ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಸ್ತುತ

ಪ್ರಕೃತಿ ಹೇಳಿದ ಪಾಠ ಗಣೇಶ್ ಭಟ್ ಕೊರೊನಾ ಮುಖಾಂತರ ಪ್ರಕೃತಿ ಹೇಳಿದ ಪಾಠ ವ್ಯಕ್ತಿ ಅಥವಾ ಸಮುದಾಯದ ಬದುಕಿನಲ್ಲಿ ನಡೆಯುವ ಯಾವ ಘಟನೆಯೂ ಆಕಸ್ಮಿಕವಲ್ಲ. ಪ್ರತಿಯೊಂದಕ್ಕೂ ಒಂದು ಕಾರಣವಿರುತ್ತದೆ; ಅದು ತಿಳಿಯದಾಗ ನಾವು ಆಕಸ್ಮಿಕ ಎಂದು ಹೇಳುತ್ತೇವೆ ಅಥವಾ ಹಾಗೆ ಭಾವಿಸುತ್ತೇವೆ. ಇಡೀ ಮಾನವ ಕುಲವನ್ನು ನಡುಗಿಸುತ್ತಿರುವ ಕೊರೊನಾ ಸಾಂಕ್ರಾಮಿಕ ಪಿಡುಗೂ ಕೂಡಾ ಆಕಸ್ಮಿಕವಲ್ಲ. ಪ್ರಕೃತಿಯ ಮೇಲೆ ಮಾನವ ನಡೆಸಿದ, ನಡೆಸುತ್ತಿರುವ ದೌರ್ಜನ್ಯದ ಪ್ರತಿಕ್ರಿಯೆ ಅಷ್ಟೇ. ಕಳೆದ ಮೂರು ಶತಮಾನಗಳಿಂದ ಮಾನವ ನಿರ್ಮಿಸಿಕೊಂಡಿದ್ದ ಆರೋಗ್ಯ ಸೌಲಭ್ಯಗಳು, ಆಧುನಿಕ ಚಿಕಿತ್ಸಾ ವಿಧಾನಗಳು, ಕೂಡಿಹಾಕಿಕೊಂಡ ಸಂಪತ್ತುಗಳೆಲ್ಲವೂ ವೈರಾಣುವಿನ ಎದುರು ನಿಷ್ಪಲವಾದವು. ಯಾಕೆಂದರೆ , ಪ್ರಕೃತಿಯ ನಿಯಮದ ವಿರುದ್ಧವಾಗಿ ಮಾನವನ ಆಹಾರ ಪದ್ಧತಿ ಬೆಳೆದು ಬಂದಿತ್ತು. ಪಶು, ಪಕ್ಷಿ, ಪ್ರಾಣ ಗಳು ಇರುವುದೇ ತನ್ನ ಜಿವ್ಹಾ ಚಾಪಲ್ಯ ತಣ ಸುವುದಕ್ಕಾಗಿ ಎಂಬ ರೀತಿಯಲ್ಲಿ ಮಾನವರು ವರ್ತಿಸುತ್ತಿದ್ದಾರೆ. ಕೊರೊನಾ ಪೀಡಿತರ ಆಹಾರ ಪದ್ಧತಿಯನ್ನು ಗಮನಿಸಿದಾಗ ಸಸ್ಯಾಹಾರಿಗಳಿಗಿಂತ ಮಾಂಸಾಹಾರಿಗಳೇ ಹೆಚ್ಚಿನ ಪ್ರಮಾಣದಲ್ಲಿರುವುದು ಕಂಡು ಬರುತ್ತದೆ. ಧಾನ್ಯ, ಹಣ್ಣು, ತರಕಾರಿಗಳೇ ಮಾನವನ ಸಹಜ ಆಹಾರವಾಗುವ ರೀತಿಯಲ್ಲಿ ಜೀರ್ಣಾಂಗಗಳನ್ನು ಪ್ರಕೃತಿ ರೂಪಿಸಿದೆ. ಮಾಂಸಾಹಾರ ಸೇವನೆ ಪ್ರಕೃತಿ ವಿರೋಧಿಯಾಗಿರುವುದರಿಂದ ಅಂಥವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ, ಬಹು ಬೇಗ ರೋಗಗ್ರಸ್ತರಾಗುತ್ತಾರೆ. ಕೊರೊನಾ ವೈರಾಣುವಿನ ಕುರಿತು ಅನಗತ್ಯವಾಗಿ ಭಯ ಹುಟ್ಟಿಸಲಾಗುತ್ತಿದೆ. ಮನೆಯಿಂದ ಹೊರಗೆ ಬಂದರೆ ಕೊರೊನಾ ಭೂತ ಹೊತ್ತೊಯ್ದು ಸತ್ತೇ ಹೋಗುತ್ತೇವೆಂದು ಜನ ಭಯಭೀತರಾಗಿದ್ದಾರೆ. ಈ ವೈರಾಣುವಿನಿಂದ ಪೀಡಿತರಾಗಿ ಮರಣಹೊಂದಿದವರಲ್ಲಿ ಹೆಚ್ಚಿನವರು ಈಗಾಗಲೇ ಇತರೆ ರೋಗಗಳಿಂದ ಬಳಲುತ್ತಿರುವವರು ಎಂದು ಸಾಬೀತಾಗಿದೆ. ಭಾರತದಲ್ಲಿ ಸಂಭವಿಸಿದ ಕೊರೊನಾ ಸಾವುಗಳಲ್ಲಿ ಶೇಕಡಾ 85 ಜನರಿಗೆ ಗಂಭೀರ ಸ್ವರೂಪದ ಇತರೆ ಕಾಯಿಲೆಗಳಿದ್ದವೆಂದು ಸರ್ಕಾರವೇ ಹೇಳುತ್ತಿದೆ. ಮಧುಮೇಹ, ಕ್ಯಾನ್ಸರ್, ಕ್ಷಯ, ಹೃದಯಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಬಹುಬೇಗ ವೈರಾಣು ರೋಗಕ್ಕೆ ಬಲಿಯಾಗುತ್ತಾರೆಂಬುದು ಸಿದ್ಧವಾಗಿದೆ. ಪ್ರಕೃತಿ ವಿರೋಧಿ ಬದುಕಿನ ಜೀವನ ವಿಧಾನವೇ ಇಂತಹ ಕಾಯಿಲೆಗಳ ಮೂಲ ಕಾರಣವೆಂಬುದು ವೈದ್ಯ ವಿಜ್ಞಾನದ ಹೇಳಿಕೆ. ಕೊರೊನಾ ಪ್ರಸರಣ ತಡೆಯುತ್ತೇವೆಂಬ ಭ್ರಮೆಯಲ್ಲಿ ಹಲವು ದೇಶಗಳು ಲಾಕ್‍ಡೌನ್ ಘೋಷಿಸಿಕೊಂಡು, ಆರ್ಥಿಕ ಚಟುವಟಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿಕೊಂಡಿವೆ. ಇದರ ಪರಿಣಾವದಿಂದಾಗಿ ಕಲುಷಿತಗೊಂಡಿದ್ದ ಎಷ್ಟೋ ನದಿಗಳು ಶುದ್ಧವಾಗುತ್ತಿವೆ; ವಾಯುಮಾಲಿನ್ಯ ಕಡಿತಗೊಂಡಿದೆ, ಪರಿಸರ ಸ್ವಚ್ಛಗೊಳ್ಳುತ್ತಿದೆ, ಇದೇ ರೀತಿ ಲಾಕ್‍ಡೌನ್ ತೆರವುಗೊಂಡ ನಂತವೂ ಮುಂದುವರಿಯುತ್ತದೆಂದು ನಂಬಲು ಯಾವುದೇ ಆಧಾರಗಳಿಲ್ಲ. ಪ್ರಕೃತಿಯನ್ನು ದೋಚಿಯೇ ಮಾನವನ ಭೌತಿಕ ಸೌಲಭ್ಯಗಳನ್ನು ಬೆಳೆಸಿಕೊಳ್ಳಬೇಕೆಂಬ ತಪ್ಪುಗ್ರಹಿಕೆ ಹಾಗೂ ಸ್ವಾರ್ಥಕೇಂದ್ರಿತ ಚಿಂತನೆಯ ಆಧಾರದಲ್ಲಿ ರೂಪುಗೊಂಡಿರುವ ಬಂಡವಾಳವಾದಿ ಚಿಂತನೆಯಿಂದ ನಮ್ಮ ಆರ್ಥಿಕ ರೀತಿ- ನೀತಿಗಳು ರೂಪುಗೊಂಡಿವೆ. ದಶಕಗಳಿಂದಲೂ ಪರಿಸರಕ್ಕೆ ವಿಷ ಕಕ್ಕುತ್ತಿದ್ದ ಉದ್ಯಮಗಳು ಲಾಕ್‍ಡೌನ್ ತೆÉರವಿನ ನಂತರ ಕಾರ್ಯಾರಂಭ ಮಾಡಿ, ತಮ್ಮ ಮಾಲಿನ್ಯಕಾರಿ ಕ್ರಮವನ್ನು ಮುಂದುವರಿಸುತ್ತವೆ. ಇವುಗಳನ್ನು ತಡೆಯುವ, ಪರಿಸರ ಸ್ನೇಹಿ ಉದ್ಯಮನೀತಿಯನ್ನು ರೂಪಿಸಿಕೊಂಡಿರದ ಕಾರಣಕ್ಕಾಗಿ ಮುಂದೆ ಇನ್ನೊಂದು ದುರಂತಕ್ಕೆ ಆವ್ಹಾನ ನೀಡುವ ಸಿದ್ಧತೆ ನಡೆಸುತ್ತಿದ್ದೇವೆ. ಕಳೆದ 15 ವರ್ಷಗಳಿಂದೀಚೆಗೆ ಒಂದಾದ ನಂತರ ಒಂದರಂತೆ ವೈರಸ್‍ನ ಹೊಸ ಹೊಸ ರೂಪಗಳು ಮಾನವ ಸಮಾಜವನ್ನು ಕಾಡುತ್ತಿವೆ; ಆದರೂ ನಾವು ಇನ್ನೂ ಪಾಠ ಕಲಿತಿಲ್ಲ. ಚೀನಾ ದೇಶ ತೋಡಿದ ಲಾಕ್‍ಡೌನ್ ಎಂಬ ಖೆಡ್ಡಾದಲ್ಲಿ ಪಾಶ್ಚಾತ್ಯ ದೇಶಗಳು ಸುಲಭದಲ್ಲಿ ಬಿದ್ದವು. ಭಾರತ ತಾನಾಗಿಯೇ ಈ ಖೆಡ್ಡಾದಲ್ಲಿ ಹಾರಿ ಸಿಲುಕಿಕೊಂಡಿದೆ. ಅಂತರಾಷ್ಟ್ರೀಯ ಮನ್ನಣೆ ಗಳಿಸುವ ಉದ್ದೇಶದಿಂದ, ಯಾವ ಪೂರ್ವ ತಯಾರಿಯೂ ಇಲ್ಲದೆಯೇ ಏಕಾಏಕಿ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದಾಗಿ ಕೋಟಿಗಟ್ಟಲೇ ಜನರು ಅನಗತ್ಯವಾಗಿ ತೊಂದರೆಗೆ ಸಿಲುಕಿದರು. ವೈರಿ ಪಡೆಯ ಮೇಲೆ ಆಕ್ರಮಣ ಮಾಡುವ ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲಿ ಲಾಕ್‍ಡೌನ್ ಘೋಷಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಲಾಗಿದೆ. ಸಾಕಷ್ಟು ಪೂರ್ವ ತಯಾರಿ, ಪೂರ್ವ ಸೂಚನೆಗಳನ್ನು ನೀಡಿ ಲಾಕ್‍ಡೌನ್ ಜಾರಿಗೆ ತಂದಿದ್ದರೆ ಇಷ್ಟೊಂದು ಆವಾಂತರಗಳಾಗುತ್ತಿರಲಿಲ್ಲ. ಪೋಲೀಸ್ ಬಲವನ್ನು ನೆಚ್ಚಿಕೊಂಡು ಜನರನ್ನು ಬಲವಂತವಾಗಿ ಮನೆಗೆ ಸೀಮಿತಗೊಳಿಸಬೇಕಿರಲಿಲ್ಲ. ಸರ್ಕಾರದ ಬೆದರಿಕೆ , ರೋಗದ ಭಯ ಯಾವುದನ್ನೂ ಲೆಕ್ಕಿಸದೇ, ತಮ್ಮ ಊರುಗಳಿಗೆ ವಾಪಸು ಹೋಗಲು ಜನರು ಸಾಲುಗಟ್ಟಿದರು; ನೂರಾರು ಕಿಲೋ ಮೀಟರ್ ನಡೆದೇ ಸಾಗಿದರು. ಕೆಲಸವನ್ನು ಕಳೆದುಕೊಂಡು, ದುಡಿಮೆಯ ಅವಕಾಶವಿಲ್ಲದೇ, ಉಪವಾಸ ಸಾಯುವುದಕ್ಕಿಂತ, ತಮ್ಮ ಊರನ್ನು ಸೇರಬೇಕೆಂಬ ತವಕ, ರೋಗ ಪೀಡಿತರಾಗಿ ತಮ್ಮ ಊರಿನಲ್ಲಿ ಸತ್ತರೂ ಚಿಂತೆಯಿಲ್ಲವೆಂಬ ಅವರ ಆಕ್ರಂದನ ಅಧಿಕಾರದಲ್ಲಿದ್ದವರಿಗೆ ಅರ್ಥವೇ ಆಗಲಿಲ್ಲ. ಯಾಕೆಂದರೆ ಈ ರೀತಿಯಾಗಿ ನಡೆಯುವ ಕಾರ್ಮಿಕರ ಮರುವಲಸೆಯನ್ನು ಅವರು ನಿರೀಕ್ಷಿಸಿರಲಿಲ್ಲ. ದಿನದ ದುಡಿಮೆಯನ್ನು ಆಧರಿಸಿಯೇ ಬದುಕಬೇಕಾದ ಸ್ಥಿತಿಯಲ್ಲಿರುವ ಕಾರ್ಮಿಕರು, ಸ್ವ- ಉದ್ಯೋಗಿಗಳು, ಚಿಕ್ಕ ಪುಟ್ಟ ವ್ಯಾಪಾರಿಗಳು, ಸಣ್ಣ ಉದ್ದಿಮೆದಾರರು, ರೈತರುಗಳಿಗೆ ಆಗುವ ಕಷ್ಟವೂ ಸರ್ಕಾರ ನಡೆಸುವವರು ಗಂಭೀರವಾಗಿ ಪರಿಗಣ ಸಿಯೇ ಇಲ್ಲ. ಸರ್ಕಾರದಿಂದ ಒಂದಷ್ಟು ಕೊಡುಗೆಗಳನ್ನು ಕಾಲಕಾಲಕ್ಕೆ ಘೋಷಿಸಿ, ಇವರಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಸಂತುಷ್ಟಗೊಳಿಸಲು