ನೆಗಳಗುಳಿ ಗಜಲ್ಸ್

ಪುಸ್ತಕ ಸಂಗಾತಿ

ನೆಗಳಗುಳಿ ಗಜಲ್ಸ್

ಕೃತಿ ಹೆಸರು       ನೆಗಳಗುಳಿ ಗಜಲ್ಸ್

ಲೇಖಕರು       ಡಾ.ಸುರೇಶ ನೆಗಳಗುಳಿ ಮಂಗಳೂರು

ಮೊ.ನಂ.೯೪೪೮೨೧೬೬೭೪,೮೩೧೦೨ ೦೩೩೩೭೮

ಪ್ರಕಾಶಕರ…….‌ಕಲ್ಲಚ್ಚು ಪ್ರಕಾಶನ ಮಂಗಳೂರು ಮೊ,ನಂ ೯೮೮೦೬ ೯೨೪೪೭

ಪ್ರಕಟಿತ ವರ್ಷ….೨೦೨೦,ಬೆಲೆ ೧೨೫ ₹

ಡಾ.ಸುರೇಶ ನೆಗಳಗುಳಿ ಅವರು ವೃತ್ತಿಯಲ್ಲಿ ವೈದ್ಯರು,ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದಾರೆ.ಈಗಾಗಲೇ ಹನಿಗವನಗಳು,ಚಿತ್ರಕಾವ್ಯ,ತುಷಾರ ಮಾಸ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು,ಕವನಗಳು, ಚಿತ್ರಕಾವ್ಯ ಗಳನ್ನು ಸೇರಿಸಿ ತುಷಾರ ಬಿಂದು ವೆಂದು ಎಂಬ ಸಂಕಲನವನ್ನು ಪ್ರಕಟಿಸಿದ್ದಾರೆ. ಈಗಾಗಲೇ ಅವರು ೨೦೧೮ ರಲ್ಲಿಪಡುಗಡಲ ತೆರೆಮಿಂಚುಎಂಬ ಗಜಲ್ ಸಂಕಲನವನ್ನು ಪ್ರಕಟಿಸಿದ್ದಾರೆ. ಒಟ್ಟು ಇವರಿಂದ ಐದು ಸಂಕಲನಗಳು ಪ್ರಕಟವಾಗಿವೆನೆಗಳಗುಳಿ ಗಜಲ್ಸ್ ಇದು ಇವರ ಎರಡನೇ ಗಜಲ್ ಸಂಕಲನವಾಗಿದೆ.ಇವರ ವಿಶಿಷ್ಟತೆ ಎಂದರೆ ಕನ್ನಡ ಗಜಲ್ ಗಳಲ್ಲದೆ ತುಳು ,ಮಲೆಯಾಳಿ,ಹವ್ಯಕ,ಹಿಂದಿ,ಇಂಗ್ಲೀಷ ಭಾಷೆಗಳಲ್ಲಿಯೂ ಗಜಲ್ ಗಳನ್ನು ರಚಿಸುವ ಪ್ರಯತ್ನ ಮಾಡಿದ್ದಾರೆ.ಇವರು ತಮ್ಮ ಸಂಕಲನದಲ್ಲಿ ಎಲ್ಲಾ ಭಾಷೆಯ ಗಜಲ್ ಗಳನ್ನು ಉದಾಹರಣೆಗೆ ಗಾಗಿ ಪ್ರಕಟಿಸಿದ್ದಾರೆ. ಭಾಷೆಗಳನ್ನು ಬಲ್ಲವರು ಇವುಗಳನ್ನು ಓದಿ ಅಥೈ೯ಸಿ ಕೊಳ್ಳ ಬಹುದು.ಇವರು ಗಜಲ್ ಬಗ್ಗೆ ಆಳವಾಗಿ ಅಭ್ಯಾಸಿಸಿಕೊಂಡು ಗಜಲ್ ಬಾಹ್ಯ ಛಂದಸ್ಸುನ್ನು ಚಾಚು ತಪ್ಪದೆ ಗಜಲ್ ಗಳನ್ನು ರಚಿಸಿದ್ದಾರೆ. ವಾಟ್ಸಪ್ ಗುಂಪುಗಳಲ್ಲಿ ನಡೆಯುವ ಗಜಲ್ ರಚನಾ ಸ್ಪದೆ೯ಗಳಲ್ಲಿ ತಪ್ಪದೇ  ಭಾಗ ವಹಿಸಿ ಪ್ರಶಸ್ತಿ ಪತ್ರಗಳನ್ನು ಪಡೆದಿರುತ್ತಾರೆ.

