ಅನ್ನಪೂರ್ಣ ಸು ಸಕ್ರೋಜಿ ಪುರುಷ ಪರುಷಮಣಿ
ಕಾವ್ಯಸಂಗಾತಿ ಅನ್ನಪೂರ್ಣ ಸು ಸಕ್ರೋಜಿ ಪುರುಷ ಪರುಷಮಣಿ ಪುರುಷ ಕಲ್ಲು ಹೃದಯದವನುಅನ್ನುವುದು ಸಹಜ ಒಪ್ಪಿಕೊಂಡೆಕಣ್ಣುಗಳಲಿ ಕಾಣದು ಆರ್ದ್ರತೆಕಾಣದು ಭಾವನೆಗಳಲಿ ಒರತೆ ವ್ಯಕ್ತವಾಗದು ಎಂದೂ ಸೀದಾಸಹಜ ಸರಳ ಪ್ರೇಮ ಪ್ರೀತಿಅವನ ಅವ್ಯಕ್ತ ಪ್ರೀತಿಯ ರೀತಿಬೇರೆ ತರಹ ಭಿನ್ನವಾಗಿರುವುದು ತಾಯಿ ಹೃದಯದ ಕಾಳಜಿತಂದೆಯ ತೋರಿಕೆಯ ಕೋಪಅಣ್ಣನ ಮಮತೆಯ ಗದರಿಕೆಗೆಳೆಯನ ಸಲುಗೆಯ ಬೈಗುಳ ಗಂಡಸಿನ ದರ್ಪ ಅಧಿಕಾರಪುರುಷಪ್ರಿಯ ಅಹಂಕಾರಪ್ರಿಯ ಪತ್ನಿಯ ಜೊತೆಗಾರಪರಿವಾರದ ಪರಮೇಶ್ವರ ಸಂಬಂಧಗಳ ಬಂಧ ಅರಿತವಸದಾ ಮಧುರವಾಗಿಸುವವಅವ್ವನೊಂದಿಗೆ ಹಂಚಿಕೊಳ್ಳಲಾರಪತ್ನಿಯೊಂದಿಗೆ ತೋಡಿಕೊಳ್ಳಲಾರ ಸಮತೆಯಿಂದ ಸಂಭಾಳಿಸುವನುಉದ್ಯೋಗದೊಂದಿಗೆ ಮನೆಯನುಸಹನೆಯಿಂದ ಬಾಳುವವನುಮನೆ ರಕ್ಷಿಸುವ ಕಾವಲುಗಾರನು ತನ್ನ ಕನಸುಗಳ ಮುಚ್ಚಿಡುವವಎಲ್ಲರಿಗಾಗಿ ಸಾಲ ಮಾಡುವವವೃದ್ಧ ತಂದೆ ತಾಯಿ ಪತ್ನಿಗಾಗಿದುಡಿಮೆಯೇ ದೈವವೆನ್ನುವವ ಸಂಕಷ್ಟಗಳಗೆ ಎಂದೂ ಅಂಜದವನಗುತ ನಂಜುಂಡನಾಗುವವನಾನಿರುವೆನೆಂದು ನಂಬಿಸುವವಕುಟುಂಬ ವತ್ಸಲನಾಗಿರುವವ ಬೇಕು ಶಕ್ತಿ ಸೃಷ್ಟಿಕರ್ತನ ಕಾರ್ಯಕೆಸ್ತ್ರೀ ಬೇಕು ಪುರುಷನ ಅಸ್ತಿತ್ವಕೆಆಗ ಮಹಾ ಪುರುಷನೆನಿಸುವನುಪುರುಷ ಪರುಷಮಣಿಗೆ ವಂದನೆ ಅನ್ನಪೂರ್ಣ ಸು ಸಕ್ರೋಜಿ ಪುಣೆ
ಅನ್ನಪೂರ್ಣ ಸು ಸಕ್ರೋಜಿ ಪುರುಷ ಪರುಷಮಣಿ Read Post »









