ಸ್ವಾತಂತ್ರ ಮತ್ತು ಸಮಾನತೆಯ ಗಾಂಧೀಜಿಯ ದೃಷ್ಟಿಕೋನ

ಲೇಖನ

ಸ್ವಾತಂತ್ರ ಮತ್ತು ಸಮಾನತೆಯ

ಗಾಂಧೀಜಿಯ ದೃಷ್ಟಿಕೋನ

ಡಾ. ಎಸ್.ಬಿ.ಬಸೆಟ್ಟಿ

Tallenge - Mahatma Gandhi Charkha Poster - Small Poster Paper (12 x 17  inches) : Amazon.in: Home & Kitchen

: ದೇಶದಾದ್ಯಂತ ಕೋವಿಡ್-೧೯ ಎರಡನೆಯ ಅಲೆ ಮುಗಿದು ಮೂರನೆಯ ಅಲೆಯ ಭೀತಿಯಲ್ಲಿ ಇದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ೧೫ನೇ ಆಗಸ್ಟ್,೨೦೨೧ಕ್ಕೆ ೭೫ ವಸಂತಗಳು ಪೂರ‍್ಣಗೊಳ್ಳಲಿದ್ದು  ಇದರ ಸವಿನೆನಪಿಗಾಗಿ ಕೇಂದ್ರ ಸರಕಾರದ ನಿರ‍್ದೇಶನದಂತೆ ೧೨ನೇ ಮಾರ್ಚ್ ೨೦೨೧ ರಂದು ದೇಶದ ೭೫ ಐತಿಹಾಸಿಕ ಸ್ಥಳಗಳಲ್ಲಿ ’೭೫ನೇ ಸ್ವಾತಂತ್ರ್ಯೋತ್ಸವದ ಆಜಾದ್ ಕಾ ಅಮೃತ ಮಹೋತ್ಸವ’ದ ಕಾರ್ಯ ಕ್ರಮಗಳು ಜರುಗಿತು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲವು ಮಹನೀಯರ ತ್ಯಾಗ, ಬಲಿದಾನ ಅಡಗಿದ್ದು, ಮಹಾತ್ಮ ಗಾಂಧೀಜಿಯವರ ನಾಯಕತ್ವದಲ್ಲಿ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಅಹಿಂಸಾತ್ಮಕ ಹೋರಾಟದಿಂದ ೧೫ನೇ ಆಗಸ್ಟ್, ೧೯೪೭ರಂದು ಭಾರತವು ಸ್ವತಂತ್ರವಾಯಿತು. ಅದರ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ಮನವರಿಕೆ ಮಾಡುವ ಅವರಲ್ಲಿ ದೇಶಭಕ್ತಿಯನ್ನು ಬಿತ್ತುವ ಸದುದ್ದೇಶದಿಂದ ದೇಶದ ೭೫ ಐತಿಹಾಸಿಕ ಸ್ಥಳಗಳಲ್ಲಿ ೭೫ ವಾರಗಳ ವರೆಗೆ ರಾಷ್ಟ್ರ ದಾದ್ಯಂತ ವಿವಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು. ೭೫ ವಾರಗಳ ವರೆಗೆ ರಾಷ್ಟ್ರದಾದ್ಯಂತ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಮೃತ ಮಹೋತ್ಸವದ ಸಂಭ್ರಮಾಚರಣೆಯನ್ನು ಆಚರಿಸಲಾಗುವದು. ಈ ಐತಿಹಾಸಿಕ ಕಾರ್ಯಕ್ರಮ ವಿಶೇಷವಾಗಿರುವದು . ನಮ್ಮ ಗತಕಾಲವನ್ನು ಸ್ಮರಿಸುವದು ಅಗತ್ಯವಾದುದು. ದೇಶದ ಹಿರಿಮೆ- ಗರಿಮೆ , ವೈವಿಧ್ಯತೆ, ಸಾರ‍್ವಭೌಮತೆ ಹಾಗೂ ಸ್ವಾತಂತ್ರ್ಯದ ಬಗೆಗಿನ ಚರಿತ್ರೆ ಸ್ವಾರಸ್ಯಕರ ಹಾಗೂ ಅರ್ಥಗರ್ಭಿತವಾದುದು. ಪ್ರತಿ ದೇಶದ ಸ್ವಾತಂತ್ರ್ಯ ಚರಿತ್ರೆಯಲ್ಲಿ ಸ್ವಾತಂತ್ರ್ಯ ಪಡೆಯಲು ಹುತಾತ್ಮರಾದವರನ್ನು ತ್ಯಾಗ- ಬಲಿದಾನ ಮಾಡಿದವರನ್ನು ನೆನೆಯುವದು ಹಾಗೂ ಸ್ಮರಿಸುವದು ಹಾಗೂ ದೇಶದ ಸ್ವಾತಂತ್ರ್ಯ ಪ್ರೇಮ, ಪ್ರಜಾಸತ್ತಾತ್ಮಕತೆ ಹಾಗೂ ಸಾರ‍್ವಭೌಮತೆಯನ್ನು ರಕ್ಷಿಸಿಕೊಂಡು ಹೋಗುವದು ಪ್ರತಿ ಪ್ರಜೆಯ ಆದ್ಯ ಕರ‍್ತವ್ಯ.