ಡಾ. ಸುರೇಶ ನೆಗಳಗುಳಿ ಯವರು ತಮ್ಮ ಸಂಕಲನದ ಪೀಠಿಕೆಯಲ್ಲಿ( ಪ್ರಸ್ತಾವಿಕದಲ್ಲಿ) ಅರಬ್ಬಿ ಭಾಷೆಯಿಂದ ಬಂದ ಗಜಲ್ ಕಾವ್ಯದ ಮೂಲ ಹುಡುಕುತ್ತಾ ಹೀಗೆ ಬರೆದಿದ್ದಾರೆ.ಗಜಲ್ ಕಾವ್ಯ ಧೀರರ ಹೊಗಳಿಕೆ, ದಾರ್ಶನಿಕತೆಯನ್ನು ತುಂಬಿದ ಮಧುರ ಆಧ್ಯಾತ್ಮಿಕ ಕಾವ್ಯ, ಪ್ರೀತಿ ಪ್ರೇಮದ ಅನುಭೂತಿ ಗಳಿಂದ ಕೂಡಿದ  ಯೌವನ,ಮಧು ಮುಕ್ತತೆ,ಶೃಂಗಾರ ಭಾವ ಗಳಿಂದ ಕೂಡಿದ ಪೀಠಿಕೆಯ ದ್ವಿಪದಿಗಳನ್ನು ಹೊಂದಿರುವ ಕಸೀದ್ ಕಾವ್ಯ ದಲ್ಲಿರುವ ಪೀಠಿಕೆಯ( ತಷಬೀಜ್) ಷೇರ್ (ದ್ವಿಪದಿ) ಗಳನ್ನು ಎತ್ತಿತಂದು ಅದನ್ನೇ ಗಜಲ್ ಮಾಡಲಾಯಿತು ಎಂಬುದು ನಂಬಿಕೆ.ಯಾಕೆಂದರೆ ತಷಬೀಜ್ ಗೂ ಗಜಲ್ ಮೊದಲ ಷೇರ್ ಮತ್ಲಾಕ್ಕೂ ರಚನೆ,ಕಾಫಿಯಾ ,ರದೀಫ್,ಗಳಲ್ಲಿ ವ್ಯತ್ಯಾಸವು ಕಾಣುವುದಿಲ್ಲ.ಕಸೀದ್ ಹಾಗೂ ಗಜಲ್ ಮತ್ಲಾ ,ಮಕ್ತಾಗಳಹೊಂದಿಈಗ ಭಾರತದನ್ನುೂ ಭಾಹ್ಯ ರಚನಾ ವಿಧ್ಯಾನಗಳಲ್ಲಿ ಒಂದಕ್ಕೊಂದು ಸಾಮ್ಯತೆಯನ್ನು ಹೊಂದಿವೆ. ಆದರೆ ಅರಬ್ಬರ ಗಂಭೀರತೆ ಹಾಗೂ ಶಿಷ್ಟತೆ ಯಿಂದ ಸೊರಗಿದ ಗಜಲ್ ಅರಬ್ಬರು ಇರಾನನ್ನು ವಶಪಡಿಸಿ  ಕೊಂಡಮೇಲೆ ಪಾಸಿ೯ ಭಾಷೆಯಲ್ಲಿ ತೀರಾ ವೈಶಿಷ್ಟ್ಯ ಪೂರ್ಣ ವಾಗಿ ಬೆಳೆದಿದ್ದನ್ನು ಕಾಣಬಹುದು.ಹೀಗೆ ಮುಂದುವರೆದ ಗಜಲ್ ಸಾಹಿತ್ಯ ರಚನೆ ಉದು೯ ಭಾಷೆಗೆ ಬಂದನಂತರ ಅದರ ಖದರ್ ಬದಲಾಗಿ ಹೋಯಿತೆಂದು ಮುಂದೆ ಭಾರತಕ್ಕೆ ಬಂದ ಗಜಲ್ ಸಾಹಿತ್ಯ ಇಲ್ಲಿಯ ಸಂಸ್ಕೃತಿಯನ್ನು ರೀತಿ ರಿವಾಜಗಳನ್ನು ಇಲ್ಲಿನ ಪ್ರೇಮದ ಅಭಿವ್ಯಕ್ತಿ ಯನ್ನು ,ವಿರಹದ ವೇದನೆಯನ್ನು ತನ್ನದಾಗಿಸಿಕೊಂಡು ಸಶಕ್ತವಾಯಿತು.ಉದು೯ ಭಾಷೆಯ ಮೃದತ್ವ ,ನಯ,ನಾಜೂಕು,ಮಾಧುರ್ಯ,ಲಾಲಿತ್ಯ,ಗೇಯತೆ ,ನವಿರನ್ನು ಪಡೆದು ಭಾವನಾತ್ಮಕ ವಿಷಯಗಳನ್ನು ಒಳಗೊಂಡು ಒಂದು ಶ್ರೇಷ್ಠ ಕಾವ್ಯ ವಾಗಿ ಉದು೯ ಕಾವ್ಯದ ರಾಣಿಯಾಗಿ ಮೆರೆಯಿತು.ಮುಂದೆ ಭಾರತದ ಎಲ್ಲಾ ಭಾಷೆಯ ಕವಿಗಳನ್ನು ತನ್ನತ್ತ ಸೆಳೆದುಕೊಂಡಿತು.ಬಹುತೇಕವಾಗಿ ಈಗ ಭಾರತದ ಎಲ್ಲಾ ಭಾಷೆಗಳಲ್ಲಿ ಗಜಲ್ ಗಳು ರಚನೆ ಯಾಗುತ್ತಿವೆ.

