ಸಂಬಂಧಗಳು ನಂಟೋ….ಕಗ್ಗಂಟೋ….

ಪುಸ್ತಕ ಸಂಗಾತಿ

ಸಂಬಂಧಗಳು ನಂಟೋ….ಕಗ್ಗಂಟೋ….

                    ಮಾನವ ಸಂಬಂಧಗಳೇ ಹಾಗಲ್ಲವೇ ಒಮ್ಮೆ ಬಿಡಿಸಲಾಗದ ನಂಟು ಮತ್ತೊಮ್ಮೆ ಅದೇ ಸಂಬಂಧಗಳು ಕಗ್ಗಂಟಿನ ಸ್ವರೂಪವನ್ನು ಸಹ ತಾಳಬಹುದು Relationships Bond are bondage ? ಎನ್ನುವ ಪ್ರಶ್ನೆಗೆ ಸಂಪೂರ್ಣ  ಉತ್ತರ ನೀಡಲಿರುವ ಅತ್ಯಮೂಲ್ಯವಾದ ನಮ್ಮೆಲ್ಲರ ಮನಸೆಳೆಯುವ ಪುಸ್ತಕವೇ ಇದಾಗಿದೆ.

                ಬದುಕೇ ಒಂದು ಜಂಜಾಟ ಎಂದು ತಿಳಿದ ಅದೆಷ್ಟು ವ್ಯಕ್ತಿಗಳಿಗೆ ಬದುಕು ಕೂಡ ಇಷ್ಟೇ ಸರಳವಾಗಿದೆ ಎಂದು ಹೇಳುವ ಮಾರ್ಗದರ್ಶಿಗಳು ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿ ಗಳಲ್ಲಿ ಒಬ್ಬರಾದ ಸದ್ಗುರುಗಳು, ಇವರ ಹೆಸರೇ ಎಲ್ಲರಿಗೂ ಚಿರಪರಿಚಿತವಾಗಿದೆ ಏಕೆಂದರೆ ನಮ್ಮೆಲ್ಲ ದುಗುಡ ದುಮ್ಮಾನ ದುಃಖಗಳಿಗೆ ಸರಳವಾಗಿ ತಮ್ಮ ಮಾಂತ್ರಿಕ ಮಾತುಗಳಿಂದ ಕೊಡುಗೆ ಶಾಂತಿಯ ಸಂದೇಶವನ್ನು ಸಾರುವ ನಮ್ಮ ಸದ್ಗುರುಗಳು ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ ಅವರ ಆಳವಾದ ಅಂತರ್ದೃಷ್ಟಿ ಅವರ ಬದುಕು ಕಾರ್ಯಗಳು ಎಲ್ಲವೂ ಕೂಡ ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದು ಸಾಬೀತಾಗಿದೆ. ಸದ್ಗುರುಗಳು ಈಶ ಫೌಂಡೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಈ ಸಂಸ್ಥೆಯ ಮೂಲಕ ಜಗತ್ತಿನಾದ್ಯಂತ ಯೋಗ ಕಾರ್ಯಕ್ರಮಗಳನ್ನು ತರಬೇತಿಯನ್ನು ನೀಡುತ್ತಾ ಬಂದಿದ್ದಾರೆ. ಸಾಮಾಜಿಕ ಪ್ರಗತಿಗೆ ಅವರು ಮಾಡಿರುವ ಹಲವಾರು ಕಾರ್ಯಚಟುವಟಿಕೆಗಳನ್ನು ಗುರುತಿಸಿ ಇವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಮಾತು ಕೇಳುವುದೆಂದರೆ ಹಿತಮಿತವಾದ ಜೀವನಕ್ಕೆ ಬೇಕಾದ ಅಮೃತ ಸಮಾನ ಆಹಾರವಿದ್ದಂತೆ. ಒಬ್ಬ ಮನುಷ್ಯನ ಸ್ವಚ್ಛ ಸುಂದರ ಬದುಕಿಗೆ ಸದ್ಗುರುಗಳ ವಿಚಾರ ದಾರೆಗಳು ಪುಷ್ಟಿಯನ್ನು ನೀಡುತ್ತವೆ. ಈ ಪುಸ್ತಕ ಇತರ ಎಲ್ಲ ಪುಸ್ತಕಗಳಿಗಿಂತ ಬಹು ವಿಶೇಷವೆನಿಸುತ್ತದೆ ಏಕೆಂದರೆ ಈ ಪುಸ್ತಕ “two books in one” hand. ಎಂಬಂತೆ ಎರಡು ಪುಸ್ತಕಗಳ ಪರಿಕಲ್ಪನೆ ನಮ್ಮ ಕೈಯಲ್ಲಿ ನಮ್ಮ ಕಣ್ಣೆದುರು ಒಂದೇ ಪುಸ್ತಕದ ಸೂರಿನಡಿ ಸಿಗುವ ವಿಶೇಷತೆ. ಏನಿದು ಗೊಂದಲ ಎನ್ನುತ್ತಿದ್ದೀರಾ? ಹಾಗೇನಿಲ್ಲ ನಮ್ಮ ಎಲ್ಲಾ ಗೊಂದಲಗಳಿಗೆ ಇದರಲ್ಲೆ ಉತ್ತರ ಸಿಗಲಿದೆ. ನಾನು ಕೂಡ ಈ ಪುಸ್ತಕವನ್ನು ಕೊಳ್ಳಲು ಬೆಂಗಳೂರಿನ ಸ್ವಪ್ನ ಬುಕ್ ಹೌಸ್ ಗೆ ಹೋದಾಗ ಅಲ್ಲಿ ಮೊಟ್ಟಮೊದಲಿಗೆ ನನ್ನ ಗಮನ ಸೆಳೆದಿದ್ದೇ ಈ ಪುಸ್ತಕ ಕಾರಣ ಈ ಪುಸ್ತಕದ ಎರಡು ಕಡೆಯಿಂದ ನೋಡಿದಾಗಲೂ ಭಿನ್ನಭಿನ್ನ ಪುಸ್ತಕಗಳು ನಮಗೆ ಗೋಚರಿಸುತ್ತದೆ ಒಂದೇ ಪುಸ್ತಕ ಆದರೆ ನಮ್ಮ ಕೈಯಲಿ ಹಿಡಿದು ಓದುತ್ತಾ ಹೋದಂತೆ ಪುಸ್ತಕ ತಿರುವಿದಾಗ ಮತ್ತೊಂದು ಪುಸ್ತಕದ ಪರಿಚಯ ನಮಗಾಗುತ್ತದೆ. ಇದೆ ಈ ಪುಸ್ತಕದ ಬಾಹ್ಯ ಆಕರ್ಷಣೆ. ಇನ್ನು ಈ ಪುಸ್ತಕದ ಅಂತರಾಳಕ್ಕೆ ಹೋದಂತೆ ನಮ್ಮೊಳಗೆ ಇರುವ ಅಂತರಾತ್ಮ ಜಾಗೃತಗೊಳ್ಳುತ್ತದೆ. ಈ ಪುಸ್ತಕದ ಒಂದು ಭಾಗದ ಮುಖಪುಟದ ಶೀರ್ಷಿಕೆ “ಸಂಬಂಧಗಳು ನಂಟೋ .. ಕಗ್ಗಂಟೋ…” ಎನ್ನುವುದು. ಮತ್ತೊಂದು ಭಾಗದ ಪುಸ್ತಕದ ಶೀರ್ಷಿಕೆ “ಭಾವನೆಗಳು ಬದುಕಿನ ಸಾರ” ಎಂಬುದು.