ಸಾಧ್ಯವೆಂದು ರಾಜಕಾರಣ ಗಳಿಗೆ ತಿಳಿದಿದೆ. ಅತಿ ಶ್ರೀಮಂತ ವರ್ಗ ಮತ್ತು ಆಳುವ ಪಕ್ಷಕ್ಕೆ ದೊಡ್ಡ ಮೊತ್ತದ ದೇಣ ಗೆ ನೀಡುವವರ ಹಿತಾಸಕ್ತಿ ಕಾಯುವುದೇ ತಮ್ಮ ಗುರಿ ಎಂಬಂತೆ ಸರ್ಕಾರದ ನೀತಿಗಳು ರೂಪುಗೊಳ್ಳುತ್ತಿವೆ. ಬಡವರಿಗೆ ಲಾಕ್‍ಡೌನ್ ಸಂದರ್ಭದಲ್ಲಿ ಉಚಿತ ಆಹಾರ ಪದಾರ್ಥ ನೀಡಿ ಸಂತುಷ್ಟಿಗೊಳಿಸುವ ಪ್ರಯತ್ನ ನಡೆದಿದೆ. ಅಕ್ಕಿ, ಬೇಳೆಯ ಹೊರತಾಗಿ ಇತರ ವೆಚ್ಚಗಳಿಗಾಗಿ ಅವರು ಏನು ಮಾಡಬೇಕೆಂಬ ಕುರಿತು ಸರ್ಕಾರ ನಡೆಸುವವರಿಗೆ ಯೋಚನೆ ಇದ್ದಂತಿಲ್ಲ. ಅತ್ತ ಬಿಪಿಎಲ್ ಕಾರ್ಡ್ ಹೊಂದಿರದ, ಇತ್ತ ದೊಡ್ಡ ಉಳಿತಾಯವನ್ನೂ ಹೊಂದಿರದ ಸ್ವ- ಉದ್ಯೋಗಿಗಳು, ಚಿಕ್ಕ ವ್ಯಾಪಾರಿಗಳು, ಸಣ್ಣ ಉದ್ದಿಮೆದಾರರ ಸಂಕಷ್ಟಗಳ ಕುರಿತು ಲಾಕ್‍ಡೌನ್ ಮಾಡಿ ಒಂದು ತಿಂಗಳಾಗುತ್ತಿದ್ದರೂ ಸರ್ಕಾರದ ಸ್ಪಂದನೆಯಿಲ್ಲ. ಬಂಡವಾಳವಾದದ ಮೂಲತತ್ವವೇ ಲಾಭ ಗಳಿಕೆಯನ್ನು ಹೆಚ್ಚಿಸುವುದು. ಭೂಮಿ, ನೈಸರ್ಗಿಕ ಸಂಪನ್ಮೂಲ, ಮಾನವ ಶಕ್ತಿಯನ್ನು ಬಳಸಿ ಉದ್ಯಮ ನಡೆಸುವಾಗ, ಒಳಸುರಿಗಳು ಆದಷ್ಟು ಕಡಿಮೆ ವೆಚ್ಚದಲ್ಲಿ ಲಭ್ಯವಾಗಬೇಕು ಹಾಗೂ ಮಾರಾಟ ಮಾಡುವಾಗ ಅತಿ ಹೆಚ್ಚು ಲಾಭ ಸಿಗಬೇಕೆಂಬ ನೀತಿ ಅನುಸರಿಸಲಾಗುತ್ತಿದೆ. ಇದು ನಿಸರ್ಗ ಹಾಗೂ ಮಾನವರ ಶೋಷಣೆಗೆ ಕಾರಣವಾಗುತ್ತದೆ. ಕೇಂದ್ರೀಕೃತ ಉದ್ದಿಮೆಗಳಿಂದಾಗಿ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಇದರಿಂದಾಗಿ ನಗರಗಳ ಅವ್ಯವಸ್ಥಿತ ಬೆಳವಣ ಗೆ, ಕೊಳೆಗೇರಿಗಳು ಹೆಚ್ಚುತ್ತವೆ. ಪೃಥ್ವಿಯ ಎಲ್ಲೆಡೆ ಪ್ರಕೃತಿ ಸಂಪನ್ಮೂಲಗಳನ್ನು ಹಂಚಿದೆ. ಅವನ್ನು ಗುರ್ತಿಸಿ ಬಳಸುವ ಬುದ್ದಿಮತ್ತೆಯನ್ನು ಮಾನವನಿಗೆ ನೀಡಿದೆ. ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಆಥಿರ್üಕ ಚಟುವಟಿಕೆಗಳು ನಡೆದು ಜನರು ತಾವಿರುವ ಊರಿನಲ್ಲಿ ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳಲು ಪ್ರಕೃತಿ ಅವಕಾಶ ಸೃಷ್ಟಿಸಿದೆ. ಆದರೆ ಮಾನವನ ದುರಾಸೆಯಿಂದಾಗಿ ಇದರ ವಿರುದ್ಧ ದಿಸೆಯಲ್ಲಿ ಸಮಾಜ ನಡೆಯುತ್ತಿದೆ. ಚಿಕ್ಕಪುಟ್ಟ ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವದು ಅನಿವಾರ್ಯವಾಗುತ್ತಿದೆ. ಇಂತಹ ನಿಸರ್ಗ ವಿರೋಧಿ ವ್ಯವಸ್ಥೆಗೆ ಕಾರಣವಾದ ಬಂಡವಾಳವಾದವು ಪ್ರಕೃತಿ ವಿರೋಧಿ. ಇಡೀ ಜಗತ್ತು ಬಂಡವಾಳವಾದವನ್ನು ಅನುಸರಿಸುತ್ತಿರುವುದರಿಂದ ಹೊರ ಬರಲು ಪ್ರಕೃತಿ ಎಚ್ಚರಿಸುತ್ತಿದೆ. ಭಾರತದಲ್ಲಿ ಲಾಕ್‍ಡೌನ್ ಪ್ರಾರಂಭವಾದಾಗಿನಿಂದ ಮರುವಲಸೆಯ ಮಹಾಪರ್ವ ಪ್ರಾರಂಭವಾಗಿದೆ. ಇದು ಬಹು ಗಂಭೀರವಾದ ಸಮಸ್ಯೆಯೆಂಬುದನ್ನು ಆಳುವ ಪ್ರಭುಗಳು ಅರ್ಥ ಮಾಡಿಕೊಂಡಂತೆ ಕಾಣುವುದಿಲ್ಲ. ಲಾಕ್‍ಡೌನ್‍ಗೂ ಮೊದಲೇ ಪ್ರಾರಂಭವಾದ ಆರ್ಥಿಕ ಹಿಂಜರಿತದಿಂದ ಅದಾಗಲೇ ಇದ್ದ ನಿರುದ್ಯೋಗ ಸಮಸ್ಯೆಯ ತೀವ್ರತೆ ಹೆಚ್ಚುತ್ತಿದೆ. ಅವೈಜ್ಞಾನಿಕ ಲಾಕ್‍ಡೌನ್ ಪರಿಣಾಮದಿಂದಾಗಿ ಸ್ಥಗಿತವಾಗಿರುವ ಉದ್ದಿಮೆ, ವ್ಯಾಪಾರ-ವಹಿವಾಟುಗಳು ಪ್ರಾರಂಭವಾಗಲು ತಿಂಗಳುಗಳೇ ಬೇಕು. ಪೂರ್ಣ ಪ್ರಮಾಣದಲ್ಲಿ ನಡೆಯಲು ಆರು ತಿಂಗಳಿನಲ್ಲೂ ಸಾಧ್ಯವಾಗದು. ಇದರಿಂದಾಗಿ ಹೊಸ ಉದ್ಯೋಗಗಳು ಸೃಷ್ಟಿಯಾಗದೇ, ಇರುವ ಉದ್ಯೋಗಾವಕಾಗಳು ಕ್ಷೀಣ ಸುವ ಸಾಧ್ಯತೆಗಳಿವೆ. ರೈತರು ಬೆಳೆದ ಬೆಳೆಗಳು ಹೊಲದಲ್ಲೇ ನಷ್ಟವಾಗುತ್ತಿವೆ ಅಥವಾ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಹೈನುಗಾರರು, ಪಶು ಸಂಗೋಪನಾಕಾರರು, ಮೀನುಗಾರರ ಪರಿಸ್ಥಿತಿ ಕೂಡಾ ಆಶಾದಾಯಕವಾಗಿಲ್ಲ. ಹೀಗಿರುವಾಗ ಜನಸಾಮಾನ್ಯರ ಖರೀದಿ ಶಕ್ತಿ ಕುಂಠಿತವಾಗಿ ಇಡೀ ಅರ್ಥವ್ಯವಸ್ಥೆಯ ಹಿಂಜರಿತ ತೀವ್ರವಾಗುತ್ತದೆ. ಇವುಗಳ ಪರಿಣಾಮ ನಗರಗಳ ಉದ್ಯಮಗಳ ಹಿನ್ನೆಡೆ, ಉದ್ಯೋಗ ನಷ್ಟ ಹಾಗೂ ಕಾರ್ಮಿಕರ ಮರು ವಲಸೆಯಲ್ಲಿ ಹೆಚ್ಚಳವಾಗಲಿದೆ. ಈ ಮಹಾ ಮರುವಲಸೆಯ ಪರ್ವವನ್ನು ತಡೆಯುವ ಅಥವಾ ಅದನ್ನು ಪರಿಹರಿಸುವ ಯಾವ ಚಿಂತನೆ, ಕಾರ್ಯ ಯೋಜನೆಗಳು ಇಂದಿನ ಸರ್ಕಾರಗಳಿಗೆ ಇಲ್ಲ. ಇದರಿಂದಾಗಿ ಗ್ರಾಮಗಳಲ್ಲಿ ನಿರುದ್ಯೋಗ, ಸಾಮಾಜಿಕ ಸಂಘರ್ಷಗಳು ಪ್ರಾರಂಭವಾಗಲಿವೆ. ಮಾರ್ಚ್‍ನಲ್ಲಿ 21 ದಿನಗಳ ಲಾಕ್‍ಡೌನ್ ಘೋಷಿಸುವಾಗ ಪ್ರಧಾನಿಯವರು ದೇಶವನ್ನು ರಕ್ಷಿಸುವ ಸಲುವಾಗಿ ಈ ನಿರ್ಣಯ ಮಾಡಿರುವುದಾಗಿ ಹೇಳಿದ್ದರು. ಮನೆಯಲ್ಲಿ ಉಳಿಯದೇ ಹೊರಗೆ ಬಂದರೆ ಆರ್ಥಿಕವಾಗಿ ದೇಶ 21 ವರ್ಷಗಳಷ್ಟು ಹಿಂದೆ ಹೋಗುವುದಾಗಿ ಎಚ್ಚರಿಸಿದ್ದರು. ಕೇಂದ್ರದ ಶ್ರೀಮಂತರ ಪರ ಆರ್ಥಿಕ ನೀತಿ, ಅವೈಜ್ಞಾನಿಕ ರೀತಿಯಲ್ಲಿ ಅನುಷ್ಟಾನಗೊಳಿಸಿದ ನೋಟು ರದ್ದತಿ ಹಾಗೂ ಅಗತ್ಯವಲ್ಲದ ಲಾಕ್‍ಡೌನ್ ಹೇರಿಕೆಯಿಂದ ದೇಶದ ಜನಸಾಮಾನ್ಯರ ಆರ್ಥಿಕ ಸ್ಥಿತಿ ಹದಗೆಟ್ಟಿರುವುದು ಅವರಿಗೆ ಕಾಣುತ್ತಿಲ್ಲವೇ? ಹೆಚ್ಚಿನ ಭಾರತೀಯರು ದೇಶದ ಅರ್ಥವ್ಯವಸ್ಥೆಯಲ್ಲಿ ವಿಶ್ವಾಸವನ್ನೇ ಕಳೆದುಕೊಂಡಿರುವುದು ಅವರಿಗೆ ಗೋಚರಿಸುತ್ತಿಲ್ಲವೇ? ಬೆರಳೆಣ ಕೆಯ ಬಂಡವಾಳಶಾಹಿಗಳ ಅನುಕೂಲಕ್ಕಾಗಿ ಇಡೀ ದೇಶವನ್ನು ಸಂಕಷ್ಟಕ್ಕೆ ದೂಡಿದರೂ, ಬುದ್ದಿಯನ್ನು ಒತ್ತೆಯಿಟ್ಟಿರುವ ಮಾಧ್ಯಮದವರು ಹಾಗೂ ಬುದ್ದಿಜೀವಿಗಳೆನಿಸಿಕೊಂಡವರು ಜೈಕಾರ ಹಾಕುತ್ತಿದ್ದಾರೆ. ಯಾಕೆಂದರೆ ಇವರು ಯೋಚಿಸುವುದಕ್ಕೂ ಲಾಕ್‍ಡೌನ್ ವಿಧಿಸಿಕೊಂಡಿದ್ದಾರೆ. ಬಂಡವಾಳಶಾಹಿಗಳ ಹಂಗಿನಲ್ಲಿರುವ, ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ತಮ್ಮ ಬುದ್ಧಿಶಕ್ತಿಯನ್ನೇ ಮಾರಾಟ ಮಾಡಿಕೊಂಡಿರುವವರು ಮಾಧ್ಯಮಗಳಲ್ಲಿ ಹೊಗಳುಭಟರಾಗಿದ್ದಾರೆ. ಒಪ್ಪೊತ್ತಿನ ತುತ್ತಿಗಾಗಿ ಪರಿತಪಿಸುವವರ ಕಷ್ಟ ಇವರಿಗೆ ಅರ್ಥವೇ ಆಗುವುದಿಲ್ಲ. ಸರ್ಕಾರದ ಹಾಗೂ ಫೋಟೊ ಪ್ರಿಯ ದಾನಿಗಳ ಔದಾರ್ಯದಲ್ಲೇ ಜನರು ಸದಾ ಬದುಕುತ್ತಿರಬೇಕೆಂದು ಇವರು ಬಯಸುತ್ತಾರೆ. ಸಾಂಕ್ರಾಮಿಕ ರೋಗ ನಿರ್ವಹಣಾ ತಜ್ಞರ ಅಭಿಪ್ರಾಯದಂತೆ ಲಾಕ್‍ಡೌನ್‍ನಿಂದ ಕೊರೊನಾ ನಿರ್ಮೂಲನೆ ಸಾಧ್ಯವಿಲ್ಲ. ಇದು ತೆರವುಗೊಂಡು ಓಡಾಟ ಪ್ರಾರಂಭವಾದೊಡನೆ ಸೋಂಕು ತಗಲುವವರ ಪ್ರಮಾಣ ಒಮ್ಮೆಲೇ ಹೆಚ್ಚಾಗಲಿದೆ. ( ಆ ಸಂದರ್ಭದಲ್ಲಿ ಲಾಕ್‍ಡೌನ್ ಸಮರ್ಥಕರು ಪುನಃ ಕ್ರಿಯಾಶೀಲರಾಗುತ್ತಾರೆ) ಆದರೆ ಅದಕ್ಕಾಗಿ ಗಾಬರಿ ಪಡಬೇಕಾದ ಅಗತ್ಯವಿಲ್ಲವೆಂದು ಅವರು ಹೇಳುತ್ತಾರೆ. 