ಕವಿತೆ
–ಅಬ್ಳಿ,ಹೆಗಡೆಯವರ ಕವಿತೆ
ಭರ್ತಿಯಾಗದೆ ‘ಗೈರು’ಗಳು.


ಎಂದೋ,,ಎಲ್ಲೋ,,ಯಾರೋ
ಕೊರೆಯುವ ಚಳಿಗೆ
ಮೈ ಕಾಯಿಸಲು,
ಹಚ್ಚಿದ ಸಣ್ಣ ಬೆಂಕಿ-
ಇಂದು ಈ,,ರಣ-
ಬೇಸಿಗೆಯಲ್ಲಿ,
ಬಿಸಿಲ ಬೆಂಕಿ-
ಯೊಡಗೂಡಿ ದುಪ್ಪಟ್ಟು.
ಕಡಲತಡಿಯಿಂದ
ಹಿಮದ ಮುಡಿಯ
ವರೆಗೂ…ಬಿಡದ ಪಟ್ಟು.
ಉರಿವಗ್ನಿಕುಂಡಕ್ಕೆ
ತುಪ್ಪ ಸುರಿಯುವವರೆ
ಎಲ್ಲೆಲ್ಲೂ………
ದೇವರ ಹಾಜರಿ-
ಪುಸ್ತಕದಲ್ಲಿ
ಭರ್ತಿಯಾಗಲೇ-
ಬೇಕಿರುವ ‘ಗೈರು’ಗಳು.
*************************