ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಮಂದ್ರ ಭಾವ

ಪ್ರೊ.ವಿಜಯಲಕ್ಷ್ಮೀ ಪುಟ್ಟಿ

LOVE? — - Sculpture : martin_lagares - Moi et mon amour... | Figurative  sculpture, Sculpture art, Sculpture

ನಾನಿದ್ದೆ
ನನ್ನ ಪಾಡಿಗೆ,
ಖುಷಿ ಖುಷಿಯಾಗಿ
ನನಗೆ ತಿಳಿದಂತೆ,
ಜೀವನ ನನಗೆ
ಒಲಿದಂತೆ,
ಬಂತೊಂದು ಭಾವ
ನನ್ನ ತಡವಿ,
ನಿರ್ಧಾರ ಕೊಡವಿ
ನಿಲುವು ಕೆಡವಿ
ನನ್ನ ಹೊಕ್ಕು
ಪ್ರತಿಷ್ಠಾಪನೆ
ಸಂಪೂರ್ಣ
ಆವರಿಸಿ
ಹಗಲೆಲ್ಲ
ಕನವರಿಸಿ
ಇರುಳೆಲ್ಲ
ನೆನಪಿರಿಸಿ
ಬೇಡವೆಂದರೂ
ಬಿಡದ ಭಾವ
ಮೊಳಕೆಯೊಡೆದು
ನೆಲ ತಬ್ಬಿತು
ನಾನದರ
ಸಖ್ಯದಲ್ಲಿ
ಇದೀಗ ಸಂಪೂರ್ಣ
ಶರಣಾಗತಿ
ಮಂದ್ರ ಭಾವ
ನಿನ್ನ ನೋಡಿ
ತುಸು ನಕ್ಕೆ
ಯಾಕೋ ನೀ
ಹೊರಟು ನಿಂತೆ..

*******************************

About The Author

1 thought on “ಮಂದ್ರ ಭಾವ”

Leave a Reply

You cannot copy content of this page

Scroll to Top