ಡಾ.ಸುರೇಶ ನೆಗಳಗುಳಿ ಅವರ ಎರಡನೇ ಸಂಕಲನವಾದ ನೆಗಳಗುಳಿ ಗಜಲ್ಸದಲ್ಲಿ ಒಟ್ಟು ೫೬ ಗಜಲ್ ಗಳಿದ್ದಿ ಅದರಲ್ಲಿ ಕಂಗ್ಲೀಷ ,ಹವ್ಯಕ ,ತುಳು ,ಹಿಂದಿ ,ಮಲೆಯಾಳಂ ,ಇಂಗ್ಲೀಷ್ ,ಹೀಗೆ ಬೇರೆ ಭಾಷೆಯ ಗಜಲ್ ಗಳು ಇವೆ.ಉಳಿದ ೪೭ ಗಜಲ್ ಗಳು ಕನ್ನಡ ಭಾಷೆಯಲ್ಲಿವೆ. ಕೃತಿಯ ಪ್ರಾರಂಭದಲ್ಲಿ ಡಾ.ಸುರೇಶ ಅವರು ಗಜಲ್ ಇತಿಹಾಸವನ್ನು ಗಜಲ್ ರಚನಾ ಪದ್ದತಿಯನ್ನು ,ಛಂಧಸ್ಸನ್ನು, ಪೀಠಿಕೆಯಾಗಿ (ಪ್ರಸ್ತಾವೀಕವಾಗಿ)ಒಂದು ವಿವರವಾದ ಲೇಖನವನ್ನು ಬರೆದಿದ್ದಾರೆ. ಲೇಖನ ಗಜಲ್ ರಚನೆ ಮಾಡುವ ಮತ್ತು ಕಲಿಯುವ ಮನಸುಗಳಿಗೆ ಮಾರ್ಗದರ್ಶನ ಮಾಡುತ್ತದೆ.ಸಂಕಲನದ ಮುಖ ಪುಟ ಬುದ್ಧನ ಧ್ಯಾನಸ್ಥ  ಚಿತ್ರದಿಂದ ಆಕರ್ಷಕವಾಗಿ ಕಾಣುತ್ತದೆ.ಗಜಲ್ ರಚನೆಯೂ ಕೂಡ ಒಂದು ಧಾನ್ಯ,ಧಾನ್ಯಸ್ಥ ಸ್ಥಿತಿಯಲ್ಲಿ ಗಜಲ್ ರಚನೆ ಯಾದರೆ ಅದಕ್ಕೊಂದು ತೂಕ ವಿರುತ್ತದೆ. ಡಾ.ಸುರೇಶ ಅವರ ನೆಗಳಗುಳಿ ಗಜಲ್ಸ ಸಂಕಲನದಲ್ಲಿ ಅವರು ಕಂಡ,ಅನುಭವಿಸಿದ,ಜೀವಪರವಾದ ಬದುಕನ್ನು ಬಿಂಬಿಸುವ ಹಾಗೂ ಪ್ರಚಲಿತ ವಿದ್ಯಮಾನಗಳ ಮೇಲೆ,ಪ್ರೀತಿ, ಪ್ರೇಮ, ವಿರಹದ , ಗಜಲ್ ಗಳನ್ನು ರಚಿಸಿದ್ದಾರೆ.ಇವರು ಈಶಾ  ಮತ್ತು ಸುರೇಶ  ಎಂಬ ಎರಡುತಖಲ್ಲುಸ್ಕಾವ್ಯ ನಾಮದಿಂದ ಗಜಲ್ ಗಳನ್ನು ರಚಿಸಿದ್ದಾರೆ ಕೆಲವು ಗಜಲ್ ಕಾರರ ಮಿಸ್ರಾ ತೆಗೆದುಕೊಂಡು ತರಹೀ ಗಜಲ್ ಗಳನ್ನು ರಚಿಸಿದ್ದಾರೆ.