5 ರಿಂದ 60 ವಯಸ್ಸಿನವರಿಗೆ ಕೊರೊನಾ ಸೋಂಕು ತಗಲುವುದರಿಂದ ಅವರಿಗೆ ಹೆಚ್ಚಿನ ತೊಂದರೆಯೇನೂ ಆಗುವುದಿಲ್ಲ. ಬದಲಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಸೋಂಕು ರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ. ಇಂದು ಪ್ರಚಾರ ಮಾಡುತ್ತಿರುವಷ್ಟು ಕೊರೊನಾ ಅಪಾಯಕಾರಿಯಲ್ಲವೆಂದು ವಾದಿಸುವವರ ಹೇಳಿಕೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಲಾಗುತ್ತಿದೆ. ಶುದ್ಧ ಗಾಳಿಯ ಸೇವನೆ , ನಡಿಗೆ, ಧನಾತ್ಮಕ ಚಿಂತನೆಗಳು, ಮನಸ್ಸಿಗೆ ಉಲ್ಲಾಸ ನೀಡುವ ದೈಹಿಕ ಚಟುವಟಿಕೆಗಳಿಂದ ಉಸಿರಾಟ ಸಂಬಂಧಿತ ಕೊರೊನಾ ಹಾಗೂ ಇತರ ರೋಗಗಳ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯ ಎನ್ನುತ್ತಾರೆ ತಜ್ಞ ವೈದ್ಯರು. ಹದಗೆಡುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರದ ವೈಫಲ್ಯಗಳನ್ನು ಕೊರೊನಾ ನೆಪದ ಲಾಕ್‍ಡೌನ್ ತಲೆಗೆ ಕಟ್ಟಲು ಕೇಂದ್ರ ಪ್ರಯತ್ನಿಸುತ್ತಿದೆ ಎಂಬ ಆಪಾದನೆಗೆ ಪುಷ್ಠಿ ನೀಡುವಂತಹ ಹಲವು ಘಟನೆಗಳು ನಡೆಯುತ್ತಿವೆ. ಉದಾಹರಣೆಗಾಗಿ ಪಕ್ಷಾಂತರ ಪರ್ವ ನಡೆಸಿ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಿರುವದು; ಲಾಕ್‍ಡೌನ್ ಸಂದರ್ಭದಲ್ಲೇ ವಿಡಿಯೋ ಸಂವಾದದ ಸಭೆ ನಡೆಸಿ ಶರಾವತಿ ಭೂಗರ್ಭ ವಿದ್ಯುತ್ ಯೋಜನೆಯ ಅಧ್ಯಯನಕ್ಕೆ ಸಮ್ಮತಿ ನೀಡಿರುವುದು; ಪ್ರಧಾನಮಂತ್ರಿ ಪರಿಹಾರ ನಿಧಿಯೆಂಬ ಖಾತೆಯಿರುವಾಗಲೂ ಪಿಎಂ ಕೇರಸ್ ಖಾತೆ ಪ್ರಾರಂಭ ಮಾಡಿರುವುದು; ವಿದೇಶಿ ನೇರ ಹೂಡಿಕೆಗೆ ಕೆಲವು ದೇಶಗಳಿಗೆ ಮಾತ್ರ ನಿರ್ಬಂಧ ವಿಧಿಸಿರುವುದು ಇತ್ಯಾದಿ. ಸಾಂಕ್ರಾಮಿಕ ಶ್ವಾಸಕೋಶದ ರೋಗವಾದ ಕ್ಷಯದಿಂದ ಭಾರತದಲ್ಲಿ ಪ್ರತಿದಿನ ಸರಾಸರಿ 1200 ಜನರು ಸಾಯುತ್ತಿದ್ದರೂ, ಅದರ ಕುರಿತು ನೀಡಬೇಕಾದ ಕಾಳಜಿಗಿಂತ ಎಷ್ಟೋ ಪಟ್ಟು ಹೆಚ್ಚಿನ ಮಹತ್ವವನ್ನು ಕೊರೊನಾಕ್ಕೆ ನೀಡುತ್ತಿರುವುದರ ಹಿನ್ನೆಲೆ ಏನು? ಹುಟ್ಟು– ಸಾವುಗಳನ್ನು ನಿರ್ಣಯಿಸುವುದು ಮಾನವನನ್ನು ಮೀರಿದ ಪ್ರಕೃತಿ ಶಕ್ತಿ ಎಂಬ ನಂಬಿಕೆಯನ್ನು ಹೂತು ಹಾಕಿ, ತಮ್ಮ ಸಾವನ್ನು ಮುಂದೂಡಲು ಆಡಳಿತ ನಡೆಸುವವರೇ ಸಮರ್ಥರು ಎಂದು ಬಿಂಬಿಸಲು ಯತ್ನಿಸುತ್ತಿರುವವರ ನಡೆ ಅಸಹ್ಯ ಹುಟ್ಟಿಸುತ್ತದೆ. ಆರ್ಥಿಕ, ಸಾಮಾಜಿಕ, ಬೌದ್ಧಿಕ

ಪ್ರಸ್ತುತ Read Post »

ಇತರೆ, ಕಾವ್ಯಯಾನ

ಭೂಮಿ ದಿನ

ಭೂದೇವಿ ಡಾ: ಪ್ರಸನ್ನ ಹೆಗಡೆ ಕಾಣದ ದೇವರ ಹುಡುಕುವೆ ಏಕೋ ಕಾಣುವ ದೇವತೆ ಈ ಭೂಮಿ ನಾವೆಲ್ಲರೂ ಇರುವಾ ನಮ್ಮೆಲ್ಲರ ಹೊರುವಾ ಪ್ರತ್ಯಕ್ಷ ದೇವತೆ ಈ ಧರಣಿ ಗಂಧದ ಕಾಡನು ಜೇನಿನ ಗೂಡನು ಕರುಣಿಪ ದೇವತೆ ಈ ಧರಣಿ ತಣ್ಣನೆ ಹೊನಲನು ತುಂಬಿದ ಹೊಲವನು ಹೊತ್ತಿಹ ದೇವತೆ ಈ ತರುಣಿ ಏನು ಬಿತ್ತಿದರೂ ಬೆಳೆಯನು ಕೊಡುವಾ ಅಕ್ಷಯ ಪಾತ್ರೆಯೇ ಈ ಭೂಮಿ ಸಾವಿರ ತಪ್ಗಳ ನಗುತಾ ಕ್ಷಮಿಸುವ ಕ್ಷಮಾಧಾತ್ರಿಯೆ ಈ ಭೂಮಿ ಒದೆಯುವ ಕಾಲ್ಗಳ ಜರಿಯದೆ ಇರಿಯದೆ ಚುಂಬಿಸೊ ದೇವತೆ ಈ ಧರಣಿ ಉಗುಳುವ ಬಾಯ್ಗಳ ತೆಗಳದೆ ತದುಕದೆ ತುತ್ತೀಯುವ ತಾಯಿ ಈ ಜನನಿ ಧರ್ಮವ ಕೇಳದೆ ಜಾತಿಯ ನೋಡದೆ ಎಲ್ಲರ ಹೊರುವಳು ಈ ಭೂಮಿ ಏನನೂ ಕೇಳದೆ ಎಲ್ಲವ ನೀಡುವ ಕರುಣಾ ಮಯಿಯೇ ಈ ಭೂಮಿ ಚಂದದ ಮಣ್ಣನು ರುಚಿ ರುಚಿ ಹಣ್ಣನು ಈಯುವ ದೇವತೆ ಈ ರಮಣಿ ಜೀವ ಜಲವನು ಉಸಿರಾಟಕೆ ಉಸಿರನು ಕರುಣಿಪ ಕರುಳೇ ಈ ಧರಣಿ ದುಡಿಯುವ ಕೈಗೆ ದುಡಿಮೆಯ ನೀಡುವ ಕೊಡುಗೈ ದೇವಿ ಈ ಭೂಮಿ ಸತ್ತರೂ ಎಸೆಯದೆ ಕೈಗಳ ಚಲ್ಲದೆ ಮಡಿಲನೆ ಕೊಡುವಳು ಈ ಜನನಿ ********

