ನನಗಿಷ್ಟವಾದ ಸಿನಿಮಾ
ಕಾಂಜೀವರಂ
ಸಣ್ಣ ಸಣ್ಣ ತಪ್ಪುಗಳಿಗೂ ದೊಡ್ಡ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗೆಯೇ ಸಣ್ಣಸಣ್ಣ ಆಸೆಗಳನ್ನು ಕೈಗೂಡಿಸಿಕೊಳ್ಳಲು ದೊಡ್ಡ ದೊಡ್ಡ ಪ್ರಯತ್ನ ಮಾಡಬೇಕಾಗುತ್ತದೆ. ಈ ಪ್ರಯತ್ನದ ಫಲ ಸಿಹಿಯಾದರೆ ಬದುಕು ಸುಖಿ ಇಲ್ಲವಾದರೆ ಹೇಗೆ ಎಂಬುದನ್ನು ಅರಿಯಲು ನಾವು ತಮಿಳಿನ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ಕಾಂಜೀವರಂ ನೋಡಿದರೆ ತಿಳಿಯುತ್ತದೆ.
ಚಲನಚಿತ್ರದ ಆರಂಭವೂ ನೆನಪುಗಳ ತೆರೆಗಳನ್ನು ಮತ್ತೇ ಮತ್ತೇ ನೋಡುವಂತೆ ಪ್ರಾರಂಭವಾಗುತ್ತದೆ. ಕಥಾ ನಾಯಕ ವೆಂಕಟನನ್ನು ಪೋಲಿಸನವರು ಬಂಧಿಸಿ ಬಸ್ಸಿನಲ್ಲಿ ಕರೆದೊಯ್ಯುತ್ತಿರುತ್ತಾರೆ. ಜೋರು ಮಳೆಯ ನಡುವೆ ನಾಯಕ ಬಸ್ಸು ಬ್ರೇಕು ಹಾಕಿ ನಿಲ್ಲಿಸಿದಾಗಲೆಲ್ಲ ತನ್ನ ಬದುಕಿನ ಮಜಲುಗಳನ್ನು ನೆನೆಯುತ್ತಾ ಸಾಗುತ್ತಾನೆ.
ವೆಂಕಟನ ವೃತ್ತಿ ರೇಷ್ಮೆ ಸೀರೆ ನೇಯುವುದು ಅವನ ತಂದೆ ರಾಜರ ಮನೆಯವರಿಗೆ ಅದ್ಭುತವಾಗಿ ರೇಷ್ಮೆ ಸೀರೆಗಳನ್ನು ನೇಯ್ದು ಕೊಡುತ್ತಿದ್ದ ವ್ಯಕ್ತಿ.
ನಾಯಕನು ಮದುವೆಯಾಗಿ ತನ್ನ ಹೆಂಡತಿಯನ್ನು ಕರೆದುಕೊಂಡು ಬರುವಾಗ ಊರಿನ ಮುದುಕಿಯೊಬ್ಬಳು “ಹೆಂಡತಿಗೆ ರೇಷ್ಮೆ ಸೀರೆ ಉಡುಸಿ ತರುತ್ತಾನೇ ಎಂದುಕೊಂಡಿದೆ. ಆಗುವುದಿಲ್ಲ ಬಿಡು” ಎನ್ನುತ್ತಾಳೆ. ಈ ಮಾತು ಕೇಳಿದ ವೆಂಕಟ ಅಂದೇ ನನ್ನ ಹೆಂಡತಿಗೊಂದು ರೇಷ್ಮೆ ಸೀರೆ ತಯಾರು ಮಾಡಿ ಕೊಡಲೇಬೇಕೆಂದು ತೀರ್ಮಾನಿಸುತ್ತಾನೆ.
ಊರಿನ ಯುವಕನೊಬ್ಬ ಕಚ್ಚಾ ರೇಷ್ಮೆ ಕದ್ದ ಆರೋಪದಡಿ ಸಿಕ್ಕಿಕೊಂಡಾಗ ಮಾಲೀಕನು ಮನೆಗೆ ಇನ್ನು ಮೇಲೆ ಕಚ್ಚಾ ರೇಷ್ಮೆ ಕೊಡುವುದಿಲ್ಲ ಬದಲಾಗಿ ಊರಿನ ದೇವಸ್ಥಾನದಲ್ಲಿ ಅಲ್ಲೇ ತೂಕ ಮಾಡಿ ನೀಡುತ್ತವೆ. ಎ೦ದು ತಿಳಿಸುತ್ತಾನೆ.