ನೆಗಳಗುಳಿ ಗಜಲ್ಸ್  ಸಂಕಲನದಲ್ಲಿ ನನ್ನ ಗಮನ ಸೆಳೆದ ಕೆಲವು ಮಿಸ್ರಾಗಳು

ನನ್ನ ಮನದ ಮಾತಿಗೆ ನಿನ್ನ ಹೃದಯ ಮಿಡಿದಿದೆ

* ನಿನ್ನ ನನ್ನ ಕಣ್ಣ ಭಾಷೆ ಅರ್ಥ ಪಡೆಯ ಬೇಕಿದೆ*  (ಗಜಲ್ )

ಮೇಲಿನ ಗಜಲ್ ದಲ್ಲಿ ಗಜಲ್ ಕಾರರು ತಮ್ಮ ಪ್ರಿಯತಮೆಯನ್ನು ಒಲಿಸಿ ಕೊಳ್ಳಲು ಆಕೆಯನ್ನು ಚಿನ್ನ,ರನ್ನ,ಹೊನ್ನ,ಜೊನ್ನ,ಎಂದು ವಣಿ೯ಸುತ್ತಾ ಮಕ್ತಾದಲ್ಲಿ ನನ್ನ ಮನದ ಮಾತಿಗೆ ನಿನ್ನ ಹೃದಯ ನನಗಾಗಿ ಮಿಡಿಯುತಿದೆಂದು ಹೇಳುತ್ತಾ ,ನಿನ್ನ ನನ್ನ ಕಣ್ಣ ಭಾಷೆ ಅರ್ಥ ಮಾಡಿಕೊಂಡು ನಾವಿಬ್ಬರೂ ಬಾಳಿನಲಿ ಒಂದಾಗ ಬೇಕೆಂದು ತಮ್ಮ  ಒಲವಿನ ಪ್ರಿಯತಮೆಗೆ ಹೇಳುತ್ತಾರೆ.

ತನ್ನ ಮನೆಯ ಮಜ್ಜಿಗೆಯ ತಾಳೆ ಮರದಡಿ ಕುಡಿಯ ಬೇಡ

ಕಣ್ಣುಗಳು ಎಲ್ಲವೂ ಭಿನ್ನ ಎಂಬುದ ಮರೆಯ ಬೇಡ  (ಗಜಲ್ ೧೦)

ಮೇಲಿನ  ಮತ್ಲಾದಲ್ಲಿ ಜಗವು ಒಳ್ಳೆಯವರನ್ನು ಹೇಗೆ ಅಪಾರ್ಥ ಮಾಡಿಕೊಳ್ಳುತ್ತಾರೆಂಬ ನೀತಿಯೊಂದಿಗೆ ಗಜಲ್ ಪ್ರಾರಂಭವಾಗಿದೆ.ನಾವು ಎಷ್ಟೇ ಪರಿಶುದ್ಧ ವಾಗಿದ್ದರೂ ಜನ ಅದರಲ್ಲಿ ಕಲ್ಮಶ ಹುಡುಕುತ್ತಾರೆ ನಾವು ಈಚಲ ಗಿಡ(ತಾಳೆಮರ) ಕೆಳಗೆ ಕುಳಿತು ನಮ್ಮ ಮನೆಯ ಶುದ್ಧ ವಾದ ಹಾಲು ಅಥವಾ ಮಜ್ಜಿಗೆ ಕುಡಿದರೂ ಜನ ಅದನ್ನು ಹೆಂಡವೆಂದು ತಿಳಿದು ಕೊಳ್ಳುತ್ತಾರೆಂದು ಹೇಳುತ್ತಾ ಮುಂದೆ ನೋಡುವವರ ಪ್ರತಿ ಕಣ್ಣುಗಳು ನೋಡುವ ತಿಳಿಯುವ ಭಾವ ಬೇರೆಯಾಗಿರುತ್ತದೆಂದು ಎಚ್ಚರಿಕೆಯನ್ನು ಗಜಲ್ ಕಾರರು ಉಪಮೆ ಯಿಂದ ಹೇಳಿದ್ದಾರೆ.