            ಸದ್ಗುರುಗಳೇ ಹೇಳುವ ಹಾಗೆ “ನಮ್ಮ ಜೀವನದಲ್ಲಿ ಕೇವಲ ಸುಖದ ಹುಡುಕಾಟವನ್ನು ಬಿಟ್ಟು, ಎಲ್ಲೆಡೆ ಆನಂದವನ್ನು ಹರಡುತ್ತಿದ್ದ ಲ್ಲಿ ನಮ್ಮ ಸಂಬಂಧಗಳು ಸಹಜವಾಗಿಯೇ ಅದ್ಭುತವಾಗಿರುತ್ತವೆ”ಎನ್ನುವ ಮಾತು ನಮ್ಮ ಸಂಬಂಧಗಳ ಸರಳತೆ ತಿಳಿಸುತ್ತವೆ.

      ನಾಲ್ಕು ಗೋಡೆಗಳ ಮಧ್ಯೆ ,ಮಿತ್ರನೋ ಶತ್ರುವುವೋ? ಬ್ರಹ್ಮಾಂಡದೊಳಗೆ ಸಂಯೋಗ, ಹುಟ್ಟು ಸಾವುಗಳನ್ನು ಮೀರಿ, ಎನ್ನುವ ನಾಲ್ಕು ಪರಿಕಲ್ಪನೆಗಳ ಅಡಿಯಲ್ಲಿ ಸಂಬಂಧಗಳು ನಂಟೋ  ಕಗ್ಗಂಟೋ ಎಂಬುದನ್ನು ಪ್ರಸ್ತುತಪಡಿಸಿದ್ದಾರೆ.

