ಒಂದು ಹನಿ

ಕಾವ್ಯಯಾನ

ಒಂದು  ಹನಿ

ಮಮತಾ ಶಂಕರ್

ನೀರು
ಕೇವಲ ಒಂದು ಬಿಂದು
ಒಂದು ನಾಲ್ಕಾಗಿ ನಾಲ್ಕು ಎಂಟಾಗಿ
ಎಂಟು ಹದಿನಾರಾಗಿ ಮಣ್ಣಿಗೆ ಬಿದ್ದಾಗ
ಮಣ್ಣ ಘಮಲು ಹೊರಗೆಲ್ಲಾ

ಒಂದೆ ಹನಿ
ಹನಿ ಹನಿಯು ಸೇರಿ ತೊರೆಯಾಗಿ
ತೊರೆಯು ಝರಿಯಾಗಿ ಝರಿಯು
ನದಿಯಾಗಿ ನದಿಯು ಕಡಲ ಸೇರಿತೊ
ನದಿಯೇ ಕಡಲಾಯ್ತೋ
ಜಲಜಲದ ಸಲಿಲ ರಾಶಿ ರಾಶಿ ಅಲೆಯಾಯ್ತು….

ಅದೇಕೆ ಮುನಿಸಾಯ್ತೋ…
ಧಗಧಗಿಸೋ ಉರಿಗೆ ಕುದಿಯಿತೋ ಧರೆ
ಕೋಪ ಉಕ್ಕಿಸಿ ಕಡಲು ಕೈ ಚಾಚಿ
ಚಾಚಿ ತಬ್ಬಿಕೊಳ್ಳುತಿದೆ ಜಗವ
ಹನಿಯು ಜಗದಗಲವಾಯ್ತು….

ಈಗೇಕೆ ನನ್ನ ಕಣ್ಣ ಕೊನೆಯಲ್ಲೂ
ಮೂಡುತಿದೆ….ಕೇವಲ ಒಂದು
ಬಿಂದುವಿನಂತ
ಒಂದು ಹನಿ ಕಣ್ಣೀರ ಬಿಂದು

*****************************

8 thoughts on “ಒಂದು ಹನಿ

  1. ಮಮತಾ ಅವರೇ, ಹನಿ ಮತ್ತು ಕಡಲು, ನಡುವಿನ‌ ಮಾರ್ಗದ ವಿಸ್ತಾರ, ಹಲವು ಕಾವ್ಯ ಪ್ರತಿಮೆಗಳಿಗೆ ಅಚ್ಚುಪಾತ್ರೆಯಾಗಿ ಬಿಡಿಯಿಂದ ಇಡಿಯಾಗುವ ಕವಿತೆ.
    ತುಂಬಾ ಅರ್ಥಸಾಧ್ಯತೆಗಳಿಗೆ ಆಯಾಮ ತೆರೆಯುವ ಕವಿತೆ. ಅಭಿನಂದನೆಗಳು

    1. ನೀವು ನನ್ನ ಕವಿತೆಯನ್ನು ಅರ್ಥೈಸಿಕೊಂಡು ಒಳ್ಳೆಯ ಮಾತನಾಡಿ ಬರೆಯುವ ಸ್ಪೂರ್ತಿ ನೀಡಿದಿರಿ ಕಾನತ್ತಿಲ ಸರ್…. ತುಂಬಾ ಧನ್ಯವಾದಗಳು ನಿಮಗೆ

Leave a Reply

Back To Top