ರಾಜಕೀಯ ಸ್ವಾತಂತ್ರ್ಯವು ಗಾಂಧೀಜಿಯವರಿಗೆ ಸ್ವರಾಜ್ಯವಾಗಿತ್ತು. ಸ್ವರಾಜ್ಯವನ್ನು ಕೂಡಾ ಸತ್ಯ ಮತ್ತು ಅಹಿಂಸಾ ಮಾರ‍್ಗದಿಂದ ಪಡೆಯುವದಾಗಿತ್ತು. ಸತ್ಯವೇ ದೇವರು ಎಂಬುದು ಗಾಂಧೀಜಿಯವರ ಭಾವನೆ ರಾಜಕೀಯ ಸ್ವಾತಂತ್ರ್ಯವೆಂದರೇನು, ಸ್ವರಾಜ್ಯ ಎಂಬುದು ಗಾಂಧೀಜಿಯವರ ವಾದ. ಸ್ವರಾಜ್ಯವನ್ನು ಸತತ ಹೋರಾಟ ಮತ್ತು ಪ್ರಯತ್ನದಿಂದ ಪಡೆಯುವುದು ಮತ್ತು ಬ್ರಿಟಿಷ್ ಸರ‍್ಕಾರದ ವಿರುದ್ಧ ಅತೃಪ್ತಿಯೆಂಬ ದ್ವೇಷದ ಅಲೆಯನ್ನು ಎಬ್ಬಿಸುವುದು, ಪ್ರತಿಯೊಬ್ಬ ಭಾರತೀಯನ ಧರ‍್ಮಯುತವಾದ ಕಾರ‍್ಯ ಎಂದು ಹೇಳಿ ಅಂದಿನ ಬಲಿಷ್ಠ ರಾಷ್ಟ್ರಗಳಿಗೆ ಎದುರಾಗಿ ಎದೆ ತಟ್ಟಿ ನಿಲ್ಲುವಂತೆ ಗಾಂಧಿ ಕರೆ ಕೊಟ್ಟರು. ಇದರಿಂದ ಬಲಿಷ್ಠ ರಾಷ್ಟ್ರಗಳ ನೈತಿಕತೆಗೆ ಧಕ್ಕೆ ತರುವುದೇ ಅವರ ಉದ್ದೇಶವಾಗಿತ್ತು.

 ಗಾಂಧೀಜಿಯವರು ತಮ್ಮ ರಾಜಕೀಯದ ಬಗ್ಗೆ ಹೇಳುತ್ತಾ ವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಿ ಯಾವುದೇ ಸಮಾಜ ನಿರ‍್ಮಾಣವಾಗುವುದು ಸಾಧ್ಯವಿಲ್ಲ. ಇದು ವ್ಯಕ್ತಿ ಸ್ವಭಾವಕ್ಕೆ ವಿರುದ್ದವಾಗಿದೆ. ವ್ಯಕ್ತಿ ತನ್ನದೇ ಆದ ಮನಸ್ಸನ್ನು ಹೊಂದಿರದೆ ವ್ಯಕ್ತಿ ಜೀವಿಸಲು ಸಾಧ್ಯವಿಲ್ಲ. ಸಮಾನವಾದ ಸಾಮಾಜಿಕ ಮತ್ತು ಆರ‍್ಥಿಕವಾದ ಅವಕಾಶಗಳನ್ನು ಹೊಂದಿರಬೇಕು. ಕರ‍್ತವ್ಯದ ಜೊತೆಗೆ ಸ್ವಾತಂತ್ರ್ಯ ನಿಕಟ ಸಂಬಂಧ ಹೊಂದಿರುತ್ತದೆ. ಮತ್ತು ಪ್ರತಿಯೊಬ್ಬರು ಆ ಬಗೆಯ ಸಮಾನ ಅವಕಾಶಗಳಿಗೆ ಜವಾಬ್ದಾರರಾಗಬೇಕು ಎಂದು ಗಾಂಧೀಜಿಯವರು ಹೇಳಿದರು.

