ಅವ್ಯಕ್ತಳ ಅಂಗಳದಿಂದ

ಅವ್ಯಕ್ತ

ನನಗೊಂದು ಹವ್ಯಾಸ. ಪ್ರತಿವರ್ಷ ಮೊದಲನೆಯ ದಿನವೇ ಮಕ್ಕಳಲ್ಲಿ ನನ್ನ ಬಗ್ಗೆ ನನಗಿಷ್ಟ ಬರುವ ರೀತಿಯಲ್ಲಿ ಚಾಪು ಮೂಡಿಸುವುದು.ಈ ಬಾರಿ ನಾನು ತುಂಬ ಜೋರು ಎಂಬ ಭಯ ಹುಟ್ಟಿಸೋದು ನನ್ನ ಗುರಿಯಾಗಿತ್ತು. ಕ್ಲಾಸಿನೊಳಗೆ ಬೆಂಕಿಯಂತೆ ನುಗ್ಗಿದೆ. Quiiiiiiiiete! Which category of animals do you belong ? Shameless fellows…what are you looking at? Atleast have the courtesy of wishing! What? should I teach you that  too!!!ಫುಲ್ಲು ಸಿಟ್ಟು ತೋರಿಸುತ್ತಾ ಇಡೀ ಕ್ಲಾಸ್ ತಬ್ಬಿಬ್ಬಾಗಿ ನನ್ನ ನೋಡುವುದನ್ನು ಕಂಡು ಒಳಗೊಳಗೆ ನಗು ನಂಗೆ. ಎಲ್ಲರಂತೆ ಇವಳು ಹೆದರಿದ್ದಳು ಬೇಕಂತಲೇ ಅವಳನ್ನು ನೋಡುತ್ತಾ ಇದು ಸ್ಕೂಲಲ್ಲ ಕಾಲೇಜ್! ಅಂದೆ..   

  ಬಲೂನ್ ಒಳಗಿನ ಗಾಳಿ ಹೊರಗೆ ಹೋದರೆ ನೆಪ್ಪೆಯಾಗುವಂತೆ ಆದರು. ಸಹಜವಾಗಿ ಇಂಥ ಸಮಯದಲ್ಲಿ ಯಾರೂ ಧೈರ್ಯವಾಗಿ ಮಾತಾಡಲ್ಲ, ಇವಳು “ನೀವು ಕ್ಲಾಸ್ ಟೀಚರ್ರಾ” ಅಂತ ಕೇಳೇ ಬಿಟ್ಲು! ನಾನು “ನಿಮಗ್ಯಾಕೆ ?ಯಾರಾದ್ರೇನು ಬಿಹೇವಿಯರ್ ಇಸ್ ಇಂಪಾರ್ಟೆಂಟ್” ಅಂದೆ. ಮನಸಲ್ಲಿ ಖುಷಿಯಾಯಿತು…. ಇಂದಿನ ಯುಗದ ದೈರ್ಯಶಾಲಿ ನಾರಿಯಾಗುವಳು ಅನ್ಕೊಂಡೆ. 

ಇದೊಂದು ಹೊಸ ಹುರುಪಿನವಳು ನನ್ನ ಕ್ಲಾಸಿಗೆ ಆ ವರ್ಷ…ನಿಂತಲ್ಲಿ ನಿಂತರೆ ಕೂತಲ್ಲಿ ಕೂತರೆ ಅಂದು ಸೂರ್ಯ ಪಶ್ಚಿಮದಲ್ಲಿ ಹುಟ್ಟಿಬಿಡುತ್ತಾನೆ. ಚಿಟಿ ಪಿಟಿಪಿಟಿಪಿಟಿ ಮಾತು, ಪ್ರಶ್ನೆಗಳ ಒಂದು ಸಣ್ಣ ಪಿಟಾರಿ,ಬಹುಶಃ ಒಬ್ಬಳೇ ಮಗಳಿರ್ಬೆಕು ಬಹಳ ಮುದ್ದಿನಲ್ಲಿ ಸಾಕಿರಬಹುದು ಅನ್ಕೊಂಡೆ. ಓದುವುದಷ್ಟೇ ಅಲ್ಲ ಹಾಡು, ನೃತ್ಯ, ಬೇರೆ ಕಲೆಗಳು, ಆಟ, ಎಲ್ಲಾದ್ರಲ್ಲೂ ಭಾಗವಹಿಸುವಳು.. ಅಷ್ಟೇ ಅಲ್ಲ ಸರಿ-ತಪ್ಪುಗಳು ಸಂಬಂಧಗಳ ವಿಶ್ಲೇಷಣೆಗಳು ಜೀವನ ಇತ್ಯಾದಿ, ಇತ್ಯಾದಿ, ಪ್ರಶ್ನೆಗಳು…