        ಭಾರತದಲ್ಲಿ ಸಂಬಂಧಗಳು ಎಂದರೆ ನಾವು ತಾಯಿ-ತಂದೆ ಅಣ್ಣ-ತಮ್ಮ ಅಕ್ಕ-ತಂಗಿ ಮಿತ್ರರು ಎಂದು ಎಲ್ಲಾ ರೀತಿಯಿಂದಲೂ ಯೋಚಿಸುತ್ತೇವೆ ಆದರೆ ಈಗ ಭಾರತದಲ್ಲಿಯೂ ಸಹ ನಗರಗಳಲ್ಲಿ ಪಾಶ್ಚಿಮಾತ್ಯ ಆಚಾರ-ವಿಚಾರಗಳ ಅನುಕರಣೆ ಮಾಡುವ ಯುವಜನರು ಸಂಬಂಧಗಳೆಂದರೆ ಅದು ಕೇವಲ ಶಾರೀರಿಕ ಆಧಾರಿತ ಲೈಂಗಿಕ ಆಧಾರಿತ ಸಂಬಂಧಗಳೆಂದು ಭಾವಿಸುತ್ತಾರೆ ಇದು ಇಂದಿನ ವಿಷಾದಕರ ಸಂಗತಿ. ಮನುಷ್ಯ ಸಂಕುಚಿತ ಮನೋಭಾವನೆ ಯಿಂದ ಹೊರ ಬಂದು ವಿಚಾರಿಸಿದಾಗ ಸಂಬಂಧಗಳ ಅರಿವು ಅನುಭವಿಸುತ್ತಾನೆ. ನಾವು ನಮ್ಮೊಳಗೆ ಅದ್ಭುತವಾದದ್ದನ್ನು ಅನುಭವಿಸಿದರೆ ಸ್ವಾಭಾವಿಕವಾಗಿಯೇ ನಾವು ಬೇರೆಯವರಿಗೆ ಅದ್ಭುತವಾದ ಕೆಲಸಗಳನ್ನು ಮಾಡುತ್ತೇವೆ ನಮ್ಮೊಳಗೆ ನಾವು ಅಹಿತಕರವಾದ ರೀತಿಯಲ್ಲಿ ಇದ್ದರೆ ಸ್ವಾಭಾವಿಕವಾಗಿಯೇ ನಾವು ನಮ್ಮ ಅಹಿತಕರ ಗುಣವನ್ನು ಬೇರೆಯವರೊಂದಿಗೆ ಹಂಚುತ್ತೇವೆ. ಎನ್ನುವ ಸದ್ಗುರುಗಳ ವಿಚಾರದಾರೆಗಳು  ಗಂಡು-ಹೆಣ್ಣಿನ ಸಂಬಂಧ ಪ್ರೀತಿ ಪ್ರೇಮ ಎನ್ನುವ ಸ್ವಚ್ಛಂದ ವಿಶಾಲ ದೃಷ್ಟಿಕೋನ, ಉತ್ತಮವಾದ ಒಳ್ಳೆಯ ಮಾನವೀಯ ಸಂಬಂಧಗಳನ್ನು ಸಹ ಕ್ಷುಲ್ಲಕವಾಗಿ ನೋಡುವ ಮನಸ್ಥಿತಿ  ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಸದ್ಗುರುಗಳು ಉತ್ತರಿಸುವ ಮೂಲಕ ಸಂಬಂಧದ ನಂಟು ಹಾಗೂ ಕಗ್ಗಂಟನ್ನು ಸ್ಪಷ್ಟಪಡಿಸಿದ್ದಾರೆ.