 ಗಾಂಧೀಜಿಯವರು ಸ್ವಾತಂತ್ರ್ಯ ದ ಬಗ್ಗೆ ಹೊಂದಿದ್ದ ಅಭಿಪ್ರಾಯಗಳು ಆಂಗ್ಲೋ ಅಮೆರಿಕನ್ ಉದಾರವಾದಿ ಸಂಪ್ರದಾಯವಾದಿಗಳು ಸ್ವಾತಂತ್ರ್ಯದ ಬಗ್ಗೆ ಹೊಂದಿದ್ದ ತತ್ವಗಳಿಗಿಂತ ಭಿನ್ನವಾಗಿತ್ತು. ಸಾಂಪ್ರದಾಯಿಕ ಅರ‍್ಥದಲ್ಲಿ ಹೇಳುವುದಾದರೆ ತಮ್ಮದೇ ಆದ ಆಪೇಕ್ಷೆಗಳನ್ನು ಅಭಿಪ್ರಾಯಗಳನ್ನು ಅಥವಾ ವಿರೋದಗಳನ್ನು ವ್ಯಕ್ತಪಡಿಸಲು ಹೊಂದಿರುವುದೇ ಸ್ವಾತಂತ್ರ್ಯ, ತಮ್ಮ ಹಕ್ಕುಗಳ ಮೂಲಕ ಸ್ವಾಭಾವಿಕವಾಗಿಯೇ ತಮ್ಮ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಕೂಡ ಸ್ವತಂತ್ರರು ಎಂಬ ಅರ‍್ಥವನ್ನೊಳಗೊಂಡಿದೆ. ಈ ಅರ‍್ಥದಲ್ಲಿ ಸ್ವಾತಂತ್ರ್ಯ ವೆಂದರೆ ಪ್ರತಿಯೊಬ್ಬರು ಯಾವುದೇ ಅಡೆತಡೆಯಿಲ್ಲದೆ ತಮ್ಮದೇ ಆದ ಹಿತಾಸಕ್ತಿಗಳನ್ನ ಈಡೇರಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ಸಾರ‍್ಥವನ್ನು ಸ್ವಾತಂತ್ರ್ಯ ಎಂದು ಹೇಳಲಾಗಿದೆ. ಈ ಬಗೆಯ ನಿರ‍್ಭಂಧ ರಹಿತ ಸ್ವಾತಂತ್ರ್ಯ ಹಾಲ್ಸ್ ಪ್ರತಿಪಾದಿಸಿದ ಸ್ವಾಭಾವಿಕ ರಾಜ್ಯದ ಸ್ಥಿತಿಗೆ ಕೊಂಡೊಯುತ್ತದೆ. ಅಂತಹ ರಾಜ್ಯದಲ್ಲಿ ಅರಾಜಕತೆ, ಅಸ್ಥಿರತೆ, ಕೊಲೆ, ಸುಲಿಗೆ, ದ್ವೇ಼ಷ ಮತ್ತು ಅಸೂಯೆಗಳು ಕಂಡು ಬರುತ್ತದೆ. ಈ ತತ್ಪರಿಣಾಮಗಳಿಂದಲೇ ಸ್ವಾತಂತ್ರ್ಯವನ್ನು ನಿರ‍್ಬಂಧಿಸಲು ದಾರಿಯಾಗುತ್ತದೆ. ಬಹುತೇಕ ಉದಾರವಾದಿ ಬರಹಗಾರರು ಸರಕಾರವು ವ್ಯಕ್ತಿಗಳ ಕೆಲವು ನಿರ್ದಿಷ್ಟವಾದ ಹಕ್ಕುಗಳಲ್ಲಿ ಮಾತ್ರ ಮಧ್ಯಸ್ಥಿಕೆ ವಹಿಸಬೇಕು ಹಾಗೂ ಯಾರು ಹಕ್ಕುಗಳನ್ನು ಉಲ್ಲಂಘಿಸುತ್ತಾರೆಯೋ ಅಂತಹವರ ವಿರುದ್ದ ಬಲಾತ್ಕಾರವನ್ನು ಕೂಡ ಬಳಸಬಹುದು ಎಂದಿದ್ದಾರೆ.

