ಗೆಳೆಯ

ಕಾವ್ಯಯಾನ

ಗೆಳೆಯ

ಲೀಲಾ ಅ, ರಾಜಪೂತ

ಈ ಜಗದಲಿ ಅತಿ ಅಮೋಘ
ನನಗಾಗಿ ಗೆಳೆಯ ನೀನೇ……

ನೀನಿರದ ಸಾವಿರಾರು ಸ್ನೇಹಿತರ
ಕೂಟದಲಿ ಏಕಾಂಗಿ ನಾನೇ…..

ಎನ್ನ ಮನದ ಮನಮೋಹಕ
ಭಾವಾನುಭಾವ ನೀನೇ………..

ಅಧ್ಭುತ ನಿನ್ನ ಮುಗುಳ್ನಗೆಯ ಮೋಡಿ
ಎನ್ನಸೋಲಿಸಿದ ಮನಮೋಹನ ನೀನೇ..

ಎನ್ನ ಕವನದ ಸಾಲುಗಳಿಗೆ ಸುಂದರ
ಪದಪುಂಜ ಗೆಳೆಯ ನೀನೇ…..

ಎನ್ನ ಪ್ರೇಮ ಪೂಜೆಗೆ ಇನಿಯ
ಪ್ರೇಮಾಭಿಷೇಕ ಧಾರೆಯು ನೀನೇ….

ಎನ್ನ ಭದ್ರಹೃದಯ ದ್ವಾರವ ತಟ್ಟಿ
ವಿರಾಜಮಾನವಾದ ರಸಿಕ ನೀನೇ…..

ಎನ್ನ ಬಾಳಪುಟದಿ ರಚಿಸಿದ ಪ್ರೇಮಕವಿತೆಯ ಪ್ರೇಮ ಪಲ್ಲವಿ ನೀನೇ…..

ಎನ್ನ ಮುಗ್ಧ ಮುಖದ ಮಗು ನೀನೇ
ಕನಸಮನಸು ಎಲ್ಲೆಲ್ಲೂ,ನೀನೇ.

ಆದಿ..ನೀನೇ ಅಂತ್ಯವು ನೀನೇ
ನಿನ್ನ ಪ್ರೇಮಕಾಂತಿಯಲಿ ಬೆಳಗುವ
ಪ್ರೇಮ ಜ್ಯೋತಿ ನಾನೇ…….

ಬಾಳಲಿ ನಿನ್ನ ಪ್ರೀತಿ ಇಲ್ಲದ,ನೀ ನೆನಪಿರದ ಕ್ಷಣ, ಅದು ನನ್ನ ಪಾಲಿಗೆ ಮರಣ……..
ಅರಿಯಲಾರೆಯಾ ನಲ್ಲ , ನೀನೇ

****************************

One thought on “ಗೆಳೆಯ

Leave a Reply

Back To Top