ಪುಷ್ಪಾ ಮಾಳ್ಕೊಪ್ಪ
ಮಿತ – ಹಿತ
ಜಗವ ಬೆಳಗುವ ಬಂದು
ಬಾಲ ಭಾನುವು ಎಂದು
ಮುತ್ತಿಕ್ಕಲಪ್ಪುದೇನೊ |
ತಮವ ಸರಿಸುವುದೆಂದು
ಜ್ವಲಿಪ ದೀಪವನೆಂದು
ಮುಟ್ಟಲಪ್ಪುದೇನೊ ||
ಗಂಗೆ ಯಮುನೆರನ್ನು
ಕೊಳೆಯ ತೊಳೆಯುವರೆಂದು
ಅಂಗಳಕೆ ತಪ್ಪುದೇನೊ |
ತಪವು ನೇಮಾದಿಗಳು
ಸನ್ಯಾಸಿಗಲ್ಲದೆ
ಸಂಸಾರಿಗಪ್ಪುದೇನೊ ||
ಮೈಗೆ ವ್ಯಾಧಿಯು ಎಂದು
ಮನೆಯ ಮದ್ದೆಂದು
ಮದ್ದಿಂದೆ ಮರವ ಮಾಡ್ಪುದೇನೊ |
ಹಸೆಯು ಹಿತವೆಂದು
ಹಗಲು ಇರುಳೆರಡು
ಮಲಗಲಪ್ಪುದೇನೊ ||
ಮನೆಯ ಮಾಳಿಗೆಯು
ಸೋರುತಿಹುದೆಂದು
ಬಂಧುಗಳನೊಡ
ನಿಪ್ಪುದೇನೊ |
ಮಮತೆ ಇಹುದೆಂದು
ಮನುಜ ಮಡಿದರೂ
ಮಡಗಲಪ್ಪುದೇನೊ ||
Meaningful lines