ಕವಿತೆ
ಅಂಧ ಭಕ್ತಿ
ಹೇಮಚಂದ್ರ ದಾಳಗೌಡನಹಳ್ಳಿ
ಚನ್ನ ಚಿತ್ತಹುತ್ತದೊಳದೆಷ್ಟೊ ಸರ್ಪ
ಬುಸುಗಡುವ ಸದ್ದಿಗೆ ಕಿವುಡಾದ ಮಂದಿ
ಬೆರಗಾಗಿ ನೋಟಕೆ ಸುತ್ತುತಿದೆ ಸುತ್ತ
ಆವರಿಸಿದೆ ಅಂಧಭಕ್ತಿಯ ಹುತ್ತ!!
ಬೆಳಕೀಗ ಕರುಣಾಳುವಲ್ಲ
ಬೆವರ ಬಸಿವಿನ ತೈಲ ಬೇಡುತದೆ ಬೆಳಗಲು
ಗಮನಿಸದೆ ಘಮಗುಡದು ಮೂಗಿಗೆ ಮಲ್ಲಿಗೆ
ತೋಟಗಾರ ಸುರಿದಂತೆ ನೀರು ಸತ್ತ ಪೈರಿಗೆ!!
ತಮ್ಮತನಕೆ ತಾವೇ ಕೊಡಲಿ
ಬೇಡಿ ಬೇಡಿ ದಾಸರಾಗಿ; ಕೇಳದಾಗಿ ಮೌನ-ರಾಗಿ
ತನ್ನಪರಾಧದಿ ಹುಟ್ಟು ಪಡೆದ ಸೊಳ್ಳೆಗಳಿಗೇ ಹೆದರಿ
ಪರದೆಯೊಳಗೆ ತಾವೇ ಬಂಧಿ!!
ನೆರಳಿಗೆಂದು ನೆಟ್ಟು ಪೊರೆದ ಬೀಜ ಮರವಾಗಿದೆ ಜಾಲಿ
ದಣಿದವರಿಗೆ ನೆರಳಿಲ್ಲ; ಹಣ್ಣಿಲ್ಲ ಸವಿಯಲು ಮೈಯೆಲ್ಲಾ ವಿಷ
ತಾನೇ ಪೊರೆದದ್ದೆಂದು ಅಪ್ಪುತಿದೆ ಮಂದಿ ಸುತ್ತಿ
ನೊಂದರೂ ಮೊರಡಾಗಿಸಿದೆ ಆವರಿಸಿಹ ಅಂಧಭಕ್ತಿ!!!!
******************************************************
Nice sentence….
ಧನ್ಯವಾದಗಳು ಮೇಡಂ
ಅದ್ಭುತ ಕವಿತೆ…..
ಮಾರ್ಮಿಕ ಕವನ. ತುಂಬಾ ಚೆನ್ನಾಗಿದೆ