ಗಜ಼ಲ್

ಗಜ಼ಲ್

ಎ . ಹೇಮಗಂಗಾ

Red Envelope and Red Rose

‘ನಾನು , ನನ್ನದೆಂ’ದು ಎಷ್ಟು ಬಡಿದಾಡಿದರೂ ಸೇರಲೇಬೇಕು ಗೋರಿಯನ್ನು
‘ನಾನೇ ಎಲ್ಲವೆಂ’ದು ಎಷ್ಟು ಸೆಣಸಾಡಿದರೂ ಸೇರಲೇಬೇಕು ಗೋರಿಯನ್ನು

ನಿಲ್ಲದೇ ನಡೆದಿಹ ಬಾಳ ನಾಟಕದಿ ನೀನೂ ಬರಿಯ ಪಾತ್ರಧಾರಿಯಷ್ಟೆ
ನಿರ್ಗಮಿಸುವ ಕ್ಷಣದಿ ಇರಬೇಕೆಂದರೂ ಸೇರಲೇಬೇಕು ಗೋರಿಯನ್ನು

ಎಲ್ಲರನೂ ತನ್ನೊಳಗೆ ಮಣ್ಣಾಗಿಸುವ ಮಣ್ಣಿಗೆ ಭೇದ ಭಾವವೆಲ್ಲಿದೆ
ಅಂತಕನಿಗೆ ಮಣಿದು ಅರಸನಾದರೂ ಸೇರಲೇಬೇಕು ಗೋರಿಯನ್ನು

ಹಣ, ಪ್ರತಿಷ್ಠೆ ಯಾವುದೂ ಬರದು ನಿನ್ನೊಡನೆ ಮಸಣದಿ ಮಲಗಿರಲು
ಕೋಟೆ ಕಟ್ಟಿ ಅಧಿಕಾರದಿ ಮೆರೆದರೂ ಸೇರಲೇಬೇಕು ಗೋರಿಯನ್ನು

ಮೂರು ದಿನದ ಬಾಳಿನಾಟದಿ ಎಲ್ಲಕೂ ಕೊನೆಯೊಂದಿದೆ ಹೇಮ
ಚಿರಂಜೀವಿ ನೀನೆಂದು ಭ್ರಮಿಸಿದರೂ ಸೇರಲೇಬೇಕು ಗೋರಿಯನ್ನು

*******************************************

Leave a Reply

Back To Top