ಗಜಲ್
ಪ್ರಕಾಶಸಿಂಗ್ ರಜಪೂತ
ನೋವುಗಳು ನಾ ಬೇಯಿಸಲು ಇಟ್ಟಿರುವೆ ಊಟಕ್ಕೆ ಬನ್ನಿ
ಸ್ವಲ್ಪ ಸ್ವಲ್ಪವೇ ಸರಿ ಹಂಚಿ ತಿನ್ನೋಣ ಊಟಕ್ಕೆ ಬನ್ನಿ
ರಾಗ ಲೋಭ ದ್ವೇಷಗಳು ಗತಕಾಲದ ಮರೆತು, ಮನ ಬಾಗಿಲು ತೆರೆದು
ಮೇಲು ಕೀಳು ಕಳಿಯೋಣ ಒಂದಾಗಿ ಬೆಳೆಯೋಣ ಊಟಕ್ಕೆ ಬನ್ನಿ
ಭವಿಷ್ಯ ದತ್ತ ನೋಟವಿಟ್ಟು ಇತಿಹಾಸದಿ ಮುಳುಗಿ ಸಾಧಿಸೋದು ಏನು
ನಮ್ಮದಾದ ಪರಿಚಯ ಹೊಸದಾಗಿ ಬರಿಯೋಣ ಊಟಕ್ಕೆ ಬನ್ನಿ
ಪ್ರೀತಿ ಪ್ರೇಮದ ಪಾಠ ಮರೆತೊಗಿದೆ ಎಲ್ಲೋ, ಬರಿ ವಾಸನೆ ಗೊಳ್ಳು
ಕೃಷ್ಣನಾಗುವಾ ಯತ್ನ ಮತ್ತೆ ಮತ್ತೆ ಮಾಡೋಣ ಊಟಕ್ಕೆ ಬನ್ನಿ
ದುರ್ವಾಸನ ಹಸಿವು ನಮಗೇಕೆ ಬೇಕು ಕೋಪಗಳ ಕೂಪ ನಮಗೇಕೆ ಬೇಕು
“ಪ್ರಕಾಶ”ವಾಗಿ ಎಲ್ಲರೂ ಜಗದಿ ಮುಂದೆ ಸಾಗೋಣ ಊಟಕ್ಕೆ ಬನ್ನಿ
*************
ನನ್ನ ಕವನಕ್ಕೆ ತಮ್ಮ ಪತ್ರಿಕೆ ಯಲ್ಲಿ ಸ್ಥಾನ ನೀಡಿದಕ್ಕೆ ಧನ್ಯವಾದಗಳು
ಪ್ರಕಾಶ ಸರ್ ಗಜಲ್ ಸೊಗಸಾಗಿದೆ, ನೋವುಗಳನ್ನು ಹಂಚಿಕೊಂಡು ಬೀಳುವುದು ಒಂದು ಬಗೆಯ ಸಹಕಾರ ಜೀವನ,