ಅಂಬರ ಫಲ!

ಕವಿತೆ

ಅಂಬರ ಫಲ!

ಗಣಪತಿ ಗೌಡ

full moon in the sky

ಅಂಬರದಲಿ ತೂಗುತಿಹುದು
ಒಂದೇ ಒಂದು ಹಣ್ಣು,
ಬೆಳದಿಂಗಳ ರಸವೇ ಕುಡಿದು–
–ತಂಪು ರಸಿಕ ಕಣ್ಣು!/ಅಂಬರದಲಿ. ……//

ಕೆಲ ದಿನದಲಿ ಕರಗಿ ಬಲಿತು
ತುಂಬಿ ಪೂರ್ಣ ಪ್ರಾಯ!
ಹೊರ ಸೂಸಿದೆ ಹೊನ್ನ ಕಿರಣ
ಕುಡಿದು ಹೊನ್ನ ಪೇಯ!/ಅಂಬರದಲಿ……….//

ಹೊಂಬೆಳಕದು ಸುರಿವ ಜೇನು!
ಚಪ್ಪರಿಸುತ ಜಿಹ್ವೆ,
ಮುಳುಗೇಳುತ ಆನಂದದಿ,
ಮರೆತು ಎಲ್ಲ ನೋವೇ!/ಅಂಬರದಲಿ……….//

ತಂಪು ಬೆಳಕ ಬೆರಳಿನಲ್ಲಿ
ನೇವರಿಸುತ ಎಲ್ಲ,
‘ಶಾಂತಗೊಳ್ಳಿ’ ಎನುವ ತೆರದಿ
ಸವರುತೆಲ್ಲ ಗಲ್ಲ! /ಅಂಬರದಲಿ………..//

*****************************************

One thought on “ಅಂಬರ ಫಲ!

  1. ನನ್ನ ಕವಿತೆಯನ್ನು ಸಂಗಾತಿ ಬ್ಲಾಗಿನಲ್ಲಿ ಪ್ರಕಟಿಸಿದ್ದಕ್ಕಾಗಿ ಧನ್ಯವಾಗಳು ಗುರುಗಳೇ.

Leave a Reply

Back To Top