ಭೂಮಿ ದಿನ Read Post »

ಇತರೆ

ಪ್ರಸ್ತುತ

ಆತಂಕಗಳ ಸರಮಾಲೆ ರೇಷ್ಮಾ ಕಂದಕೂರ ಮಗು ಎಂಬುದು ದೈವಿಕ ಶಕ್ತಿ .ಮಗುವಿನಲ್ಲಿ ಅವ್ಯಕ್ತ ಭಯ ಭಾವನೆಗಳು ಆತಂಕ ಇದ್ದೇ ಇರುತ್ತದೆ . ಕೆಲವು ಪೋಷಕರಿಗೆ ಇದರ ಅರಿವು ಇರುತ್ತದೆ,ಕೆಲವರಿಗೆ ಇರುವುದಿಲ್ಲ,ಮಕ್ಕಳ ಆತಂಕಕ್ಕೆ ಕಾರಣಗಳೇನು? ಆ ಕಾರಣಗಳ ಮೂಲ ಏನು ಎಂಬುದು ತಿಳಿಯದೇ ಮಕ್ಕಳು ಹೆದರಿಕೊಳ್ಳುವರು ಏಕೆ ಹೀಗೇಕೆ ಎಂಬ ಪ್ರಶ್ನೆ ಕಾಡತೊಡಗುತ್ತದೆ.ಮಕ್ಕಳ ವರ್ತನೆ ಬದಲಾಗುವ ರೀತಿ ಕಂಡು ಒಳಗೊಳಗೆ ಕೊರಗುತ್ತಾರೆ.      ಇದರಿಂದ ಮಗು ಕೂಡ ತಂದೆ ತಾಯಿಯ ತಿರಸ್ಕಾರಕ್ಕೆ ಒಳಗಾಗುತ್ತದೆ. ನಾನು ಪರಿತ್ಯಕ್ತ  ಎಂಬ ಭಾವನೆ ಮೂಡತೊಡಗುತ್ತದೆ.ಕೋಪ ನಿರ್ಲಕ್ಷ ಭಾವನೆಗಳು ಕೂಡ ವ್ಯಕ್ತವಾಗುತ್ತದೆ.ಮಕ್ಕಳ ಪ್ರತೀಕಾರದ,ಅಪರಾಧದ ಸ್ವಭಾವಗಳು  ದ್ವಿಗುಣಗೊಳ್ಳುತ್ತದೆ.    ಬರೀ   ಹೆತ್ತವರಾಗದೆ ಹೃದಯವಂತ ಹೆತ್ತವರಾಗಿ .ಪ್ರೀತಿ ವಾತ್ಸಲ್ಯದೊಂದಿಗೆ ಸ್ವತಂತ್ರ ಆಲೋಚನೆ ಮಾಡಲು ಪ್ರೇರಣೆ ನೀಡಿ.ಆತ್ಮವಿಶ್ವಾಸ,ಧೈರ್ಯ ವೃದ್ಧಿಸುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ  ಭಿನ್ನಾಭಿಪ್ರಾಯಗಳು ಬಂದಾಗ ಉಪಶಮನಕ್ಕೆ ಆಲೋಚನಾ ಶಕ್ತಿ ಮದ್ದಾಗುತ್ತದೆ‌.        ಉದ್ವೇಗ,ಭಾವಾತೀರೇಕ ಒಳಗಾಗದೆ ಸೌಮ್ಯ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಉತ್ತಮ.ಮಕ್ಕಳ ಮುಂದೆ ಹುಲಿ ಸಿಂಹಗಳಂತೆ ಎಗರಾಡಿದರೆ ಮಕ್ಕಳು ಹರಿಣರಾಗುವರು. ಮೊನಚಾದ ಟೀಕೆಗಳು ಭವಿಷ್ಯಕ್ಕೆ ಕರಾಳವಾಗುವ ಸಂಭವ ಹೆಚ್ಚು.ಟೀಕೆಗಳು ಸಾಂಧರ್ಭಿಕವಾಗಿ ಸಂವಹನವಾಗಬೇಕೇ ಹೊರತು ಗೆಳೆಯರ ಮುಂದೆ ಮಾನ ಹೋಗುವಂತಹುದಾಗಬಾರದು.  ಅನುಭವಗಳೇ ವ್ಯವಹರಿಸುವ ಪಾಠ ಕಲಿಸುತ್ತದೆ . ತಾಳ್ಮೆ ಅಗತ್ಯ.ಮಕ್ಕಳು ಅನುಕರಣೆ ಮಾಡುತ್ತವೆ ಹಾಗಾಗಿ   ಮಕ್ಕಳ ಮುಂದಿರುವಾಗ ಹೆತ್ತವರ ವರ್ತನೆ ಮೊದಲು ಎಚ್ಚರಿಕೆಯದಾಗಿರಬೇಕು.         ಭಾವನೆಗಳು ಹೊಳೆಯ ಹರಿವಿನಂತೆ.ಹೊಳೆಯ ಹರಿವನ್ನು ನಿಧಾನವಾಗಿ ಹರಿಯ ಬಿಡಬೇಕೆ ಹೊರತು ಭೋರ್ಗರೆವ ಪ್ರವಾಹ ರೀತಿ ಇರಬಾರದು. ಭಾವಶಕ್ತಿಯನ್ನು ಗೌರವಿಸಬೇಕು.ಸರಿಯಾದ ದಾರಿ ಕಲ್ಪಿಸಬೇಕು.ಬಲವಂತ ಮಾರ್ಗಕ್ಕಿಂತ ಮಿಗಿಲಾಗಿ ಅನುಯಯಿಸುವಲ್ಲಿ ಶಕ್ತಿಯಿದೆ.ಹೀಗಾಗಿ ಮಕ್ಕಳ ಜೊತೆ ಉತ್ತಮ ಸಂಬಂಧಗಳನ್ನು ಸ್ಥಾಪಿಸುವುದು ಆದ್ಯ ಕರ್ತವ್ಯವಾಗಬೇಕಿದೆ.ಸಂವೇದನಾಶೀಲತೆಯಿಂದ ಮಕ್ಕಳ ವಿಚಾರಗಳನ್ನು ಆಲಿಸುವ ಮೂಲಕ ಅವರಲ್ಲಿ ಇತ್ಯಾತ್ಮಕ ಬದಲಾವಣೆ ಉಂಟಾಗಬಹುದು.ಮಕ್ಕಳು ಅಲಕ್ಷ್ಯದಿಂದ ಹತಾಶರಾಗುತ್ತಾರೆ.ಹೆತ್ತವರು ಮಕ್ಕಳನ್ನು ಹೃನ್ಮನದಿಂದ ಗೆಲ್ಲಬೇಕು.ಆಲೋಚನೆ ಪ್ರಾರಂಭವಾದರೆ ತಪ್ಪು ನಡುವಳಿಕೆಗಳನ್ನು ಅರಿಯಲಾರಂಭಿಸುತ್ತಾರೆ‌. ಮಕ್ಕಳೊಂದಿಗೆ ಎಚ್ಚರದಿಂದ ವ್ಯವಹರಿಸೋಣ, ಆತಂಕ ದೂರಮಾಡೋಣ. *********

