ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಎ. ಹೇಮಗಂಗಾ

View on foodsteps and sunset on the beach by Tayrona in Colombia

ಉಚ್ಛ್ವಾಸ ನಿಶ್ವಾಸದಲಿ ಉಸಿರು ಉಸುರುವುದು ನಿನ್ನ ಹೆಸರನ್ನೇ
ತುಡಿತ ಮಿಡಿತದಲಿ ಹೃದಯ ನಿತ್ಯ ಕರೆವುದು ನಿನ್ನ ಹೆಸರನ್ನೇ

ಕಡಲದಂಡೆಯ ಮರಳಲಿ ಜೊತೆಯಾದ ಹೆಜ್ಜೆ ಗುರುತುಗಳು
ಸೋತರೂ ಬೆರಳು ಮತ್ತೆ ಮತ್ತೆ ಬರೆವುದು ನಿನ್ನ ಹೆಸರನ್ನೇ

ಕಾಯುವಿಕೆಯ ಕಾಯಕದಲೂ ಹಿತವಾದ ವೇದನೆಯಿದೆ
ಸಿಹಿಚುಂಬನಕೆ ಅಧರ ಕನವರಿಸುವುದು ನಿನ್ನ ಹೆಸರನ್ನೇ

ನೀರವ ಒಂಟಿ ಇರುಳಲಿ ಕುಳಿತರೂ ನಿಂತರೂ ನಿನ್ನದೇ ಧ್ಯಾನ
ಮೈ ನೇವರಿಸಿ ಕುಳಿರ್ಗಾಳಿ ನೆನಪಿಸುವುದು ನಿನ್ನ ಹೆಸರನ್ನೇ

ವಿರಹದ ರಾಗಾಲಾಪ ಹಕ್ಕಿಯ ಹಾಡಿನಲಿ ಕಾಡುವುದೇಕೆ ?
ಒಲವ ತೆಕ್ಕೆಯಲಿ ಸುಖಿಸಲು ಮನ ಹೇಳುವುದು ನಿನ್ನ ಹೆಸರನ್ನೇ

ಪ್ರೇಮದ ಈ ಪರಿ ನಶೆಯಲಿ ಕಳೆದುಹೋಗಿಹಳು ಹೇಮ
ಜನುಮಗಳ ಬಂಧದಲಿ ಆತ್ಮ ಜಪಿಸುವುದು ನಿನ್ನ ಹೆಸರನ್ನೇ

***********************************

About The Author

Leave a Reply

You cannot copy content of this page

Scroll to Top