ನನ್ನದೇ ಎಲ್ಲ ನನ್ನವರೆ ಎಲ್ಲ

ಕವಿತೆ

ನನ್ನದೇ ಎಲ್ಲ ನನ್ನವರೆ ಎಲ್ಲ

ಚೈತ್ರಾ ತಿಪ್ಪೇಸ್ವಾಮಿ

ನಾನು ನನ್ನದೆಲ್ಲ ನನ್ನದು
ನನ್ನ ಬಳಿಯಿರುವವರೆಲ್ಲ
ನನ್ನವರೆಂಬ ಭಾವ ನಿನ್ನದು ಹೆಣ್ಣೇ ಒ ಹೆಣ್ಣೇ
ಜೀವ ತುಂಬಿ ಭುವಿಗೆ ತಂದ
ತಂದೆ ತಾಯಿ ನನ್ನವರು
ತಾಯಿ ಮಡಿಲ ಹಂಚಿಕೊಂಡ
ಅಗ್ರಜ ಅನುಜರೆಲ್ಲ ನನ್ನವರು
ಕುಲ ಬಂಧು ಬಳಗವೆಲ್ಲ ನನ್ನವರು
ಮನೋಮಂದಿರ ಅಂಗಳದ
ಒಡನಾಡಿಗಳೆಲ್ಲ ನನ್ನವರು
ಜೀವನಕ್ಕೆ ಹೊಸ ಭಾಷ್ಯೆ
ಬರೆದ ಸಂಗಾತಿ ನನ್ನವರು
ಹೊಸ ಜೀವನಕ್ಕೆ ಅಡಿಯಿಟ್ಟ
ಮನೆಯೆಲ್ಲ ನನ್ನದು
ಮದುವೆ ಬಂಧ ಬೆಸೆದ ಮನೆಯ
ಬಂಧು ಬಳಗವೆಲ್ಲ ನನ್ನವರು
ಬಸಿರ ತುಂಬಿ ಬಂದ ಜೀವ ನನ್ನದೆ
ಮಮತೆಯ ಮಕ್ಕಳು ನನ್ನವರು
ನನ್ನವರು ನನ್ನವರು ಎಂದು
ನನ್ನವರಿಗಾಗಿ ಬದುಕಿದ ಜನನಿ…..
ಮನೆಯ ಮಗುವಾಗಿ ಬಾಲಕಿಯಾಗಿ ಕುಲವಧುವಾಗಿ ಮಡದಿಯಾಗಿ ಸೊಸೆಯಾಗಿ
ತಾಯಿಯಾಗಿ ಮನೆಯ ಒಡತಿಯಾಗಿ ತನ್ನಲ್ಲಿರುವ ನನ್ನತನವ ತನ್ನವರಿಗರ್ಪಿಸಿ
ಹೆಣ್ತನಕೆ ಹಿರಿಮೆಯ ಗರಿಮೆ ತಂದವಳೆ
ನಾನು ನನ್ನದು ಎನ್ನದೆ
ನನ್ನವರು ನನ್ನುಸಿರು ಎಂದವಳೆ
ಎಲ್ಲರಲಿ ಎನ್ನತನವ ಬೆರೆಸಿ
ತಾನು ಬೆಳೆದು ತನ್ನವರ ಬೆಳೆಸುವವಳೆ
ಹೆಣ್ಣು ಹೆಣ್ಣು ಹೆಣ್ಣು ಹೆಣ್ಣು……….

******************************************

Leave a Reply

Back To Top