ವೆಂಕಟನು ಮಾಲೀಕನ ಮಗಳ ಮದುವೆಗೆ ಅಂತ ಒಂದು ಕಲಾತ್ಮಕ ಸೀರೆಯೊಂದನ್ನು ನೇಯ್ದು ತಂದಾಗ ಅಲ್ಲಿಗೆ ಬಂದಿದ್ದ ಬ್ರಿಟೀಷ್ ಅಧಿಕಾರಿ ಸೀರೆಯನ್ನು ಮೆಚ್ಚಿ ಆತನಿಗೆ ಒಂದು ರೂಪಾಯಿ ಇನಾಮು ನೀಡುವಂತೆ ಆಗುತ್ತದೆ ಮತ್ತು ಬ್ರಿಟಿಷ ಅಧಿಕಾರಿಗೆ ಮತ್ತಷ್ಟು ಸೀರೆ ನೇಯ್ದು ಕೊಡುವ ಅವಕಾಶ ಸಿಗುತ್ತದೆ. ನಾಯಕಿಗೆ ಬಂದು ತನ್ನ ಪೆಟ್ಟಿಗೆಯಲ್ಲಿ ಕೂಡಿಟ್ಟ ಹಣವನ್ನು ತೋರಿಸಿ ಇದು ನಮ್ಮ ಮಗಳಿಗೆ ಮದುವೆಗೆ ರೇಷ್ಮೆ ಸೀರೆ ಖರೀದಿಸಲು ಎ೦ದು ತಿಳಿಸುತ್ತಾನೆ. ಇದನ್ನು ನೋಡಿದ ನಾಯಕನ ತಂಗಿ ಪತಿಗೆ ವ್ಯವಹಾರದಲ್ಲಿ . ನಷ್ಟವಾಗಿದೆ. ಎಂದು ತಿಳಿಸಿ ಹಣ ಪಡೆಯುತ್ತಾಳೆ. ನಂತರ ದಂಪತಿಗಳಿಗೆ ಮಗಳು ಹುಟ್ಟುತ್ತಾಳೆ. ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ.
ಊರಿನ ಜಾತ್ರೆಯ ಸಂಧರ್ಭದಲ್ಲಿ ಹೆಂಡತಿಗೆ ಹೊಟ್ಟೆ ನೋವು ಬಂದು ಬೀಳುತ್ತಾಳೆ. ವೈದ್ಯರು ದೊಡ್ಡ ಆಸ್ಪತ್ರಗೆ ಕರೆದೊಯ್ಯಬೇಕೆಂದು ಹೇಳುತ್ತಾರೆ. ಕೊನೆಗೆ ತನ್ನ ಹಿತ್ತಲಿನ ಮನೆಯಲ್ಲಿ ಮಗಳಿಗಾಗಿ ಗುಟ್ಟಾಗಿ ನೇಯ್ದಿದ್ದ ರೇಷ್ಮೆ ಸೀರೆ ತಂದು ಹೆಂಡತಿಗೆ ತೋರಿಸಿದಾಗ ಅವಳು ಕಣ್ಮುಚ್ಚುತ್ತಾಳೆ.
ಊರಿಗೆ ಅಂದು ಒಬ್ಬ ಕಮ್ಯುನಿಷ್ಟ್ ನಾಯಕನೊಬ್ಬ ಬಂದು ಅಧಿಕಾರಿಗಳ ದಬ್ಬಾಳಿಕೆ ಇತ್ಯಾದಿ ನಾಟಕಗಳನ್ನು ಆಡಿಸಿ ನಾಯಕ ವೆಂಕಟನಲ್ಲಿ ಕಮ್ಯೂನಿಸ್ಟ್ ಲೆನಿನರ ಸಿದ್ಧಾಂತಗಳನ್ನು ತಲೆ ತುಂಬುತ್ತಾನೆ.
ಮಗಳಿಗೆ ಮದುವೆ ವಯಸ್ಸು ಬಂದಾಗ ನಾಯಕನ ಗೆಳೆಯನ ಮಗನಿಗೆ ಕೊಡಲು ಮಾತುಕತೆ ನಡೆಸುವಾಗ ಪೋಲಿಸರು ನಾಯಕನನ್ನು ಕಮ್ಯೂನಿಸ್ಟ ಎ೦ದು ಜೈಲಿಗೆ ಹಾಕುತ್ತಾರೆ. ನಂತರ ಜೈಲಿನಿಂದ ಹೊರ ಬಂದ ನಾಯಕ ಮಾಲೀಕರಿಗೆ ಬೇಡಿಕೆಗಳನ್ನು ಇಡುತ್ತಾನೆ.ನೇಯುವುದಿಲ್ಲ ಎಂದು ಗುಂಪುಗೂಡಿಸುತ್ತಾನೆ. ಆದರೆ ಮಾಲೀಕ ಇವನ ಮಾತಿಗೆ ಸೊಪ್ಪು ಹಾಕುವುದಿಲ್ಲ ಸುಮಾರು ಎರಡು ತಿಂಗಳ ಯಾರು ಕೆಲಸಕ್ಕೆ ಹೋಗುವುದಿಲ್ಲ.ಮಗಳಿಗೆ ಮದುವೆಯಲ್ಲಿ ರೇಷ್ಮೆಸೀರೆ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದು ನೆನಪಾಗಿ ಜೊತೆಯ ನೇಯ್ಗಯವರನ್ನು ಪ್ರತಿಭಟನೆ ನಿಲ್ಲಿಸಿ ಕೆಲಸಕ್ಕೆ ಹಿಂತಿರುಗುವಂತೆ ಹಿಂದಿನಿಂದ ಮನವೊಲಿಸುತ್ತಾನೆ ಒಂದಿಬ್ಬರು ಇವನ ತೀರ್ಮಾನಕ್ಕೆ ಸೊಪ್ಪು ಹಾಕದೆ ವಿರೋಧಿಸುತ್ತಾರೆ. ಕಮ್ಯೂನಿಷ್ಟ ವಿರುದ್ಧ ಕೆಲಸ ನೀನು ಮಾಡುತ್ತಿರುವೆ ಎಂದು ಕೆಲಸ ಮಾಡುವಲ್ಲಿ ಹೋಗಿ ಕೂಗಾಡುವಾಗ ಮಾತನಾಡುವಂತೆ ವೆಂಕಟನನ್ನು ದಬ್ಬುತ್ತಾರೆ. ಅವನ ಬಾಯಿಂದ ರೇಷ್ಮೆ ನೂಲಿನ ಎಳೆಗಳು ಬೀಳುತ್ತವೆ.!
ಮಗಳಿಗೆ ಸೀರೆ ನೇಯಲು ವೆಂಕಟನು ಪ್ರತಿನಿತ್ಯ ಅಷ್ಟಿಷ್ಟು ನೂಲುಗಳನ್ನು ಬಾಯಿಯಲ್ಲಿ ಇರಿಸಿಕೊಂಡು ಕಳ್ಳತನದ ದಾರಿ ಹುಡುಕಿರುತ್ತಾನೆ.ಮಾಲೀಕನು ಗೆಳೆಯರು ಎಲ್ಲರು ಅಚ್ಚರಿಪಡುತ್ತಾರೆ. ಕಾಲಿನಿಂದ ಒದ್ದು ಜೈಲಿಗೆ ಹಾಕುತ್ತಾರೆ ಇದ್ದ ಒಬ್ಬ ಮಗಳು ಕೆರೆ ಹತ್ತಿರ ನೀರು ತರಲು ಹೋದಾಗ ನೀರಿಗೆ ಬಿದ್ದು ಕೈ ಕಾಲು ಸ್ವಾಧೀನ ಕಳೆದುಕೊಳ್ಳುತ್ತಾಳೆ ಅವಳನ್ನು ನೋಡಲು ಜೈಲಿನ ಅಧಿಕಾರಿಗಳು ಎರಡು ದಿನದ ಅನುಮತಿ ನೀಡಿರುತ್ತಾರೆ. ಆಗ ಬಸ್ಸಿನಲ್ಲಿ ಬರುವಾಗ ತನ್ನ ಕಳೆದ ಬದುಕಿನ ಮೆಲುಕು ಹಾಕುತ್ತ ಬರುತ್ತಾನೆ.