ಕ್ಲಾಸ್ ಲೀಡರ್ ಆದ್ಮೇಲಂತೂ ನನಗೆ ಏನನ್ನೂ ನೆನಪಿಟ್ಕೊಳ್ಳೋ ಗೋಜೇ ಇರ್ಲಿಲ್ಲ. ಅವಳೇ ಒಂದು ಸಣ್ಣ ಲ್ಯಾಪ್ಟಾಪ್. ಲವ್ಲವಿಕೆ ಕುತೂಹಲ ಚುರುಕುತನ ಎಲ್ಲಾ ನೋಡಿ ಅವಳಿಗೆ ಒಂದು ಪೆಟ್ನೆಮ್ ಇಟ್ಬಿಟ್ಟೆ. ನಾನು ಮಾತ್ರ ಹಾಗೆ ಕರಿತ್ತಿದ್ದೆ..

ಆ ಒಂದು ದಿನ ಲ್ಯಾಬ್ ಒಳಗೆ ಕಲ್ಲು ಬಂಡೆಯಂತೆ ಮುಖ ಗಂಟು ಹಾಕಿಕೊಂಡು ಒಳಗೆ ಬಂದ್ಲು…ಮನಸಲ್ಲಿ ಅನ್ಕೊಂಡೆ ಈಗ ಒಂದು ವಾಲ್ಕೆನೊ ಇರಪ್ಟ್ ಆಗಬಹುದು ಅಂತ…ಏನಾಯ್ತೇ…ಕೂಗಾಡ್ತಾಳೆ, ಬೈತಾಳೆ, ಅನ್ಕೊಂಡ್ರೆ, ರಾಣಿ ಉಲ್ಟಾ! ಜೋರು ಅಳು ಬರ್ತಿದೆ, ಅದನ್ನ ಮುಚ್ಚಿಟ್ಕೊಳ್ಳೋ ಹಠ ಬೇರೆ. ಮುದ್ದು ಬಂದ್ಬಿಡ್ತು ಆ ಮಗು ಮೇಲೆ…ನನ್ನದೇ ಒಂದು ರೂಪ ಅವಳಲ್ಲಿ ನೋಡ್ದಂಗಾಯ್ತು…  

ಸುಮ್ನೆ ಹೇಳ್ದೆ “ನನಗೆ ಅಹಂಕಾರ ಜಾಸ್ತಿ, ನಾನು ಯಾರ ಎದುರು ಅಳಲ್ಲಾ, ನನ್ನ ನೋವು ಹೇಳಿಕೊಳ್ಳಲ್ಲಾ.. ಯಾಕೆ ಹೇಳಬೇಕು ಅಲ್ವಾ…?” , “ನಾನು ಅಷ್ಟೇ ಮಿಸ್? ನಾನು ಯಾರಿಗೂ ಹೇಳಲ್ಲ” ಅಂದ್ಲು…ಅವಳ ಕಣ್ಣಂಚಲ್ಲಿ ದೊಡ್ಡ ಹೊಳೆ ಕಾಣ್ತಿದೆ.

“Good ಅಲ್ಲೆಲ್ಲಾರು ಕೂತ್ಕೋ ಅಳು ಬಂದರೆ ಅಳು. ನಾನು ನೋಡಲ್ಲ, ಆಮೇಲೆ ಬರ್ತೀನಿ” ಅಂದೆ. ಪರ್ವಾಗಿಲ್ಲ ಮಿಸ್ ನಿಮ್ಮತ್ರ ಏನು, ಅಂತ ಹೇಳಿಕೊಂಡು ಅವಳು, ‘ಅವಳ ಸ್ನೇಹಿತ ಇನ್ನಿಲ್ಲ’ ಎಂಬ ವಿಷ್ಯ ಹೇಳಿದ್ಲು, ಜೊತೆಗೆ ಅವನ ಬಗ್ಗೆ ಅಸಂಬಧ ಮಾತಾಡ್ತಿರೋರ ಮೇಲೆಲ್ಲಾ ಸಿಟ್ಟು ಕೂಡ ತೋರ್ಸಿದ್ಲು… ನಾನು ಬಿಟ್ಟೆ ಮನಸಲ್ಲಿರೋ ನೋವೆಲ್ಲ ಹೊರಗೆ ಬಂದು ಬಿಡ್ಲಿ, ಮನಸ್ಸು ಹಗುರ ಆಗುತ್ತೆ ಅಂತ…ಅದ್ರ ಜೊತೆ ಒಂದು ಬಾಂಬ್ ಬಿತ್ತು…, “ನಾನು ಇಷ್ಟಪಡೋರೆಲ್ಲಾ  ನನ್ನಿಂದ ದೂರ ಹೋಗ್ತಾರೆ,ನನಗೆ ಇಷ್ಟ ಪಡೋಕೆ ಭಯ, ನಾ ಇನ್ಮಲೆ ಯಾರನ್ನೂ ಇಷ್ಟಪಡೊದಿಲ್ಲ, ನಾನೊಬ್ಬಳೇ ಇದ್ಬಿಡ್ತೀನಿ”…

ವಾಹಾ! ಗಾಂಪೆ, ಅಂತ ಮನಸಲ್ಲಿ ಹೇಳಿಕೊಂಡು ಪರಿಸ್ಥಿತಿ ಅರ್ಥ ಮಾಡಿಕೊಂಡೆ.. ಸ್ವಲ್ಪ ಹೊತ್ತು ಬಿಟ್ಟು…. ಆಯ್ತಾ ಅತ್ತಿದ್ದೆಲ್ಲಾ…ಯಾರ್ನೆಲ್ಲ ಪ್ರೀತಿಸ್ತಿದ್ಯೆ ರಾಣೀsssss? ಯಾರೆಲ್ಲ ಬಿಟ್ಟು ಹೋದ್ರೆ ನಿನ್ನಾ? ಅಂತ ಕೇಳ್ದೆ.

ಒಂದೊಂದೇ ಹೆಸರು, ಅದರ ಹಿಂದಿನ ಕಥೆಗಳು, ಎಲ್ಲಾ ಬಂತು.. ಸರಿ ಅವರೆಲ್ಲಾ ನಿನಗೆ ಯಾಕೆ ಇಷ್ಟ ಆದ್ರು ಒಂದೊಂದೇ ಹೇಳು ನೋಡೋಣ..……..ಒಳ್ಳೆ ಮಾತಾಡ್ತಿದ್ರು, ………ಪಟಪಟ ಅಂತ,……. ತುಂಬಾ ಸಹಾಯ ಮಾಡೋರು…. ಎಲ್ಲರನ್ನು ಸಂತೋಷವಾಗಿಡ್ತಿದ್ರು ……ಸಂಬಂಧಗಳಿಗೆ ಬೆಲೆ ಕೊಡ್ತಿದ್ರು,…… ಸಣ್ಣಸಣ್ಣ ಕೆಲಸದಲ್ಲಿ ಸಂತೋಷ ಹಂಚಬಹುದು ಅಂತ ಗೊತ್ತಿತ್ತು…. ಹಾಡು, ನೃತ್ಯ ನಾಟಕ, ಇತ್ಯಾದಿತ್ಯಾದಿ.. 

ಅಯ್ಯೋ ಬಂಗಾರಿsssss, ಇದೆಲ್ಲ ನಿನ್ನಲ್ಲೇ ಇದ್ಯಲ್ಲೇ.. ಅದಕ್ಕೆ ನಾನು ನಿನ್ನ “…..” ಅಂತ ಕರೆಯೋದು. ಯಾರೂ ನಿನ್ನ ಬಿಟ್ಟು ಹೋಗಿಲ್ಲ, ನಿನ್ನೊಳಗೇ ಇದ್ದಾರೆ! ಅವಳಿಗೇನೋ ಸಮಾಧಾನ ಆಯ್ತು ನನ್ನ ಮಾತು ಕೇಳಿ.ಅಂದು ಮೊಳಕೆಯಾಗಿ ನೋಡಿದ ಅವಳನ್ನು ಈಗ ಮರವಾಗಿ ನೋಡಿದರೆ ಹೆಮ್ಮೆಯಾಗುತ್ತೆ!!

 “ಜೀವನದಲ್ಲಿ ಯಾರು ಎಷ್ಟೇ ಮಾನಸಿಕವಾಗಿ, ದೈಹಿಕವಾಗಿ ,ಸಾಮಾಜಿಕವಾಗಿ ಬಲಿಷ್ಠರಾಗಿದ್ದರೂ, ಅವರ ಕುಗ್ಗಿದ ಸಮಯದಲ್ಲಿ ಪ್ರಿಯರ ಒಡನಾಟ, ಪ್ರೀತಿ, ಸಹಾಯ, ಅತಿಮುಖ್ಯ…ಅಂತಹ ವಿಶೇಷ ಚೇತನಗಳಿಗೆ ಸುಮ್ನೆ ಕೈ ಹಿಡಿದರೆ ಸಾಕು ಹಾರುವ ಸಾಮರ್ಥ್ಯ ಅವರೊಳಗೆ ಇರುತ್ತದೆ ”.

——————————————————-


Leave a Reply

Back To Top