ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭಾವದಲೆಯಲಿ ಪ್ರೇಮರಾಗ

ಅನಿತಾ ಪಿ. ಪೂಜಾರಿ ತಾಕೊಡೆ

Image result for photos of love in arts

ಒಲವೇ ಹೀಗೆ ತರವೇ
ಮೀಟು ಪ್ರೇಮ ಭಾವಗಳಾ…

ಬಾನಲ್ಲಿ ನೋಡು ಮೇಘಗಳಾ
ಬಾರೋ ಮಳೆಯಾಗುವಾ….

ಒಲವೇ ಹೀಗೆ ತರವೇ
ಮೀಟು ಪ್ರೇಮ ಭಾವಗಳಾ…
ಒಲವೇ….

ಆ ಬಾನಿಗೆಂದೂ ಈ ಭೂಮಿಯೊಲವು
ಹೂಮಳೆಯ ಜೊತೆ ಸೇರಿ ತಂಪಾಗುವಾ
ಮಳೆಬಿಸಿಲ ಚೆಲುವು ಹದವಾಗುತಿರಲು
ಬಾರೋ ರಂಗಾಗುವಾ ||ಒಲವೇ||

ಮುಗಿಲಾಚೆ ನೋಡು ಗಿರಿಹಕ್ಕಿ ಸಾಲು
ನಾವೂನೂ ಅದರಂತೆ ಹಗುರಾಗುವಾ
ಕರಿಮೋಡ ಸರಿದು ತಿಳಿಯಾಗುತಿರಲು
ಬಾರೋ ಹಿತವಾಗುವಾ ||ಒಲವೇ||

ಜೊತೆಯಾಗಿ ಬೆಸೆದ ಕನಸೊಂದು ಉಂಟು
ನೀನಿರದೆ ಎಂದೂ ನನಸಾಗದು
ಈ ಬಂಧ ಅನುದಿನವೂ ಉಸಿರಾಗುತಿರಲಿ
ಬಾರೋ ಬದುಕಾಗುವಾ ||ಒಲವೇ||

****************************************

About The Author

12 thoughts on “”

  1. Gorgeous Valentine Beauty … Universal Unconditional Love … Expressively Maintain Wisdom … Naturally Adore Essence of Immortal still Eternal Gratitude = Compassion …
    ಬಾರೋ ಬಾರೋ ರಂಗಾಗುವಾ …
    ಬಾರೋ ಬಾರೋ ಹಿತವಾಗುವಾ …
    ಬಾರೋ ಬಾರೋ ಒಲವಾಗುವಾ …
    ಬಾರೋ ಬಾರೋ ಬದುಕಾಗುವಾ …

    ಪ್ರೀತಿ ಪ್ರೇಮ ಪ್ರಣಯ ಪ್ರಾಕೃತಿಕ
    ಅದನು ಸವಿದವರು ಅರಿತವರು
    ಮಮಕಾರದ ಮಂಕರು ಮನುಜರು
    ಅತ್ಯುತ್ತಮ ಅತಿಸುಂದರ ಸುಖಕರ
    ಕ್ಷಣ ಅಹ್ಲಾದ ಉಲ್ಲಾಸದ ತಾಣವಾಗಲಿ
    ಸದೈವ ನಿಸರ್ಗದ ಸಾನಿದ್ಯವಿರಲಿ
    ನಿಮ್ಮ ಅಭಿವ್ಯಕ್ತತೆ ನೈಸರ್ಗಿಕವಾಗಲಿ
    ಓಂ ಶುಭಂ ಸರ್ವತ್ರ ಏಕತ್ರ ಸದಾ ಸರ್ವದಾ ಓಂ

  2. ವೆಲೆಂಟಾಯಿನ್ ದಿನದ ಸಂದರ್ಭದಲ್ಲಿ ಈ ಕವಿತೆ ಸಾಮಯಿಕ. ಇದು ಹಾಡಲು ಯೋಗ್ಯವಾದ ಕವಿತೆ. ಕವಿತೆಯ ಮೂಲಕ ಅನಿತಾ ಪೂಜಾರಿಯವರು ನಮ್ಮನ್ನು ತನ್ನ ಕಲ್ಪನಾ ಲೋಕಕ್ಕೆ ಕೊಂಡೊಯ್ಯುದು ಸಂತೋಷದಲ್ಲಿ ಮುಳುಗಿಸುತ್ತಾರೆ. ಅವರಿಗೆ ಅಭಿನಂದನೆಗಳು.

Leave a Reply

You cannot copy content of this page

Scroll to Top