ಕಾವ್ಯಯಾನ
ಪ್ರಿಯತಮ
ಪ್ರೊ.ರಾಜನಂದಾ ಘಾರ್ಗಿ
ಕೆನ್ನೆ ಸವರುತ್ತ
ಮುತ್ತಿಕ್ಕಿ ಎಬ್ಬಿಸುವ
ಎಳೆ ಬಿಸಿಲಿನ
ಸೂರ್ಯ ಕಿರಣ
ಮುಂಗುರುಳ ಚದುರಿ
ಹಣೆ ಮೇಲೆ ಹರಡಿ
ಚಲ್ಲಾಟವಾಡುತ
ಕಾಡುವ ಸುಳಿಗಾಳಿ
ಪನ್ನಿರಿನಂತೆ ಸಿಡಿದು
ಮುಖವೆಲ್ಲ ಆವರಿಸಿ
ಪುಳಕಿತ ಗೊಳಿಸಿದ
ತಂಪು ಮಳೆ ಹನಿ
ಗಾಳಿಯಲಿ ಪಸರಿಸಿ
ಹುಡುಕುತ್ತ ಬಂದು
ನಾಸಿಕವ ಚುಂಬಿಸಿದ
ಸಂಪಿಗೆಯ ನವಿರು
ನಿಸರ್ಗವೇ ಲಾಲಿಸಿದೆ
ಪ್ರೀತಿಯಿಂದ ನನ್ನ
ಪ್ರಿಯತಮ ನಾನೇ
ಎಂಬ ಭಾವದಿಂದ
*************************
Very nice expression