ತುಳಿದು ಬದುಕಲು ಬೇಡ ತಿಳಿದು ಬದುಕು

ತಿಳಿಯಾದ ಬದುಕಿನಲಿ ಹೊಳೆದು ಬದುಕು   (ಗಜಲ್೧೬)

ಮೇಲಿನ ಮತ್ಲಾದಲ್ಲಿ ಗಜಲ್ಕಾರರು ಬದುಕಿನ ನೀತಿ ರೀತಿ ಯನ್ನು ಹೇಳುತ್ತಾರೆ.ಅಧಿಕಾರ ,ಹಣ, ಸಂಪತ್ತು ಅಂತಸ್ತು ಇದೆ ಎಂದು ಸೊಕ್ಕಿನಲ್ಲಿ ಬಡವರನ್ನು ದುರ್ಬಲರನ್ನು ಅನ್ಯಾಯದಲಿ ತುಳಿದು ಅವರಿಗೆ ಹಿಂಸೆ ಮಾಡಿ ನೀ ಸಂತಸದಲ್ಲಿ ಬದುಕ ಬೇಡ ವೆಂದು ಹೇಳುತ್ತಾ ಎಲ್ಲರನ್ನು ಸಮ ವೆಂದು ತಿಳಿದು ಪರಿಶುದ್ಧ ವಾದ ಪ್ರೀತಿಯನ್ನು ಹಂಚುತ್ತಾ ಎಲ್ಲರ ಮನ ಗೆದ್ದು ಚಿನ್ನವು ಹೊಳೆಯುವಂತೆ  ಎಲ್ಲರೂ ಮೆಚ್ಚುವಂತೆ ಬದುಕಿ ಜಗದಲ್ಲಿ ಪ್ರಸಿದ್ಧಿ ಹೊಂದೆಂಬ ಕಿವಿಮಾತನ್ನು  ಗಜಲ್ ಕಾರರು ಜಗದ ಜೀವಿಗಳಿಗೆ ತಿಳಿ ಹೇಳುತ್ತಾರೆ.

ಅನಿರೀಕ್ಷಿತವಾದ ಮಿಲನಕ್ಕೆ ಅದೆಷ್ಟು ಶಕ್ತಿ ಇದೆ

ಎದೆಯಾಳದ ಒಲವ ನಡೆಗೆ ಸಾಕಷ್ಟು ಯುಕ್ತಿ ಇದೆ (ಗಜಲ್೧೯)

ಮೇಲಿನ ಮತ್ಲಾದಲ್ಲಿ ಗಜಲ್ ಕಾರರು ಹೀಗೆ ಹೇಳುತ್ತಾರೆ  ಜೀವನದಲ್ಲಿ ಅದೆಷ್ಟೋ ಸಾರೆ ನಾವು ಆಕಸ್ಮಿಕವಾಗಿ ಒಬ್ಬರಿಗೊಬ್ಬರು ಭೆಟ್ಟಿ ಆಗಿರುತ್ತೇವೆ.ಆದರೆ ಒಲಿದ ಹೃದಯಗಳು ಅನೀಕ್ಷಿತವಾಗಿ ಮಿಲನ ಗೊಂಡಾಗ ಮಿಲನಕ್ಕೆ ಮನಗಳನ್ನು ಬೆಸೆಯುವ ಅಮೂಲ್ಯ ವಾದ  ಶಕ್ತಿ ಇರುತ್ತದೆ.ಎದೆಯಾಳದಲಿ ಒಲವು ಸೇರುವಿಕೆಯು  ಅನೀಕ್ಷಿತವಾದ ಮಿಲನಕ್ಕೆ ಇದೆ ಎಂದು ಗಜಲ್ ಕಾರರು ಹೇಳುತ್ತಾರೆ.

