ಈಗ ಅವಳು

ಕವಿತೆ

ಈಗ ಅವಳು

ವಾಯ್.ವ್ಹಿ.ಕಂಬಾರ

angel statue near plant

ಬಣ್ಣದ ಬಟ್ಟೆಗೆ ಕಣ್ಣಾಗುವ ಅವಳು
ಬಿಳಿಯ ಹೊಳಪಿಗೆ – ಬಾಯಾಗುವಳು
ಹೊಲ , ಮನೆ ಕದನ – ಕಲಾಪಗಳಲ್ಲಿ
ಕಥೆಯಾದವರು – ಬಿಲ್ಲಿಗೆ ಕಲ್ಲಾಗುವರು !!

ದಪ್ಪ ಮೀಸೆಗಳಲ್ಲಿ
ಬರವಸೆಯ ಕಣ್ಣಿರಿಸಿದವಳಿಗೆ
ಸಂಕಟ ತಿಳಿಯದ ಬೆಳಕ ಕಂಡು – ಕುಬ್ಜಳಾಗುವಳು !!

ಹೆಜ್ಜೆ ಹೆಜ್ಜೆಗೂ ಅನ್ನ ಅರಸುವ ಅವಳು
ಅವಮಾನದ ವಿಷ ತುಳಿದು
ಹಸಿವೆಯ ಹರಾಜಿಗೆ – ತ ಲೆಬಾಗುವಳು !!

ರಕ್ತ ಸಂಭಂದಗಳು , ಸ್ನೇಹಗಳು
ಬಾಲ್ಯದ ಆಟಗಳು , ತೊಟ್ಟಿಲದ
ಜೋಗುಳಗಳು – ಸುಟ್ಟುಹೋದ
ಸುಡುಗಾಡದಲ್ಲಿ ಈಗ ಅವಳು !!

ಎಲ್ಲ ಬಿಟ್ಟು ಬಂದ ಗಾಳಿ
ಕಾಲಕ್ಕೆ ತಲೆ ಬಾಗುವ ನೆಲ
ಛಳಿಯೊಂದಿಗೆ ಛಳಿಯಾಗಿ
ಬಿಸಿಲಿಗೆ ಮೈಯಾದ ಗೋಡೆಗಳೊಂದಿಗೆ ಈಗ ಅವಳು !!





**************************

Leave a Reply

Back To Top