ಕವಿತೆ
ಮರಣದ ಪರ್ವ
ರೇಶ್ಮಾಗುಳೇದಗುಡ್ಡಾಕರ್
ಮರಣದ ಹಬ್ಬವಿದು
ಸಾವಿನ ಸರಣಿಯಿದು
ಹಿರಿಯ-ಕಿರಿಯ ಭೇದವಿಲ್ಲ
ಕ್ಷಣಮಾತ್ರವು ಸಮಯವಿಲ್ಲ
ಹಾರುವುದು ಪ್ರಾಣ ಪಕ್ಷಿ
ದಿನ ,ಮುಹೂರ್ತ ನೋಡುವದಿಲ್ಲ..!!
ಪಂಚಾಂಗದ ಹಂಗಿಲ್ಲ..!!
ಬ್ಯಾನಿ ಎನೆಂದು ತಿಳಿಯುವುದಿಲ್ಲ
ನಗುನಗತ್ತಲೇ ಬಾರದ ಲೋಕಕ್ಕೆ ತೆರಳುವರಲ್ಲ
ಈಗ ಇದ್ದವರು ನಾ ಮುಂದೆ ತಾ ಮುಂದೆ ಎನ್ನುವಂತೆ
ಸಾಗುತಿಹರಲ್ಲ….
ಮರಣ ಮೃದಂಗ ಮೊಳಗಿದೆಯಲ್ಲಾ
ಎತ್ತಿ ಆಡಿಸಿದ ಕೈ ಹಿಡಿದು
ನಡೆಸಿ ನಡೆನುಡಿಯ ತಿದ್ದಿದದಾತ
ಸೆರಗಿನಲಿ ಕಾಪಿಟ್ಟು ಎದೆಯುಸಿರಲಿ
ತಂಪಿಟ್ಟ ಅವ್ವ ,
ಹೆಗಲ ಮೇಲೆ ಹೊತ್ತು ಊರೆಲ್ಲಾ
ತಿರುಗಾಡಿದ ಅಣ್ಣಾ ಹೀಗೆ
ಸಾಗುವದು ಮರಣದರಮನೆಯ
ಸೇರಿದವರ ಪಟ್ಟಿ ….
ನೆನದಷ್ಟು ನೆನಪುಗಳು
ಹೃದಯವ ತೋಯ್ಸವು…..
ಕಾಣದ ಜೀವಿಗೆ ಹರಿದ ಬದುಕು
ಕಾಲನ ಕೈ ತುತ್ತಿಗೆ ಹಂಬಲಿಸುತಿದೆ ….!!
ಗಾಯಗಳು ಮಾಗುವ ಮುನ್ನ
ಬರೆ ಮತ್ತೆ ಮತ್ತೆ ಬೀಳುತಿದೆ.
ಹಾಲುಗಲ್ಲದ ಕೆನ್ನೆ ಮಾಸುವ ಮುನ್ನವೇ
ಮಣ್ಣಾಗುತಿದೆ…….!!!!
ಹೇ…ಬದುಕೇ ನೀ ಎಷ್ಟು
ನಿಗೂಢ ….
ಬರಿದಾಗಿದೆ ಮನೆಮನ
ಉಳಿಯುವವೇ ಜನಮನ ….ಜನ ಮನ..
*********************