ಚಮಚಾಯಣ…
ಆಗೆಲ್ಲ ನಾವು ಬೇಸಿಗೆ ರಜೆಯಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಮದುವೆ ಸೀಸನ್ ನಲ್ಲಿ ನಮ್ಮಜ್ಜಿಊರಲ್ಲೇ ಇರುತ್ತಿದ್ದದ್ದು ಹೆಚ್ಚು.ಅಮ್ಮನ ತಮ್ಮ ತಂಗಿಯರು,ಕಸಿನ್ ಗಳು ಒಂದು ಗಾಡಿ ಜನ ಇದ್ರು.ಅವರೆಲ್ಲರ ಮದುವೆ ಆಗಿದ್ದು ಅಜ್ಜಿ ಮನೆಯಂಗಳದಲ್ಲೇ. ಹೇಗಿದ್ರೂ ಮನೆ ಅಂಗಳ ದೊಡ್ಡದಾಗಿ ಇರುತ್ತಿತ್ತು,
ವಸುಂಧರಾ ಕದಲೂರು ಬರೆಯುತ್ತಾರೆ
ಒಟ್ಟಿನಲ್ಲಿ ಹೊಟ್ಟೆ ತುಂಬಿದ ಮಗು ಒಂದಷ್ಟು ಹೊತ್ತು ತರಲೆ ಮಾಡದೇ ಆಡಿಕೊಂಡೋ, ಮಲಗಿಕೊಂಡೋ ಇದ್ದರೆ ಅಮ್ಮನಿಗೆ ಸಿಗುವ ನಿರಾಳತೆ ಇದೆಯಲ್ಲಾ ಅದಕ್ಕೆ ಬೆಲೆ ಕಟ್ಟಲಾಗದು.
ಪ್ರಬಂಧ ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ ಜಯಶ್ರೀ.ಜೆ. ಅಬ್ಬಿಗೇರಿ ಇಸ್ಲಾಂ ಧರ್ಮದ ಪ್ರಖ್ಯಾತ ಗುರು ‘ಸಾದಿ’ ಸಣ್ಣವರಿದ್ದಾಗ ತನ್ನ ತಂದೆಯೊಂದಿಗೆ ಮಸೀದಿಗೆ ಹೋಗಿದ್ದರು. ತಂದೆ ಮಕ್ಕಳು ಮಸೀದಿಯ ಮೇಲ್ವಿಚಾರಣೆ ನೋಡಿಕೊಳ್ಳಬೇಕಿತ್ತು. ಅಲ್ಲಿ ಪ್ರಾರ್ಥನೆಗೆ ಬಂದವರೆಲ್ಲ ನಿದ್ದೆಗೆ ಜಾರಿದ್ದರು. ಅದನ್ನು ಕಂಡ ಸಾದಿಗೆ ಆಶ್ಚರ್ಯವಾಯಿತು. ಆತ ತಂದೆಗೆ ತಿಳಿಸಿದ. ‘ನಮ್ಮಿಬ್ಬರನ್ನು ಬಿಟ್ಟು ಬಾಕಿಯವರೆಲ್ಲ ಮಲಗಿ ಬಿಟ್ಟಿದ್ದಾರೆ. ಆತನ ತಂದೆಗೆ ಕೋಪ ಬಂದಿತು.’ನಿನ್ನ ಕೆಲಸ ನೀನು ಮಾಡು. ಬೇರೆಯವರು ಏನು ಮಾಡುತ್ತಿದ್ದಾರೆಂದು ನೋಡುವುದು ನಿನ್ನ ಕೆಲಸವಲ್ಲ. ‘ಬೇರೆಯವರಲ್ಲಿ ತಪ್ಪು ಕಂಡು ಹಿಡಿಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಅದರ ಬದಲು ನಿನ್ನಲ್ಲಿರುವ ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊ. ಬೇರೆಯವರಲ್ಲಿ ಹಲವು ತಪ್ಪುಗಳಿದ್ದು ಒಂದೇ ಒಂದು ಒಳ್ಳೆಯ ಗುಣವಿದ್ದರೂ ಅದರ ಮೇಲೆ ನಿನ್ನ ಗಮನವಿಡು.ಒಳ್ಳೆಯದರತ್ತ ಗಮನ ಹರಿಸುವುದರಿಂದ ಒಳ್ಳೆಯದೇ ಆಗುತ್ತದೆ.’ ಎಂದರು. ಸಂಪೂರ್ಣವಾಗಿ ಒಳ್ಳೆಯ ಗುಣಗಳು ತುಂಬಿರುವ ವ್ಯಕ್ತಿ ಸಿಗುವುದು ದುರ್ಲಭ. ಹಾಗಂತ ಸಂಪೂರ್ಣ ಕೆಟ್ಟ ಗುಣಗಳಿರುವ ವ್ಯಕ್ತಿ ಸಿಗುವುದು ಸುಲಭ ಅಂತಿಲ್ಲ. ಹಾಗಿದ್ದರೆ ಪ್ರತಿಯೊಬ್ಬರಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೇ ಇರುತ್ತವೆ ಅನ್ನುವುದು ಸೂರ್ಯನಷ್ಟೇ ಸ್ಪಷ್ಟ. ಈ ಸಂಗತಿಯನ್ನು ಇನ್ನಷ್ಟು ಸರಳವಾಗಿ ಹೇಳುವುದಾದರೆ ಪ್ರತಿಯೊಬ್ಬ ವ್ಯಕ್ತಿ ಒಳ್ಳೆಯ ಮತ್ತು ಕೆಟ್ಟ ಗುಣಗಳ ಒಟ್ಟು ಮೊತ್ತ. ಹಾಗಾದರೆ ಒಳ್ಳೆಯ ಮತ್ತು ಕೆಟ್ಟ ವ್ಯಕ್ತಿ ಅಂತ ಹೇಗೆ ಗುರುತಿಸುತ್ತೇವೆ? ಯಾರಲ್ಲಿ ಒಳ್ಳೆಯ ಗುಣಗಳು ಹೆಚ್ಚಿವೆಯೋ ಅವರು ಒಳ್ಳೆಯವರು. ಹಾಗೆಯೇ ಕೆಟ್ಟ ಗುಣಗಳ ಪ್ರಮಾಣ ಹೆಚ್ಚಿದ್ದವರು ಕೆಟ್ಟವರು ಎಂದು ನಿರ್ಧರಿಸಲಾಗುತ್ತದೆ. ಉತ್ತಮವಾದುದನ್ನು ನಿರೀಕ್ಷಿಸಿದರೆ ಅದನ್ನು ಪಡೆಯಬಹುದು. ಇತರರಲ್ಲಿ ಒಳ್ಳೆಯ ಗುಣಗಳನ್ನು ಮಾತ್ರ ಕಾಣುತ್ತಿದ್ದರೆ ಇಡೀ ಜಗತ್ತೇ ಒಳ್ಳೆಯದಾಗಿ ಕಾಣಿಸುವುದು. ಒಳಿತು ಕೆಡುಕುಗಳಿಗಿಂತ ನೋಡುವ ದೃಷ್ಟಿ ಒಳ್ಳೆಯದಾಗಿರಬೇಕು. ಸಾಕಷ್ಟು ಕೆಡುಕುಗಳ ಮಧ್ಯೆಯೂ ಒಳ್ಳೆಯದನ್ನು ಹುಡುಕುವುದೇ ಒಳ್ಳೆಯತನ.ಮುಳ್ಳುಗಳ ನಡುವೆ ಅರಳಿ ನಿಂತ ಗುಲಾಬಿಯತ್ತ ಗಮನಿಸಬೇಕೇ ಹೊರತು ಮುಳ್ಳುಗಳೆಡೆಯಲ್ಲ.ಕಮಲದತ್ತ ದೃಷ್ಟಿ ನೆಡಬೇಕೇ ಹೊರತು ಕೆಸರಿನತ್ತ ಅಲ್ಲ. ತೊಂದರೆ ಮಧ್ಯದಲ್ಲಿ ಹೇಗೆ ಅವಕಾಶಗಳು ಅವಿತುಕೊಂಡಿರುತ್ತದೆಯೋ ಹಾಗೆಯೇ ಕೆಟ್ಟದರ ನಡುವೆಯೂ ಒಳ್ಳೆಯದು ಅಡಗಿರುತ್ತದೆ. ಅದನ್ನು ಹೆಕ್ಕಿ ತೆಗೆದು ಬೆಳೆಸುವುದೇ ಜಾಣತನ. ಯಾವುದರ ಬಗೆಗೆ ಮನಸ್ಸನ್ನು ಕೇಂದ್ರೀಕರಿಸುತ್ತೇವೆಯೋ ಅದನ್ನೇ ದಕ್ಕಿಸಿಕೊಳ್ಳುತ್ತೇವೆ. ಗಮನವನ್ನು ಸದಾ ಒಳ್ಳೆಯ ಗುಣಗಳತ್ತ ಹರಿಸಬೇಕು. ಯಾಂತ್ರಿಕವಾಗಿ ದಿನವನ್ನು ದೂಡುತ್ತಿದ್ದರೆ ಒಳಿತು ಕೆಡುಕುಗಳ ಫರಕು ಗೊತ್ತಾದರೂ ಬದಲಾಗುವುದು ವಿರಳ. ನಮ್ಮ ಅಭ್ಯಾಸಗಳು ನಮ್ಮನ್ನು ಇತರರಿಂದ ಬೇರೆಯಾಗಿಸುತ್ತವೆ. ಒಳಿತನ್ನು ಹುಡುಕುವುದು ಒಂದು ಒಳ್ಳೆಯ ಅಭ್ಯಾಸ. ಒಳ್ಳೆಯದು ಮಹತ್ತರವಾದ ಸ್ಪೂರ್ತಿ ನೀಡುತ್ತದೆ. ಚೈತನ್ಯವನ್ನು ತುಂಬುತ್ತದೆ. ಒಳ್ಳೆಯದನ್ನು ಗಂಭೀರವಾಗಿ ಪರಿಗಣಿಸಬೇಕು. ಅದನ್ನು ಮೆಚ್ಚಬೇಕು. ನೀರೆರದು ಪೋಷಿಸಬೇಕು. ನಿರ್ಲಕ್ಷಿಸಿದರೆ ಒಣಗಿದ ಬಳ್ಳಿಯಂತಾಗುತ್ತದೆ.ಕೆಟ್ಟದ್ದನ್ನು ಸಾಕುವುದೆಂದರೆ ಫಲ ಕೊಡದ ಮುತ್ತುಗದ ಗಿಡಕ್ಕೆ ಹತ್ತಾರು ವರ್ಷ ಪೂಜಿಸಿದಂತೆ. ಯಾವುದೇ ಪ್ರಯೋಜನವಿಲ್ಲ. ನಿರಾಸೆಯ ಹೊರತು ಮತ್ತೇನೂ ಲಭಿಸದು. ಒಳ್ಳೆಯ ಗುಣಗಳನ್ನು ಪೋಷಿಸದಿದ್ದರೆ ಪ್ರೋತ್ಸಾಹಿಸದಿದ್ದರೆ ಒಳ್ಳೆಯವರು ನಿರಾಶರಾಗಬಹುದು. ‘ಎಷ್ಟು ಒಳ್ಳೆಯವರಾಗಿದ್ದರೂ ಅಷ್ಟೇ ಇದೆ. ಯಾವುದೇ ಲಾಭವಿಲ್ಲ. ಮತ್ತಷ್ಟು ನೋವನ್ನು ಅನುಭವಿಸುವುದು ಯಾರಿಗೆ ಬೇಕಿದೆಯೆಂದು ನೊಂದ ಮನಸ್ಸು ಕೆಟ್ಟದ್ದರತ್ತ ವಾಲುತ್ತದೆ.’ ಅಂದರೆ ಕೆಟ್ಟವರು ಮೂಲತಃ ಕೆಟ್ಟವರಲ್ಲ. ಅವರು ಪರಿಸ್ಥಿತಿಯ ಕೂಸಾಗಿ ಕೆಟ್ಟವರಾಗಿರುತ್ತಾರೆ. ಬೇಕಂತಲೇ ಅಪರಾಧಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಯಾರಿಗೂ ಬೇಕಾಗಿರುವುದಿಲ್ಲ. ಒಳ್ಳೆಯದನ್ನು ಅಲ್ಲಗಳೆಯುವುದು ತುಚ್ಛವಾಗಿ ಕಾಣುವುದು ತಪ್ಪು. ಹಣ ಅಧಿಕಾರ ಅಂತಸ್ತಿನಿಂದ ಒಣ ಪ್ರತಿಷ್ಟೆಯಿಂದ ಪಡೆದ ಸುಳ್ಳು ಒಳ್ಳೆಯತನದ ಬಿರುದು ದೀಪದ ಬೆಳಕಿನಂತೆ ಎಣ್ಣೆ ಇರುವವರೆಗೆ ಮಾತ್ರ ಇರುತ್ತದೆ.ನಿಜವಾದ ಒಳ್ಳೆಯತನಕ್ಕೆ ಸಿಗುವ ಗೌರವ ಸೂರ್ಯನಂತೆ ಸೃಷ್ಟಿ ಇರುವವರೆಗೆ ಬೆಳಗುತ್ತದೆ. ಒಳ್ಳೆಯ ಸಮಾಜ ಕಟ್ಟಬೇಕೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ಮೊದಲು ಅನ್ಯರ ಒಳಿತಿಗಾಗಿ, ನಂತರ ತನ್ನ ಒಳಿತಿಗಾಗಿ ದುಡಿಯುವ ಮನೋಭಾವ ಹೊಂದಿರಬೇಕು. ಯೋಚನೆಗಳು ಕಾರ್ಯಗಳು ಒಳ್ಳೆದಾದರೆ ಬದುಕು ಒಳ್ಳೆಯದಾಗುತ್ತದೆ. ಒಳ್ಳೆಯದನ್ನು ಗುರುತಿಸೋಣ ಒಳ್ಳೆಯದನ್ನು ಬೆಳೆಸೋಣ. ಒಳ್ಳೆಯ ಗುಣಗಳು ಮತ್ತೆ ಮತ್ತೆ ಚಿಗುರೊಡೆಯಲು ಪ್ರೋತ್ಸಾಹಿಸೋಣ. ಉದುರಿ ಹೋದ ಹೂಗಳು ತಮ್ಮ ಸುವಾಸನೆಯನ್ನು ಚೆಲ್ಲುತ್ತವೆ. ಒಳ್ಳೆಯ ಪುಸ್ತಕಗಳು ಒಳ್ಳೆಯ ವ್ಯಕ್ತಿಗಳು ಒಳ್ಳೆಯತನ ಕೂಡಲೇ ಅರ್ಥವಾಗುವುದಿಲ್ಲ. ಪುಸ್ತಕವನ್ನು ಮತ್ತೆ ಮತ್ತೆ ಓದಿದಾಗ ಮಾತ್ರ ಅದರ ಸತ್ಯ ಅರಿವಾಗುವುದು. ಹಾಗೆಯೇ ವ್ಯಕ್ತಿಗಳ ಮನಸ್ಸನ್ನು ಸ್ವಚ್ಛ ಮನಸ್ಸಿನಿಂದ ಅರಿಯಲು ಪ್ರಯತ್ನಿಸಿದರೆ ಮಾತ್ರ ಒಳ್ಳೆಯತನ ತಿಳಿಯುವುದು.ಸಾಕಷ್ಟು ಒಳ್ಳೆಯ ಗುಣಗಳು ಇರುವವರು ಸಿಗುವರು ಎಂದು ಕಾಯುವುದು ಬೇಡ. ಸಿಕ್ಕ ಜನರಲ್ಲಿಯೇ ಒಳ್ಳೆಯ ಗುಣಗಳನ್ನು ಗುರುತಿಸಿ ಪೋಷಿಸೋಣ. ಆಗ ಒಳ್ಳೆಯದು ಬಾಡದ ಹೂವಿನಂತೆ ನಗುತ್ತಿರುತ್ತದೆ. ============================================================= .
ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ Read Post »
ನಮ್ಮ ಫ್ಲಾಟಿನ ಮನೆ; ನೆಲದ ಸ್ಪರ್ಶ ಮಣ್ಣ ಘಮ, ಮರಗಳ ಸ್ನೇಹ, ಬೆಕ್ಕು ನಾಯಿಗಳ ಸಾನಿಧ್ಯ ಇಲ್ಲದ ನೆಲೆಯಾದರೂ ಇಲ್ಲಿಯೂ ಜೀವಮಿಡಿತದ ಸದ್ದಿದೆ. ಮರಗಿಡಗಳ, ತಂಗಾಳಿಯ ಸ್ಪರ್ಶವಿದೆ, ವಿಧ ವಿಧ ಹಕ್ಕಿ ಹಾಡಿನ ನಿನಾದವಿದೆ.