ಈ ಬಗೆಯ ಸ್ವಾತಂತ್ರ್ಯಕ್ಕಾಗಿ ಬಳಸಿರುವ ಮಾರ‍್ಗಗಳು ಗಾಂಧೀಜಿಯವರ ಅರ‍್ಥದಲ್ಲಿ ಹಲವಾರು ನ್ಯೂನತೆ ಅಥವಾ ದೋಷಗಳನ್ನು ಒಳಗೊಂಡಿದೆ. ಪ್ರಥಮವಾಗಿ ಇದು ಸರಕಾರದಿಂದ ಹಿಂಸೆಯನ್ನು ಅನುಮೋದಿಸುತ್ತದೆ. ಕೆಲವೊಂದು ಹಕ್ಕುಗಳನ್ನು ಆಚರಣೆಗೆ ತರಲು ಬಲತ್ಕಾರವನ್ನು ಉಪಯೋಗಿಸಲು ರಾಜ್ಯಕ್ಕೆ ಅಧಿಕಾರವನ್ನು ನೀಡುತ್ತದೆ. ಗಾಂಧೀಜಿಯವರ ಪ್ರಕಾರ ಇದು ವ್ಯಕ್ತಿಯ ನೈತಿಕ ಸ್ವಾಯತ್ತತೆಯನ್ನು ಹಾಳು ಮಾಡುತ್ತದೆ. ಪ್ರಾರಂಭದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ರಾಜ್ಯದಿಂದ ಒದಗಿ ಬಂದಂತಹ ದೊಡ್ಡ ಅಪಾಯವನ್ನು ಉದಾರವಾದ ಕಂಡುಕೊಂಡಿತ್ತು. ಆದರೆ ಗಾಂಧೀಜಿಯವರು ಸ್ವಾತಂತ್ರ್ಯದ ಬಗೆಗಿನ ಅಭಿಪ್ರಾಯವನ್ನು ಒಪ್ಪಲಾದರೂ. ಅವರ ಸ್ವಾತಂತ್ರ್ಯ ದ ಕಲ್ಪನೆ ಅಪರಿಪೂರ‍್ಣವಾಗಿತ್ತು. ಸ್ವಾತಂತ್ರ್ಯದ ಬಗ್ಗೆ ಸಾಂಪ್ರದಾಯಿಕ ಆರ‍್ಥಿಕ ಉದಾರವಾದಿಗಳು ಹೊಂದಿದ್ದ ನಿಲುವಿಗಿಂತ ಭಿನ್ನವಾಗಿ ಗಾಂಧೀಜಿಯವರು ಹೊಂದಿದ್ದರು. ಕೇವಲ ರಾಜ್ಯದಿಂದ ಮಾತ್ರವಲ್ಲದೆ ಸ್ವಾತಂತ್ರ್ಯ ಹಲವಾರು ಶಕ್ತಿಗಳಿಗಿಂತ ಅಘಾತಕ್ಕೊಳಪಟ್ಟಿದೆ. ಆರ‍್ಥಿಕ ಅಸಮಾನತೆ ಇನ್ನಿತರರ ಮೇಲೆ ಅವಲಂಬಿಸಿರುವಂತೆ ಮಾಡಿರುವುದು ಕೈಗಾರೀಕರಣ, ನಿರುದ್ಯೋಗವನ್ನು ಸೃಷ್ಟಿಸಿರುವುದು ಅನಮ್ಯ ಜಾತಿ ವ್ಯವಸ್ಥೆ ಮತ್ತು ಅಸ್ಫೃಶ್ಯತೆಗಳು ಜನತೆಗೆ ಅವರ ಸ್ವಾಯುತ್ತತೆಯನ್ನು ನಿರಾಕರಿಸಿದೆ. ವಸಾಹತು ಸಾಹಿ ವ್ಯವಸ್ಥೆಯೂ ಕೂಡ ಸಮೃದ್ಧ ಅವಕಾಶಗಳನ್ನು ಕನಿಷ್ಠಗೊಳಿಸಿದೆ ಎಂದು ಗಾಂಧೀಜಿಯವರು ನಂಬಿದ್ದರು. ಸ್ವಾತಂತ್ರ್ಯ ಎಂಬುದು ಸಾಮಾಜಿಕ ಸಮಾನತೆಯನ್ನು ಒಳಗೊಂಡಿದ್ದು ಹಲವಾರು ಮೂಲಗಳಿಂದ ಸ್ವಾತಂತ್ರ್ಯಕ್ಕೆ ಅಡೆತಡೆಗಳು ಬರುತ್ತವೆ. ಆದ್ದರಿಂದ ಸ್ವಾತಂತ್ರ್ಯಕ್ಕೆ ಕನಿಷ್ಠ ಪ್ರಮಾಣದ ಅಡೆತಡೆಗಳು ಉಂಟಾಗುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