ಪ್ರಸ್ತುತ Read Post »

ಇತರೆ

ಚರ್ಚೆ

ಕನ್ನಡ ಸಂಸ್ಕೃತಿಯ ಕಡೆಗಣನೆ ಮಲ್ಲಿಕಾರ್ಜುನ ಕಡಕೋಳ ಹೊಸ ಸರ್ಕಾರಗಳು ರಚನೆಯಾಗುವಾಗ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯ “ಮಂತ್ರಿಗಿರಿ” ಯಾರೂ ಬಯಸುವುದಿಲ್ಲ. ಇಲ್ಲವೇ ಅದಕ್ಕಾಗಿ ಪೈಪೋಟಿ ಇರುವುದೇ ಇಲ್ಲ. ಸಾಮಾನ್ಯವಾಗಿ ಪವರ್ಫುಲ್ ರಾಜಕಾರಣಿಗಳಿಗಂತೂ ಅದು ಬೇಡದ ಇಲಾಖೆಯೇ ಆಗಿರ್ತದೆ. ಇದುವರೆಗೂ ಯಾರೊಬ್ಬರೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಬೇಕೆಂದು ಬಯಸಿ, ಹಟ ಹಿಡಿದು ಮಂತ್ರಿಯಾದ ಉದಾಹರಣೆಗಳಿಲ್ಲ. ಹೀಗೆ ಬಹುಪಾಲು ಮಂದಿ ವೃತ್ತಿಪರ ರಾಜಕಾರಣಿಗಳಿಗೆ ಬೇಡವಾದ ಇಲಾಖೆ ಇದು. ಅಷ್ಟಕ್ಕೂ ಕಾಟಾಚಾರಕ್ಕೆ ಮಂತ್ರಿಯಾಗಿ ಬಂದವರಿಂದ ಇಲಾಖೆಗೆ ನ್ಯಾಯ ದೊರಕೀತಾದರೂ ಹೇಗೆ ? ಹೀಗಾಗಿ ದೊಡ್ಡ ದೊಡ್ಡ ಬಜೆಟ್ಟಿನ, ಯಥೇಚ್ಛ ಪ್ರಮಾಣದ ಆಮದಾನಿ ಬರುವ ಇಲಾಖೆಯ ಮಂತ್ರಿ ಪದವಿ ಮೇಲೆಯೇ ಅಧಿಕ ಕಣ್ಣುಗಳು. ಊಟದ ಜತೆಗೆ  ಉಪ್ಪಿನಕಾಯಿ ಸೈಡಿಗಿರಲಿ ಎಂಬಂತೆ ಆದಾಯದ ಖಾತೆಗಳ ಜತೆಗೆ ಇದನ್ನು  ನೆಂಚಿಗೆಗೆಂಬಂತೆ ಕನ್ನಡ-ಸಂಸ್ಕೃತಿ ಇಲಾಖೆಯ ಮಂತ್ರಿ ಪದವಿಯ ಬಳಕೆಯಾಗಿರುವುದೇ ಅಧಿಕ.   ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆಂದೇ ಎಕ್ಸ್ ಕ್ಲೂಸಿವ್ ಆದಂತಹ ಸಚಿವರಾಗಿ ಪ್ರಮಾಣವಚನ ಪಡೆದು ಪೂರ್ಣ ಪ್ರಮಾಣದ ನ್ಯಾಯದೊರಕಿಸಿ ಕೊಟ್ಟ ನಿದರ್ಶನಗಳು ಕ್ವಚಿತ ಎಂದೇ ಖಚಿತವಾಗಿ ಹೇಳಬಹುದು. ಕೆ. ಎಚ್. ಶ್ರೀನಿವಾಸ್, ಡಾ. ಜೀವರಾಜ ಆಳ್ವ… ಹೀಗೆ ಒಂದೆರಡ್ಮೂರು  ನಿದರ್ಶನಗಳು ದೊರಕಬಹುದು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಇಂತಹ ನಿದರ್ಶನಗಳು ಇಲ್ಲವೆಂದೇ ಹೇಳಬಹುದು. ಬೇಕೋ ಬೇಡವೋ ಎನ್ನುವವರಿಗೆ ಇಲಾಖೆಯ ಉಸಾಬರಿ. ಹೀಗೆ ಬೇಡದವರಿಗೆ ಬೇಡದ ಖಾತೆ ದೊರಕಿದಾಗ ಇಲಾಖೆಯ ಅಭ್ಯುದಯ ಕನಸಿನ ಮಾತೇ. ಇದು ನಮ್ಮ ಕನ್ನಡದ ಸರ್ಕಾರಗಳು, ಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಕುರಿತಾಗಿ ಹೊಂದಿರುವ ಅನನ್ಯತೆಯೇ ? ಮಾತೆತ್ತಿದರೆ ಕನ್ನಡ ಮತ್ತು ಸಂಸ್ಕೃತಿ ಕುರಿತು ಅಪಾರ ಕಳಕಳಿ ತೋರುವ ರಾಜಕಾರಣಿಗಳಿಗೇ ಇಲಾಖೆ ಕುರಿತು ಖರೇ ಖರೇ ಕಾಳಜಿ ಇಲ್ಲ. ಪ್ರಾಯಶಃ ಅವರೆಲ್ಲರ ಲೆಕ್ಕಾಚಾರವೆಂದರೆ ಈ ಇಲಾಖೆಯ ಬಜೆಟ್ ಅಲ್ಪ ಪ್ರಮಾಣದ್ದು. ಅಜಮಾಸು ನಾಲ್ಕುನೂರು ಕೋಟಿ. ಪ್ರಾಯಶಃ  ಕೆಲವು ಪ್ರಾಧಿಕಾರ, ನಿಗಮ, ಮಂಡಳಿಗಳಿಗಿರಬಹುದಾದಷ್ಟು ಬಜೆಟ್. ಲಾಭಮಾಡಿ ತೋರಿಸಬೇಕೆಂದರೆ ಅದು ಕೆಲವರ ಪ್ರಕಾರ ಅನುತ್ಪಾದಿತ.    ಈ ಬಾರಿ ನಾಲ್ಕುನೂರು ಕೋಟಿಯಲ್ಲಿ ಅರ್ಧದಷ್ಟು ಹಣ ಮಾತ್ರ ಇಲಾಖೆಗೆ ಮೀಸಲಿಟ್ಟಿರುವಾಗ ಕನ್ನಡ ಸಂಸ್ಕೃತಿಯ ಕುರಿತು ಸರಕಾರದ ಕಾಳಜಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅರ್ಧದಷ್ಟು ಕಡಿಮೆ ಹಣದಲ್ಲಿ ಕನ್ನಡದ ಸಂಸ್ಕೃತಿ ಕೆಲಸ ಹೇಗೆ ಸಾಧ್ಯ ? ಹತ್ತಾರು ಉತ್ಸವ, ಇಪ್ಪತ್ತೆಂಟು ಜಯಂತಿ, ಹತ್ತಿಪ್ಪತ್ತು ಸಂಖ್ಯೆಯ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಮಾಡುವ ಪ್ರಮುಖ ಜವಾಬ್ದಾರಿ ಇಲಾಖೆಯದು.  