ಬುದ್ಧ ನಿನ್ನಂತೆ ನಾ ನಿಲುವೆನೇ ಅನುಮಾನ

ಗಟ್ಟಿ ಮನ ವಿರಿಸಿ ದಿನ ಕಳೆವೆನೇ ಅನುಮಾನ  (ಗಜಲ್ ೨೨)

ಮೇಲಿನ ಮತ್ಲಾದಲ್ಲಿ ಗಜಲ್ ಕಾರರು ಬುದ್ಧ ಜೀವನದ ಘಟನೆಗಳನ್ನು ಅರಿತು ಕವಿ ನಿನ್ನಂತೆ ನಾನು ಸರ್ವ ವನ್ನು ತ್ಯಜಿಸಿ ದೃಢಮನದಿಂದ ಜಗದಲ್ಲಿ ನಿಲ್ಲುವೆನೇ ಎಂದು ಅನುಮಾನಿಸುತ್ತಾ ಬುದ್ಧ ನಿಗೆ ಪ್ರಶ್ನೆ ಮಾಡುತ್ತಾನೆ.ಗಟ್ಟಿಮನದಿಂದ ನಿನ್ನಂತೆ ಎಲ್ಲಾ ಪರಿತ್ಯಾಗಮಾಡಿ ಜಗದಲಿ ಬದುಕ ಬಹುದೇ ಎಂದು ಪ್ರಶ್ನೆ ಮಾಡಿಕೇಳ್ಳುತ್ತಾನೆ.ಪಂಚೇಂದ್ರಿಗಳ ಬಯಕೆಯನ್ನು ಗೆದ್ದು ಜ್ಞಾನ ಬೆಳಕನ್ನು ಪಡೆಯಲು ಸಾಧ್ಯವೇ ಎಂದು ಅನುಮಾನಿಸುತ್ತಾ ಹೋಗುತ್ತದೆ ಗಜಲ್.

ಮದ್ದು ಎಲ್ಲಿದೆ ಮತಿ ಅಡವಿಟ್ಟ ಮೇಲೆ

ಸದ್ದು ಏತಕೆ ಖತಿಯ ಅಡಗಿಟ್ಟ ಮೇಲೆ (ಗಜಲ್ ೨೮)

ಮೇಲಿನ ಮತ್ಲಾದಲ್ಲಿ ಮನುಜನ ಜೀವನದ ರೀತಿ ನೀತಿ ಯನ್ನು ಹೇಳುತ್ತಾರೆ.ಗಜಲ್ ಕಾರರು. ಮನುಷ್ಯ ತನ್ನ ಬುದ್ಧಿ(ಮತಿ)ಯನ್ನು ಕಳೆದುಕೊಂಡು ಹುಚ್ಚು ಹುಚ್ಚಾಗಿ ಸಮಾಜದಲ್ಲಿ ಬಾಳಿದರೆ ಹುಚ್ಚು ಬಿಡಿಸಲು ಔಷಿಧಿ ಎಲ್ಲಿಂದ ತರಬೇಕು,ಮನುಷ್ಯ ಕೋಪವನ್ನು ನಿಗ್ರಹಿಸಿಕೊಂಡ ಮೇಲೆ ಏರು ದನಿಯಲಿ ಮಾತಾಡುವುದು ಅವಶ್ಯಕತೆ ಯಿಲ್ಲ ವೆಂದು ಗಜಲ್ ಕಾರರು ಮನುಜ ಸ್ವಭಾವದ ಬಗ್ಗೆ ಗಜಲ್ ದಲ್ಲಿ ವಿವರಿಸಿದ್ದಾರೆ.

ಬೊಗಸೆಯಲಿ ಶರಧಿಯನು ಬಂಧಿಸುವ ಹಟಬೇಡ ಸುಮ್ಮನಿರು ನೀನು

ಬೆರಳಿನಲಿ ಆಗಸವ ಎತ್ತಿಡುವ ಚಟಬೇಡ ಸುಮ್ಮನಿರು ನೀನು (ಗಜಲ್ ೩೯)