ಲಲಿತ ಪ್ರಬಂಧ ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ… ಟಿ.ಎಸ್.ಶ್ರವಣಕುಮಾರಿ ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ’ ಎಂದು ಹೇಳುವಂತೆ ‘ಸಲಾಂ ಸಾಬಿಗೂ ಸಂಕ್ರಾಂತಿಗೂ ಏನು ಸಂಬಂಧ’ ಎಂದು ಹುಬ್ಬೇರಿಸುತ್ತೀರೇನೋ! ಪ್ರತಿ ಸಂಕ್ರಾಂತಿಗೂ ಸಲಾಮನನ್ನು ನೆನಸಿಕೊಳ್ಳದೆ ನನಗೆ ಸಂಕ್ರಾಂತಿ ಹಬ್ಬ ಆಗುವುದೇ ಇಲ್ಲ. ಈಗೊಂದೈವತ್ತು ವರ್ಷಗಳ ಹಿಂದೆ ಜನಸಾಮಾನ್ಯರಿಗೆ ಶಿವಮೊಗ್ಗದಲ್ಲಿ ಸಂಚಾರಕ್ಕೆ ಇದ್ದದ್ದು ಎರಡೇ ರೀತಿ. ಮೊದಲನೆಯದು ನಟರಾಜ ಸರ್ವೀಸ್ ಅಂದರೆ ಕಾಲ್ನಡಿಗೆಯಲ್ಲಿ ಹೋಗುವುದು; ಇನ್ನೊಂದು ಕುದುರೆ ಗಾಡಿ. ಕಾರೆನ್ನುವುದು ಅತಿ ಶ್ರೀಮಂತರ ಸೊತ್ತು ಬಿಡಿ; ನಮದಲ್ಲ. ಊರಲ್ಲಿ ಎಷ್ಟು ಕಾರಿದ್ದವೆಂದರೆ ಓಡಾಡುತ್ತಿದ್ದ ಕಾರು ಇಂತವರದೇ ಎಂದು ಹೇಳುವಷ್ಟು! ಸೈಕಲ್ಲುಗಳು ಸ್ಕೂಟರಿನ ಸ್ಥಾನಮಾನವನ್ನು ಪಡೆದಿದ್ದವು. ಅಲ್ಲಿಲ್ಲಿ ಸುವೇಗಾದಂತಹ ಮೊಪೆಡ್ ಗಳು ‘ನಾವೂ ಇದ್ದೀವಿ’ ಎಂದು ಮುಖದೋರುತ್ತಿದ್ದವು. ಇಷ್ಟೆಲ್ಲಾ ಪರಟಾವಣೆ ಏತಕ್ಕೆಂದರೆ ನಾವೆಲ್ಲಾ ನಟರಾಜ ಸರ್ವೀಸಿನವರೇ ಆದರೂ, ನಮ್ಮಮ್ಮ ಮಾತ್ರ ಎಲ್ಲಿಗೆ ಹೋಗುವಾಗಲೂ ಅವರಿಗೆ ಕುದುರೆಗಾಡಿಯೇ ಬೇಕಿತ್ತು. ನಾವ್ಯಾರಾದರೂ ಅಮೀರ್ ಅಹ್ಮದ್ ಸರ್ಕಲ್ಲಿನವರೆಗೆ ಹೋಗಿ ತಂದು ಕೊಡಬೇಕಿತ್ತು. ಅಲ್ಲಿ ನಿಲ್ಲುತ್ತಿದ್ದ ಗಾಡಿಗಳಲ್ಲಿ ಮೊದಲ ಆಯ್ಕೆ ಸಲಾಮನ ಗಾಡಿ… ಕುದುರೆಯೆಂದರೆ ಸದಾ ಕಣ್ಮುಂದೆ ಬರುವ ಮಿರುಗುತ್ತಿದ್ದ ಕಂದು ಬಣ್ಣದ ಕುದುರೆ; ಹಸಿರು ಬಣ್ಣದ ಗಾಡಿಗೆ ಕೆಂಪಂಚಿನ ಮೇಲೆ ಚಿತ್ತಾರದ ಹೂಗಳು; ಗಾಡಿಯೊಳಗೆ ಹುಲ್ಲಿನ ಮೇಲೆ ಹಾಸಿದ್ದ ಗೋಣಿ ತಾಟು; ಅದರ ಮೇಲೊಂದು ಪುಟ್ಟ ಜಮಖಾನ ನಮ್ಮ ಸಲಾಮನ ರಥ. ಸಲಾಂ ನಮ್ಮಮ್ಮನ ಪರಮ ಶಿಷ್ಯರಲ್ಲೊಬ್ಬನಾಗಿದ್ದ. ಸರಿ; ಈಗ ನಮ್ಮ ಸಂಕ್ರಾಂತಿಗೆ ಮತ್ತೆ ಬರೋಣ. ಎಳ್ಳು, ಸಕ್ಕರೆ ಅಚ್ಚನ್ನು ತಯಾರಿಸಿಕೊಂಡಾದ ಮೇಲೆ ಮತ್ತೆ ಸಲಾಮನ ಗಾಡಿಯ ವಿಷಯಕ್ಕೆ ಬರೋಣ. ಹೆಂಗಸರಿಗಂತೂ ಈ ಹಬ್ಬ ಬಂದರೆ ಅದೆಷ್ಟು ಸಂಭ್ರಮವೋ.. ಹೊಸವರ್ಷ ಆರಂಭವಾಗುವಾಗಲೆ ಮನೆಗೆ ತರುವ ತಿಂಗಳ ದಿನಸಿ ಸಾಮಾನಿನ ಪಟ್ಟಿಯಲ್ಲಿ ಸಕ್ಕರೆ, ಬೆಲ್ಲ, ಹುರಿಗಡಲೆ, ಕಡಲೇ ಬೀಜ, ಕೊಬ್ಬರಿ ಮತ್ತು ಎಳ್ಳು ತಮ್ಮ ಹೆಸರನ್ನು ಬರೆಸಿಕೊಂಡು ಬಿಡುತ್ತಿದ್ದವು. ಜನವರಿ ಹದಿನಾಲ್ಕರಂದು ಇಲ್ಲವೇ ಹದಿನೈದರಂದು ಬರುವ ಸಂಕ್ರಾತಿ ಹಬ್ಬಕ್ಕೆ ಎರಡು ವಾರ ಮೊದಲೇ ಭರದಿಂದ ಸಿದ್ಧತೆಗಳು ಆರಂಭವಾಗುತ್ತಿದ್ದವು. ಆಗೆಲ್ಲಾ ಈಗಿನಷ್ಟು ಬೆಳ್ಳಗಿರುವ ಬೆಲ್ಲ ಸಿಗುತ್ತಿರಲಿಲ್ಲ. ಇರುವುದರಲ್ಲಿ ಬೆಳ್ಳಗಿರುವ ಬೆಲ್ಲವನ್ನು ಹುಡುಕಿಕೊಂಡು ಹೋಗಿ ತರಬೇಕಿತ್ತು. ಹೆಚ್ಚುವುದಕ್ಕೆ ಅಚ್ಚು ಬೆಲ್ಲವೇ ಸರಿ; ಹಿಡಿತಕ್ಕೂ ಸಿಗುತ್ತಿತ್ತು; ಹೆಚ್ಚು ಪುಡಿಯೂ ಆಗುತ್ತಿರಲಿಲ್ಲ. ಕೆಲವರು ಬೆಳ್ಳಗೆ ಕಾಣಬೇಕೆಂದು (ಅಥವಾ ಆ ರುಚಿಯೇ ಅವರಿಗೆ ಇಷ್ಟವಾಗುತ್ತಿತ್ತೇನೋ) ಬೆಲ್ಲದ ಬದಲು ಸಕ್ಕರೆಯ ಪಾಕವನ್ನು ತಟ್ಟೆಗೆ ಹೊಯ್ದು, ಕತ್ತರಿಸಿ ಎಳ್ಳಿನ ಮಿಶ್ರಣಕ್ಕೆ ಬೆರಸುತ್ತಿದ್ದರು. ಕೊಬ್ಬರಿ ವಿಪರೀತ ಗಟ್ಟಿ ಇರಬಾರದು; ಹೆಚ್ಚಲು ಅನುವಾಗುವಂತೆ ಸ್ವಲ್ಪ ಮೆತ್ತಗಿರಬೇಕು; ಬೆಳ್ಳಗಿರಬೇಕು; ಮುಗ್ಗುಲು ವಾಸನೆಯಾಗಲೀ, ಕೆಂಬಣ್ಣವಾಗಲೀ ಸಂಪೂರ್ಣವಾಗಿ ವರ್ಜ್ಯ. ಹೆಚ್ಚಿದ ನಂತರ ಬೆಲ್ಲ, ಕೊಬ್ಬರಿ ಎರಡೂ ಗರಿಗರಿಯಾಗುವ ಹಾಗೆ ಐದಾರು ದಿನ ಬಿಸಿಲಲ್ಲಿ ಒಣಗಬೇಕು. ಕಡಲೇ ಬೀಜವನ್ನು ಹುರಿಯುವುದೂ ಒಂದು ನಾಜೂಕಿನ ವಿಷಯವೇ. ಮಂದ ಉರಿಯಲ್ಲಿ ಬಿಡದೇ ಕೈಯಾಡುತ್ತಾ ಹುರಿಯಬೇಕು. ಇಲ್ಲವಾದರೆ ಸೀಯುವ ಕಾಳುಗಳು ಅಧಿಕ. ಸೀಯದಂತೆ ಕಾಪಾಡಲು ಕೆಲವರು ಮರಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಂಡು ಅದರ ಜೊತೆಯಲ್ಲಿ ಕಡಲೇಬೀಜವನ್ನು ಹಾಕಿ ಹುರಿದು ಜರಡಿಯಾಡಿ ತೆಗೆದುಕೊಳ್ಳುತ್ತಿದ್ದರು. ಈ ರೀತಿ ಹುರಿದದ್ದು ಒಂದೇ ಸಮನಾಗಿ ಹದವಾಗಿ ಬಾದಾಮಿಯ ಬಣ್ಣಕ್ಕೆ ಬರುತ್ತಿತ್ತು; ರುಚಿಯೂ ಉತ್ಕೃಷ್ಟವಾಗಿರುತ್ತಿತ್ತು. ನಮ್ಮ ಮನೆಯ ಬಳಿಯಿದ್ದ ಅಯ್ಯಂಗಾರರ ಮನೆಯಲ್ಲಿ ಕಾಫಿ ಬೀಜ ಹುರಿಯುವ ಒಲೆ ಇತ್ತು. ಒಂದು ಇಜ್ಜಿಲು ಒಲೆಯ ಮೇಲೆ ಅಡ್ಡಡ್ಡವಾಗಿ ಸಿಲೆಂಡರಿನಾಕಾರದ ಒಂದು ಮುಚ್ಚುಳವಿರುವ, ಹಿಡಿಕೆಯಿರುವ ಡಬ್ಬಿ; ಅದು ಒಲೆಯ ಕೆಂಡದ ಮೇಲೆ ಒಂದು ಅಂತರದಲ್ಲಿ ಕೂರುವಂತ ವ್ಯವಸ್ಥೆ. ಅದರೊಳಗೆ ಕಡಲೆಬೀಜವನ್ನು ತುಂಬಿ ಒಲೆಯ ಮೇಲಿಟ್ಟು ಹಿಡಿಕೆಯನ್ನು ತಿರುಗಿಸುತ್ತಿದ್ದರೆ ಆ ಡಬ್ಬಿ ಸುತ್ತುತ್ತಾ ಒಂದೇ ಹದದಲ್ಲಿ ಶಾಖವನ್ನು ಪಡೆದುಕೊಂಡು ಹದವಾಗಿ ಹುರಿದುಕೊಳ್ಳುತ್ತಿತ್ತು. ಇಂತಹ ಯಾವುದಾದರೂ ಒಂದು ರೀತಿಯಲ್ಲಿ ಕಡಲೇಕಾಯನ್ನು ಹುರಿದ ನಂತರ ಅದನ್ನು ಶುಭ್ರವಾದ ಒಂದು ಗೋಣಿ ಚೀಲದ ಮೇಲೆ ಹರಡಿಕೊಂಡು, ಅದರ ಮೇಲೆ ಮರದ ಮಣೆಯನ್ನು ಇಟ್ಟು ಉಜ್ಜಿದರೆ ಕಾಳುಗಳು ಸಿಪ್ಪೆಯನ್ನು ಬಿಟ್ಟುಕೊಂಡು ಬೇಳೆಗಳಾಗಿ ಒಡೆದುಕೊಳ್ಳುತ್ತಿದ್ದವು. ಆಮೇಲೆ ಅದನ್ನು ಮರದಲ್ಲಿ ಕೇರಿ, ಸಿಪ್ಪೆಯನ್ನೂ ನೂಕನ್ನೂ ತೆಗೆದು ಕೆಟ್ಟುಹೋದ, ಚೂರುಚೂರಾದ, ಸೀದುಹೋದ ಕಾಳುಗಳನ್ನೆಲ್ಲಾ ಆರಿಸಿ ತೆಗೆದು ಹಸನು ಮಾಡಬೇಕಿತ್ತು. ಈ ಕೆಲಸಕ್ಕೆ ನಾವು ಮಕ್ಕಳೆಲ್ಲಾ ಅತ್ಯಂತ ಉತ್ಸುಕರಾಗಿ ಸಹಾಯ ಮಾಡುತ್ತಿದ್ದೆವು. ಒಡೆದ, ಸ್ವಲ್ಪ ಸೀದ ಕಾಳುಗಳೆಲ್ಲಾ ನಮ್ಮ ಹೊಟ್ಟೆಗೇ ತಾನೆ! ಹಾಗಾಗಿ ಅಲ್ಪ ಸ್ವಲ್ಪ ಮುಕ್ಕಾದ ಕಾಳುಗಳಿಗೂ ಎಳ್ಳಿನೊಂದಿಗೆ ಬೆರೆಯುವ ಸೌಭಾಗ್ಯವಿರುತ್ತಿರಲಿಲ್ಲ. ಹುರಿಗಡಲೆಯಾದರೂ ಅಷ್ಟೇ ಹುರಿಯುವ ಕೆಲಸವೊಂದು ಇರುತ್ತಿರಲಿಲ್ಲ. ಹೀಗೆ ಆರಿಸುವಾಗ ಇನ್ನೂ ಸಿಪ್ಪೆಯಿಟ್ಟುಕೊಂಡ ಕಾಳುಗಳು, ಒಡೆದವು, ಕಡೆಗೆ ಸ್ವಲ್ಪ ಸೀಳಿಕೊಂಡವು ಕೂಡಾ ನಮ್ಮ ನೈವೇದ್ಯಕ್ಕೇ! ಆರಿಸುವಾಗ ಎಂಜಲು ಮಾಡಿಕೊಂಡು ತಿನ್ನಬಾರದು; ಎಲ್ಲವನ್ನೂ ಒಂದು ತಟ್ಟೆಗೋ, ಬಟ್ಟಲಿಗೋ ಹಾಕಿಕೊಂಡು ನಂತರ ತಿನ್ನಬಹುದು ಎನ್ನುವ ಅಮ್ಮನ ನಿಬಂಧನೆಗೆ, ಯಾವ ಪ್ರತಿರೋಧವೂ ಇಲ್ಲದೆ ಒಪ್ಪಿಕೊಂಡು ನಮಗೆ ಸಾಕೆನಿಸುವಷ್ಟು ಸರಕು ಸಿಕ್ಕ ತಕ್ಷಣ ಕೆಲಸ ಸಾಕಾಯಿತೆಂದು ಎದ್ದೋಡುತ್ತಿದ್ದೆವು. ಎಷ್ಟನ್ನು ಮಾಡಿಕೊಟ್ಟಿದ್ದರೆ ಅಷ್ಟೇ ಅಮ್ಮನ ಪುಣ್ಯ! ಎಳ್ಳನ್ನು ಶುದ್ಧಮಾಡುವುದೂ ಎರಡು ದಿನದ ಕೆಲಸವೇ. ಹಿಂದಿನ ದಿನವೇ ಎಳ್ಳನ್ನು ನೀರಿನಲ್ಲಿ ನೆನೆಯಿಟ್ಟು, ಮಾರನೆಯ ದಿನ ಬೆಳಗಿನ ಕೆಲಸವನ್ನೆಲ್ಲ ಮುಗಿಸಿಕೊಂಡು ಒಂದು ಶುಭ್ರವಾದ ಗೋಣಿಯ ಮೇಲೆ ನೆಂದ ಎಳ್ಳನ್ನು ಸ್ವಲ್ಪ ಸ್ವಲ್ಪವನ್ನೇ ಹಾಕಿಕೊಳ್ಳುತ್ತಾ ಅದು ಬೆಳ್ಳಗಾಗುವ ತನಕ ಉಜ್ಜುತ್ತಿದ್ದರು. ಎಳ್ಳು ಎಷ್ಟು ಬೆಳ್ಳಗಾಗಿದೆ ಎನ್ನುವುದರ ಮೇಲೆ ಉಜ್ಜುವವರ ಕಲಾನೈಪುಣ್ಯ ನಿರ್ಧಾರವಾಗುತ್ತಿತ್ತು. ಎಷ್ಟೋ ಜನರು ಕರಿಎಳ್ಳನ್ನು ಉಜ್ಜಿ ಬೆಳ್ಳಗೆ ಮಾಡಿರುವುದನ್ನೂ ನೋಡಿದ್ದೇನೆ. ಹೀಗೆ ಉಜ್ಜಿದ ಎಳ್ಳಿನ ಸಿಪ್ಪೆಯನ್ನೆಲ್ಲಾ ಕೇರಿ ಆರಿಸಿ ನಂತರ ಮಂದ ಉರಿಯ ಮೇಲೆ ಬಾಣಲೆಯ ಮೇಲೆ ಸ್ವಲ್ಪ ಸ್ವಲ್ಪವನ್ನೇ ಹಾಕಿಕೊಂಡು, ಹೊಸ ಪೊರಕೆ ಕಡ್ಡಿಯನ್ನು ಮಧ್ಯಭಾಗಕ್ಕೆ ಕಟ್ಟಿಕೊಂಡು, ಕಡ್ಡಿಯ ಕಡೆಯ ಭಾಗದಿಂದ ಅದನ್ನು ಘಮ್ಮೆನ್ನುವ ಹಾಗೆ, ಹದವಾಗಿ ಹುರಿಯುತ್ತಿದ್ದರು. ಹೀಗೆ ವಾರ, ಹತ್ತು ದಿನದ ಶ್ರಮದ ನಂತರ ಸಂಕ್ರಾಂತಿ ಎಳ್ಳು ತಯಾರಾಗುತ್ತಿತ್ತು. ಯಾರ ಮನೆಯ ಎಳ್ಳು ಬಂದರೂ ಅದರ ಬಣ್ಣ, ರುಚಿ, ವಾಸನೆಗಳ ಮೌಲ್ಯಮಾಪನವಾಗಿ ಅವರ ಪರಿಶ್ರಮವು ವಿಮರ್ಶೆಗೆ ಒಳಗಾಗುತ್ತಿತ್ತು! ಪೂರ್ತಿ ತಯಾರಾಗಿರುವ ಮಿಶ್ರಣ, ಇಲ್ಲವೇ ಅಭಿರುಚಿಗೆ ತಕ್ಕಂತೆ ಬೆರೆಸಿಕೊಳ್ಳಲು ಸಿದ್ಧಪಡಿಸಿದ ವಸ್ತುಗಳು ಸಿಗುತ್ತಿರುವ ಈ ದಿನಗಳಲ್ಲಿ ಅಂದಿನ ಕಷ್ಟವೂ ಇಲ್ಲ; ಸಂಭ್ರಮವೂ ಇಲ್ಲ ಬಿಡಿ. ಇನ್ನು ಸಕ್ಕರೆ ಅಚ್ಚನ್ನ ತಯಾರಿಸುವುದಂತೂ ಒಂದು ದೊಡ್ಡ ಕಲೆಯೇ. ಪರಿಶ್ರಮವೂ ಬಹಳ. ಹಳಕುಹಳಕಾದ ಸಕ್ಕರೆಯನ್ನು ಅದು ಮುಳುಗುವಷ್ಟೇ ನೀರಿನಲ್ಲಿ ನೆನೆಯಿಟ್ಟು ನಂತರ ಅದನ್ನು ಕುದಿಸಿ, ಕುದಿಯುತ್ತಿರುವಾಗ ಒಮ್ಮೆ ಹಾಲು ಹಾಕಿ ಅದನ್ನು ಬೆಳ್ಳಗಿರುವ ಪಂಚೆಯ ಬಟ್ಟೆಯಲ್ಲಿ ಶೋಧಿಸಿಕೊಂಡು, ನಂತರ ಇನ್ನೊಮ್ಮೆ ಮೊಸರು ಹಾಕಿ ಕುದಿಸಿ ಶೋಧಿಸಿದ ಮೇಲೆ ಪಾಕ ಎಷ್ಟು ಬೆಳ್ಳಗಾಯಿತೆಂಬುದರ ಮೇಲೆ ಇನ್ನೊಮ್ಮೆ ಕುದಿಸಿ ಶುಚಿಮಾಡಬೇಕೇ ಎನ್ನುವುದು ನಿರ್ಧಾರವಾಗುತ್ತಿತ್ತು. ಅಟ್ಟದ ಮೇಲಿಟ್ಟಿದ್ದ ಮರದ ಅಚ್ಚುಗಳನ್ನು ಹಿಂದಿನ ದಿನವೇ ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಯಲು ಬಿಡುತ್ತಿದ್ದರು. ಇನ್ನು ಅಚ್ಚು ಹಾಕುವ ಕಾರ್ಯಕ್ರಮಕ್ಕಂತೂ ಕನಿಷ್ಟ ಇಬ್ಬರಾದರೂ ಬೇಕೇ ಬೇಕು. ನಾಲ್ಕೈದು ಜನ ಸೇರಿದರೆ ಕೆಲಸ ಸುಲುಭ. ಹಾಗಾಗಿ ಅಕ್ಕಪಕ್ಕದವರೆಲ್ಲಾ ಸೇರಿಕೊಂಡು ಸಂತೋಷವಾಗಿ, ಸಹಕಾರಿ ಮನೋಭಾವದಿಂದ ಮಾಡುತ್ತಿದ್ದುದೇ ಹೆಚ್ಚು. ಶುದ್ಧವಾದ ಪಾಕವನ್ನು ಒಂದೋ ಎರಡೋ ಸೌಟನ್ನು ಒಂದು ತಪ್ಪ ತಳದ ಪಾತ್ರೆಗೆ ಹಾಕಿಕೊಂಡು ಪುಟ್ಟ ಇಜ್ಜಿಲ ಒಲೆಯ ಮೇಲೋ, ಇಲ್ಲವೇ ಬತ್ತಿಯ ಸೀಮೆಣ್ಣೆಯ ಸ್ಟೌವ್ ಮೇಲೋ ಬಿಸಿ ಮಾಡುತ್ತಾ, ಆಗಾಗ ಪಾಕದ ಹದ ನೋಡುತ್ತಾ, ಪಾಕ ಸೌಟಿನಿಂದ ಪಾತ್ರೆಯವರೆಗೆ ಒಂದು ನೂಲಿನಂತೆ ನಿಂತರೆ ಅದು ಪಾಕದ ಸರಿಯಾದ ಹದ. ತಕ್ಷಣ ಅದನ್ನು ಕಂಚಿನ ಬೋಗುಣಿಗೆ ಸುರಿದುಕೊಂಡು ಸಿದ್ಧಮಾಡಿಟ್ಟುಕೊಂಡಿದ್ದ ಇನ್ನೊಂದು ಒಬ್ಬೆ ಪಾಕವನ್ನು ಒಲೆಯ ಮೇಲಿಟ್ಟು, ಬೋಗುಣಿಯಲ್ಲಿದ್ದ ಪಾಕವನ್ನು ಸೌಟಿನಿಂದ ತಿಕ್ಕುತ್ತಾ ಅದು ಮಂದ ಬಿಳಿಛಾಯೆಗೆ ತಿರುಗಿದೊಡನೆ, ನೀರಿನಿಂದ ಹೊರತೆಗೆದು ಮಲ್ ಪಂಚೆಯ ಬಟ್ಟೆಯಲ್ಲಿ ಒರೆಸಿ ಜೋಡಿಸಿ ದಾರ ಕಟ್ಟಿಯೋ, ರಬ್ಬರ್ ಬ್ಯಾಂಡ್ ಹಾಕಿಕೊಂಡೋ ತಯಾರಾಗಿ ಮಣೆಯ ಮೇಲೆ ಕುಳಿತಿರುತ್ತಿದ್ದ ಅಚ್ಚಿನ ಬಾಯಿಗೆ ನಾಜೂಕಾಗಿ ಸುತ್ತಲೂ ಚೆಲ್ಲದಂತೆ, ಹಾಗೆ ಸುರಿಯುವಾಗ ಪಾಕ ಪೂರ್ತಿಯಾಗಿ ಒಳಸೇರುವಂತೆ ಕುಟ್ಟಿ ಕುಟ್ಟಿ ಅದು ತುಂಬುವಷ್ಟು ಪಾಕವನ್ನು ತುಂಬಿಸುವುದು ಜಾಣತನದ ಕಲೆಯೇ. ಅದು ಒಣಗಿದ ಮೇಲೆ ಮೇಲಿನ ಹೆಚ್ಚಿನ ಭಾಗವನ್ನು ಹೆರೆದು, ಅದರ ಕಟ್ಟನ್ನು ಬಿಚ್ಚಿ ನಾಜೂಕಾಗಿ ಹಿಡಿದುಕೊಂಡು, ಎಚ್ಚರಿಕೆಯಿಂದ ಅಚ್ಚಿನಿಂದ ಬಿಡಿಸಿ ತಟ್ಟೆಯ ಮೇಲಿರಿಸಿದರೆ ಅಲ್ಲಿಗೆ ಅದರ ಕೆಲಸ ಸಂಪೂರ್ಣ. ಕೆಲವೊಮ್ಮೆ ಕೋಳಿಯ ಕಾಲೋ, ಬಸವನ ಮೂತಿಯೋ, ಮೀನಿನ ಬಾಲವೋ ಮುರಿದು ಕೈಗೆ ಬರುತ್ತಿತ್ತು. ಆಗ ತಕ್ಷಣವೇ ತಿಕ್ಕುತ್ತಿದ್ದ ಬಿಸಿ ಪಾಕದಲ್ಲಿ ಅದರ ಅಂಟಿಕೊಳ್ಳಬೇಕಿರುವ ಭಾಗವನ್ನು ಸ್ವಲ್ಪ ಅದ್ದಿ ಇನ್ನೊಂದು ಭಾಗಕ್ಕೆ ಅಂಟಿಸಿ, ಹಾಗೆಯೇ ಇಟ್ಟುಕೊಂಡಿದ್ದು, ಸ್ವಲ್ಪ ಅಂಟಿಕೊಂಡ ನಂತರ ತಟ್ಟೆಯ ಮೇಲೆ ಕೆಲಕಾಲ ಮಲಗಿಸಿದರೆ ಶಸ್ತ್ರಕ್ರಿಯೆಯಾದ ರೋಗಿ ಆರೋಗ್ಯವಂತನಾಗಿ ಏಳುವಂತೆ, ಸ್ವಲ್ಪ ಕಾಲದ ನಂತರ ಎದ್ದು ನಿಲ್ಲಲು ಶಕ್ತವಾಗುತ್ತಿದ್ದವು. ಈ ಶಸ್ತ್ರಕ್ರಿಯೆ ವಿಫಲವಾದರೆ ಕೋಳಿ, ಮೀನು, ಮಂಟಪ, ಜಿಂಕೆಗಳೆಲ್ಲಾ ಸುತ್ತಲೂ ಬಕಗಳಂತೆ ಕಾಯುತ್ತಿದ್ದ ಮಕ್ಕಳ ಬಾಯಿ ಪಾಲಾಗುತ್ತಿದ್ದವು! ಮಣೆಯ ಮೇಲೆ ಅಲ್ಪ ಸ್ವಲ್ಪ ಚೆಲ್ಲಿದ್ದ ಪಾಕ ಮತ್ತು ಮಕ್ಕಳ ಬಾಯಿಗೆ ಬೀಳದೆ ಉಳಿದುಕೊಂಡಿದ್ದ ತುಂಡುಗಳು ಬಣ್ಣವನ್ನು ಬೆರೆಸಿಕೊಂಡು ಮತ್ತೊಮ್ಮೆ ಜನ್ಮ ತಾಳುತ್ತಿದ್ದವು. ಒಂದೇ ಅಚ್ಚಿನಲ್ಲಿ ಎರಡು ಮೂರು ಬಣ್ಣದ ಪಾಕವನ್ನು ಸುರಿದು ಬಣ್ಣ ಬಣ್ಣವಾದ ಸಕ್ಕರೆಗೊಂಬೆಗಳನ್ನು ಮಾಡುವ ಪ್ರವೀಣರೂ ಇದ್ದರು! ಇದೇ ಸಕ್ಕರೆ ಪಾಕವನ್ನು ಉಪಯೋಗಿಸಿಕೊಂಡು ಬಾಣಲೆಗೆ ಎಳ್ಳನ್ನೋ, ಸೀಮೇ ಅಕ್ಕಿಯನ್ನೋ ಸ್ವಲ್ಪ ಹಾಕಿಕೊಂಡು, ಸ್ವಲ್ಪ ಸ್ವಲ್ಪವಾಗಿ ಅದಕ್ಕೆ ಸಕ್ಕರೆ ಪಾಕವನ್ನು ಹಾಕಿಕೊಳ್ಳುತ್ತಾ ಎಳ್ಳನ್ನು ಹುರಿಯುವ ಹಾಗೆ ನಿಧಾನವಾಗಿ ಹುರಿಯುತ್ತಾ ಕುಸುರೆಳ್ಳನ್ನೂ ಕೆಲವರು ಮಾಡುತ್ತಿದ್ದರು. ಹಾಗೆಯೇ ಇದೇ ಪಾಕವನ್ನು ಚೆನ್ನಾಗಿ ಉಜ್ಜಿ ಬೆಣ್ಣೆಯ ಉಂಡೆಯಂತೆ ಮಾಡಿಕೊಂಡು ಅದರಲ್ಲಿ ಮಣಿಗಳನ್ನು ಮಾಡಿ, ಅದನ್ನು ರಸ್ತು ಗುಂಡಿನೊಡನೆ ಪೋಣಿಸಿ, ಸರವನ್ನು ಮಾಡುತ್ತಿದ್ದರು. ಸಂಜೆ ಅದನ್ನು ಎಳೆಯ ಮಕ್ಕಳ ಕೊರಳಿಗೆ ಹಾಕಿ, ಕಬ್ಬಿನ ತುಂಡು, ಬೋರೆ ಹಣ್ಣು (ಎಲಚಿ ಹಣ್ಣು) ಮತ್ತು ಕಾಸನ್ನು ಸೇರಿನ ತುಂಬಾ ತುಂಬಿಸಿ ಅದನ್ನು ಮಕ್ಕಳ ತಲೆಯ ಮೇಲೆ ಎರೆದು ಆರತಿ ಮಾಡುವ ಪದ್ಧತಿಯೂ ಕೆಲವರಲ್ಲಿ ಇತ್ತು. ಇಡೀ ಸೇರಿಗೆಲ್ಲಾ ಒಂದೆರಡು ರೂಪಾಯಿನಷ್ಟು ಚಿಲ್ಲರೆ ಕಾಸುಗಳಿದ್ದರೂ ಅದು ಬೀಳುವುದೇ ತಡ ಎಲ್ಲರೂ ಅದನ್ನು ಬಾಚಿಕೊಂಡು ಸಂಭ್ರಮಿಸುತ್ತಿದ್ದುದೇ ಒಂದು ಚಂದ! ಈಗ ಮತ್ತೆ ನಮ್ಮ ಸಲಾಮನ ವಿಚಾರಕ್ಕೆ ಬರೋಣ. ಎಳ್ಳು, ಸಕ್ಕರೆ ಅಚ್ಚು ಮಾಡಿದರಷ್ಟೇ ಆಗಲಿಲ್ಲ; ಅದನ್ನು ಮಾಡುವುದೇ ಬಾಳೆಹಣ್ಣು ಮತ್ತು ಕಬ್ಬಿನೊಂದಿಗೆ ಬಂಧು, ಬಳಗ, ನೆಂಟರಿಷ್ಟರು, ಸ್ನೇಹಿತರ ಮನೆಗೆ ಹೋಗಿ ಬೀರುವುದಕ್ಕೆ. ಅಕ್ಕಪಕ್ಕದ ಮನೆಗಳಿಗೇನೋ ಹೋಗಿ ಬೀರಿ ಬರಬಹುದು. ದೂರದೂರದ ಮನೆಗಳಿಗೆ ನಡೆದುಕೊಂಡು ಹೋಗುವುದಾದರೆ ಅದೇ ಸಂಜೆಯಲ್ಲಿ ಎಲ್ಲರ ಮನೆಗೂ ಹೋಗಿ ಪೂರೈಸಲು ಸಾಧ್ಯವಿಲ್ಲ. ಹಾಗಾಗಿ ಆದಿನ ನಮಗೆ ಸಲಾಮನ ಗಾಡಿಯ ರಥಯಾತ್ರೆ! ನಮ್ಮಮ್ಮ ಎಲ್ಲಿಗೆ ಹೋಗಬೇಕಾದರೂ ಹೆಚ್ಚಾಗಿ ಅವನ ಗಾಡಿಯಲ್ಲೇ ಹೋಗುತ್ತಿದ್ದುದರಿಂದ, ಅವನಿಗೆ ನಮ್ಮ ಬಂಧು, ಬಳಗ, ಗುರುತು ಪರಿಚಯದವರೆಲ್ಲರ ಮನೆಯೂ ಗೊತ್ತಿತ್ತು. ಆದಿನ ಮದ್ಯಾನ್ಹ ನಾಲ್ಕು ಗಂಟೆಯ ಒಳಗಾಗಿ ಬರುವಂತೆ ಅಮ್ಮ ಅವನಿಗೆ ಮೊದಲೇ ಹೇಳಿಟ್ಟಿರುತ್ತಿದ್ದರು. ಅಂತೆಯೇ ಅವನು ಬಂದಾಗ ನಮ್ಮನ್ನು ಕರೆದುಕೊಂಡು ಹೋಗಬೇಕಾದ ಒಂದು ಇಪ್ಪತ್ತೈದು, ಮೂವತ್ತು ಮನೆಗಳನ್ನು ಹೇಳುತ್ತಿದ್ದರು. ಆರು ವರ್ಷದ ನಾನು, ನಾಲ್ಕು ವರ್ಷದ ನನ್ನ ತಂಗಿ ಇಬ್ಬರನ್ನೇ
ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ Read Post »
ಲಲಿತ ಪ್ರಬಂಧ ಪರಿವರ್ತನೆಗೆ ದಾರಿ ಯಾವುದಾದರೇನು? ನಾಗರೇಖಾ ಗಾಂವಕರ್ ಹೊಸ ಸುತ್ತೋಲೆಯಂತೆ ಪದವಿ-ಪೂರ್ವ ಹಂತಕ್ಕೂ ಪ್ರಾರ್ಥನೆಯನ್ನು ಕಡ್ಡಾಯಗೊಳಿಸಿ ಇಲಾಖೆ ಆದೇಶ ಹೊರಡಿಸಿದ್ದು ಪಡ್ಡೆ ಹುಡುಗರಿಗೆ ಕೊಂಚವೂ ಇಷ್ಟವಿಲ್ಲ. ಆಗಾಗ ಆ ಬಗ್ಗೆ ತಕರಾರು ಮಾಡುವ ಗುಂಪು ಇದ್ದೇ ಇತ್ತು. ಆದರೂ ಪ್ರಾಚಾರ್ಯರು ಅದಕ್ಕೆಲ್ಲ ಅವಕಾಶ ಕೊಡದೆ ಕಡ್ಡಾಯ ಎಂದು ನೋಟೀಸು ತೆಗೆದು ಒತ್ತಡ ಹೇರಿದ್ದರು. ಹಾಗಾಗಿ ವಿದ್ಯಾರ್ಥಿಗಳು ಪ್ರಾರ್ಥನೆಗೆ ಹಾಜರಾಗುವುದು ಅನಿವಾರ್ಯವಾಗಿತ್ತು. ವಾಣಿಜ್ಯ ವಿಭಾಗದ ಆ ತರಗತಿಯಲ್ಲಿ ಇರುವುದು ಬರಿಯ ಇಪ್ಪತೆಂಟು ವಿದ್ಯಾರ್ಥಿಗಳು ಮಾತ್ರ. ಉಳಿದೆಲ್ಲ ಮಕ್ಕಳು ಸಮಯಕ್ಕೆ ಸರಿಯಾಗಿ ಬಂದರೆ ಆ ಹುಡುಗ ಮಾತ್ರ ದಿನವೂ ತಡವಾಗಿಯೇ ಕಾಲೇಜಿಗೆ ಬರುತ್ತಿದ್ದ. ಕೈಯಲ್ಲಿ ಒಂದು ನೋಟ್ ಪುಸ್ತಕ ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ. ಹಾಕಿಕೊಂಡ ಯೂನಿಫಾರ್ಮ ಅಲ್ಲಲ್ಲಿ ಕೊಳೆ ಮೆತ್ತಿಕೊಂಡಂತೆ ಇದ್ದರೆ ಕೂದಲನ್ನು ವಿಕಾರ ಶೈಲಿಯಲ್ಲಿ ಕ್ರಾಪು ಹೊಡೆಸಿಕೊಂಡಿದ್ದ.ಆತ ಬರುವ ಗತ್ತು ಮಾತ್ರ ಥೇಟ್ ಹೀರೋ, ಬಹುಶಃ ಕನ್ನಡದ ದರ್ಶನ್ ಇಲ್ಲವೇ ಯಶ್ ಇವರ ನಡಿಗೆಯಿಂದ ಪ್ರಭಾವಿತನಾಗಿದ್ದಂತೆ ಇತ್ತು. ಪ್ರತಿದಿನ ಪ್ರಾರ್ಥನೆ ತಪ್ಪಿಸುವ, ತಡವಾಗಿ ಬರುವ ವಿದ್ಯಾರ್ಥಿಗಳನ್ನು ಹಿಡಿಯಲು ಕ್ಲಾಸರೂಮಿನ ಹೊರಗೆ ಉಪನ್ಯಾಸಕರ ದಂಡು ಕಾಯುತ್ತ ಕುಳಿತಿರುತ್ತಿದ್ದರು. ಆದರೂ ಈ ಹುಡುಗ ಮಾತ್ರ ನನಗಾರೂ ಸಮನಿಲ್ಲ, ಎಂಬ ಉಡಾಫೆಯಲ್ಲಿ ತಡವಾಗಿಯೇ ಬರುತ್ತಿದ್ದ.. ಕನ್ನಡ ಉಪನ್ಯಾಸಕರಿಗೂ ಅವನಿಗೂ ಯಾವಾಗಲೂ ಎಣ್ಣೆ ಸೀಗೆಕಾಯಿ ಸಂಬಂಧ.