 ಗಾಂಧೀಜಿಯವರ ಪ್ರಕಾರ ಉದಾರವಾದಿ ಸ್ವಾತಂತ್ರ್ಯದ ರಚನೆಯು ಕೂಡ ದೋಷ ಪೂರಿತವಾಗಿದೆ. ಸಾಮಾಜಿಕ ಆಧಾರಿತ ಮಾನವೀಯ ಜೀವನದ ಪ್ರಾಮುಖ್ಯತೆಯನ್ನ ಉದಾರವಾದಿ ಸ್ವಾತಂತ್ರ್ಯ ತಿರಸ್ಕರಿಸುತ್ತದೆ. ನಮ್ಮ ಎಲ್ಲಾ ಕ್ರಿಯೆಗಳಿಗೆ ಕೆಲಸಗಳಿಗೆ ಅಥವಾ ಚಟುವಟಿಕೆಗಳಿಗೆ ನಾವೇ ಜವಾಬ್ದಾರಿಯಾಗಿರಬೇಕು. ಹಕ್ಕುಗಳು ಮತ್ತು ಜವಾಬ್ದಾರಿಗಳೆರಡೂ ಪರಸ್ಪರ ಅನ್ಯೋನತೆಯಿಂದ ಕೂಡಿವೆ. ಇವೆರಡರಲ್ಲಿ ಯಾವುದಾದರೂ ಒಂದು ಇಲ್ಲದಿದ್ದಲ್ಲಿ ಅದರ ನಿಜವಾದ ಸತ್ವವನ್ನು ಕಳೆದುಕೊಳ್ಳುತ್ತದೆ, ಹಕ್ಕು ಮತ್ತು ಕರ‍್ತವ್ಯಗಳೆರಡು ಪರಸ್ಪರ ಅನ್ಯೋನ್ಯತೆಯಿಂದ ಕೂಡಿದ್ದು ನಿರಂತರವಾಗಿರತ್ತವೆ. ಜನರು ತಾವು ಮಾಡುವ ಪ್ರತಿಯೊಂದು ಕೆಲಸ ಹಾಗೂ ಚಟುವಟಿಕೆಗಳ ಪರಿಣಾಮಗಳೇನು ಎಂಬುದನ್ನು ಚೆನ್ನಾಗಿ ಅರಿತಿರಬೇಕು. ಜವಾಬ್ದಾರಿ ಮತ್ತು ಸ್ವಾತಂತ್ರ್ಯಗಳೆರಡು ಅತ್ಯಂತ ಹೆಚ್ಚಿನ ನಿಕಟ ಸಂಬಂಧವನ್ನು ಹೊಂದಿವೆ. ಜವಾಬ್ದಾರಿಯಿಲ್ಲದ ಸ್ವಾತಂತ್ರ್ಯ ಅರ್ಥ ರಹಿತವಾದದ್ದು.

