ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ನೀ ಬರಲು.

ಡಾ.ನಿರ್ಮಲಾ ಬಟ್ಟಲ

ಮುಂಜಾವು
ತಣ್ಣನೆಯ ನಿಶಬ್ದ
ಭಾಸ್ಕರನಿಲ್ಲದ ಬಾನು
ಬೋಳು ಹಣೆಯಂತೆ
ಖಾಲಿ ಖಾಲಿ …..‌!
ಮಂದಗಾಳಿಗೆ ಮುಂಗುರುಳಂತೆ
ಹಾರಿಬಂದು ಮುತ್ತಿಡುವ ಕಪ್ಪು ಮೊಡಗಳ ಚೆಲ್ಲಾಟ
ನಾಚಿ ರಂಗೇರಿದೆ ಬಾನು…..!
ಮೌನಮುರಿದ ಮಯೂರ
ಗರಿಗೆದರಿ ಕುಣಿಯುತಲಿ
ನೀಡಿದೆ ಪ್ರಣಯಕೆ ಆವ್ಹಾನ…..‌!
ಮೊಗ್ಗೊಡೆಯದೆ ನಾಚಿ
ಮುದುಡಿದ ಕುಸುಮದ
ಮನವೊಲಿಸಲು ಸೋತು
ದುಂಬಿಗಳ ದಂಡು….‌!
ಗುಡುಗಿನ ತಾಳ ಮದ್ದಳೆ
ಮಿಂಚಿನ ಬೆಳಕು…..!
ತುಂತುರಿನ ಹೂಮಳೆ….!!
ಬಂದ ನೇಸರ ಹಿತವಾದ
ಕಿರಣಗಳ ಹರವುತ ಹಾದಿಗೆ
ಬಾನು ಹಣೆಗೆ ತಿಲಕವಿಟ್ಟಂತೆ….!
ದೂರದ ಗುಡಿಯಲಿ ಘಂಟಾನಾದ
ಮಂತ್ರ ಘೋಷ ಚಂದನದ ಸುಗಂಧ…!
ಆರತಿಯ ಬೆಳಕು
ಬಂದ ಶ್ರಾವಣ
ಮನೆಮನದ ಕದವ ತಟ್ಟುತ….!!

**********************

About The Author

5 thoughts on “ನೀ ಬರಲು.”

  1. Mamathashankar

    ಚೆಂದದ ದೃಶ್ಯ ಕಣ್ ಮುಂದೆ ಕಟ್ಟಿಕೊಟ್ಟಂತೆ….. ಶ್ರಾವಣದ ಮುಂಬೆಳಗು…. ಅಭಿನಂದನೆಗಳು ನಿರ್ಮಲಾ

    1. ಶ್ರಾವಣ ಬರುವ ಸಮಯವನ್ನು
      ನಾವೇ ಅನುಭವಿಸುತ್ತಿರುವ ಹಾಗೇ ಹೆಣೆದಿದ್ದೀರಿ

Leave a Reply

You cannot copy content of this page