ಎಂದಿನಂತೆ ಈತ ಕಂಡದ್ದೆ ತಡ, ಅವರು ಮಂಗಳೂರಿನ ಭಾಷಾ ಶೈಲಿಯಲಿ “ ಏ ಹುಡುಗಾ, ಕಾಲೇಜು ಪ್ರಾರ್ಥನೆ ಎಷ್ಟಕ್ಕೋ? ಮತ್ತೀಗ ಎಷ್ಟು ಗಂಟೆ? ನಿಂಗೆ ಮಂಡೆ ಗಿಂಡೆ ಉಂಟಾ? ನೀನೊಬ್ಬ ಸ್ಟೂಡೆಂಟಾ?” ಎಂದು ಗರಂ ಆಗಿ ಗುರಗುಟ್ಟಿದರು. “ಸರ್ ಸ್ನಾನ ಮಾಡಾಕ್ ಲೇಟ್ ಆಯ್ತ ರೀ, ನಮ್ಮವ್ವ ಬ್ಯಾಗ್ ಏಳಾಂಗಿಲ್ಲಾರೀ, ನೀರು ಕಾಯಿಸಿ ಒಲೆ ಹಚ್ಚಿ ನೀರು ಕಾಯುವರೆಗೂ ನಾನ್ ಎಳಾಂಗಿಲ್ಲಾರೀ,” ಎಂದ. ತೀರಾ ಸಲೀಸಾಗಿ ಸುಳ್ಳು ಹೇಳುತ್ತಿದ್ದಾನೆ ಎಂಬ ಗ್ರಹಿಕೆ ಬರುವಂತೆ ನುಡಿಯುತ್ತಿದ್ದರೆ ಕನ್ನಡ ಶಿಕ್ಷಕರು ನಖಶಿಖಾಂತ ಉರಿಯತೊಡಗಿದರು. ಇನ್ನು ಮುಂದೆ ಹೀಗೆ ತಡಮಾಡುವುದಿಲ್ಲವೆಂದು ವಿನಂತಿಸಿ ಅಂತೂ ಆತ ತರಗತಿಗೆ ನಡೆದ.ಇಂಗ್ಲಿಷು ಅಷ್ಟಾಗಿ ಬರದ ಆತ ಸಂಸೃತ ಆಯ್ದುಕೊಂಡಿದ್ದ.ಮೊದಲ ತರಗತಿ ಸಂಸ್ಕೃತ. ಪಾಠ ಮಾಡಬಂದವರು ನಡುವಯಸ್ಸಿನ ಆದರೂ ನವ ಯುವಕನ ಪೋಸು ಕೊಡುತ್ತಿದ್ದ ಆರ್ ಕೆ. ಅವರ ಮುಂದಿನ ಹೆಸರನ್ನು ನಾನು ಹೇಳುವುದು ನೀವು ಕೇಳುವುದು ಬೇಡವೇ ಬೇಡ.ಆ ದಿನದ ಪಾಠದ ವಿಷಯ ಪಾಪ ಪುಣ್ಯ. ಪಾಪ ಪುಣ್ಯಗಳ ಬಗ್ಗೆ ಉಪನ್ಯಾಸಕರು ದೀರ್ಘವಾಗಿ ಭಾಷಣ ಮಾಡತೊಡಗಿದರು.ವ್ಯಾಸರ ಭಾರತವನ್ನು, ಹದಿನೆಂಟು ಪುರಾಣಗಳ ಆಧಾರಗಳನ್ನು ಉಲ್ಲೇಖಿಸಿ “ಪರರಿಗೆ ಉಪಕಾರ ಮಾಡುವುದೇ ಪುಣ್ಯ,ಪರರ ಪೀಡನೆಯೇ ಪಾಪ” ಎನ್ನುತ್ತಿದ್ದರು. ತಟ್ಟನೆ ಆ ವಿದ್ಯಾರ್ಥಿ ಎದ್ದು ಪ್ರಶ್ನಿಸಿದ “ಸರ್, ಸುಂದರವಾಗಿರುವ ಹುಡುಗಿಯರಿಗೆ ಹೆಚ್ಚು ಅಂಕ ನೀಡಿ, ಬುದ್ದಿವಂತ ಆದರೆ ತುಂಟ ಹುಡುಗರಿಗೆ ಕಡಿಮೆ ಅಂಕ ನೀಡುವುದು ಪಾಪವೋ? ಅಥವಾ ಪುಣ್ಯವೋ?” ಎಂದ. ಉತ್ತರ ಕೊಡಲಾಗದ ಉಪನ್ಯಾಸಕರು ಬೆಸ್ತುಬಿದ್ದು ತಡಬಡಿಸತೊಡಗಿದರು. ಮತ್ತೆ ಉಪನ್ಯಾಸಕರು ಉಪನ್ಯಾಸ ನೀಡದೆ, “ಯಾಕೋ ಹನುಮ ಬೆಳ್ಳಂಬೆಳಿಗ್ಗೆ ಅಮಲೇರಿದಂಗೆ ಬಡಬಡಿಸ್ತಿ.ಚಂದಾ ಗಿಂದ ತಗೊಂಡು ನನಗೇನಾಗಬೇಕು.ಪಾಠ ಸರ್ಯಾಗ ಕಲಿಯೂದ ಕಲಿ. ಬಡವ “ ಎಂದು ಗದರಿಸಿ“ಎಲ್ರೂ ಇಲ್ಲಿ ಕೇಳಿ, ಒಂದು ಸುಭಾಷಿತ ಕೊಡ್ತಿನಿ, ಬರ್ಕೋಳ್ಳಿ” ಎಂದು ಹೇಳಿ “ಮರ್ಕಟಸ್ಯ ಸುರಾಪಾನಂ ಮಧ್ಯೆ ವೃಶ್ಚಿಕ ದ್ವಂಶನಂ ತನ್ಮದ್ಯೆ ಭೂತಸಂಚಾರೋ ಯದ್ವಾತದ್ವಾ ಭವಿಷ್ಯತಿ” ಎಂದು ಬರೆಸಿ ನಾಳೆ ಅದರ ಕನ್ನಡ ಅನುವಾದ ಉತ್ತರ ಬರೆದು ತರುವಂತೆ ಹೇಳಿದರು.ಯಾರು ತರುವುದಿಲ್ಲವೋ ಅವರಿಗೆ ಇಂಟರ್ನಲ್ ಮಾರ್ಕ್ಸ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದು ಹೊರನಡೆದರು. ಅದು ಇಂಟರ್ವೆಲ್. ಹನುಮ ಮತ್ತವನ ಗೆಳೆಯರು ತಲೆಕೆರೆದು ಕೊಳ್ಳುತ್ತ ಅನುವಾದ ಮಾಡತೊಡಗಿದರು. ಅಲ್ಲೆ ಒಬ್ಬ ಗೆಳೆಯ ಅಂದ “ಹನಮ್ಯಾ ಅವ್ರ ನಿಂಗ್ ಇದನ್ನ ಟೊಂಟಾಗ್ ಕೊಟ್ಟಾಂಗೈತಲೇ!.ಮರ್ಕಟ ಅಂದ್ರ ಮಂಗಾ ಅಲ್ಲೇನ್ಲೇ? ಮತ್ತ ನಿನ್ನ ಹೆಸರು ಹನುಮ, ಸರಿಯಾಯ್ತ ಮಗನೇ, ಸೇರಿಗೆ ಸವ್ವಾಸೇರು. ನೀ ಸ್ಟುಡೆಂಟಲೇ, ಅವ್ರು ಲೆಕ್ಚ್ರು. ನಿನ್ನ ಕೈಯಾಗ ಅವರನ್ನ ಯಾಮಾರ್ಸೋದಕ್ಕ ಆಗಾಂಗಿಲಲೇ” ಎಂದ. ಎಳೆ ಪ್ರಾಯದ ಬಿಸಿರಕ್ತದ ಹನುಮನ ಬಡಕಲು ಶರೀರವೂ ಕೊತಕೊತ ಕುದಿಯಿತು. ಅವನೆಂದ “ ಹೌದಾ! ಹಾಗಾಂದ್ರೆ ನೋಡೆ ಬೀಡುವಾ. ನಾನ ಅದರ ಉತ್ತರ ಬರಿದೆ ಬರಿತೀನಿ. ಸರ್ ಯಾವಾಗ್ಲೂ ನೆನಪಿಡೋ ಹಾಂಗ ಬರಿತೀನಿ. ಈಗ್ಲೆ ಅದನ್ ಹೇಳಾಂಗಿಲ್ಲ, ಮಾಡೇ ತೋರಸ್ತೀನಿ. ನೋಡ್ಲೇ ” ಅಂದ. ಆದರೂ ಅವನ ಮುಖ ಜೋತು ಬಿದ್ದಿತ್ತು. ತಾನು ಮಾಡುವುದು ಸರಿಯೋ? ತಪ್ಪೋ? ಡೋಲಾಯಮಾನ ಮನಸ್ಥಿತಿ. ಆದರೂ ಹುಡುಗರೆದುರಿಗೆ ತಾನು ಹೀರೋ ಆಗಬೇಕೆನ್ನುವ ಛಲ. ಇಷ್ಟಾಗಿಯೂ ಶಿಕ್ಷಕರ ಅಂತಃಕರಣದ ಉದಾರೀಕರಣ ಬಲ್ಲವನಾಗಿದ್ದ. ತಾನಾದರೋ ಹಾಗೆ ಮಾಡಿದರೆ ಉಪನ್ಯಾಸಕರು ಮಹಾ ಏನು ಮಾಡಿಯಾರು? ಒಂದೆರಡು ಬೈದು ಬುದ್ದಿ ಹೇಳತಾರು,ಅಷ್ಟೇ ತಾನೆ? ನೋಡೆ ಬಿಡುವ ನನ್ನ ಜಿದ್ದು ಹೆಚ್ಚೋ ಆರ್.ಕೆ ಜಿದ್ದು ಹೆಚ್ಚೋ? ಎಂದುಕೊಳ್ಳುತ್ತ ಮಾರನೆ ದಿನ ತರಗತಿಗೆ ಕೊಂಚ ಮೊದಲೆ ಬಂದ. ಮೊದಲನೆ ತರಗತಿಯೇ ಸಂಸ್ಕೃತ. ಮೊದಲೆ ಕಾಲೇಜಿಗೆ ಬಂದ ಆತ ಮಾಡಿದ ಕೆಲಸವೆಂದರೆ ಬ್ಲಾಕ್ ಬೋರ್ಡನ್ನು ಚೆನ್ನಾಗಿ ಒರೆಸಿ, ಒಂದು ಮೂಲೆಯಿಂದ ಮಂಗನ ಆಗಮನದ ಚಿತ್ರ ಬಿಡಿಸಿದ. ಆದರೆ ಅದರ ಮೂತಿ ಮಾತ್ರ ತನ್ನ ಮುಖದಂತೆ ಬರೆದ.ಕೈಯಲ್ಲಿ ಬಾಟಲ್ ಹಿಡಿಸಿದ, ಮಂಗನ ಕೆಳಭಾಗದಲ್ಲಿ ಎಡನಿತಂಬಕ್ಕೆ ಕಚ್ಚುತ್ತಿರುವ ಚೇಳೊಂದನ್ನು ಬಿಡಿಸಿದ.ಈಗ ಮತ್ತೊಂದು ಎರಡನೆಯ ಚಿತ್ರ ಬರೆದ ಮಂಗನ ದಶಾವತಾರದ ಚಿತ್ರ.ಅಮಲೇರಿದ ಮಂಗನ ಮುಖದ ಹನುಮನ ಮಂಗಚೇಷ್ಟೆಯ ಚಿತ್ರ, ಕೊನೆಯಲ್ಲಿ ಮಂಗನಿಂದ ಬಚಾವಾಗಲು ಮರವೇರಿದ ಉಪನ್ಯಾಸಕರ ಚಿತ್ರ ಬರೆದು ನಿರುಮ್ಮಳನಾದ. ಅಷ್ಟೇ ಅಲ್ಲ ಯಾರಾದರೂ ಅದನ್ನು ಅಳಿಸಬಹುದೆಂದು ತರಗತಿ ಬಿಟ್ಟು ಹೊರಬರದೆ ಕಾಯುತ್ತ ಕುಳಿತ. ಸಮಯವಾಗುತ್ತಲೇ ತರಗತಿ ಭರ್ತಿಯಾಗತೊಡಗಿತು. ಹೆಣ್ಣು ಹುಡುಗಿಯರು ಕಣ್ಣು ಕಣ್ಣು ಬಿಟ್ಟು ಈ ಅದ್ಭುತ ಚಿತ್ರ ನೋಡಿ ವಿವರಿಸತೊಡಗಿದರು. ಈಗ ಅದಕ್ಕೆ ರೆಕ್ಕೆ ಪುಕ್ಕ ಎಲ್ಲ ಹುಟ್ಟಿಕೊಂಡವು.ಎಲ್ಲರ ಮುಂದೆ ಕಾಲರ್ ಎತ್ತಿ ಎತ್ತಿ ಹನುಮ ಭುಜ ಕುಣಿಸಿದ.ಪ್ರಾರ್ಥನೆಗೂ ಹೋಗದೆ ಉಪನ್ಯಾಸಕರು ಬರುವವರೆಗೂ ಚಿತ್ರ ಕಾಯುತ್ತ ಕುಳಿತ. ಕೈಯಲ್ಲೊಂದು ಹಾಜರಿ ಪುಸ್ತಕ ಮತ್ತೊಂದು ಪಠ್ಯ ಪುಸ್ತಕ ಹಿಡಿದು ಠಾಕುಠೀಕಾಗಿ ಬರುತ್ತಿರುವ ಉಪನ್ಯಾಸಕರಾದ ಆರ್. ಕೆ. ನ ನೋಡಿ ಹುಡುಗಿಯರು ಮುಸಿಮುಸಿ ನಕ್ಕರೆ, ಹನಮ್ಯಾ ಮತ್ತವನ ಕೋತಿ ದಂಡು ತಣ್ಣಗೆ ಕುಳಿತಿತ್ತು. ಹಾಜರಿ ಗಿಜರಿ ಮುಗಿಸಿ ಈಗ ಗುರುಗಳು ಬೋರ್ಡಿನ ಕಡೆ ತಿರುಗುತ್ತಲೂ ಆಶ್ಚರ್ಯ!! . ನಿನ್ನೆ ತಾವು ವಿದ್ಯಾರ್ಥಿಗಳಿಗೆ ನೀಡಿದ ಸಮಸ್ಯೆ ಅವರಿಗೆ ನೆನಪಿರಲಿಲ್ಲ. ‘ಎಂಥದ್ಭುತ ! ಭಲೇ, ಚಿತ್ತ ಚಾಂಚಲ್ಯಕ್ಕೆ ಎಂಥೊಳ್ಳೆ ಚಿತ್ರ. ಯಾರು ಬರೆದವರು?’ ಎಂದು ಕೇಳುತ್ತಲೂ ಮಕ್ಕಳಲ್ಲಾ ಹನುಮನ ಕಡೆ ನೋಡುತ್ತಲೂ ಗುರುಗಳಿಗೆ ಆಶ್ಚರ್ಯ . .’ ಭಲೇ’ ಎಂದರು ಮನದಲ್ಲೇ. “ ಎಂಥ ಅದ್ಭುತ ಕಲೆಗಾರ! ನಿನ್ನೊಳಗೊಂದು ಈ ವ್ಯಕ್ತಿ ಇರುವುದು ನನಗೆ ತಿಳಿದಿರಲಿಲ್ಲ,ಹನುಮಾ, ನೀನೊಬ್ಬ ಶ್ರೇಷ್ಠ ಚಿತ್ರಗಾರ. ನಿನ್ನ ಸಾಮರ್ಥ್ಯದ ಅರಿವು ನಿನಗೆ ಇಲ್ಲ. ಇರಲಿ ಬಿಡು. ನಿನಗೊಬ್ಬರನ್ನು ಪರಿಚಯಿಸಿ ಕೊಡುತ್ತೇನೆ. ಅವರ ಹತ್ತಿರ ಸರಿಯಾಗಿ ಪ್ರಾಕ್ಟೀಸು ಮಾಡು. ಹಣದ ಬಗ್ಗೆ ಚಿಂತಿಸಬೇಡ. ಹೇಗಾದರೂ ಹೊಂದಿಸೋಣ. ನೀನು ಮುಂದೆ ಬಂದರೆ ಸಾಕು” ಎನ್ನುತ್ತಲೂ, ಇವೆಲ್ಲವನ್ನು ನಿರೀಕ್ಷಿಸದೆ, ಉಪನ್ಯಾಸಕರು ತನಗೆ ಛೀಮಾರಿ ಹಾಕಿ ಹೊರಗೆ ಕಳುಹಿಸಬಹುದೆಂದು ಗ್ರಹಿಸಿದ್ದ ಆತನ ಲೆಕ್ಕಾಚಾರ ತಿರುವು ಮುರುವಾಗಿತ್ತು.ಹನುಮ ನಿಜಕ್ಕೂ ಈಗ ಮಂಗನಂತಾದ.ಕನಕ ಮಣಕ ಆದಂಗಾದ.ಅದರ ಕಾರಣ ಹೇಳ ಹೊರಟ. ಆಗಲಿಲ್ಲ. ಕಣ್ಣಾಲಿಗಳು ತುಂಬಿಕೊಂಡವು. ಗುರುವಿನ ಮುಂದೆ ಗುಲಾಮನಾಗಬೇಕೆನಿಸಿತು. ಇವರಿಗೆ ತಾನು ಎಷ್ಟು ಸತಾಯಿಸಿದೆ. ಅರ್ಥವಾಗಲಿಲ್ಲವೇ? ಅಂದುಕೊಂಡ. ತಪ್ಪಾಯಿತೆಂದು ಅಂಗಲಾಚಬೇಕೆಂದು ಕೊಂಡ. ಯಾವುದನ್ನು ಮಾಡಲಾಗದೆ ಈಗ ಮುಸಿ ಮುಸಿ ಅಳತೊಡಗಿದ. ಅವನೊಳಗಿನ ಅಂತಃ ಪ್ರಜ್ಞೆ ಎಚ್ಚರಗೊಂಡಿತ್ತು. ಎಲ್ಲವನ್ನೂ ಸಲೀಸಾಗಿ ತೆಗೆದುಕೊಂಡು ಬದುಕುತ್ತಿದ್ದ ಹುಡುಗನ ಮನೆ ಸ್ಥಿತಿ ತೀರ ಹದಗೆಟ್ಟಿದ್ದಾಗಿತ್ತು. ಅದನ್ನು ತನ್ನ ವಿಚಿತ್ರ ಶೈಲಿಗಳಿಂದ ನಡೆ ನುಡಿಗಳಿಂದ ಮರೆಯಲು ಬಯಸುತ್ತಿದ್ದ. ಕಾಯಿಲೆಯಿಂದ ಹಾಸಿಗೆ ಹಿಡಿದ ತಾಯಿ, ಸದಾ ಕುಡಿದು ಬರುತ್ತಿದ್ದ ತಂದೆ, ಈ ಮಧ್ಯೆ ಒಡಹುಟ್ಟಿದ ಮುದ್ದು ತಂಗಿ, ಆಕೆಯ ಜವಾಬ್ದಾರಿ ಎಲ್ಲವನ್ನೂ ಎಳೆಯ ಪ್ರಾಯದ ಹುಡುಗ ಹೊತ್ತಿಕೊಂಡಿದ್ದ. ಬೆಳಿಗ್ಗೆ ತಡವಾಗುತ್ತಿದ್ದ ಕಾರಣ, ಮನೆಗುಡಿಸಿ, ನೀರು ತುಂಬಿ, ತಿಂಡಿ ಮಾಡಿ,ತಾಯಿಗೆ ತಂಗಿಗೆ ತಿಂಡಿ ಕೊಟ್ಟು, ತಾನು ಅರ್ಧಂಬರ್ಧ ತಿಂದು, ಬರುತ್ತಿದ್ದ ಆತ ಸುಮ್ಮನೆ ಸುಳ್ಳು ಹೇಳುತ್ತಿದ್ದ. ಕಾಲೇಜು ಸಮಯದ ನಂತರ ಅಂಗಡಿಯೊಂದರಲ್ಲಿ ಲೆಕ್ಕ ಪತ್ರ ಬರೆಯುವ ಕೆಲಸಕ್ಕೆ ಹೋಗುತ್ತಿದ್ದ ಆತ ಮನೆಯ ಖರ್ಚು ವೆಚ್ಚವನ್ನೆಲ್ಲಾ ತಾನೆ ನಿಭಾಯಿಸುತ್ತಿದ್ದ.