ಮನುಜನ ಮನವು ಬಹಳ ಚಂಚಲ ಅದಕ್ಕಾಗಿ ಮನಷ್ಯನಿಗೆ ಮರ್ಕಟ ಬುದ್ಧಿಯವನೆಂದು ಹೇಳುತ್ತಾರೆ.ಮಂಗ ಯಾವಾಗಲೂ ಚಂಚಲವಾಗಿರುತ್ತದೆ,ಒಂದು ಕಡೆ ನೆಲೆಯೂರಿ ಇರುವುದಿಲ್ಲ.ಅದರಂತೆ ಮನುಷ್ಯ ಬುದ್ಧಿಯೂ ಚಂಚಲ ಮತ್ತು ತನ್ನಿಂದ ಮಾಡಲಾಗದ ಕೆಲಸವನ್ನು ಮಾಡುತ್ತೇನೆಂದು ಹೇಳುವ ದೊಡ್ಡಸ್ಥಿಕೆ,ಅಹಂ ಬಹಳ.ಜಂಬ ದಿಂದ ನಾನು ಏನು ಬೇಕಾದರೂ ಮಾಡಬಲ್ಲೆನೆಂದು ಹೇಳುವ ಚಟ ಬಹಳ.ಗಜಲ್ ಕಾರರು ಮೇಲಿನ ಮತ್ಲಾದಲ್ಲಿ ಉಪಮೆಯೊಂದಿಗೆ ಮನುಜನ ಮನಸಿನ ಭಾವನೆಯನ್ನು ತೋರಿಸಿದ್ದಾರೆ. ಸಮುದ್ರ ನೀರನ್ನು ಬೊಗಸೆಯಲಿ ಬಂಧಿಸಲು ಸಾಧ್ಯ ವಿಲ್ಲ ಯಾಕೆ ಸುಮ್ಮನೆ ಹಟ ಮಾಡುವಿ,ಆಕಾಶವನ್ನು ಬೆರಳಿನಿಂದ ಎತ್ತಿಡುವೆಂಬ ಚಟ ಬೇಡ ಸುಮ್ಮನಿರೆಂದು ಹೇಳುತ್ತಾರೆ ಮಾನವರಿಂದಾಗದ ಕೆಲಸಗಳು ಇವು,ಶ್ರೀ ಕೃಷ್ಣ ಗೋವರ್ಧನ ಗಿರಿ ಎತ್ತಿದಂತೆ ಎಲ್ಲರಿಗೂ ಸಾಧ್ಯ ವಿಲ್ಲ ವೆಂದು ಗಜಲ್ ಕಾರರು ಹೇಳಿದ್ದಾರೆ.

ಚಂದ್ರನಿಲ್ಲದ ಜೊನ್ನ ವನ್ನು ನೋಡಲಿ ಹೇಗೆ

ಲಾಂದ್ರವಿಲ್ಲದ ನಿನ್ನ ಮುಖವನ್ನು ಕಾಡಲಿ ಹೇಗೆ (ಗಜಲ್ ೫೨)

ಮನಸ್ಸು ಉಲ್ಲಾಸ ವಾಗಿರಲು ಯಾವುದಾದರೂ ವಸ್ತು ಕಾರಣ ವಾಗಿರುತ್ತದೆ, ಅದೇ ರೀತಿಯಾಗಿ ನಾವು ಬೆಳದಿಂಗಳ ಸುಖ ಅನುಭವಿಸಬೇಕಾದರೆ ಬಾನಲ್ಲಿ ಚಂದ್ರನಿದ್ದರೆ ಮಾತ್ರ ಸಾಧ್ಯ.ಚಂದ್ರನೇ ಇಲ್ಲದ ಅಮವಾಸ್ಯೆ ಇರುಳು ಜಗದ ಯಾವ ಜೀವಿಯೂ ಬೆಳದಿಂಗಳ ಸುಖಪಡೆಯಲು ಸಾಧ್ಯ ವಿಲ್ಲ ,ಅದೇ ರೀತಿಯಾಗಿ ಪ್ರಿಯತಮೆಯ ಮುದ್ದು ಮುಖ ಚೆಲುವು ನೋಡಿ ಆನಂದಿಸಲು ಬೆಳಕು ಬೇಕು,ಕಂದೀಲು ಅಥವಾ ಲಾಂದ್ರದ ಬೆಳಕು ಬೇಕು,ಅದಿಲ್ಲದೆ ನಿನ್ನ  ಮುಖ ನೋಡಿ ಸಂತಸ ಪಡಲಾಗದು ಎಂದು ಗಜಲ್ಕಾರರು ಪ್ರಿಯತಮೆಗೆ ಹೇಳುತ್ತಾರೆ.

