೂ ಬಣ್ಣಿಸಲಾಗದು .ಅದ್ಭುತ ಸಾಲುಗಳು.

Leave a Reply

Back To Top