ಕಾವ್ಯಯಾನ
ಒಲವ ಹಣತೆ
ಭಾರತಿ ಕೇ ನಲವಡೆ
ಅವಳು ಸುಂದರ ಮನಸಿನ ನಗುವ ಹೂವು ನನಗೆ
ಬಂದಂಳೆಂದರೆ ಬೆಳದಿಂಗಳ ಬಾಲೆ ಧರೆಗಿಳಿದಂತೆ ಮನಕೆ
ಕನಸು ಯಾರಿಗೂ ಕೇಡು ಬಯಸದ ಮುಗುದೆ
ದಿನಪೂರ್ಣವಾಗದು ಅವಳನು ನೋಡದೆ ಸದಾ//
ಬಿರಿದ ಸುಮದಂತೆ ಹುಸಿಮುನಿಸಿನಲೂ ಅಮೃತಧಾರೆ
ಒಲವ ತುಂಬುವ ಮುಂಗಾರು ಮಳೆಯ ಪುಳಕದಂತೆ
ಸರಳ ನಡೆಯ ನೀಳಜಡೆಯ ಕೃಷ್ಣಸುಂದರಿ ನೀನು
ನೊಂದವರಿಗೆ ಸಾಂತ್ವನದ ಹೊಳೆಯ ಹರಿಸುತ//
ಇಂದೇಕೋ ಅವಳ ಮನೆ ಮುಂದೆ ರಾಶಿ ಜನರ ಸಾಲು
ಕದ್ದು ನೋಡುವ ನಾನು ಬಳಿ ಸಾಗಿದರೆ ಉಸಿರು ಕಟ್ಟಿದ ದೃಶ್ಯ
ಕೊರೋನಾ ಮಾರಿಗೆ ಬಲಿಯಾದ ತಂದೆಯ ಸೇವೆಗೆ
ತಾನೆ ಮೊದಲು ಬಲಿಯಾದಳು ಕೋಮಲೆ
ಹೃದಯ ಕರಗಿದ ಸಮಯವದು ಕಂಬನಿಯಾಗಿ ಹರಿದಿತ್ತು//
ನಿತ್ಯ ಹಸಿರಾದ ಮನವಿಂದು ಮರುಭೂಮಿಯಾಗಿದೆ ಗೆಳತಿ
ಒಲವ ಹಣತೆ ಪ್ರೀತಿ ತೈಲವಿಲ್ಲದೆ ನಂದಿದೆ ಇಂದು
ಹೇಗೆ ಬದುಕಲಿ ಪ್ರಿಯೆ ನೀನಿಲ್ಲದ ಈ ಲೋಕದಲಿ ನಾನು
ನಿನ್ನ ಚಿರನೆನಪೆ ಸಾಕು ನನ್ನ ಬದುಕಿಗೆ ಚೈತನ್ಯ
******************************************************
ಪ್ರೇಮ ಬಂಧನವೇ ಹಾಗೆ ಸೆಳೆತಗಳ ನಡುವೆ ಹೊಂಗನಸಿನ ಭಾವ ಲೇಪಿಸಿ ಅಮರವಾಗುತ್ತದೆ.ಸುಂದರ ಕವಿತೆ…ಗೆಳತಿ ಪ್ರೇಮಕ್ಕೊಂದು ಸಖಿಗೀತೆ…