ಕಾವ್ಯಯಾನ
ಬೆಳಕು ಹೊಳೆಯಿತು
ನಾಗರಾಜ್ ಹರಪನಹಳ್ಳಿ
ಆಕಾಶವ ದಿಟ್ಟಿಸಿದೆ
ಅಹಂಕಾರ ಮರೆಯಾಯ್ತು
ಹಕ್ಕಿಗಳ ನೇವರಿಸಿದೆ
ಕನಸುಗಳು ಚಿಗುರೊಡೆದವು
ದಂಡೆ ಬಳಿ ನಡದೆ
ವಿನಯ ಅರ್ಥ ಹೊಳೆಯಿತು
ಅಪ್ಪನ ಸಮಾಧಿ ಬಳಿ ನಿಂತೆ
ಬದುಕಿನ ಕ್ರಿಯಾಶೀಲತೆ ತಾಕಿತು
ಭೂಮಿತಾಯಿಯ ಪಾದಕೆ ಚುಂಬಿಸಿದೆ
ತಾಯ್ತನದ ಅಪ್ಪುಗೆ ಸಿಕ್ಕಿತು
ಅವಳ ಬಳಿ ಬಂದೆ
ಮಾತಾಡಿ ಸಂತೈಸಿ ತಲೆನೇವರಿಸಿ ಕಳಿಸಿಕೊಟ್ಟಳು
ಮಗನ ಬಳಿ ಬಂದು ಕಣ್ಣಲ್ಲಿ ಕಣ್ಣಿಟ್ಟೆ
ಹೊಸ ಬೆಳಕು ಹೊಳೆಯಿತು
ಬಾಗಿಲಲಿ ನಿಂತೆ ನಾನೇ ಕಟ್ಟಿದ
ಗುಬ್ಬಚ್ಚಿ ಗೂಡಿನಿಂದ ಹಕ್ಕಿ ಮರಿ ಕಣ್ಣೊಡೆಯಿತು
ಮನೆ ಮುಟ್ಟುವ ಸಾಲುಗಳು
ಥ್ಯಾಂಕ್ಯೂ ಮೇಡಂ…