ನನ್ನ ಸಖಿಯರಿಗೆ…

ಕವಿತೆ

ನನ್ನ ಸಖಿಯರಿಗೆ…

ಸುರೇಖಾ. ಜಿ.ರಾಠೋಡ.

Image result for photos of setha agni parikshe

ರಾವಣನನ್ನು ಪ್ರೀತಿಸಲೇ,
ಇಲ್ಲಾ ರಾಮನನ್ನು ದ್ವೇಷಿಸಲೇ?

ರಾವಣನು ಸೀತೆಯ
ಒಪ್ಪಿಗೆಯಿಲ್ಲದೆ ಅವಳನ್ನು
ಮುಟ್ಟದಿರವ ಹಠ ತೊಟ್ಟನೋ?

ರಾಮನು ಸೀತೆಯನ್ನು
ಒಪ್ಪಿಕೊಳ್ಳಲು ಅವಳನ್ನು
ಅಗ್ನಿ ಪರೀಕ್ಷೆಗೆ ಒಳ
ಪಡಿಸಲು ಹಠ ತೊಟ್ಟನೋ?

ಹಠ ತೊಟ್ಟ ಈರ್ವರು
ರಾಜರಲ್ಲಿ ಯಾರನ್ನು ನಾ
ಯುಗ ಪುರುಷ,ಆದರ್ಶ
ಪುರುಷನೆಂದು ಹೇಳಲಿ??
ನನ್ನ ಸಖಿಯರಿಗೆ…..!

ರಾಮ ಲಕ್ಷ್ಮಣರ ಮುಂದೆ
ಶೂರ್ಪನಖೀಯು ತನ್ನ
ಪ್ರೇಮ ನಿವೇದನೆಯನ್ನು
ಇಟ್ಟಾಗ, ಪ್ರೇಮದ ಬದಲಿಗೆ
ದಂಡಿಸುವ ರೂಪದಲ್ಲಿ
ಅವಳ ಮೂಗನ್ನು ಕತ್ತರಿಸಿದರು..!

ತಮ್ಮ ಪೌರಷತ್ವವನ್ನು
ತೋರಿಸಿ, ಹೆಣ್ಣನ್ನು
ಅವಮಾನ, ಅಪಮಾನಗೊಳಿಸಿದ
ಇವರನ್ನು ವೀರರೆಂದು ಕಥೆ
ಹೇಳಲೇ ನನ್ನ ಸಖಿಯರಿಗೆ…!
**************************************************

One thought on “ನನ್ನ ಸಖಿಯರಿಗೆ…

  1. ಚಿಂತನೆಗೆ ಹಚ್ಚುವ ವಿಚಾರ ಕವಿತೆಯಲ್ಲಿ ಚೆಂದವಾಗಿ ಒಡಮೂಡಿದೆ

Leave a Reply

Back To Top