ಕಾವ್ಯಯಾನ
ಯಕ್ಷ ಪ್ರಶ್ನೆ
ನೇತ್ರ ಪ್ರಕಾಶ್ ಹಲಗೇರಿ
ದಿನೇ ದಿನೇ ನನ್ನ
ಸಾವಿರಾರು ಪ್ರಶ್ನೆ
ಬೆಳೆಸಿದ ಪರಿಯೇ
ಬೇರೆ ನನ್ನಮ್ಮ
ಇಂದಿನ ನನ್ನ ಬದುಕೇ
ಬೇರೆ ಭಿನ್ನಾವಿಭಿನ್ನ !
ಸಂಸ್ಕೃತಿ ಸಂಸ್ಕಾರಗಳೇ
ಮೌಢ್ಯಗಳಿಲ್ಲಿ ಕೇಳಿನ್ನ
ಸರಿ ತಪ್ಪು ನೈತಿಕ ನೈಮಿತ್ತಿಕ
ನೆಲೆಗಟ್ಟನ್ನು ಕಲಿಸಿದೆ ನೀನು
ತಿಳಿ ಹೇಳಿದ್ದನ್ನು ಕಲಿತೆ ನಾನು
ಪೂಜೆ ಪುನಸ್ಕಾರ ಬೇಡವೇನು!?
ದೇವರು ದಿಂಡರು ಶಾಸ್ತ್ರ
ಸಂಪ್ರದಾಯಗಳೆಲ್ಲ ಗೊಡ್ಡು
ಈ ಜನರಂತೆ ಬದುಕಲಾಗುತ್ತಿಲ್ಲ
ಏಕೆ ಹೀಗೆ ಪ್ರಪಂಚ ಅರ್ಥವಾಗುತ್ತಿಲ್ಲ!
ನೇರಕ್ಕೆ ನೇರ ಖಾರಕ್ಕೆ ಖಾರ
ಸರಿ ಕಾಣದ ವರ್ತನೆಗಳ ಖಂಡನೆ
ಸಹಿಸಲಾಗದ ಮನ ಮಂಡನೆ
ಹೊಂದಿಕೆ ಎಷ್ಟು ಕಷ್ಟವಮ್ಮ!?
ನಿನ್ನ ಮತ್ತು ನೀ ಕಲಿಸಿದ
ಮಾನ ಮರ್ಯಾದೆಯೇ ಬೇರೆ
ಲೋಕದ ಅಪಾರ ನಿದಿಯಲ್ಲಿ ಅಡಗಿದೆಯೆ? ಗೌರವಧಾರೆ?
ಇನ್ನೂ ಮಿಕ್ಕಿದೆ ನನ್ನಮ್ಮನಲ್ಲಿ
ಕೇಳುವ ಯಕ್ಷ ಪ್ರಶ್ನೆ ಮಂಡಲ
ಪ್ರಶ್ನೆಗೆ ಪ್ರಶ್ನೆಯೇ ಉತ್ತರಗಳೇ ಹೌಹಾರಿ ಬದುಕುತ್ತಿರುವೆ
ಅಮ್ಮ ನೀ ಹೇಳು ಉತ್ತರ ನನ್ನ ಯಕ್ಷಾತೀತ ಪ್ರಶ್ನೆಗಳಿಗೆ ಕಾತರ!?
***************************
Adbhutha yaksh prashne…
Thanku sir
ಕವಿತೆ ಉತ್ತಮವಾಗಿದೆ ಅಮ್ಮನ ಅಕ್ಕರೆಯಂತೆಯೇ
Thanku sir
good
Thumba channagi ide aunty
Thanku paa
Nice thought..mdm
Nice super line
Thanku giri sir