 ಗಾಂಧೀಜಿಯವರ ಪ್ರಕಾರ ಪ್ರತಿಯೊಬ್ಬ ನಾಗರಿಕನು ತನ್ನ ಸರ‍್ಕಾರದ ಪ್ರತಿಯೊಂದು ಜವಾಬ್ದಾರಿಗಳ ಬಗ್ಗೆಯು ತಿಳಿದಿರಬೇಕು. ಎಲ್ಲಿಯ ತನಕ ಸರ‍್ಕಾರದ ಚಟುವಟಿಕೆಗಳು ಸಮಂಜಸವಾಗಿರುತ್ತವೆಯೋ ಅಲ್ಲಿಯವರೆಗೂಶರ‍್ಕಾರಕ್ಕೆ ಬೆಂಬಲವನ್ನು ಕೊಡಬೇಕು. ವಿಧೇಯತೆಯನ್ನ ವ್ಯಕ್ತಪಡಿಸಬೇಕು. ಆದರೆ ಯಾವಾಗ ಸರಕಾರ ವ್ಯಕ್ತಿ ಮತ್ತು ರಾಷ್ಟ್ರಕ್ಕೆ ಹಾನಿಯನ್ನುಂಟು ಮಾಡಿದರೆ ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ಸು ಪಡೆಯುವುದು ಅವರ ಕರ‍್ತವ್ಯ (ಙouಟಿg Iಟಿಜiಚಿ ೨೮ ಎuಟಥಿ ೧೯೨೦) ಎಂದು ಹೇಳಿದ್ದಾರೆ.

 ಗಾಂಧೀಜಿಯವರು ಸತ್ಯಾಗ್ರಹದಿಂದ ಸಾಮಾಜಿಕ ಕ್ರಾಂತಿಯನ್ನ ತಂದರು. ಆಧುನಿಕರ ನೈತಿಕ ಅಧ: ಪತನದಿಂದಲೇ ನಾಗರಿಕತೆಯು ಹಾಳಾಗುತ್ತದೆ ಎಂದರು. ಯುದ್ಧ ತಡೆಯುವ ಅಂತಿಮವಾದ ಉಪಾಯವೆಂದರೆ ಯುದ್ಧ ರಹಿತ ಸಮಾಜ ನಿರ‍್ಮಾಣ ಆಧ್ಯಾತ್ಮಿಕ ಅಥವಾ ಪಾರಮಾರ‍್ಥಿಕ ತತ್ವದ ತಳಹದಿಯಿಂದ ಮಾತ್ರ ಶಾಂತ ಸಮಾಜ ಸ್ಥಾಪನೆ ಎಂದರು. ಗಾಂಧೀಜಿಯವರು ವಾಸ್ತವಿಕತೆಯ ಆಧಾರದ ಮೇಲೆ ವ್ಯಕ್ತಿಯನ್ನಾಗಲಿ ವ್ಯಕ್ತಿಯ ಸ್ವಭಾವವನ್ನಾಗಲಿ ರಾಜ್ಯವನ್ನಾಗಲಿ ನೊಡದೇ ಆರ‍್ಶದ ಆಧಾರದ ಮೇಲೆಯೇ ಪ್ಲೇಟೊನಂತೆ ನೋಡಿ ಸಿದ್ದಾಂತಗಳನ್ನು ಉಪದೇಶ ರೂಪದಲ್ಲಿ ಕೊಟ್ಟಿದ್ದಾರೆ. ಗಾಂಧೀಜಿ ಮತ್ತು ಪ್ಲೇಟೊ ಇಬ್ಬರು ಇತಿಹಾಸವನ್ನೂ ಆಧ್ಯಾತ್ಮಿಕ ದೃಷ್ಟಿಕೋನದಲ್ಲಿಯೇ ಕಂಡಿದ್ದಾರೆ. ಸ್ವಾತಂತ್ರ್ಯವನ್ನೂ ಆಂತರಿಕ ಪಾವಿತ್ರದಿಂದ ಮಾತ್ರ ಪಡೆಯಬೇಕೆಂಬುದೇ ಇಬ್ಬರ ವಾದ.

 ಗಾಂಧೀಜಿ ಮಾನವವತಾವಾದಿಗಳು ಎಲ್ಲ ಜೀವಿಗಳ ಬಗ್ಗೆ ಕಾಳಜಿಯನ್ನೂ ಹೊಂದಿದ್ದರು. ವೈರಿಯನ್ನು ಪ್ರೀತಿಸುವುದು ಎಂಬ ಗುಜರಾತಿ ಗಾದೆಮಾತಿನ ಪ್ರಭಾವ ಅವರ ಮೇಲೆ ಇತ್ತು. ವಿಶ್ವ ಮಾನವರೆಲ್ಲ ಒಂದು. ವಿಶ್ವವೆಲ್ಲ ಒಂದು ಎಂಬ ಅವರ ವೈಚಾರಿಕತೆ ಗ್ರೀನ್ ಮತ್ತು ಬೊಸಂಕ್ಯೂಟ್ (ಃosಚಿಟಿqueಣ) ಅವರನ್ನು ಹೋಲುತ್ತದೆ ಎಂದು ಹೇಳುವರು.