          ಮಿತ್ರನೋ  ಶತ್ರುವೋ  ಎನ್ನುವ ವಿಚಾರದಲ್ಲಿ ನಮ್ಮ ಮಿತೃತ್ವ ದಲ್ಲಿ ಹೆಚ್ಚು ಧೈರ್ಯಶಾಲಿ ಯಾಗಿರಬೇಕು ಸಂದರ್ಭ ಬಂದರೆ ಅವರನ್ನು ಕಳೆದುಕೊಳ್ಳುವುದಕ್ಕೆ ನಾವು ಸಿದ್ಧರಿರಬೇಕು ನಾವು ಬೇರೆಯವರಿಗೆ ಯಾವುದು ಒಳ್ಳೆಯದು ಅದನ್ನು ಮಾಡಬೇಕು ನಮಗಾಗಿ ಮಾತ್ರ ಅಲ್ಲ. ಹಾಗಾದರೆ ಸ್ನೇಹಿತನೆಂದರೆ ಯಾರು?  ಸ್ನೇಹಿತನೆಂದರೆ ನಮ್ಮಂತೆಯೇ ಗೊಂದಲದಲ್ಲಿರುವ ಮತ್ತೊಬ್ಬ ವ್ಯಕ್ತಿ ಸ್ನೇಹಿತ ಎಂದಮಾತ್ರಕ್ಕೆ ಅವರೇನು ಪರಿಪೂರ್ಣ ವ್ಯಕ್ತಿಯೆನ್ನಲ್ಲ. ಆದರೆ ಇಬ್ಬರು ವ್ಯಕ್ತಿಗಳು ಪರಸ್ಪರ ಪ್ರಾಮಾಣಿಕವಾಗಿ ಒಂದು ವಾತಾವರಣದಲ್ಲಿ ಇರಬಹುದಾದರೆ ಅವರೇ ನಮ್ಮ ಮಿತ್ರರಾಗುತ್ತಾರೆ ಅಷ್ಟೇ ಎನ್ನುವ ಸದ್ಗುರುಗಳ ವಿಚಾರಗಳು ಸ್ನೇಹದ ವಾಸ್ತವ ಸಂಗತಿಯನ್ನು ಸರಳೀಕರಿಸಿದ್ದಾರೆ.

        ಹುಟ್ಟು ಸಾವುಗಳನ್ನು ಮೀರಿ ಶ್ರೇಷ್ಠವಾದ ಸಾಧ್ಯತೆಗಳಿಗೆ ಅನುವು ಮಾಡಿಕೊಡುವಂತಹ ಒಂದು ರೀತಿಯ ಐಕ್ಯತೆಯನ್ನು ಸಾಧಿಸಲು ಸಂಬಂಧಗಳು ಒಂದು ಅವಕಾಶವಾಗಿದೆ.

        ‌ ಈ ಸಂಬಂಧಗಳು ಸಾಂಗತ್ಯ ಒಡನಾಟ ಅಥವಾ ಪರಸ್ಪರ ಸಂತೋಷವನ್ನು ಸೆಳೆದುಕೊಳ್ಳುವುದರ ಬಗ್ಗೆ ಅಲ್ಲ .ಅದು ಸಂಬಂಧಗಳು ಮತ್ತು ಶ್ರೇಷ್ಠ ಸಾಧ್ಯತೆಗಳಿಗೆ ದಾರಿ ಮಾಡಿಕೊಡುವ ಒಂದು ರೀತಿಯ ಏಕತೆಯನ್ನು ಸಾಧಿಸುವ ಅವಕಾಶಗಳಾಗಿವೆ. ಅದು ಸಂಭವಿಸದಿದ್ದರೆ ಎಲ್ಲಕ್ಕಿಂತಲೂ ಮಿಗಿಲಾಗಿ ಸಂಬಂಧವೊಂದು ಹೊರೆಯಾಗುತ್ತದೆ ಹಾಗೂ ಅಡಚಣೆಯಾಗುತ್ತದೆ. ಒಂದು ಸಂಬಂಧವು ಭೌತಿಕ ಮಿತಿಗಳನ್ನು ಮೀರಿದರೆ ಆ ಸಂಬಂಧವು ಜನ್ಮಜನ್ಮಾಂತರ ಗಳಿಗೆ ವಿಸ್ತರಿಸುವ ಸಾಧ್ಯತೆಯಿದೆ ಎನ್ನುವ ಸದ್ಗುರುಗಳ ವಿಚಾರಗಳು ಸಂಬಂಧಗಳ ಆಧ್ಯಾತ್ಮಿಕ ನಿಲುವನ್ನು ನಮಗೆ ತಿಳಿಸುತ್ತದೆ. ಒಟ್ಟಿನಲ್ಲಿ ಒಮ್ಮೆ ಓದಿ ಬಿಟ್ಟುಬಿಡುವ ಜ್ಞಾನಭಂಡಾರ ಇದು ಅಲ್ಲ. ಮತ್ತೆ ಮತ್ತೆ ಓದಬೇಕು ಅನಿಸುವ ನಮ್ಮೊಳಗಿನ ಗುರುವನ್ನು ಮತ್ತೆ ಮತ್ತೆ ನಮಗೆ ಪರಿಚಯಿಸುವ ಗ್ರಂಥವೇ ಸದ್ಗುರುಗಳ ಟು-ಇನ್-ವನ್ ಪುಸ್ತಕ.

***********

ಪ್ರೊ ಸುಧಾ ಹುಚ್ಚಣ್ಣವರ

Leave a Reply

Back To Top