ಮನೆಗೆ ಬಂದ ವೆಂಕಟ ತನ್ನ ಮಗಳನ್ನು ಹೊತ್ತು ಹಿತ್ತಲ ಮನೆಯಲ್ಲಿ ನೇಯ್ದ ಅರ್ಧ ಸೀರೆ ತೋರಿಸಿ ಚಿಕ್ಕ ಚಿಕ್ಕ ತಪ್ಪಿಗೆ ದೊಡ್ಡ ಶಿಕ್ಷೆ ಎ೦ದು ಮಾತನಾಡಿ ಮನೆಗೆ ಒಂದು ವಿಷದ ಅನ್ನವನ್ನುಣಿಸುತ್ತಾನೆ ಸತ್ತ ಮಗಳನ್ನು ಮನೆಯ ಮುಂದೆ ಇರಿಸಿ ಹಿತ್ತಲಿಗೆ ಓಡಿ ಹೋಗಿ ಅರ್ಧ ನೇಯ್ದ ರೇಷ್ಮೆ ಸೀರೆ ತಂದು ಮಗಳ ಹೆಣದ ಮೇಲೆ ಹೊದಿಸುತ್ತಾನೆ. ಅದು ಮುಖ ಮುಚ್ಚಿದರೆ ಪಾದಗಳು ಕಾಣಿಸುತ್ತವೆ. ಪಾದ ಮುಚ್ಚಿದರೆ ಮುಖ ಕಾಣಿಸುತ್ತದೆ. ಹೀಗೆ ಸೀರೆ ಎಳೆದಾಡುತ್ತಿರುತ್ತಾನೆ. ಪೋಲಿಸ್ ಬಾ ಎಂದಾಗ ವೆಂಕಟನ ವಿಲಕ್ಷಣ ನಗುವಿನೊಂದಿಗೆ ಚಿತ್ರ ಕೊನೆಗೊಳ್ಳುತ್ತದೆ.
ಸ್ವಾತಂತ್ಯ ಪೂರ್ವದಲ್ಲಿ ಮಾಲೀಕರ ಶೋಷಣೆ ಕೆಲಸ ಮಾಡಿಸಿಕೊಳ್ಳುವ ರೀತಿಯನ್ನು ಮತ್ತು ಕಥಾನಾಯಕನ ಆದರ್ಶಗಳು ಜೊತೆಗೆ ಅಸಹಾಯಕತೆಗಳು ಜೀವನದ ಚಿಕ್ಕ ಆಸೆಗೆ ಪರಿಸ್ಥಿತಿಯೊಡನೆ ಮಣಿಯುವ ಮನಸ್ಸು ಅಂದಿನ ಇಮೇಜಿಗೆ ತಕ್ಕಹಾಗೆ ಚಿತ್ರಿಸಿರುವ ನಿರ್ದೇಶಕ ಪ್ರಿಯದರ್ಶನ ಅವರ ನಿರ್ದೇಶನ ನಮ್ಮನ್ನು ಅಂದಿನ ದಿನಗಳಿಗೆ ಕರೆದೊಯ್ಯುತ್ತದೆ. ಇನ್ನೂ ವೆಂಕಟನ ಪಾತ್ರಧಾರಿಯಾಗಿ ಕನ್ನಡಿಗ ಪ್ರಕಾಶ ರೈ ಅವರ ಅಭಿನಯ ಅತ್ಯುದ್ಭುತ ಅವರಿಗೆ ಇದರ ಅಭಿನಯಕ್ಕಾಗಿ ರಾಷ್ಟ್ರೀಯ ಉತ್ತಮ ನಟ ಪ್ರಶಸ್ತಿ ಪಡೆದರು. ನಮ್ಮ ಮೇಲುಕೋಟೆಯನ್ನು ಚಿತ್ರಿಸಿರುವ ರೀತಿ ರೆಟ್ರೋ ಲೋಕಕ್ಕೆ ಕರೆದೊಯ್ಯುವ ಚಿತ್ರವೂ ಯೂಟ್ಯೂಬ್ ನಲ್ಲಿ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಇದೆ ಮರೆಯದೆ ನೋಡಿ.
****************
ಜಿ .ಲೋಕೇಶ
Super gelya
ಹೀಗೆ ಮುಂದುವರಿಯಲಿ ಗೆಳೆಯ