ಡಾ.ಸುರೇಶ ನೆಗಳಗುಳಿ ಅವರ ಗಜಲ್ ಸಂಕಲನದಲ್ಲಿ ಇಂತಹ ಮನಕೆ ಮುದ ನೀಡುವ ,ನೀತಿ ಹೇಳುವ ಗಜಲ್ ಗಳ ಮಿಸ್ರಾಗಳು ಬಹಳಷ್ಟು ಇದ್ದು ಓದುಗರಿಗೆ ಸಂತೋಷ ಪಡಿಸುತ್ತವೆ.

  ಇದರ ಜೊತೆಗೆ ನನ್ನ ಗಮನಕ್ಕೆ ಬಂದ ಸಣ್ಣ  ತಪ್ಪಿನ ವಿಷಯ ಹೇಳಲೇಬೇಕಲ್ಲ.ಕೃತಿ ಕೈಗೆ ತೆಗೆದುಕೊಂಡು ಓದ ಬೇಕೆಂದು ಉತ್ಸಾಹ ದಿಂದ ಪುಸ್ತಕ ತೆರೆದಾಗ ಮೊದಲಿಗೆ ಕಾಣುವನೆಗಳಗುಳಿ ಲೇಖನಿಯಿಂದಎಂಬ ಪೀಠಿಕೆಯ ಲೇಖನ,ಲೇಖನ ಚನ್ನಾಗಿದೆ ಆದರೆ ಮುದ್ರಣದಲ್ಲಿ  ಅಕ್ಷರಗಳು ಸ್ವಲ್ಪ ದೊಡ್ಡದಾಗಿದ್ದರೆ ಚನ್ನಾಗಿತ್ತು.ಚಿಕ್ಕ ಅಕ್ಷರಗಳು ಓದಲು ಕಿರಿಕಿರಿ ಮತ್ತು ಕಣ್ಣಿಗೆ ತೊಂದರೆ ಎಂದು ನನಗೆ ಅನಿಸಿತು,. ಇನ್ನು ಗಜಲ್ ೧೬ ಮತ್ತು ೩೮ ಎರಡೂ ಒಂದೇ ಗಜಲ್ ಆಗಿದೆ.ತಪ್ಪಾಗಿ ಎರಡು ಸಾರೆ ಮುದ್ರಣ ವಾಗಿದೆ.ಕೆಲವು ಗಜಲ್ ಗಳಲ್ಲಿಈಶಾಎಂದು ಮತ್ತೆ ಕೆಲವು ಗಜಲ್ ಗಳಲ್ಲಿಸುರೇಶಎಂದು ಕಾವ್ಯ ನಾಮ ಬಂದಿದೆ ,ಇದು ಹೊಸ ಓದುಗರಿಗೆ ಗೊಂದಲವನ್ನುಂಟು ಮಾಡುತ್ತದೆ.

ಉಳಿದಂತೆ ಸಂಕಲನದ ಗಜಲ್ ಗಳು ಪ್ರೌಢತೆಯಿಂದ ಇದ್ದು ಓದುಗರ ಮನ ಗೆಲ್ಲುತ್ತವೆ.

ಡಾ.ಸುರೇಶ ನೆಗಳಗುಳಿ ಯವರಿಂದ  ಇನ್ನೂ ಉತ್ತಮವಾದ ಗಜಲ್ ಸಂಕಲನಗಳು ಪ್ರಕಟವಾಗಲೆಂದು ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ಕೊಡುವೆ.

*********************

ಪ್ರಭಾವತಿ ಎಸ್ ದೇಸಾಯಿ

2 thoughts on “ನೆಗಳಗುಳಿ ಗಜಲ್ಸ್

  1. ನಾನು ನಿಮ್ಮ ವಿಮರ್ಶೆ ಗೆ ಆಭಾರಿಯಾಗಿರುವೆ.ಚೆನ್ನಾಗಿ ಮಂಡಿಸಿದ್ದೀರಿ

  2. ಗೆಳೆಯ ಡಾ ನೆಗಳಗುಳಿ ಯವರ ಗಝಲ್ ರಚನಾ ಪೂರ್ಣವಾಲೋಕನ ತುಂಬ ಚೆನ್ನಾಗಿ ಬರೆದಿರುವಿರಿ

Leave a Reply

Back To Top