 “೭೫ನೇ ಸ್ವಾತಂತ್ರ್ಯೋತ್ಸವದ ಆಜಾದ್ ಕಾ ಅಮೃತಮಹೋತ್ಸವ”ದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ತ್ರಿವರ‍್ಣ ಧ್ವಜವನ್ನು ಹಾರಿಸುವ ಸಂಭ್ರಮದಲ್ಲಿ ಭಾಗವಹಿಸುವ ಮತ್ತು ದೇಶಭಕ್ತಿಯನ್ನು ಆಲಿಸುವ ಉತ್ಸಾಹವನ್ನು ತುಂಬುತ್ತದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರನ್ನು ನಾವು ಕೃತಜ್ಞತೆಯಿಂದ ಸ್ಮರಿಸುತ್ತೇವೆ, ಅವರ ತ್ಯಾಗವು ಸ್ವತಂತ್ರ ರಾಷ್ಟ್ರದಲ್ಲಿ ಬದುಕಲು ನಮಗೆ ಸಹಾಯ ಮಾಡಿದೆ. ಸ್ವಾತಂತ್ರ್ಯ ಹೋರಾಟದ ತತ್ವವು ಆಧುನಿಕ ಭಾರತದ ಅಡಿಪಾಯವನ್ನು ರೂಪಿಸುತ್ತದೆ ಮತ್ತು ದೇಶದ ದೂರದೃಷ್ಟಿಯುಳ್ಳ ನಾಯಕರು ಒಂದು ಸಾಮಾನ್ಯ ರಾಷ್ಟ್ರೀಯ ಮನೋಭಾವವನ್ನು ರೂಪಿಸಲು ವಿಶ್ವ ದೃಷ್ಟಿಕೋನಗಳ ವೈವಿಧ್ಯತೆಯನ್ನು ಒಟ್ಟುಗೂಡಿಸಿದ್ದಾರೆ. ಅವರು ಭಾರತ ಮಾತೆಯನ್ನು ದಬ್ಬಾಳಿಕೆ ವಿದೇಶಿ ಅಡಳಿತದಿಂದ ಮುಕ್ತಗೊಳಿಸಲು ಮತ್ತು ಭವಿಷ್ಯವನ್ನು ಸುಭದ್ರಗೊಳಿಸಲು ಬದ್ದರಾಗಿದ್ದರು. ಅವರ ಆಲೋಚನೆಗಳು ಮತ್ತು ಕಾರ್ಯಕ್ರಮಗಳು ಭಾರತದ ಆಧುನಿಕ ರಾಷ್ಟ್ರದ   ಗುರುತನ್ನು ರೂಪಿಸಿವೆ. ಮಹಾತ್ಮ ಗಾಂಧೀಜಿಯವರು ನಮ್ಮ ಸ್ವಾತಂತ್ರ್ಯ ಚಳುವಳಿಯ ಮಾರ‍್ಗದರ್ಶಕರಾಗಿದ್ದಕ್ಕೆ  ನಾವು ಅದೃಷ್ಟವಂತರಾಗಿದ್ದೇವೆ. ಒಬ್ಬ ರಾಜಕೀಯ ನಾಯಕನಾಗಿ, ಅವರು ಕೇವಲ ಭಾರತದಲ್ಲಿ ಮಾತ್ರ ಸಂಭವಿಸಬಹುದಾದ ಒಂದು ವಿದ್ಯಮಾನ. ಸಾಮಾಜಿಕ ಕಲಹ, ಆರ‍್ಥಿಕ ಸಮಸ್ಯೆಗಳು ಮತ್ತು ಹವಾಮಾನ ಬದಲಾವಣೆಯಿಂದ ತೊಂದರೆಗೊಳಗಾದ ಜಗತ್ತು ಗಾಂಧಿಯ ಬೋದನೆಗಳಲ್ಲಿ ಪರಿಹಾರವನ್ನು ಬಯಸುತ್ತಿದೆ. ಸಮಾನತೆ ಮತ್ತು ನ್ಯಾಯಕ್ಕಾಗಿ ಅವರ ಅನ್ವೇಷಣೆ ನಮ್ಮ ಸ್ವಾತಂತ್ರ್ಯದ ಮಂತ್ರವಾಗಿದೆ.

**************************

Leave a Reply

Back To Top