ಹಾಯ್ಕುಗಳು
ರಂಜಾನ್ ಹೆಬಸೂರು
ಹಾಯ್ಕು-೧
ಎದೆ ಬಡಿತದ
ತಾಳ ತಪ್ಪಿದೆ
ಗಡಿಯಾರಕ್ಕೂ ಎದೆ ನೋವು
ಹಾಯ್ಕು-೨
ಒಂದು ಏಕಾಂತ
ನಿನ್ನ ಸಂಧಿಸಬೇಕು
ಕರುಳಿನ ಮಾತಷ್ಟೇ ಹುರಿಗೊಳ್ಳಲಿ
೩
ಮೊಳೆ ತಾಕಿದಾಗ
ಯೇಸು ನೆನಪಾದ
ಈಗ ಬೇರುಗಳೆಲ್ಲವೂ ಶಿಲುಬೆ ಹೊತ್ತಿದ್ದವು
೪
ನಮ್ಮಿಬ್ಬರನು
ಛೇದಿಸಲು ಬಯಸಿದರು
ನಾನು ಅವಳ ಸಮಾನಾರ್ಥಕ ಪದವಷ್ಟೇ..!
೫
ಮಗಳ
ಮಡಿಲ ಮೇಲೆ
ಮತ್ತೆ ಮಗು ನಾನು
೬
ತಲೆಗೇರಿದ ಅಮಲು
ಎದೆಗೂ ಆವರಿಸಿದೆ
ಮತ್ತೆ ಭೇಟಿಯಾಗೋಣ
೭
ಬಳಲುತ್ತಿದೆ ಜಗ
ರೋಗವೊಂದು ಉಲ್ಬಣಗೊಂಡು
ಸೀಸೆಯಲಿ ಪ್ರೇಮದೌಷದ ತಳ ಕಂಡಿದೆ
೮
ಗಾಂಧಿ ಈಗ
ಕೋಲು…ಕನ್ನಡಕ
ಅಪ್ಪನ ಖಾದಿ ಅಂಗಿ
೯
ಈ ಸಂಜೆ
ಸಾವಿರ ಬಣ್ಣ ತುಂಬಿದೆ
ಸಾವಿನ ಚಿನ್ಹೆ ಕಾಣದಂತಿತ್ತು
೧೦
ಸರಿ ರಾತ್ರಿಯಲಿ
ಹೀಗೆ ನೆನಪಾಗಬಾರದಿತ್ತು
ಬೆಳದಿಂಗಳು ಕಡಲಂತೆ ಉಕ್ಕುತ್ತಿದೆ
***************************
ಮನದಾಳದ ಭಾವಗಳು,ಎದೆ ಕಿತ್ತಿಟ್ಟತ್ತ ಅನುಭವ.ಕವಿಗೆ ಅಭಿನಂದನೆ
ಪತ್ರಿಕೆಗೂ ಅಭಿನಂದನೆ