ನಳಿನ. ಡಿ ಅವರ ಎರಡು ಕವಿತೆಗಳು
ನೆನಪು
ಏಕಿಷ್ಟು ಕಾಡುವುದು
ಬೇಸರ?
ನಗುವುದಂತೂ ದುಸ್ತರ,
ಬಿಮ್ಮನೆ ಕೂತರೂ,
ಸುಮ್ಮನೆ ಹುಡುಕಾಟ,
ಕಾಯುತಿದೆ ಕಡಲು
ಹುಣ್ಣಿಮೆಯ ಪೂರ್ಣಚಂದ್ರನ ಚುಂಭಿಸಲು,
ಅದೇನೋ ನಲವಿಲ್ಲದ
ಗೆಲುವಿಲ್ಲದ
ಈ ಮನಸಿಗೆ
ನಿಮ್ಮ ನೆನಪು
ಕೊಂಚ ಇಂಪು,
ಬರೆಯದೇ ಬದುಕಿದ್ದ ಪದ್ಯಗಳನು
ಬರೆದು ಈಗೀಗ
ಹೃದಯಕೆ ತಂಪು
ಗುಟ್ಟು
ಮುಖಾಮುಖಿಯಾಗಲು ಮುಖವಿಲ್ಲದೇ ಹೋದ್ಹಾವಾ,
ಆ ಎಲ್ಲಾ ನೆಂಪುಗಳನು ಕಾಡು ಬಳಸಿ ಸುಟ್ಟು,
ನದಿ ನೀರಿಗೆ ಬಿಸುಟು ಬಿಡು,
ಆ ಬೂದಿಯ ಕಾವು ನಿನ್ನ ಎದೆಯ ತಾಕದಿರಲಿ,
ಮುಸುಕಾದಾಗ ಮನಸು, ಮತ್ತೆ ಗಾಳಿಯ್ಯಾಗ
ಇತ್ತ ಬೀಸಿಬರಬೇಡ,
ಹೊತ್ತು ಹೊತ್ತಿಗೆ ನೆನಪ ಹಾರಿ ಬಿಡು,
ಕಳಚಿದ ಅಷ್ಟು ನೆಂಪುಗಳಿಗೆ,
ನಿದ್ದಿ ಜೋಂಪು ಹತ್ತಿ,
ಮಗು ಮರದ ಕೆಳಗಿನ ಜೋಳಿಗೆಯಲಿ ಭರ್ತಿ ಪಾಚಲಿ,
ಬಿಕ್ಕಳಿಕೆಗೆ ಕರಿಯಬೇಡಾ ಇಲ್ಲದ ಹೆಸರಿಟ್ಟು,
ಇದ್ದಂತೆ ಇರೋಣ ಒಟ್ಟು,
ಬಿಟ್ಟುಕೊಡದೆ ಚಿನ್ನದ ಜಿಂಕೆ
ಸೀತವ್ವನಿಗೆ ಅರುಹಿದ ಗುಟ್ಟು
*****************************
ಚೆಂದ ಕವಿತೆಗಳು
ಚಂದದ ಕವಿತೆಗಳು ಮೇಡಂ