ಕವಿತೆ
ಕವಿತೆ ಎಂದರೆ..
ಡಾ. ನಿರ್ಮಲಾ ಬಟ್ಟಲ
ಮುಂಜಾನೆಯ ಹೊಂಬಿಸಿಲಿಗೆ
ಮೈಯೊಡ್ಡಿದ ದುಂಡು ಮಲ್ಲಿಗೆಯ
ಮೊಗ್ಗೊಂದು ಅರಳಿ
ಪರಿಮಳವ ಪಸರಿಸಿದಂತೆ
ಹಾಲ್ಬೆಳದಿಂಗಳ ಚೆಲ್ಲಿ
ನಗುವ ಹುಣ್ಣಿಮೆಯ ಚಂದಿರನ
ಆಲಿಂಗನಕೆ ಹಾತೊರೆದ
ಸಾಗರವೊಂದು ಹುಚ್ಚೆದ್ದು
ಉಕ್ಕಿ ಹರಿವಂತೆ
ಕರಿಮೊಡ ಕಂಡ ನವಿಲೊಂದು
ಗರಿಗೆದರಿ ಮಿಲನಕ
ಪ್ರೀಯತಮೆಯ ಕರಿಯುತಾ
ಮೈಮರೆತು ಕುಣಿವಂತೆ
ಎಂದೊ ಭೂ ಗರ್ಭ ಸೇರಿದ
ಬೀಜವೊಂದು ಮೊದಲ
ಮಳೆಹನಿಗೆ ಮೊಳಕೆಯೊಡೆದು
ಭುವಿಯೊಡಲ ಸೀಳಿ
ನಗುವಂತೆ
ರವಿಕಿರಣ ಮಳೆಯ
ಹನಿಗಳೊಡನೆ ಸಲ್ಲಾಪಡಿದುದಕೆ
ಸಾಕ್ಷಿಯಾಗಿ ಬಾನಲ್ಲಿ
ಕಾಮನಬಿಲ್ಲೊಂದು
ಜನಿಸಿದಂತೆ
ಕಾದ ಭೂರಮೆಯ ತಣಿಸಲು
ಸುರಿವ ಮುಂಗಾರಿನ
ಮಳೆಗೆ ತಣಿದ ಮಣ್ಣ
ವಾಸನೆ ಮನಕೆ ಮದನೀಡಿದಂತೆ
ಮಾಯಗಾರನ ಮೋಡಿಗೆ
ಬೆರಗಾಗಿ
ಅವನು ನೀಡಿದ ವರಕಾಗಿ
ನೂರೂಂದು ನಮನ
ಹೇಳಿದಂತೆ
**********************
/
ಕ್ಅಱ್ದ್ಭುವ್ತೈತೆ ಹುಟ್ಟಿನ ಬಗ್ಗೆ ಕಲ್ಪನೆ!