ಅನುವಾದ

ವಸಂತನಾಗಮನ

ಮೂಲ ತೆಲುಗು ರಚನೆ:
ಗುಂಟೂರು ಶೇಷೇಂದ್ರಶರ್ಮ

ಗುಂಟೂರು ಶೇಷೇಂದ್ರ ಶರ್ಮಾ ಬಿ.ಏ.ಬಿ.ಯಲ್ 1927 -2007

ತೆಲುಗು ಸಾಹಿತ್ಯದಲ್ಲಿ ಜನಪ್ರಿಯ ಕವಿ ಯುಗಕವಿ ಎಂದು ಹೆಸರುಗಳಿಸಿದವರು. ಇವರು ಕವಿ, ವಿಮರ್ಶಕ ಹಾಗೂ ಬರಹಗಾರರು.1994 ರಲ್ಲಿ ಇವರಿಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಇವರು ನೋಬಲ್ ಬಹುಮಾನಕ್ಕೂ ಭಾರತದಿಂದ ನಾಮಿನೇಟ್ ಆಗಿದ್ದರು. ಇವರ ಹಲವಾರು ರಚನೆಗಳು ಕನ್ನಡ, ಇಂಗ್ಲೀಷು ಹಿಂದೀ ಉರ್ದೂ ಬೆಂಗಾಲೀ ನೇಪಾಲಿ ಹಾಗೂ ಗ್ರೀಕ್ ಭಾಷೆಗಳಿಗೂ ಅನುವಾದಗೂಂಡಿವೆ

ಕನ್ನಡಕ್ಕನುವಾದ:
ನಾರಾಯಣ ಮೂರ್ತಿ ಬೂದುಗೂರು

ಹೂಗಳು ತುಟಿಯರಳಿಸಿವೆ
ರಹಸ್ಯವ ತಿಳಿಸಲೂ!!
ಈಗ…ಪ್ರತಿಯೊಂದು ಮರವೂ ಒಂದು ದೇವಳವೇ…

ಹಕ್ಕಿಗಳೆಲ್ಲಾ ಹಾರುವಾ ದೇವತೆಯರೇ!!!

ರೆಂಬೆ, ರೆಂಬೆಯಲೂ ಹಾಡಿನಾ ಸ್ಪರ್ಧೆಯೇ

ಹುಲ್ಲುಕಡ್ಡೀಯಲ್ಲೂ ಗಂಧರ್ವಲೋಕವೇ..
ವೀಣೆಯು ಮೀಟಿದಂತೆ ಸ್ವರಗಳ ಅಪ್ಸರಸೆಯರು….
ಈ ಹೂಗಳಲನ್ನ ಯಾರು ಎಬ್ಬಿಸಿದರೋ…? ಏನೋ ನನ್ನ ಬೆನ್ಹತ್ತಿದೇ!!!

ಯಾವುದೋ ನೆನಪುಗಳಿಗೆ ನನ್ನ ತೀಕ್ಷ್ಣವಾಗಿ ಒಳಪಡಿಸುತ್ತಿವೇ!!!

ಈ ಕೋಗಿಲೆಗಳನ್ನ ಆ ಮಾವಿನಮರದ ಮೇಲೆ ಯಾರು ಇಟ್ಟರೋ ?

ಅದು ಲೋಕವನ್ನ ನಿದ್ದೆ ಮಾಡಲಿಕ್ಕೆ ಬಿಡುತ್ತಿಲ್ಲ!!

ವಸಂತನನ್ನ ಕರೆದು.. ಕೋಗಿಲೆಯನ್ನ, ಸುಮ್ಮನಿರಲು ಹೇಳಿದರೇ…ಅದು ಕೇಳುವುದಾ ?

ನಾನು ಋಷಿಯಲ್ಲಾ..ಕೋಗಿಲೆಯ, ಸ್ವರ ಕೇಳಿ ಬೆಚ್ಚಿಬೀಳಲು…

ನಮ್ಮೂರ ಮಣ್ಣಿನಿಂದ ಮಾಡಿದ ಸ್ನಾಯುಗಳು ಎನ್ನ ದೇಹದ್ದು!!!

ಹಸಿರಾಗಿ ಪಂಚಮ… ದಲ್ಲಿ ಹಾಡುವಾ ಮಾವಿನಾ ಮರಾ…
ನಡೆದಾಡುವದೊಂದು… ವಿನಹಾ… ಚೈತ್ರದ ಆಗಮನಕ್ಕೆ ಏನು ಬೇಕಾದರೂ ಮಾಡುವೆ ಎನ್ನುತಿದೇ!!!!

ವಸಂತ ಋತುವೆಂದರೇ!!!
ಕೋಗಿಲೆಗಳ ಹಾಡಿನಾ ಪಾಠಶಾಲೆ..
ಹಕ್ಕಿಗಳಾ ಸಂಗೀತ ಅಕಾಡೆಮೀ…

ಒಂದೊಂದು ಹಕ್ಕೀ….ಸಾವಿರ ಹಾಡೂಗಳಾಗಿ ರೂಪಾಂತರಗೊಳ್ಳುವಾ ಋತೂ ಇದೂ!!!

ಅದಕ್ಕೇ ಪ್ರಪಂಚವೆಲ್ಲಾ ಯಾವಾಗಲೂ ಒಂದು ಹೊಸ ವಸಂತಕ್ಕಾಗಿಯೇ.
ನಿರೀಕ್ಷಣೇ ಮಾಡುತ್ತಿರುತ್ತೇ!!!

ಚೈತ್ರವೂ…ಒಂದು ಜೇಡರಹುಳಾ….
ಹೂವುಗಳಾ ಅರಳಿಸುತ್ತೇ..
ಮೊಟ್ಟೇನೂ ಇಡುತ್ತೇ…
ಹೂವುಗಳಲ್ಲೀ ಬಣ್ಣಾನೂ ತುಂಬುತ್ತೇ!!!
ಬಲೆಯಲ್ಲಿ…. ಇತಿಹಾಸವನ್ನೂ.. ನೇಯುತ್ತೇ…

ಏನೋ….ಪಿಸಪಿಸ ಮಾತಿನೊಂದಿಗೆ ಏಕಾಂತವನ್ನೂ ಕಾಡುತ್ತೇ!!!

ಮರುಭೂಮಿಗಳ ದಾಟಿ…ದಾಟಿ.. ಹೂವರಳುವಾ ಬನಗಳಕಡೇ ಪ್ರಯಾಣ ಬೆಳಸುವೆ!!!

ಸಮಯವೂ….

ಮಾವಿನಾ ಹಣ್ಣಿನಾ ಹಾಗೇ, ಮಧುರ ಸುವಾಸನೇ ಬೀರುತ್ತಾ.. ಇರುವುದನ್ನ ಅಲ್ಲಿ ಸಾಕ್ಷಾತ್ಕಾರಗೊಳಿಸುತ್ತೆ.

ಉದರುವ ಎಲೆಗಾಗಿ
ಭೂತಾಯಿಯಾ ನಿರೀಕ್ಷಣೇ…

*****************************.

One thought on “ಅನುವಾದ

Leave a Reply

Back To Top