ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು
ವಾಟ್ಸಪ್ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ
ಅವನೆ ಕರ್ತ
ಬಾಲಸುಬ್ರಹ್ಮಣ್ಯಂ
ಮೂಗನ ಮುಂದೆ ಮೂಗು ಕೆರೆಯ ಬೇಡ ಕಿವುಡನ ಮುಂದೆ ತುಟಿಗಳ ಆಡಿಸ ಬೇಡ ಕುರುಡನ ಮುಂದೆ ವರ್ಣನೆ ಮಾಡ ಬೇಡ ನಗುವವರ ಮುಂದೆ ಎಡವಿ ಬೀಳ ಬೇಡ
ಈರ್ಶೆ ಪಡುವವರ ಮುಂದೆ ತಲೆ ಎತ್ತಿ ನಡೆ ಸತ್ಯ ನುಡಿಯುವರ ಮುಂದೆ ಶಿರಬಾಗಿ ನಡೆ ಆತ್ಮೀಯರೊಡನೆ ಕೈ ಜೋಡಿಸುತ್ತಾ ನಡೆ ಯಶಸ್ಸು ಗಳಿಸಿದವರ ಜಾಡಿನಲ್ಲಿಯೇ ನಡೆ
ನೀ ನಡೆವ ಹಾದಿಯಲ್ಲಿ ನಗೆ ಹೂವು ಅರಳಲಿ ನೀನಿರುವೆಡೆ ಸಂತಸದ ಕಾರಂಜಿ ಚಿಮ್ಮುತಿರಲಿ ನಿನ್ನ ಬಳಿ ಸಂತಸ ಸಡಗರ ಹರಿದು ಬರುತಿರಲಿ ನಿನ್ನ ನಡೆ ನುಡಿ ಎಲ್ಲರನು ಆಕರ್ಶಿಸುವಂತಿರಲಿ *************************
ಜೀವನಕ್ಕೆ ಅಳವಡಿಸಿಕೊಳ್ಳಬೇಕಾದ ಅನುಭವದ ಪಾಠ ಸಾರುವ ಕವನ ಅಣ್ಣಾ❤️✍️