ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಅನುದಿನದ.ಅನುರಾಗ

ಅನಿತಾ ಕೃಷ್ಣಮೂರ್ತಿ

ಪ್ರೀತಿಸಲು, ವ್ಯಕ್ತಪಡಿಸಲು ನನಗೇಕೆ
ಬೇಕು ಆ ಒಂದೇ ಒಂದು ದಿನ,
ದಿನವೂ ತೋರುವೆ ನನ್ನೊಲವಿನ ಅಭಿಮಾನ!

ಎಲೆಯ ಸ್ಪರ್ಶಿಸುವ ಇಬ್ಬನಿ,
ಎಂದೂ ಹೇಳದು, ಪ್ರೇಮದ ಪರಿ
ಗಾಳಿಯೊಡನೆ ಸೇರುವ ಗಂಧ
ಹೇಳಿಕೊಂಡಿರದು, ನಿವೇದನೆಯ ತಯಾರಿ!

ಅಪಾರ್ಥಕ್ಕೆ ಹಾದಿ ತೋರದ ಸೂರ್ಯ, ಭುವಿಯ ಪ್ರೇಮ ಕಥೆ
ಏಕಾಂತಕೆ ಶಂಕೆ ಬಾರದ ಬೆಳದಿಂಗಳು, ಧರಣಿಯ ಸ್ನೇಹಪರತೆ!

ಅಂತ್ಯದ ಜಿಜ್ಙಾಸೆಯ ಕಾಡದ ಕ್ಷಣ
ಆದಿಯಲಿ ಬಚ್ಚಿಟ್ಟುಕೊಂಡಿದೆ ಅನುರಾಗದ ಅನಾವರಣ!

ಉರುಳಿದರೂ ವರುಷ ಹಲವಾರು,
ಬದಲಾದರೂ ಪ್ರೇಮ ವಿಮರ್ಶಕರು
ವಿಸ್ಮಯ ಅಡಗಿಸಿಕೊಂಡಿದೆ, ಹೊರಬರುವ
ಪ್ರತಿಪದದಲಿ ಕಾಣದಂತೆ ಯಾವುದೇ ಕರಾರು

************************************************

About The Author

2 thoughts on “ಅನುದಿನದ.ಅನುರಾಗ”

Leave a Reply

You cannot copy content of this page

Scroll to Top