ಕಾಲೇಜಿಗೆ ತಡವಾಗಿ ಬರುವುದಕ್ಕೆ ನಿಜ ಕಾರಣ ನೀಡಲು ಪ್ರಾಯದ ಜಂಭ ಅಡ್ಡಬರುತ್ತಿತ್ತು. ‘ತಾನೇಕೆ ಇನ್ನೊಬ್ಬರ ಎದುರಿಗೆ ತಲೆ ಬಾಗಿಸಲಿ? ಎಂಬ ಒಣ ಪ್ರತಿಷ್ಠೆ ಎಲ್ಲವೂ ಆತನಲ್ಲಿತ್ತು. ಆದರೀಗ ಹಾಗಾಗಲಿಲ್ಲ.ಒಂದು ಮನಸ್ಸು ಬೇಡ ಬೇಡವೆಂದರೂ ಮತ್ತೊಂದು ಮನಸ್ಸು ತನ್ನ ಮನೆಯ ರಹಸ್ಯವನ್ನೆಲ್ಲಾ ಬಿಚ್ಚಿಟ್ಟಿತು ಮತ್ತು ತನ್ನ ಮಂಗಚೇಷ್ಟೇಯ ಆಲೋಚನೆಯನ್ನು ಹೊರಗೆಡುವಿದ.ಆತ ಹೀಗೆಂದ “ಸರ್, ಸರ್, ನನ್ನ ನೀವು ಕ್ಷಮಿಸಬೇಕ್ರೀ. ನಾನು ನಿಮಗೆ ಬುದ್ಧಿ ಕಲಿಸ್ತೀನಿ ಅಂತ ಹುಡುಗರತ್ರ ಹೇಳಕೊಂಡಿದ್ದೇರಿ..ನಂದೆಲ್ಲಾ ತಪ್ಪಾಗೈತ್ರಿ ಸರ್ ಹೊಟ್ಯಾಗ ಹಾಕ್ಕೊಳ್ರೀ, ಸರ್. ನನ್ನ ಗೆಳೇರಲ್ಲಾ ಅಂದ್ರು ಅಂತ ನಿಮಗಿಂತ ನಾನೆ ಬುದ್ಧಿವಂತ ಅಂತಾ ತೋರ್ಸಾಕ ಹೊಂಟಿದ್ದರ್ರೀ. ಈಗ ಗುರುತಾತ್ರೀ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತ ಶರೀಫರು ಯಾಕ್ ಹಾಡಿದ್ರೂ ಅಂತ”. ಎನ್ನುತ್ತ ಅವರ ಕಾಲಿಗೆ ಬಿದ್ದ.ಅಷ್ಟೊತ್ತಿಗೆ ಕನ್ನಡ ತರಗತಿ ಪ್ರಾರಂಭವಾಗುತ್ತಲೇ ಅವರೂ ಕ್ಲಾಸಿಗೆ ಬರಲು ಈ ದೃಶ್ಯ ಮನಕಲುಕಿತು. ಆವರೆಗೆ ಆತನ ಮೇಲಿದ್ದ ಕೋಪ,ಅಸಹನೆ ಮಾಯವಾಗಿ ಕರುಣೆ ತುಂಬಿಕೊಂಡಿತು.ಹೆಣ್ಣು ಹುಡುಗಿಯರಂತೂ ಆತನನ್ನು ಅಭಿಮಾನದಿಂದ ನೋಡತೊಡಗಿದರು. ಈಗ ನಿಜಕ್ಕೂ ಆತ ಹೀರೋ ಆಗಿದ್ದ ಬರಿಯ ಹುಡುಗಿಯರ ಕಣ್ಣಲ್ಲಿ ಮಾತ್ರವಲ್ಲ. ಶಿಕ್ಷಕರು, ಉಳಿದ ಸಹಪಾಠಿಗಳ ದೃಷ್ಠಿಯಲ್ಲೂ ಹನುಮನಿಗೆ ಹನುಮನೇ ಸಾಟಿ ಎನಿಸಿಕೊಂಡುಬಿಟ್ಟ. ಅದರಲ್ಲಿ ಬಹಳ ಆನಂದ ಪಟ್ಟವರೆಂದರೆ ಕನ್ನಡ ಮೇಷ್ಟ್ರು ಸದಾ ಕನ್ನಡ ತರಗತಿಗೆ ಗೈರುಹಾಜರಾಗಿ ಗುಂಪು ಕಟ್ಟಿಕೊಂಡು ಉಂಡಾಡಿ ಗುಂಡನ ಹಾಗೆ ಕಾಲೇಜು ಕ್ಯಾಂಪಸ್ ಸುತ್ತುತ್ತ ಆಗಾಗ ವಿಕಾರವಾಗಿ ಅವರನ್ನು ಅಣುಕಿಸುವ ಆತನ ಆಟಕ್ಕೆ ಅವರ ಮನ ರೋಸಿ ಹೋಗಿತ್ತು. ಪಾಠಕ್ಕೆ ಬಾ ಎಂದು ಕರೆದರೂ”ಸರ್ ನಾನು ಕ್ಲಾಸಿಗ್ ಕೂರದಿದ್ರೂ ಪಾಸಾಗ್ತೀನಿ ನೋಡಿ.” ಎಂದು ಸವಾಲೆಸೆದು ಅವರ ಮುಖಭಂಗ ಮಾಡಿದ್ದ. ಆದರೆ ಈಗ ಅವರು ಅದನ್ನೆಲ್ಲ ಮರೆತು ಆತನ ಹರಸತೊಡಗಿದರು. ತಮ್ಮ ಹಳೆಯ ಕಾಲೇಜು ದಿನಗಳನ್ನು ನೆನಪಿಸಿಕೊಂಡು “ಆ ವಯಸ್ಸು ಮಾರಾಯ, ಈಗ ನಿಂಗೆ ಬೈದ್ರು ಒಂದಕಾಲಕ್ಕೆ ನಾವು ಸಾಕಷ್ಟು ಸೌಖ್ಯ ಕೊಟ್ಟಿದ್ದೆವು ನಮ್ಮ ಮಾಷ್ಟುçಗಳಿಗೆ” ಎನ್ನುತ್ತ ಆತನ ಬೆನ್ನು ತಟ್ಟಿದರು. ಸತತ ಪರಿಶ್ರಮ ಪಟ್ಟು ಚೆನ್ನಾಗಿ ಓದಿದ. ಆ ವರ್ಷದ ಆದರ್ಶ ವಿದ್ಯಾರ್ಥಿ ಸ್ಥಾನವನ್ನು ಮಾತ್ರವಲ್ಲದೇ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಹೆಚ್ಚು ಅಂಕ ಗಳಿಸಿ ಎಲ್ಲರ ಮೆಚ್ಚುಗೆ ಗಳಿಸಿದ. “ಹುಡುಗಾಟದ ಹುಂಬತನದಲ್ಲೂ ಮುಗ್ಧ ಮನಸ್ಸಿರುವುದು” ಎಂಬುದಕ್ಕೆ ಸಾಕ್ಷಿಯೂ ಆದ.ತಪ್ಪು ನಡೆದಾಗ ಶಿಕ್ಷಿಸದೆ ಆ ತಪ್ಪಿನಲ್ಲೂ ಕೆಲವೊಮ್ಮೆ ಇರುವ ಒಪ್ಪನ್ನು ಒಡಮೂಡಿಸಿದ ಸಂಸ್ಕೃತ ಶಿಕ್ಷಕರ ಸುಸಂಸ್ಕೃತ ವರ್ತನೆ ಆತನ ಬದಲಾವಣೆಗೆ ದಾರಿಯಾಯಿತು.
ಪರಿವರ್ತನೆಗೆ ದಾರಿ ಯಾವುದಾದರೇನು? Read Post »
ಲಲಿತ ಪ್ರಬಂಧ ಎಲೆಗಳ ಬಲೆಯಲ್ಲಿ… ಟಿ.ಎಸ್.ಶ್ರವಣಕುಮಾರಿ ಈ ಹದಿಮೂರು ಎಲೆಗಳಿಗೊಂದು ವಿಶಿಷ್ಟ ಆಕರ್ಷಣೆಯಿದೆ, ಸೆಳೆತವಿದೆ. ಕೆಲವರು ರಮ್ಮಿ, ಬ್ರಿಡ್ಜ್, ಮೂರೆಲೆ ಎನ್ನುತ್ತಾ ಇಸ್ಪೀಟಿನ ಹಿಂದೆ ಬಿದ್ದರೆ, ಇನ್ನು ಕೆಲವರು ಸಾಲಿಟೇರ್, ಫ್ರೀಸೆಲ್ ಎನ್ನುತ್ತಾ ಕಂಪ್ಯೂಟರಿನಲ್ಲಿ ಅದೇ ಹದಿಮೂರು ಎಲೆಗಳಲ್ಲಿ ಅಡಗಿಕೊಂಡಿರುತ್ತಾರೆ. ʻಅಂದರ್ ಬಾಹರ್ ಅಂದರ್ ಬಾಹರ್ʼ ಎಂದು ಕೋರಸ್‌ನಲ್ಲಿ ಗುನುಗುತ್ತ ʻಎಕ್ಕ ರಾಜ ರಾಣಿ ನನ್ನ ಕೈಯೊಳಗೆ, ಹಿಡಿಮಣ್ಣು ನಿನ್ನ ಬಾಯೊಳಗೆʼ ಎಂದು ಹಾಡುತ್ತ ಜಾಕಿ ಚಲನಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ತನ್ನೆಲ್ಲಾ ಅಭಿಮಾನಿಗಳನ್ನೂ ವಶೀಕರಣ ಮಾಡಿಕೊಂಡಿದ್ದು ಸುಳ್ಳಲ್ಲ. ಅದೇನೋ ಚಲನಚಿತ್ರ… ಅವನು ಗೆದ್ದರೂ, ಸೋತರೂ ಅವನ ಮಡಿಲಲ್ಲಿ ಲಕ್ಷ್ಮಿ ಬಂದು ಕೂರುತ್ತಾಳೆ; ಆದರೆ ಅವನಂತೆ ಆಡಹೊರಟ ಜನಸಾಮಾನ್ಯರ ಬಳಿ ಅವಳು ಸಿಕ್ಕಂತೆ ಮಾಡಿ ತಪ್ಪಿಸಿಕೊಳ್ಳುವುದೇ ಹೆಚ್ಚು. ಅವಳು ಸಿಕ್ಕಿಕೊಳ್ಳುತ್ತಾಳೋ ಇಲ್ಲವೋ ತಿಳಿಯದು, ಆಡುವವರಂತೂ ಈ ಎಕ್ಕ, ರಾಜ, ರಾಣಿ, ಜೋಕರ್ ಎಂಬ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರ ಬಲೆಯಲ್ಲಿ ಬಿದ್ದು ತಮ್ಮನ್ನೇ ಸಂತೋಷದಿಂದ, ಸ್ವಾನುರಾಗದಿಂದ ಅರ್ಪಣೆ ಮಾಡಿಕೊಂಡಿರುತ್ತಾರೆ. ಇಸ್ಪೀಟಾಟಕ್ಕೆ ಕಾರಣಗಳು ಹಲವಾರು. ಹೊತ್ತು ಕಳೆಯುವುದಕ್ಕಾಗಿ ಎಂದು ಶುರುವಾಗುವ ನರ್ತನ ಹಲವು ಭಾವಭಂಗಿಗಳನ್ನು ತೋರುತ್ತಾ ಆಡುಗರನ್ನು ತನ್ನೆಡೆಗೆ ಸೆಳೆಯುತ್ತದೆ. ಬೇಸರ ನೀಗಲು… ಗೆದ್ದ ಖುಷಿಯ ಅಮಲು… ಸೋತು ಕಳೆದದ್ದನ್ನು ಕಳೆದಲ್ಲೇ ಛಲದಿಂದ ಮರಳಿ ಹುಡುಕಲು… ಗೆಳೆಯರು ಸಿಕ್ಕ ಖುಷಿಯಲ್ಲಿ… ಆಟದ ಆಕರ್ಷಣೆಯಲ್ಲಿ… ಹೀಗೆ ಹಲವು ವಿನ್ಯಾಸಗಳಲ್ಲಿ ಇಸ್ಪೀಟಿನ ರಾಣಿ ತನ್ನ ರಸಿಕರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ತವಕಿಸುತ್ತಿರುತ್ತಾಳೆ. ಒಮ್ಮೆ ಇವಳ ಮೋಹದಲ್ಲಿ ಸಿಲುಕಿಕೊಂಡವರಿಗೆ ಬುದ್ದಿಯ ಅಂಕುಶವಿಲ್ಲದಿದ್ದರೆ ಅದರಿಂದ ಮುಕ್ತಿಯಿಲ್ಲ. ಅದೆಷ್ಟೋ ಮಂದಿ ಮನೆ, ಮಠ, ಹೆಂಡತಿ-ಮಕ್ಕಳು, ಬಂಧು-ಬಾಂದವರನ್ನು ಕಳೆದುಕೊಂಡು ಬೀದಿ ಪಾಲಾಗಿರುವವರನ್ನು ನಮ್ಮ ಹತ್ತಿರದ ಸ್ನೇಹ ವಲಯದಲ್ಲೇ, ನೆಂಟರಿಷ್ಟರಲ್ಲೇ ಕಂಡಿದ್ದೇನೆ. ʻಊರಿಗೊಂದು ಹೊಲಗೇರಿʼ ಎನ್ನುವ ಗಾದೆಗಿಂತ ʻಊರಿಗೊಂದಾದರೂ ಇಸ್ಪೀಟಿನ ಅಡ್ಡಾʼ ಎನ್ನುವ ಮಾತೇ ಹೆಚ್ಚು ಸಮಂಜಸವೆನಿಸುತ್ತದೆ. ದೊಡ್ಡ ಪಟ್ಟಣಗಳಲ್ಲಾದರೆ ಇಸ್ಪೀಟು ಕ್ಲಬ್ಬು. ಇದರ ಪರಾಕಾಷ್ಠೆಯನ್ನು ನಾನು ನೋಡಿದ್ದು ಅಮೇರಿಕಾದ ಲಾಸ್ ವೇಗಾಸ್‌ನ ಕ್ಯಾಸಿನೋಗಳಲ್ಲಿ. ಅಲ್ಲಿನ ಜೂಜಿನ ಅಡ್ಡಾಗಳಲ್ಲಿ ಬೈಗು ಬೆಳಗೆನ್ನದೆ ಮಂದಿ ತಮ್ಮ ಮುಂದಿನ ಪರದೆಯಲ್ಲಿ ಮುಳುಗಿಹೋಗಿರುತ್ತಾರೆ, ಕಳೆದು ಹೋಗಿರುತ್ತಾರೆ!! ನನ್ನ ಈ ಲೇಖನದ ಉದ್ದೇಶ ಮನೆಮಠ ಕಳೆದುಕೊಂಡವರ ಕರುಣಾಜನಕ ಕತೆಗಳನ್ನು ಹೇಳುವುದಂತೂ ಖಂಡಿತವಾಗಿಯೂ ಅಲ್ಲ. ಒಂದು ಕಾಲದಲ್ಲಿ ಇದು ಬಂಧುಬಳಗದ ನಡುವಿನ ಸೇತುವಾಗಿ ಜನಗಳನ್ನು ಹಿಡಿದಿಡುತ್ತಿದ್ದ ಆಕರ್ಷಣೆಯ ಸಾಧನವಾಗಿದ್ದುದರ ಬಗ್ಗೆ ಕೆಲವು ಪ್ರಸಂಗಗಳನ್ನು ಹೇಳಬೇಕೆಂದಷ್ಟೆ. ಒಂದು ಕಾಲ ಎಂದರೆ ಎಲ್ಲೋ ಹೋಗಿಬಿಡಬೇಡಿ. ನಾನು ಹುಟ್ಟುವುದಕ್ಕೂ ಮುಂಚೆಯೇ ಇತ್ತೋ…? ನನಗೆ ತಿಳಿಯದು. ಅಂತೂ ಒಂದೈವತ್ತು, ಅರವತ್ತು ವರ್ಷಗಳ ಹಿಂದೆ ಎಂದುಕೊಂಡರೆ ಸಾಕು. ಮದುವೆಮನೆಯಲ್ಲಿ ಸೇರುತ್ತಿದ್ದ ನೆಂಟರಿಷ್ಟರು, ಬಂಧು ಬಳಗ ಸೇರಿರುವ ಖುಷಿಗೆ, ದಿಬ್ಬಣ ಮದುವೆ ಮನೆಗೆ ಕಾಲಿಟ್ಟ ಅನತಿಕಾಲದಲ್ಲೇ ತಮಗೊಂದು ಸೂಕ್ತವಾದ ಹೆಚ್ಚಾಗಿ ಯಾರ ಗಮನಕ್ಕೂ ಬಾರದಂತ (ಕಾಫಿ, ಕುರುಕಲು ತಿಂಡಿಗಳ ಪೂರೈಕೆಗೆ ಅನುವಾಗಿರುವಂತ) ಕೋಣೆಯನ್ನು ಆಕ್ರಮಿಸಿಕೊಂಡು ಜಮಖಾನೆ ಹಾಸಿಕೊಂಡು ಇಸ್ಪೀಟಿನ ಕಟ್ಟನ್ನು ಬಿಚ್ಚಿದರೆಂದರೆ, ಗಂಡಿನ ಕಡೆಯವರು, ಹೆಣ್ಣಿನ ಕಡೆಯವರು ಎಂಬ ಭೇದಭಾವವಿಲ್ಲದೆ ಆಟ ಅವಿಶ್ರಾಂತವಾಗಿ ಮುಂದುವರೆದಿರುತ್ತಿತ್ತು. ಅವರ ಭಕ್ತಿ ಪರವಶತೆಯನ್ನು ಕೆಡಿಸಲು ನಿದ್ರಾದೇವಿಯಿಂದಲೂ ಸಾಧ್ಯವಿರಲಿಲ್ಲ ಬಿಡಿ! ಇಂತಲ್ಲಿ ದುಡ್ಡಿನ ಮೊತ್ತ ಹೆಚ್ಚಲ್ಲ. ಆಟವನ್ನು ರಂಗೇರಿಸಲು ಬೇಕಾದಷ್ಟು ಮಾತ್ರ… ಗೆದ್ದರೆ ಹತ್ತು… ಸೋತರೆ ಹತ್ತು… ಎನ್ನುವ ಹಾಗೆ… ಒಡವೆ, ವಸ್ತು, ಮನೆ ಮಠಗಳನ್ನು ಒತ್ತೆ ಇಡುವಂತ ಅಮಲಲ್ಲ. ಖುಷಿಗಾಗಿ ಖುಷಿ.. ಮೋಜಿಗಾಗಿ ಮೋಜು. ಇಸ್ಪೀಟೊಂದು ಖಯಾಲಿಯಷ್ಟೇ. ನನ್ನೊಬ್ಬ ದೊಡ್ಡಮ್ಮನ ಮಗನ ಮದುವೆಯಲ್ಲಿ ಹಿರಿಯಾಕೆಯೊಬ್ಬರು ಮದುವೆ ಹುಡುಗನ ಅಕ್ಕನನ್ನು “ಏನೇ ವಿಜ್ಜಮ್ಮ ನಿನ್ನ ಯಜಮಾನರು ಕಾಣುತ್ತಿಲ್ಲ, ತೀರ ಮೈದುನನ ಮದುವೆಗೂ ಬರಲಿಲ್ಲವೇ?” ಎಂದಿದ್ದರು. “ಅಯ್ಯೋ ಬಂದಿದ್ದಾರೆ ಚಿಕ್ಕಮ್ಮ, ಭಜನೆಯಲ್ಲಿ ಮುಳುಗಿಹೋಗಿದಾರೆ ಅಷ್ಟೇ” ಎಂದಳು ವಿಜಯ. ಮಹಾ ಭಕ್ತಳಾದ ಆಕೆ “ಅಯ್ಯೋ ಯಾವಾಗಿಂದ ನಡೀತಿದ್ಯೆ. ಎಲ್ಲಿ? ನಂಗೊತ್ತಾಗ್ಲಿಲ್ವೆ… ಅದೆಲ್ಲಿ ತೋರ‍್ಸು ಬಾರೆ ಸ್ವಲ್ಪ” ಎನ್ನುತ್ತಾ ಅವಳ ದುಂಬಾಲು ಬಿದ್ದರು. “ಅದು ನೀವು ಮಾಡೋ ಭಜನೆ ಅಲ್ಲ ಬಿಡಿ” ಎನ್ನುತ್ತಾ ಯಾರೋ ಕರೆದರೆಂದು ಅಲ್ಲಿಂದ ಜಾರಿಕೊಂಡಿದ್ದಳು. ಆಕೆ ಬಿಟ್ಟಾರೆಯೇ ಕಂಡಕಂಡವರನ್ನೆಲ್ಲಾ “ಭಜನೆ ನಡೀರಿರೋದು ಎಲ್ಲಿ?” ಎಂದು ತಲೆ ತಿಂದಾಗ ಯಾರೋ ಪುಣ್ಯಾತ್ಮರು ನಡೆಯುತ್ತಿದ್ದ ಕೋಣೆಯ ಬಾಗಿಲಿಗೆ ಕರೆದೊಯ್ದು ತೋರಿಸಿದರು. “ಅಯ್ಯೋ.. ಈ ಅನಿಷ್ಟಾನ ವಿಜ್ಜು ಭಜನೆ ಅಂದಳಲ್ಲಾ” ಎಂದು ಮಮ್ಮಲ ಮರುಗಿದರು. ನನ್ನ ಮದುವೆಯ ನಿಷ್ಕರ್ಷೆಯಾಗುವಾಗ ನಮ್ಮ ಮಾವನವರು “ನಮ್ಮದು ಒಂದು ಬೇಡಿಕೆ ಇದೆ” ಎಂದಿದ್ದರು. ʻಇದುವರೆಗೂ ಏನನ್ನೂ ಕೇಳದವರು ಈಗ ಏನೋ ಬೇಡಿಕೆ ಇಡುತ್ತಿದ್ದಾರಲ್ಲʼ ಎನ್ನುವ ಪ್ರಶ್ನೆಯನ್ನು ನಮ್ಮ ತಾಯಿ, ತಂದೆಯರ ಮುಖದಲ್ಲಿ ನೋಡಿದವರೇ “ಇನ್ನೇನಿಲ್ಲ; ನಮ್ಮ ಕಡೆ ಬರುವ ನೆಂಟರಿಷ್ಟರಲ್ಲಿ ಕೆಲವರಿಗೆ ಇಸ್ಪೀಟಿನ ಖಯಾಲಿ. ರಾತ್ರಿ ಹಗಲು ಅನ್ನದೆ ಮದುವೆ ಮನೆಯಲ್ಲಿ ಇದ್ದಷ್ಟು ಹೊತ್ತೂ ಆಡುತ್ತಿರುತ್ತಾರೆ. ಆಗಾಗ ಅವರಿಗೆ ಕಾಫಿಯೊಂದನ್ನು ಕೊಟ್ಟರೆ ಸಾಕು. ಅವರು ಊಟ, ತಿಂಡೀನೂ ಕೇಳಲ್ಲ” ಎಂದು ದುಗುಡಗೊಂಡಿದ್ದವರ ಮುಖಗಳಲ್ಲಿ ನಗೆಯರಳಿಸಿದ್ದರು. ಅವರು ಹೇಳಿದ್ದರಲ್ಲಿ ಅತಿಶಯೋಕ್ತಿಯೇನಿರಲಿಲ್ಲ ಬಿಡಿ; ಹುಷಾರು ತಪ್ಪಿದ್ದ ಎಂಟು ತಿಂಗಳ ಮಗುವನ್ನು ಡಾಕ್ಟರ ಬಳಿಗೆ ಕರೆದೊಯ್ಯಲು ನನ್ನ ವಾರಗಿತ್ತಿ, ಆಟದಲ್ಲೇ ಮುಳುಗಿಹೋಗಿದ್ದ ಭಾವನನ್ನು ಆಡುತ್ತಿರುವಲ್ಲಿಗೇ ಹೋಗಿ ಎಬ್ಬಿಸಿ ಕರೆದುಕೊಂಡು (ಎಳೆದುಕೊಂಡು?) ಬರಬೇಕಾಯಿತು! ಮದುವೆ ಮುಗಿಸಿಕೊಂಡು ಹಿಂತಿರುಗುವ ಮುನ್ನ (ಯಾವ ಹೊತ್ತಿಗೆ ಯಾವ ಭಕ್ಷ್ಯ ಬಡಿಸಿದ್ದರೆಂದು ಅವರು ಗಮನಿಸಿದ್ದರೋ ಇಲ್ಲವೋ) ಅವರ ಆಟವು ಸಾಂಗವಾಗಿ ನಡೆಯಲು ಸಹಕರಿಸಿ ನಿಯತವಾಗಿ ಕಾಫಿತಿಂಡಿಗಳನ್ನು ಪೂರೈಸಿದವರೆಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿ ತೃಪ್ತರಾಗಿ ಹೊರಟರು. ಇನ್ನು ನನ್ನ ನಾದಿನಿಯ ಮದುವೆಯಲ್ಲಿ ಬೀಗರೌತಣವಾದ ತಕ್ಷಣ ನಾವು ಛತ್ರವನ್ನು ಬಿಟ್ಟುಕೊಡಬೇಕಿತ್ತು. ಸಂಜೆ ಅಲ್ಲಿ ಇನ್ನೊಂದು ಕಡೆಯವರ ಆರತಕ್ಷತೆ ನಡೆಯುವುದಿತ್ತು. ಹಾಗಾಗಿ ನಾವು ಬೆಳಗಿನಿಂದಲೇ ಸಾಧ್ಯವಾದಷ್ಟು ನಮ್ಮ ಸಾಮಾನು ಸರಂಜಾಮುಗಳನ್ನು ಸಾಗಿಸುತ್ತಾ ನಾವು ಹೊರಡುವಾಗ ತೆಗೆದುಕೊಂಡು ಹೋಗಬಹುದಾದಷ್ಟನ್ನು ಮಾತ್ರ ಉಳಿಸಿಕೊಂಡಿದ್ದೆವು. ಊಟವಾದ ತಕ್ಷಣ ಪರಸ್ಪರ ಬೀಳ್ಕೊಂಡು ಅಲ್ಲಿಂದ ಗಂಡು ಹೆಣ್ಣು ಇಬ್ಬರ ಕಡೆಯವರೂ ಹೊರಟರೂ ಇನ್ನೂ ಇಸ್ಪೀಟಿನಾಟ ಮುಗಿದಿರಲಿಲ್ಲ. ಛತ್ರದವರು ಜಮಖಾನೆಯನ್ನೂ ವಶಕ್ಕೆ ತೆಗೆದುಕೊಂಡ ಮೇಲೂ ನೆಲದ ಮೇಲೇ ಇನ್ನೊಂದಿಷ್ಟು ಕಾಲ ಆಟವನ್ನು ಮುಂದುವರೆಸುತ್ತಿದ್ದವರು ಸಂಜೆಯ ಕಾರ್ಯಕ್ರಮದವರು ತಮ್ಮ ಸರಕುಗಳನ್ನೆಲ್ಲಾ ತೆಗೆದುಕೊಂಡು ಬಂದು ಎಬ್ಬಿಸಿದಾಗ, ನಮ್ಮ ಕಡೆಯವರೆಲ್ಲರೂ ಛತ್ರ ಬಿಟ್ಟು ಬಹಳ ಸಮಯವಾಗಿದೆಯೆನ್ನುವುದನ್ನು ಮನಗಂಡು ಮನಸ್ಸಿಲ್ಲದ ಮನಸ್ಸಿನಿಂದ ಎದ್ದರಂತೆ! ಹಾಗೆ ಎಬ್ಬಿಸದೇ ʻಏನೋ ಪಾಪ ಆಡಿಕೊಂಡಿರಲಿʼ ಎಂದು ಬಿಟ್ಟಿದ್ದರೆ, ಆ ಮದುವೆ ಮುಗಿದದ್ದೂ ಗೊತ್ತಾಗುತ್ತಿರಲಿಲ್ಲ ಎನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆ! ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ|| ಡಿ. ಶಂಕರನಾರಾಯಣ್ ಅವರು ನನ್ನ ಅತ್ತೆಯ ಸ್ವಂತ ತಮ್ಮ, ನನ್ನ ಪತಿಗೆ ಸೋದರಮಾವ. ಅವರ ಓದುವ ಕಾಲದಲ್ಲಿ ನಮ್ಮ ಮಾವನವರು ಅವರಿಗೆ ತುಂಬಾ ಸಹಾಯ ಮಾಡಿದ್ದರಂತೆ. ದೆಹಲಿಯ ಯು.ಜಿ.ಸಿ.ಯಲ್ಲಿ ಕಾರ್ಯದರ್ಶಿಯಾಗಿದ್ದ ಕಾಲದಲ್ಲಿ ಅವರು ಬೆಂಗಳೂರಿಗೆ ಬಂದಾಗೆಲ್ಲಾ ಅವರ ಕಛೇರಿಯ ಕೆಲಸವು ಮುಗಿದ ನಂತರ ಒಂದಷ್ಟಾದರೂ ಸಮಯವನ್ನು ಇಲ್ಲಿದ್ದ ಬಂಧುಬಾಂಧವರೊಡನೆ ಇಸ್ಪೀಟಾಟದಲ್ಲಿ ಕಳೆದು ತೆರಳುತ್ತಿದ್ದರು. ಅವರ ವೇಳಾಪಟ್ಟಿ ಸಕ್ಕರೆಯ ಜಾಡು ಹಿಡಿಯುವ ಇರುವೆಯಂತೆ ಪ್ರಿಯ ಬಂಧುಗಳೆಲ್ಲರಿಗೂ ತಿಳಿದು ಒಟ್ಟಾಗಿ ಸೇರಿ ಇಸ್ಪೀಟಿನ ಕಟ್ಟಿಗೆ ಬಂಧ ವಿಮೋಚನೆ ಮಾಡಿ ಆನಂದ ಮಹೋತ್ಸವವನ್ನು ಆಚರಿಸುತ್ತಿದ್ದರು. ಅಂತೆಯೇ ಆ ಕಾಲದಲ್ಲಿ ನಮ್ಮ ಬಂಧು, ಬಳಗದಲ್ಲಿ ಯಾರು ದೆಹಲಿಗೆ ಹೋದರೂ ಅವರ ಮನೆಯಲ್ಲೇ ವಾರ(ತಿಂಗಳು)ಗಟ್ಟಲೆ ಉಳಿದುಕೊಂಡು ದೆಹಲಿಯ ಸುತ್ತಮುತ್ತಲನ್ನು ನೋಡಿಕೊಂಡು ಬರುತ್ತಿದ್ದರು. ಬೆಳಗ್ಗೆಯೆಲ್ಲಾ ಪ್ರೇಕ್ಷಣೀಯ ಸ್ಥಳಗಳ ದರ್ಶನ; ಸಂಜೆಯಾಯಿತೆಂದರೆ ಇಸ್ಪೀಟ್ ರಾಣಿಯ ನರ್ತನ! ನನ್ನ ಮಾವನವರು ತೀರಿಕೊಂಡಾಗ ಈ ಸೋದರಮಾವ ದೆಹಲಿಯಿಂದ ಗುಬ್ಬಿಗೆ ಬಂದಿದ್ದವರು, “ವಾಸಣ್ಣ ಸತ್ತ ಜಾಗದಲ್ಲಿ ನಾವು ನಿದ್ದೆ ಮಾಡಿದರೆ ಅವನ ಆತ್ಮಕ್ಕೆ ಶಾಂತಿ ಸಿಗೋದಿಲ್ಲ. ಹಾಗಾಗಿ ನಾವೆಲ್ಲರೂ ಕ್ರಿಯಾ ಕಲಾಪಗಳು ಮುಗಿದು ಈ ಕೋಣೆಗೆ ಬಾಗಿಲು ಹಾಕುವ ತನಕ (ಮಾವನವರು ಸತ್ತ ಘಳಿಗೆ ಕೆಟ್ಟ ನಕ್ಷತ್ರವಾದ್ದರಿಂದ ಐದು ತಿಂಗಳು ಬಾಗಿಲು ಹಾಕಬೇಕಿತ್ತು) ದುಃಖವನ್ನು ಮರೆತು, ದಣಿವರಿಯದೆ ಇಸ್ಪೀಟಾಡಿ, ತನ್ಮೂಲಕ ಗತಿಸಿದ ಹಿರಿಯರಿಗೆ ಗೌರವವನ್ನು ಕೊಡೋಣ” ಎನ್ನುವ ಠರಾವನ್ನು ಹೊರಡಿಸಿದರು. ಅಷ್ಟು ಹಿರಿಯರ ಬಾಯಿಂದ ಬಂದ ಅಂತಹ ಮುತ್ತಿನಂತ ಅದ್ಭುತ ಮಾತಿಗೆ ಎಂತಾದರೂ ಅಗೌರವವನ್ನು ಸೂಚಿಸಲಾದೀತೇ…?! ಸುಮಾರು ಮೂರ್ನಾಲ್ಕು ಚದುರಡಿಯಿರುವ ಆ ಕೋಣೆಯಲ್ಲಿ ಪಠಪಠಪಠಣ ಆರಂಭವಾಯಿತು. ನೆಂಟರು ಬಂದ ಹಾಗೆಲ್ಲಾ ವೃತ್ತ ದೊಡ್ಡದಾಗುತ್ತಾ ಹೋಯಿತು. ಆಟದ ಖಯಾಲಿಯಿರುವ ಒಬ್ಬಿಬ್ಬರು ಹೆಂಗಸರೂ ಹಿಂದೆ ಬೀಳದೆ ಸೇರಿಕೊಂಡರು. ಊರಿನ ಹಿರಿಯರು, ವಾಸಣ್ಣನ ಆತ್ಮೀಯರೂ ಕೈ ಹಾಕದಿದ್ದರೆ ಅಪಚಾರವಲ್ಲವೇ! ಅವರೂ ತಮ್ಮ ಸೇವೆ ಸಲ್ಲಿಸಲು ಎಲೆಗಳನ್ನು ಹಿಡಿದರು. ಹಿರಿಯರ ಜೊತೆಗೆ ಎಲೆಗಳನ್ನು ಹಿಡಿಯುವಷ್ಟು ದಾಷ್ಟ್ಯವಿಲ್ಲದಿದ್ದರೂ ಕಿರಿಯರೂ ತಮ್ಮ ಕೈಲಾದಷ್ಟು ಆಡಿ ಸತ್ತ ಹಿರಿಯ ಚೇತನಕ್ಕೆ ಶಾಂತಿ ಕೋರಬೇಡವೇ. ಅಲ್ಲೇ ಇನ್ನೊಂದು ಗುಂಪು ಹುಟ್ಟಿಕೊಂಡಿತು. ಹಾಗೆಯೇ ಮತ್ತೊಂದು ಗುಂಪಾಯಿತು. ಜಾಗ ಸಾಲದೆ ವಾಸಣ್ಣನ ಪ್ರತೀಕವಾಗಿ ಉರಿಯುತ್ತಿದ್ದ ದೀಪ ಜನ ಬಂದ ಬಂದ ಹಾಗೆ ನಿಧಾನವಾಗಿ ಸರಿ ಸರಿಯುತ್ತಾ ಅಂತೂ ಆ ದೊಡ್ಡ ಕೋಣೆಯ ಮೂಲೆಯಲ್ಲಿ ಜಾಗ ಮಾಡಿಕೊಂಡಿತು. ಅಂತೂ ಕಡೆಗೊಂದು ದಿನ ಕಿಟಕಿಯ ಕಟ್ಟೆಯನ್ನೇರಿ ಕುಳಿತು ಕೋಣೆಯ ತುಂಬಾ ಕೇಳುವ ಎಲೆಗಳ ಇನಿದಾದ ಶಬ್ದದ ಆನಂದಕ್ಕೆ ತಲೆತೂಗುತ್ತಾ ಸಾಕ್ಷಿಯಾಗತೊಡಗಿತು. ಹೀಗೆ ತನ್ನ ಪ್ರತಿಷ್ಠಿತ ತಮ್ಮನ ಸೂಚನೆಯ ಮೇರೆಗೆ ಬಂದವರೆಲ್ಲಾ ಗಂಡನ ಆತ್ಮಕ್ಕೆ ಎಷ್ಟೊಂದು ಹಿತವಾಗಿ, ಅವಿರತವಾಗಿ ಶಾಂತಿ ಕೋರುತ್ತಿರುವಾಗ ಪಾಪ ನಮ್ಮತ್ತೆ…, ಇದು ತನ್ನ ಗಂಡನ ಸಾವೆಂಬುದನ್ನೂ ಮರೆತು ಆಗಾಗ ಆ ಗುಂಪಿಗೆ ಕಾಫಿ ಬೆರಸಿಕೊಡುವುದಕ್ಕೆ ನಿಲ್ಲಬೇಕಾಯಿತು… ನಿಂತರು! ಎನ್ನುವುದು ನಮ್ಮ ಗುಬ್ಬಿಯ ಮನೆಯ ಚರಿತ್ರೆಯ ಪುಟಗಳಲ್ಲಿ ದಾಖಲಾಗಿಹೋಗಿದೆ! ಅಂತೂ ನನ್ನ ಮಾವನವರ ಆತ್ಮಕ್ಕೆ ತೃಪ್ತಿಯಾಯಿತೇ? ಆಗಿರಬಹುದು…. ಏಕೆಂದರೆ ಇಸ್ಪೀಟಾಟದಿಂದ ಆಯಿತೋ ಇಲ್ಲವೋ, ಸದಾ ಮನೆತುಂಬ ಜನರಿರಬೇಕು ಎನ್ನುವುದು ಅವರ ಒಂದು ಸ್ಥಿರವಾದ ಆಸೆ. ಊಟ, ತಿಂಡಿಯ ಹೊತ್ತಿನಲ್ಲಿ ಅದೆಷ್ಟು ಊಟದೆಲೆ ಬೀಳುತ್ತಿತ್ತೋ ಅಷ್ಟು ಖುಷಿ ಅವರಿಗೆ. ಹಳೆಯ ತಲೆಮಾರಿನ ಅನಿರ್ಬಂಧಿತ, ಅಮಾಯಕ ಮುಗ್ಧ ಪ್ರೀತಿ, ವಿಶ್ವಾಸದ ಪ್ರತೀಕದಂತಿದ್ದವರಿಗೆ ಮನೆಯೆಲ್ಲಾ ಸದಾ ಗಿಲಿಗಿಲಿಗುಟ್ಟುತ್ತಿರಬೇಕು; ನಗುವಿಂದ ತುಂಬಿರಬೇಕು ಎನ್ನುವ ಮಹದಾಸೆ. ತಮ್ಮ ಜೀವಿತಾವಧಿಯಲ್ಲಿ ಯಾರಿಗೂ ʻಕಾಫಿ ಬೇಕೆʼ ಎಂದು ಕೇಳಿ ಕೊಟ್ಟವರಲ್ಲ; ʻಈಗ ತಾನೆ ಕುಡಿದು ಬಂದೆ, ಬೇಡʼ ಎಂದರೂ ಅದು ನಿಮ್ಮನೆಯ ಕಾಫಿ, ನಮ್ಮನೆಯದು ಆಗಿಲ್ಲʼ ಎನ್ನುತ್ತಾ ʻಹೆಂಗಸರಿಗೆ ಅರಿಶಿನ ಕುಂಕುಮ ಕೊಡುವುದು ಎಷ್ಟು ಮುಖ್ಯವೋ, ಮನೆಗೆ ಬಂದವರಿಗೆ ಕಾಫಿ ಕೊಡುವುದೂ ಅಂತದೇ ಸತ್ಸಂಪ್ರದಾಯʼ ಎಂದು ಬಲವಾಗಿ ನಂಬಿ ಅಂತೆಯೇ ನಡೆದುಕೊಂಡಿದ್ದವರು. ಅವರು ಸತ್ತ ದಿನ ಐವತ್ತು ಲೀಟರ್ ಹಾಲು, ನಂತರ ದಿನವೂ ಮೂವತ್ತು ಲೀಟರ್ ಹಾಲು ಬರಿಯ ಕಾಫಿಗೇ ಖರ್ಚಾಯಿತು ಎಂದರೆ ಅವರಿಗೆ ಖಂಡಿತವಾಗಿಯೂ ತೃಪ್ತಿಯಾಗಿರಲೇ ಬೇಕು! ಕಾಫಿಯ ಕತೆಯೇ ಇಷ್ಟಾದರೆ, ಇನ್ನು ಊಟ, ತಿಂಡಿಯ ವಿವರಣೆ ಬೇಕಿಲ್ಲ ಅಂದುಕೊಳ್ಳುತ್ತೇನೆ. ಅಷ್ಟು ದಿನಗಳೂ ಭಾವಮೈದುನನ ವರಸೆಯವರಾದ ವೆಂಕಟರಾಮು ಆ ಜವಾಬ್ದಾರಿಯನ್ನು ಹೊತ್ತು ಸಮರ್ಥವಾಗಿ ನಿರ್ವಹಿಸಿ, ಅಡುಗೆಯ ಕೆಲಸವಾದ ನಂತರ ತಾವೂ ಮುಂದಿನ ಕೋಣೆಯ ಪವಿತ್ರ ಪತ್ರಗಳಿಗೊಂದು ಕೈಹಾಕಿ ತಮ್ಮ ಶ್ರದ್ಧಾಂಜಲಿಯನ್ನೂ ಅರ್ಪಿಸಿ ಕೃತಾರ್ಥರಾದರು!! “ಪಾಪ, ಅವನೂ ಸ್ವಲ್ಪ ಹೊತ್ತು ಆಡಲಿ” ಎನ್ನುವ ಸದುದ್ದೇಶದಿಂದ ಮರುದಿನಕ್ಕೆ ಬೇಕಾಗುವ ತರಕಾರಿಯನ್ನು ಮನೆಯ ಹೆಂಗಸರು ಹೆಚ್ಚಿ ಅಣಿಮಾಡಿ ಆತನ ಈ ಪವಿತ್ರ ಕೈಂಕರ್ಯಕ್ಕೆ ತಮ್ಮ ಸಹಾಯ ಹಸ್ತವನ್ನು ಚಾಚುತ್ತಿದ್ದರು. ನಮ್ಮ ಅತ್ತೆಯ
ಲಲಿತ ಪ್ರಬಂಧ ವಿಚಿತ್ರ ಆಸೆಗಳು…ಹೀಗೊಂದಷ್ಟು, ಸಮತಾ ಆರ್. “ಕಕ್ ಕಕ್ ಕಕ್ ಕೊಕ್ಕೋಕ್ಕೊ” ಅಂತ ಒಂದು ಬಿಳಿ,ಬೂದು,ಕೆಂಪು ಬಣ್ಣದ ರೆಕ್ಕೆ ಪುಕ್ಕಗಳ,ಅಂಗೈ ಅಗಲದ ಜುಟ್ಟಿದ್ದ,ಕಮ್ಮಿ ಅಂದರೂ ನಾಲ್ಕೈದು ಕೆಜಿ ತೂಗುತ್ತಿದ್ದ ಗಿರಿರಾಜ ಹುಂಜ ವೊಂದು ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಗತ್ತಿನಿಂದ ,ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಾಗ,ಸುತ್ತ ನಾಲ್ಕೈದು ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕೂರಿಸಿಕೊಂಡು ವಿದ್ಯಾಗಮ ಕಾರ್ಯಕ್ರಮದ ಅಡಿಯಲ್ಲಿ ಕಲಿಸುತ್ತಿದ್ದ ನನಗೆ ಎಷ್ಟು ಪ್ರಯತ್ನ ಪಟ್ಟರೂ ಆ ಹುಂಜನಿಂದ ಕಣ್ಣು ಕೀಳ ಲಾಗಲಿಲ್ಲ. ನನ್ನಿಂದ ಅನತಿ ದೂರದಲ್ಲಿ ಕುಳಿತಿದ್ದ ನನ್ನ ಸಹೋದ್ಯೋಗಿ ಗೆಳತಿ ನಾನು ಹುಂಜವನ್ನೆ ನೋಡುತ್ತಿರುವುದನ್ನು ಕಂಡು,ನನ್ನ ಕೋಳಿ ಪ್ರೀತಿ ಅರಿತಿದ್ದ ಆಕೆ”ಮೇಡಂ ,ಕೋಳಿ ಅನಾಟಮಿ ಆಮೇಲೆ ಮಾಡಿದ್ರಾಯಿತು,ಈಗ ಮಕ್ಕಳ ಕಡೆ ಗಮನ ಕೊಡಿ” ಎಂದು ನಕ್ಕಾಗ ನಾಚಿಕೆ ಎನಿಸಿ ಮತ್ತೆ ಪಾಠದ ಕಡೆ ಮರಳಿದೆ. ಇದಾಗಿದ್ದು ಹೇಗೆಂದರೆ, ಕರೋನ ಕಾರಣ ದಿಂದಾಗಿ,ಶಾಲೆಗಳು ತೆರೆಯಲಾಗದೆ ಶಿಕ್ಷಕರೇ ಮಕ್ಕಳಿರುವ ಕಡೆ ಹೋಗಿ ಕಲಿಸುವ ವಿದ್ಯಾಗಮ ಎನ್ನುವ ಕಾರ್ಯಕ್ರಮದಡಿಯಲ್ಲಿ,ನನಗೆ ಮತ್ತು ನನ್ನ ಗೆಳತಿಗೆ ಹಂಚಿಕೆಯಾದ ಏರಿಯಾಗಳಲ್ಲಿ, ಒಂದು ವಿಶಾಲವಾದ ತೋಟದ ಮನೆಯ ಅಂಗಳದಲ್ಲಿ ಮಕ್ಕಳ ಕೂರಿಸಲು ಒಂದು ವರಾಂಡ ಬಳಸಿಕೊಳ್ಳಲು ಅವಕಾಶ ಸಿಕ್ಕಿತು. ತೋಟದ ಮನೆ ಅಂದ ಮೇಲೆ ಕೇಳಬೇಕೆ,ಎಲ್ಲೆಲ್ಲೂ ಹಸಿರು,ಶುದ್ಧವಾದ ಗಾಳಿ,ಬೆಳಕು,ಕಲಿಕೆಗೆ ಒಳ್ಳೆಯ ವಾತಾವರಣ ಅನ್ನಿಸಿ,ನಾವಿಬ್ಬರೂ ಬೇರೆ ಬೇರೆ ಗುಂಪು ಗಳಲ್ಲಿ ಕುಳಿತು ಕಲಿಸುತ್ತಿದ್ದಾಗಲೇ ಆ ಹುಂಜ ಬಂದು ನಮ್ಮ ಮನ ಸೆಳೆದದ್ದು. ಅಂತೂ ತರಗತಿಗಳ ಮುಗಿಸಿ ನಾವಿಬ್ಬರೂ ಮರಳಿ ಹಿಂದಿರುಗುವಾಗ ನಾನು ನನ್ನ ಗೆಳತಿಗೆ”ಅಲ್ಲರಿ, ತೋಟದ ಮನೆ ಇದ್ರೆ ಎಷ್ಟು ಚಂದ ಅಲ್ವಾ,ಹಸು,ಕುರಿ,ಕೋಳಿ ,ನಾಯಿ ,ಬೆಕ್ಕು ಎಲ್ಲಾ ಸಾಕೊಂಡು ಇರಬಹುದಿತ್ತು.ದಿನ ನಿತ್ಯ ಮನೆ ಕೆಲಸ,ಹೊರಗಿನ ಕೆಲಸ ಅಂತ ದಣಿಯೋದಕ್ಕಿಂತ ಎಷ್ಟೋ ವಾಸಿ”ಎಂದು ಕೊರಗಿದಾಗ ಅವರು”ಹೌದಪ್ಪ,ನನಗಂತೂ ಗಿಡ,ಮರ,ಪ್ರಾಣಿ,ಪಕ್ಷಿ ಎಲ್ಲಾ ಇರೋ ಮನೆ ಬೇಕು ಅನಿಸುತ್ತೆ, ಈ ಕಾಲದಲ್ಲಿ ಅದೆಲ್ಲ ನಮ್ಮ ಕೈ ಗೆಟುಕದ ಆಸೆಗಳೆ ಬಿಡಿ,ಈಗಿನ ರೇಟ್ ನಲ್ಲಿ ತೋಟದ ಮನೆ ಮಾಡಿದ ಹಾಗೆಯೇ”ಎಂದವರು, “ಮೇಡಂ ನನಗೆ ಒಂದು ವಿಚಿತ್ರ ಆಸೆಯಿತ್ತು,ಯಾರಿಗೂ ಹೇಳಿಲ್ಲ,ನಿಮಗೆ ಹೇಳ್ತೀನಿ ,ನಗೋದಿಲ್ಲ ತಾನೇ”ಎಂದಾಗ,ನನಗೆ ಕುತೂಹಲ ತಡೆಯಲಾರದೆ,”ಛೆ ಖಂಡಿತ ಇಲ್ಲ,ಅದೇನು ಹೇಳಿ “ಎಂದೆ. “ಅದೂ,ನನಗೆ ಚಿಕ್ಕಂದರಿಂದ ಒಂದು ಕೋಳಿ ಫಾರ್ಮ್ ಮಾಡೋ ಆಸೆ ಇದೆ,ಚೆನ್ನಾಗಿ ಕೋಳಿ ಸಾಕಿ,ಒಂದು ಆಪೆ ಆಟೋದಲ್ಲಿ ಹಾಕ್ಕೊಂಡು,ಅಂಗಡಿ ಅಂಗಡಿಗೆ,ನಾನೇ ಆಪೆ ಓಡಿಸ್ಕೊಂಡು ಹೋಗಿ ಸಪ್ಲೈ ಮಾಡ್ಕೊಂಡು,ವ್ಯವಹಾರ ಮಾಡ್ಬೇಕು ಅನ್ನಿಸುತ್ತಿತ್ತು,”ಎಂದಾಗ, ನಗೋದಿಲ್ಲ ಅಂತ ಹೇಳಿದ್ರೂ ನನ್ನಿಂದ ತಡೆಯಲಾರದೆ ನಗು ಕಟ್ಟೆಯೊಡೆದು ಹರಿಯಲಾರಂಭಿಸಿತು. ಅವರೂ ನಗುತ್ತಾ”ನೋಡಿದ್ರ ನಾನ್ ಹೇಳ್ಳಿಲ್ವ,ವಿಚಿತ್ರ ಆಸೆ ಅಂತಾ”ಅಂತ ಹೇಳಿ ತಾವೂ ನಗುವಿಗೆ ಜೊತೆಯಾದರು. ಮಾರನೆಯದಿನ ಶಾಲೆಯಲ್ಲೂ ಇದೇ ವಿಷಯದ ಚರ್ಚೆ ಮತ್ತು ನಗು.ಎಲ್ಲರ ಮನದಾಳದ ಆಸೆಗಳು ಹೇಳಿಕೊಳ್ಳ ಲು ಆಗದಿರುವುವು ಆಚೆ ಬರಲಾರಂಭಿಸಿದವು. ನನ್ನ ಸಹೋದ್ಯೋಗಿಯೊಬ್ಬರು ಮೆಲು ಮಾತಿನ,ಮೃದು ಸ್ವಭಾವದ, ಸಾಂಪ್ರದಾಯಿಕ ಉಡುಗೆ ತೊಡುಗೆಗಳ,ದೇವರು ದಿಂಡಿರ ಮೇಲೆ ಅಪಾರ ನಂಬಿಕೆ ಭಕ್ತಿ ಹೊಂದಿರುವ ಮಹಿಳೆ.ಅವರ ಆಸೆ ಮಾತ್ರ,ಅವರ ಬಾಯಲ್ಲೇ ಕೇಳಿದಂತೆ”ನನಗಂತೂ ಒಂದು ಬುಲ್ಲೆಟ್ ಬೈಕ್ ತೊಗೊಂಡು, ಬ್ಯಾಕ್ ಪ್ಯಾಕ್ ಹಾಕ್ಕೊಂಡು ಇಡೀ ಪ್ರಪಂಚ ಸುತ್ತಬೇಕು ಅನ್ನೋ ಆಸೆ ಇದೆ”ಎನ್ನುವುದನ್ನು ಕೇಳಿ,ಸಾಂಪ್ರದಾಯಿಕ ಮನಸ್ಸಲ್ಲಿ ಆಧುನಿಕತೆಗೆ ತುಡಿಯುವ ಚೈತನ್ಯವೂ ಇದೆ ಎನ್ನಿಸಿ ಖುಷಿಯಾಯಿತು. ಮರುದಿನ ಗೆಳತಿಯೊಬ್ಬಳು ಕರೆಮಾಡಿ ಹರಟುತ್ತಿದ್ದಾಗ ಅವಳಿಗೆ ಈ ಆಸೆಗಳ ವಿಷಯಗಳ ಹೇಳಿದಾಗ ಅವಳು”ಅಯ್ಯೋ ಅದಕ್ಕೇನು,ನನಗಂತೂ ದಿನಕ್ಕೊಂದು ರೀತಿಯ ವಿಚಿತ್ರ ಆಸೆಗಳು ಬರುತ್ತವೆ,ಯಾರ ಹತ್ತಿರ ಹೇಳೋದು? ನನಗೆ ನಾನೇ ಸಮಾಧಾನ ಮಾಡಿಕೊಂಡು ಸುಮ್ಮನಾಗುತ್ತೇನೆ.ಮೊನ್ನೆ ದಿನ ಏನಾಯಿತು ಗೊತ್ತಾ ನನ್ನ ಗಂಡನ ಸ್ನೇಹಿತರೊಬ್ಬರ ಕುಟುಂಬ ಮೊದಲ ಬಾರಿ ನಮ್ಮ ಮನೆಗೆ ಯಾವುದೋ ಊರಿಂದ ಬರುತ್ತಾ ಇದ್ದರು,ನಾನು ಅಡಿಗೆ ಎಲ್ಲಾ ಮಾಡಿಕೊಂಡು ಸತ್ಕಾರ ಮಾಡಲು ರೆಡಿಯಾಗಿದ್ದೆ . ಮಧ್ಯಾಹ್ನದಷ್ಟರಲ್ಲಿ ಅವರೆಲ್ಲ ಬಂದು ನನ್ನ ಗಂಡ ಪರಸ್ಪರ ಪರಿಚಯ ಕೂಡ ಮಾಡಿ ಕೊಟ್ಟರು, ಇವರ ಆ ಸ್ನೇಹಿತ ಎಷ್ಟು ಮುದ್ದು ಮುದ್ದಾಗಿದ್ದ ಅಂದರೆ ನನಗೆ ಇದ್ದಕ್ಕಿದ್ದಂತೆ ಆ ಮನುಷ್ಯನನ್ನು ನೋಡಿ ಚಿಕ್ಕ ಮಕ್ಕಳನ್ನು ನೋಡಿದರೆ ಎತ್ತಿಕೊಳ್ಳಬೇಕು ಅನ್ನೋ ಆಸೆಯಾಗುವುದಿಲ್ಲವ ಆ ರೀತಿ ಅನ್ನಿಸಿಬಿಟ್ಟಿತು. ಈ ಹುಚ್ಚಿಗೇನು ಹೇಳುವುದು.ನನ್ನ ಗಂಡನಿಗೆ ಹೇಳುವ ಧೈರ್ಯ ನನಗಾಗಲಿಲ್ಲ.ಬಚ್ಚಲು ಮನೆಗೆ ಹೋಗಿ ಜೋರಾಗಿ ನಕ್ಕು ಸುಮ್ಮನಾದೆ” ಎಂದಾಗ ಸೋಜಿಗ ವೆನಿಸಿ”ಅಲ್ಲ ಕಣೇ ಯಾಕೆ ಹಾಗನ್ನಿಸಿದ್ದು,ನೀನು ನೋಡಿದರೆ ಗೌರಮ್ಮನ ಹಾಗೆ ಇರ್ತಿಯಾ ಯಾವಾಗಲೂ,ಅದು ಯಾಕೆ ಅವನ ಮೇಲೆ ಹಾಗೆ ಅನ್ನಿಸಿತು”ಅಂದಿದಕ್ಕೆ,”ಗೊತ್ತಿಲ್ಲ ಕಣೆ,ಏನೋ ಆ ಕ್ಷಣ ಹಾಗನ್ನಿಸಿತು,ಆಮೇಲೆ ಅವರೆಲ್ಲ ಹೋದ ಮೇಲೆ ಏನೂ ಅನ್ನಿಸಲಿಲ್ಲ”ಎಂದು ಸುಮ್ಮನಾದಳು. ಹುಡುಕುತ್ತಾ ಹೋದರೆ ಪ್ರತಿಯೊಬ್ಬರಲ್ಲೂ ಈ ರೀತಿ ” ಯಾರಿಗಾದರೂ ಹೇಳಿದರೆ ನಗೆಪಾಟಲಿಗೆ ಈಡಾಗುವೆನೇನೋ ” ಅನ್ನಿಸುವ,ಮುಗ್ದ,ವಿಚಿತ್ರ ಬಯಕೆಗಳು ಇದ್ದೇ ಇರುತ್ತವೆ.ಮಕ್ಕಳಂತೂ ಬಿಡಿ, ಕೇಳುತ್ತಾ ಹೋದರೆ ಒಂದು ಕಿನ್ನರ ಪ್ರಪಂಚವನ್ನೇ ಸೃಷ್ಟಿ ಮಾಡುವಷ್ಟು ಕಥೆಗಳ ಹೇಳಿಯಾರು. ನನ್ನ ಮಕ್ಕಳಿಬ್ಬರೂ ಚಿಕ್ಕವರಿದ್ದಾಗ ನನ್ನ ಮನೆ ಕೆಲಸದ ಸಹಾಯಕ್ಕೆ ಸಾವಿತ್ರಮ್ಮ ಅಂತ ಒಬ್ಬರು ಮಹಿಳೆ ಬರುತ್ತಿದ್ದರು.