ಕಾವ್ಯಯಾನ
ನಂಬಿಕೆ
ವಾಣಿ ಮಹೇಶ್
ನಂಬಿಕೆಯು ಕಳೆದು ಹೋಗಿದೆ
ಅಂಬಿಗನ ಕೈಯಲ್ಲಿನ ಹುಟ್ಟು ಜಾರಿ ಹೋದಂತೆ
ಅಭಿಸಾರಿಕೆಯ ಸೆರಗು ಜಾರಿದಂದೇ..//
ತೋಳಗಳ ಹಿಂಡು ಕುರಿಯನೊಂದು
ಬಲಿ ತೆಗೆದುಕೊಂಡಂತೆ
ಸೂರ್ಯನ ತಾಪ ಮೇರೆ ಮೀರಿದಂತೆ //
ಹಚ್ಚ ಹಸಿರು ತುಂಬಿ ಕಂಗೊಳಿಸಿದ ಭೂರಮೆ
ಕಡು ಪಾಪಿಯ ಸ್ಪರ್ಷದಿಂದ
ಮುದುರಿ ಹೋದಂತೆ
ಚಂದಿರನ ಹೊಂಬೆಳಕು ಮೋಡಗಳಿಂದ
ಮುಚ್ಚಿ ಹೋದಂತೆ //
ಸಾಗರ ಗರ್ಭದೊಳಗಡಗಿದ
ಮೃತ್ಯುದೇವತೆ ಬಳಿಸಾರಿದಂತೆ
ನಂಬಿಕೆ ಕಳೆದು ಹೋಗಿದೆ..//
ಸಂಬಂಧಗಳು ಸೊರಗಿದಂತೆ
ಸಂಪರ್ಕಗಳು ಕಡಿದಂತೆ
ನಂಬಿಕೆ ಕಳೆದು ಹೋಗಿದೆ
ಸುಂದರ ಬದುಕ ಕಂಡೇವೆಂಬ
ಭ್ರಮೆಯ ತೊರೆದು ವಾಸ್ತವ
ಅರಿತು ಅದರೊಡನೆ ಸಾಗಬೇಕಿದೆ
ಕಳೆದ ಬದುಕ ನೆನೆದು /
**************************
Channagide nija
ಥ್ಯಾಂಕ್ಯೂ