ನನ್ನ ಶಾಲೆ ಮನೆಯಿಂದ ದೂರ ಇದ್ದುದರಿಂದ ದಿನವೂ ಬೆಳಿಗ್ಗೆ ಎದ್ದು ತರಾತುರಿಯಲ್ಲಿ ಹೊರಟು ಹೋಗುವ ಧಾವಂತದಲ್ಲಿರುತ್ತಿದ್ದ ನಾನು ಮಕ್ಕಳ ಮಾತುಗಳ ಕಡೆಗೆ ಅಷ್ಟು ಗಮನ ನೀಡಲು ಆಗದೆ,ಸುಮ್ಮನೆ ಅವರು ಹೇಳಿದ್ದಕ್ಕೆಲ್ಲಾ “ಹೂಂ” ಗುಟ್ಟಿ ಕೊಂಡು ಇರುತ್ತಿದ್ದೆ.ಅವರು ಹೇಳಿದ್ದಕ್ಕೆ ಸರಿಯಾದ ಉತ್ತರ ನನ್ನಿಂದ ಬಾರದ ಕಾರಣ ಅವರ ಗಮನವೆಲ್ಲ ಸಾವಿತ್ರಮ್ಮನ ಕಡೆ ತಿರುಗಿತು. ಅವಳೋ ಕೆಲಸ ಮಾಡಿಕೊಂಡೇ ಮಕ್ಕಳ ಜೊತೆ ಮಾತೇ ಮಾತು.”ಹೌದಾ ಪುಟ್ಟಾ,ಆಮೇಲೆ,ಓಹ್ ಹಂಗಾ,ಅಯ್ಯೋ ನಂಗೆ ಗೊತ್ತೇ ಇರಲಿಲ್ಲ”ಹೀಗೆ ಮಕ್ಕಳ ಜೊತೆ ಮಕ್ಕಳಾಗಿ ಮಾತನಾಡುತ್ತಾ ಇರುತಿದ್ದವಳನ್ನು ಮಕ್ಕಳಿಬ್ಬರೂ ಬಹಳ ಹಚ್ಚಿಕೊಂಡು ಬಿಟ್ಟಿದ್ದರು.ಅವರಿಗೆ ಗೊತ್ತಿದ್ದ ಭೂಮಿ ಮೇಲಿರೋ ವಿಷಯವನ್ನೆಲ್ಲ ಅವಳ ಕಿವಿಗೆ ತುಂಬಬೇಕು.ನನಗೆ ಕೆಲವು ಬಾರಿ ಅವರ ಕುಚೇಷ್ಟೆಯ ಮಾತುಗಳಿಗೆ ರೇಗಿ ಹೋದರೂ ಅವಳು ಮಾತ್ರ ಒಂದು ದಿನವೂ ಬೇಸರಿಸಿದವಳೇ ಅಲ್ಲ. ಆಗ ಒಂದು ದಿನ ಸಂಜೆ ಸುಮ್ಮನೆ ಕುಳಿತಿದ್ದಾಗ ಮಕ್ಕಳನ್ನು “ದೊಡ್ಡವರಾದ ಮೇಲೆ ಏನಾಗಬೇಕು ಅನ್ನೋ ಆಸೆ ಇದೆ “ಎಂದು ಕೆಣಕಿದೆ,ನನ್ನ ಮಗಳು ಪಟ್ ಅಂತ ” ನಾನಂತೂ ದೊಡ್ಡವಳಾದ ಮೇಲೆ ಮನೆ ಮನೆಗೆ ಹೋಗಿ ಪಾತ್ರೆ ತೊಳೆಯುವ ಸಾವಿತ್ರಮ್ಮ ಆಗ್ತೀನಿ”ಅಂತ ಘೋಷಿಸಿಯೆ ಬಿಟ್ಟಳು. ಆ ಉತ್ತರವನ್ನು ಕೇಳಿ ನಿಬ್ಬೆರಗಾದ ನನಗೆ ನಗು ತಡೆಯದಾದರೂ, ಮಕ್ಕಳ ನಿಷ್ಕಲ್ಮಶ ಮನಸ್ಸನ್ನು ಪ್ರೀತಿ ಸೆಳೆಯುವಷ್ಟು ಮತ್ತೇನೂ ಸೆಳೆಯದು ಅನ್ನಿಸಿತು. ಮಾರನೇ ದಿನ ಸಾವಿತ್ರಮ್ಮನಿಗೆ ಹೇಳಿದಾಗ ಅವಳ ಕಣ್ಣಾಲಿಗಳು ತುಂಬಿ ಬಂದು”ಅಯ್ಯೋ ನನ್ನ ಕಂದಾ” ಎಂದು ಮಗಳ ಮುದ್ದಿಸಿದ್ದೇ ಮುದ್ದಿಸಿದ್ದು. ಇನ್ನು ಶಾಲೆಯಲ್ಲಿ ಮಕ್ಕಳನ್ನು “ದೊಡ್ಡವರಾದ ಮೇಲೆ ಏನಾಗಬೇಕು ಅಂದುಕೊಂಡಿದ್ದೀರಿ ಎಂದು ಹೇಳಿ” ಎಂದು ಕೇಳಿದರೆ,ದೊಡ್ಡ ಮಕ್ಕಳಾದರೆ,”ಡಾಕ್ಟರ್,ಎಂಜಿನಿಯರ್, ಆರ್ಮಿ,ಡ್ರೈವರ್,ಪೊಲೀಸ್ ,ಟೀಚರ್”ಅಂತೆಲ್ಲ ಉತ್ತರ ಹೇಳಿದರೆ,ಚಿಕ್ಕವರಲ್ಲಿ, ಹುಡುಗರೆಲ್ಲ ದೊಡ್ಡ ಲಾರಿಯಿಂದ ಶುರುವಾಗಿ ರೈಲಿನವರೆಗೆ ಪ್ರಪಂಚದಲ್ಲಿರುವ ಎಲ್ಲಾ ವಾಹನಗಳನ್ನು ಓಡಿಸುವವರೆ.ಕೋಳಿ ,ಮೀನಂಗಡಿ ಇಡುವವರು, ಐಸ್ಕ್ರೀಮ್ ಡಬ್ಬದಲ್ಲಿ ಹೊತ್ತು ಮಾರುವವರು,ಸೈಕಲ್ ರಿಪೇರಿ,ಮೊಬೈಲ್ ರಿಪೇರಿ ಅಂಗಡಿ ಇಡುವವರು ಎಲ್ಲಾ ಸಿಕ್ಕರು.ಹುಡುಗಿಯರಲ್ಲಿ ಮಾತ್ರ ಬಹಳಷ್ಟು ಜನಕ್ಕೆಅವರ ಟೀಚರ್ ಥರ ಆಗೋ ಆಸೆ. ಇಷ್ಟೆಲ್ಲಾ ಹೇಳಿ ಇನ್ನು ನನ್ನ ಆಸೆ ಹೇಳದೆ ಇದ್ದರೆ ಹೇಗೆ.ಆಗಿನ್ನೂ ಹೈಸ್ಕೂಲ್ ನಲ್ಲಿದ್ದೆ.ಅಪಾರ ಓದುವ ಹುಚ್ಚಿದ್ದ ಅಪ್ಪ ತರುವ ಪುಸ್ತಕಗಳನ್ನೆಲ್ಲಾ ನಾನೂ ಓದುವ ಚಪಲ.ಒಂದು ದಿನ ಅಪ್ಪ ಒಂದು ಚಿಕ್ಕ ಪುಸ್ತಕ ತಂದು ಅದನ್ನು ಓದಲು ಕುಳಿತವರು ಮುಗಿಯುವ ತನಕ ಮೇಲೇಳಲೆ ಇಲ್ಲ. ಮಾರನೇ ದಿನ ನಾನು ‘ ಇದ್ಯಾವ ಪುಸ್ತಕ’ ಅನ್ನೋ ಕುತೂಹಲದಿಂದಾಗಿ ನೋಡಿದರೆ,ಅದು ಜಪಾನಿನ ಕೃಷಿ ವಿಜ್ಞಾನಿ ಮಸನೊಬು ಫುಕುವೋಕ ರವರ ,ಪೂರ್ಣಚಂದ್ರ ತೇಜಸ್ವಿಯವರು ಅನುವಾದಿಸಿದ್ದ “ಒಂದು ಹುಲ್ಲೆಸಳ ಕ್ರಾಂತಿ”ಪುಸ್ತಕ. ಓದಲು ಕುಳಿತಿದ್ದೆ ಬಂತು,ಮುಗಿಸುವ ತನಕ ಕೈಬಿಡಲು ಮನಸ್ಸಾಗಲಿಲ್ಲ. ಆ ಪುಸ್ತಕ ಒಳಗೊಂಡಿದ್ದ , ಫುಕುವೊಕರವರ, ‘ನಿಸರ್ಗದೊಂದಿಗೆ ಹೊಂದಿಕೊಂಡು ಮನುಷ್ಯ ನೆಮ್ಮದಿ ಯಾಗಿ ಹೇಗೆ ಬದುಕಬಹುದೆಂಬ ವಿಚಾರ ಧಾರೆ,ಅವರ ನೈಸರ್ಗಿಕ ಕೃಷಿ ಪದ್ಧತಿ ಅನುಭವಗಳು , ಮನುಷ್ಯ ಹೇಗೆ ಪ್ರಕೃತಿಯ ಒಂದು ಭಾಗ ಮಾತ್ರ ‘ ಎಂದೆಲ್ಲ ವಿವರಿಸಿದ್ದ ವಿಷಯಗಳು ,ಆಗ ಎಷ್ಟು ಇಷ್ಟವಾಯಿತೆಂದರೆ ತೊಗೊ ಅವತ್ತಿನಿಂದಲೆ ಕನಸು ಮನಸ್ಸಲ್ಲೆಲ್ಲ ನನ್ನದೇ ಆದ ಒಂದು ನೈಸರ್ಗಿಕ ಕೃಷಿ ಪದ್ಧತಿಯ ತೋಟ ಕಾಡ ಲಾರಂಭಿಸಿತು.ಆದರೆ ಯಾರಿಗಾದರೂ ಹೇಳುವುದುಂಟ! ಶಾಲೆಯಲ್ಲಿ ಆಗ ಒಂದು ಪರೀಕ್ಷೆಯಲ್ಲಿ ಕೇಳಿದ್ದ “ನಿಮ್ಮ ಭವಿಷ್ಯದ ಕನಸು “ಅನ್ನೋ ಬಗ್ಗೆ ಪ್ರಬಂಧ ಬರೆಯಲು ಹೇಳಿದ್ದಾಗ, ಪುಟಗಟ್ಟಲೆ ನನ್ನ ತೋಟದ ಕನಸಿನ ಬಗ್ಗೆ ಬರೆದಿದ್ದು ಬರೆದಿದ್ದೇ.ಆದರೆ ಆ ಕನಸು ನನಸಾಗುವುದು ಸಾಧ್ಯವೇ? ತವರು ಮನೆ ಜಮೀನು ಅಣ್ಣ ತಮ್ಮಂದಿರದ್ದು,ಗಂಡನ ಮನೆ ಜಮೀನು ಗಂಡನದ್ದು.ಆಸೆಯ ಹೇಳಿದರೆ ಸಿಗುವ ಉತ್ತರ “ನಿನಗೆ ತಲೆ ಕೆಟ್ಟಿದೆ”ಅಂತ. ಬಹುಶಃ ಕನಸು ಕಾಣುವುದು,ಆಸೆಗಳ ಪಡುವುದು ಹೆಣ್ಣು ಗಂಡುಗಳಿಬ್ಬರಿಗೂ ಸಾಮಾನ್ಯವಾಗಿ ಬಂದಿರುವ ಗುಣಗಳೇ. ಆದರೆ ಗಂಡು ಮಕ್ಕಳ ಆಸೆ ಕನಸುಗಳೆಂದೂ ವಿಚಿತ್ರ ವೆನಿಸುವುದಿಲ್ಲ. ಏನಾದರೂ ಭಿನ್ನ ಮಾರ್ಗದಲ್ಲಿ ಯೋಚಿಸಿ ಅದನ್ನು ಸಾಕಾರ ಮಾಡಿಕೊಳ್ಳಲು ಹೊರಟರೆ ಅವರು ಕಷ್ಟ ಪಟ್ಟು ಕೆಲಸ ಮಾಡಿದರೆ ಸಾಕು, ಅಂದುಕೊಂಡಿದ್ದೆಲ್ಲ ಸಿಕ್ಕರೂ ಸಿಗಬಹುದು.ಆದರೆ ಹೆಣ್ಣು ಮಕ್ಕಳ ಅಸಾಮಾನ್ಯ ಕನಸುಗಳು ಬಾಯಿಂದ ಆಚೆ ಬರಲೂ ಅಸಾಧ್ಯ ಧೈರ್ಯ ಬೇಕು,ಅಕಸ್ಮಾತ್ ಹೇಳಿಕೊಂಡರೂ ಅದನ್ನು ಸಹಜವಾಗಿ ಸ್ವೀಕರಿಸುವುದು ಎಲ್ಲರಿಂದ ಆಗದು. ಬಹುಶಃ ಮೇಲ್ವರ್ಗದವರಲ್ಲಿ, ಇಲ್ಲವೇ ಎಲ್ಲೋ ಕೆಲವರು ಅದೃಷ್ಟವಂತರಾಗಿದ್ದಲ್ಲಿ, ಗಟ್ಟಿ ಎದೆಯ ಧೈರ್ಯಶಾಲಿ ಗಳಾಗಿದ್ದಲ್ಲಿ, ಇಲ್ಲವೇ ಪ್ರೋತ್ಸಾಹಿಸುವ ಪೋಷಕರಿದ್ದರೆ ಮಾತ್ರ ವಿಚಿತ್ರ ಕನಸುಗಳು ನನಸಾಗುವುದು ಸಾಧ್ಯವೇನೋ. ಬಹುತೇಕ ಹೆಣ್ಣು ಮಕ್ಕಳಿಗೆ ಸಮಾಜ ನಿರ್ಮಿಸಿರುವ ಚೌಕಟ್ಟಿನೊಳಗೆ,ಆರಾಮದಾಯಕ ಕ್ಷೇತ್ರಗಳಲ್ಲೇ ತಮ್ಮ ತಮ್ಮ ಜೀವನ ರೂಪಿಸಿಕೊಳ್ಳುವ ಸಲಹೆ ಸೂಚನೆಗಳು ಸಿಗುವುದೇ ಹೆಚ್ಚು.ಅದರಾಚೆ ಯೋಚಿಸಿದರೆ ಕೆಲವು “ಅದು ಹೆಂಗಸರಿಗೆ ಸಾಧ್ಯವಿಲ್ಲ,ಅವರಿಂದಾಗದು”ಎಂದಾದರೆ, ಹಲವು ನಗೆಪಾಟಲಿಗೆ ಒಳಗಾಗುವ ವಿಷಯಗಳೇ. ಎಲ್ಲೋ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಹೊರತಾದ ಉದಾಹರಣೆಗಳು ಸಿಗಬಹುದೇನೋ. ಅನಿವಾರ್ಯವಾಗಿ ಬೇರೆ ದಾರಿ ಕಾಣದೆ ಜೀವನೋಪಾಯಕ್ಕಾಗಿ ಕೆಲವು ಹೆಂಗಸರು ಗಂಡಸರು ಮಾಡುವ ವೃತ್ತಿಗಳನ್ನು,ಉದಾಹರಣೆಗೆ,ಆಟೋ ಡ್ರೈವರ್, ಬಸ್, ಟ್ರೈನ್ ಡ್ರೈವರ್ ಗಳಂತಹ ಕೆಲಸ ಕೈಗೊಂಡಿರುವ ಉದಾಹರಣೆಗಳಿವೆ,ಆದರೆ ಅದೇ ವೃತ್ತಿ ಕೈಗೊಂಡು ಮಾಡುತ್ತೇನೆ ಅನ್ನುವ ಮನೋಭಾವ ಹೆಂಗಸರಲ್ಲಿಯೇ ಬರುವುದು ಅಪರೂಪದಲ್ಲಿ ಅಪರೂಪವೇ.ಅದನ್ನು ಸಹಜವಾಗಿ ಯಾರೂ ತೆಗೆದುಕೊಳ್ಳುವುದಿಲ್ಲ.ಯಾರಾದರೂ ಹುಡುಗಿ ಪೈಲಟ್ ಆದರೆ ಇಲ್ಲವೇ ಸೈನ್ಯ ಸೇರಿದರೆ ಅದು ದೊಡ್ಡ ಸಾಧನೆ ಎಂದು ಬಿಂಬಿಸುವುದುದಕ್ಕಿಂತ ಸಹಜವಾಗಿ ಯಾಕೆ ತೆಗೆದುಕೊಳ್ಳಬಾರದು. ಎಲ್ಲಾ ರೀತಿಯ ವಿದ್ಯಾಭ್ಯಾಸದ ಕೋರ್ಸ್ ಗಳು,ವೃತ್ತಿ ಪರ ತರಬೇತಿಗಳು,ಉದ್ಯೋಗಗಳು ಎಲ್ಲರಿಗೂ ಸಮಾನ ಅನ್ನುವ ಮನೋಭಾವ ಸಹಜವಾಗಿ ಮಕ್ಕಳಲ್ಲಿ ಯಾಕೆ ಬೆಳೆಸಬಾರದು.? ಆ ಸಮಾನತೆಯ ಸಮಾಜ ನಿರ್ಮಾಣ ಬಹುಶಃ ಸಧ್ಯಕ್ಕಂತೂ ಸಾಧ್ಯವಿಲ್ಲ. ಅಲ್ಲಿಯವರೆಗೆ ಇರುವ ಕನಸುಗಳ, ಆಸೆಗಳ ಅದುಮಿ. ಇಟ್ಟುಕೊಳ್ಳಲಾದೀತೇ. ಅವುಗಳಿಗೆ ಪರ್ಯಾಯವಾಗಿ ಬೇರೆ ಹವ್ಯಾಸಗಳ ಬೆಳೆಸಿಕೊಂಡು ಖುಷಿ ಪಡುವವರು ಇದ್ದಾರೆ.ಬುಲ್ಲೆಟ್ ಓಡಿಸಲಾಗದಿದ್ದರೂ ಸ್ಕೂಟಿ,ಕಾರ್ ಓಡಿಸುವುmದು ಕಲಿತು ಓಡಾಡುವುದು ಇದ್ದೇ ಇದೆ. ಪುಕುವೋಕಾನ ತೋಟ ನನ್ನ ಮನೆಯ ಬಾಲ್ಕನಿಯ ಕುಂಡಗಳಲ್ಲಿ ಅರಳುತ್ತಿದೆ.ನಾನಂತೂ ಕುಂಡದಲ್ಲಿ ಇರುವ ಗಿಡಗಳ ಜೊತೆಗೆ ಬೇರೆ ಯಾವ ಗಿಡ ಹುಟ್ಟಿದರೂ ಅದ ಕೀಳಲಾರೆ.ಗಿಡಗಳಿಗೆ ರೋಗ ,ಕೀಟ ಬಾಧೆ ತಗುಲಿದರೆ ಯಾವ ಕೀಟನಾಶಕಗಳ ಕೂಡ ಬಳಸುವುದಿಲ್ಲ.ಗಿಡ ಗಟ್ಟಿಯಾಗಿದ್ದರೆ ತಾನೇ ಬದುಕುತ್ತದೆ ಇಲ್ಲದೇ ಹೋದರೆ ಇನ್ನೊಂದು ಗಿಡಕ್ಕೆ ದಾರಿ ಮಾಡಿಕೊಟ್ಟು ಮಣ್ಣು ಸೇರುತ್ತದೆ. ಈ ರೀತಿ ವರುಷಗಟ್ಟಲೆ ಕುಂಡದ ಸೀಮಿತ ಮಣ್ಣು,ಬಾಲ್ಕನಿಯ ಕೊಂಚ
ವಿಚಿತ್ರ ಆಸೆಗಳು…ಹೀಗೊಂದಷ್ಟು, Read Post »
You cannot copy content of this page