ಸಣ್ಣದೊಂದು ಜಿಲ್ಲಾಮಟ್ಟದ ಕಚೇರಿಯಿಂದ ಹಿಡಿದು ವಿಧಾನಸೌಧದ ಮೂರನೇ ಮಹಡಿವರೆಗೂ ಸಾಮಾನ್ಯ ಕಲಾವಿದ, ಸಾಹಿತಿ, ಜನಪದರಿಗೆ ನಿಲುಕದ ಯೋಜನೆಗಳು. ಈಗೆಲ್ಲವೂ ಗಣಕೀಕರಣದ ಗಮ್ಮತ್ತು. ಇಲಾಖೆಯ ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿ ಆನ್ ಲೈನ್ ಅರ್ಜಿಗಳನ್ನು ಸಲ್ಲಿಸಬೇಕು. ತಮಟೆ, ಡೊಳ್ಳು, ಹಲಗೆ, ನುಡಿಸುವ ಹಳ್ಳಿಯ ಅನಕ್ಷರಸ್ಥ ಕಲಾವಿದನಿಗಿದು ನಿಲುಕದ ನಕ್ಷತ್ರ. ಬಹುಪಾಲು ಬುದ್ದಿವಂತ, ಜಾಣರಿಗೇ ಆನ್ ಲೈನ್ ಅರ್ಜಿ ಸಲ್ಲಿಸುವುದು ಹರಸಾಹಸದ ಕೆಲಸ. ಕಡೆಯಪಕ್ಷ ಇದನ್ನಾದರೂ ಇಲಾಖೆ ಸರಳಗೊಳಿಸಬೇಕಿದೆ. ಆದರೆ ಕಲಾವಿದರಿಗೆ ಗೌರವಧನ ” ಆರ್ಟಿಜಿಎಸ್ ” ಮೂಲಕ ಸಲ್ಲಿಕೆಯಾಗುವುದು ಸ್ವಾಗತಾರ್ಹ. ಇನ್ನು ಮಾಸಾಶನ ಮಂಜೂರಾತಿಗಾಗಿ ಗ್ರಾಮೀಣ ಕಲಾವಿದರು ವರ್ಷಗಟ್ಟಲೇ ಕಾಯಬೇಕು. ಕೆಲವರು ಕಾದು ಕಾದೂ ಸತ್ತೇ ಹೋಗುತ್ತಾರೆ. ಹೀಗಾಗಿ ಮಾಸಾಶನ ಕೆಲವರ ಪಾಲಿಗೆ ಒಮ್ಮೊಮ್ಮೆ ಮರಣ ಶಾಸನದಂತಾಗಿದೆ.   ಸಂಸ್ಕೃತಿಯ ಸಂಪ್ರೀತಿ, ಅಂತಃಕರಣದ ಆಡುಂಬೊಲ ಆಗಬೇಕಿದ್ದ ಇಲಾಖೆ, ಇತರೆ ಬ್ಯುರೋಕ್ರಟಿಕ್ ಇಲಾಖೆಗಳ ತರಹ  ದಿನೆ ದಿನೇ ಸಂವಹನಶೀಲತೆ, ಸಹೃದಯತೆ, ಸಾಂಸ್ಕೃತಿಕ ಸಂವೇದನೆಗಳನ್ನು ಕಳೆದುಕೊಳ್ಳುತ್ತಿದೆ. ಜನಸಂಸ್ಕೃತಿಯಿಂದ ದೂರ ದೂರ ಸರಿಯುತ್ತಿದೆ. ಕೆಲವು ನಿರ್ದಿಷ್ಟವಾದ ವಾರ್ಷಿಕ ಅನುದಾನಗಳ ಮಂಜೂರಾತಿಯಲ್ಲಿ ಯಥೇಚ್ಛ ಭ್ರಷ್ಟಾಚಾರ. ಇದಕ್ಕಾಗಿಯೇ ಮಧ್ಯವರ್ತಿ ಏಜೆಂಟರುಗಳಿದ್ದಾರೆ. ಈ ಏಜೆಂಟರು ಸರ್ಕಾರದ ಉನ್ನತ ಅಧಿಕಾರ ಮಟ್ಟದಲ್ಲೇ ಪರ್ಸೆಂಟೇಜ್ ವ್ಯವಹಾರ ಮಾಡುವಲ್ಲಿ ನಿಸ್ಸೀಮರು. ಒಬ್ಬರೇ ಬೇರೆ ಬೇರೆ ಹೆಸರುಗಳಲ್ಲಿ ಕಲಾತಂಡ ಕಟ್ಟಿಕೊಂಡಿರುತ್ತಾರೆ. ಅವರಿಗೆಲ್ಲ ಉಲ್ಲೇಖಿತ ಏಜೆಂಟರು ಅನುದಾನ, ಇತರೆ ಕಾರ್ಯಕ್ರಮ ಕೊಡಿಸುವಲ್ಲಿ, ನಡೆಯದ ಕಾರ್ಯಕ್ರಮಗಳ ಜಿಎಸ್ಟಿ ಸಮೇತವಾದ ವ್ಯವಸ್ಥಿತ ದಾಖಲೆಪತ್ರಗಳನ್ನು ಒದಗಿಸುವಲ್ಲಿ ಇವರು ನಿಪುಣ ಪ್ರಳಯಾಂತಕರು.    ಇಂತಹ (ಅ)ವ್ಯವಹಾರದಲ್ಲಿ ಬೆಂಗಳೂರಿಗೆ ಮಾತ್ರ ಅಗ್ರಸ್ಥಾನ ಎಂದುಕೊಳ್ಳಬೇಕಿಲ್ಲ. ದೂರದ ಬೀದರ, ಬಿಜಾಪುರಗಳೇನು ಹಿಂದೆ ಬಿದ್ದಿಲ್ಲ. ಇದೆಲ್ಲದಕ್ಕು ಅಧಿಕಾರಿಗಳ ಫುಲ್ ಸಹಕಾರವಿಲ್ಲದೇ ಸಾಧ್ಯವಿಲ್ಲ. ಕೆಲವು ಮಹಿಳಾ ಅಧಿಕಾರಿಗಳು ಸಹ ಈ ವಿಷಯದಲ್ಲಿ ಮುಂಚೂಣಿಯಲ್ಲಿರುವುದು ನಿಗೂಢವೇನಲ್ಲ. ಯಾವುದೇ ಸೃಜನಶೀಲ ಕಲೆ ಸರಕಾರದ ಅನುದಾನಗಳನ್ನೇ ಅವಲಂಬಿಸಿ ಬದುಕಬಾರದು. ಹಾಗೆ ಬದುಕಿದಾಗ ಅವುಗಳ ಆತ್ಮಸಾಕ್ಷಿಯ ಗೌರವಕ್ಕೆ ಕುಂದುಂಟು. ಆತ್ಮಗೌರವ ಕಳೆದುಕೊಂಡ ಕಲೆ ಮತ್ತು ಕಲಾವಿದರು ಬಹುಕಾಲ ಬದುಕುವುದಿಲ್ಲ. ಹಾಗೆಂದು ಸರ್ಕಾರದ ಧನಸಹಾಯ ಬೇಡವೆಂಬುದಲ್ಲ. ಅನುದಾನಕ್ಕಾಗಿಯೇ ಕಲಾತಂಡಗಳೆಂಬುದಲ್ಲ. ಈಗ್ಗೆ ಆರೇಳು ದಶಕಗಳ ಹಿಂದೆ ಇಂತಹ ಯಾವ ಆಸೆಬುರುಕತನ ಇಲ್ಲದೇ ಬಹುಸಂಖ್ಯೆಯಲ್ಲಿ ನಾಟಕ ಸಂಸ್ಥೆಗಳು ನವರಸಭರಿತ ರಂಗಸಂಸ್ಕೃತಿಯ ಸಂಚಲನೆ ಮೂಡಿಸಿದ್ದವು. ಈಗಿನಂತೆ ಫುಲ್ ಕಾಮೆಡಿ ಎಂಬ ಟ್ಯಾಗ್ ಲೈನ್ ಹಾಕಿಕೊಂಡು, ಏಕರಸ ಪ್ರಧಾನದ  ಹಾಸ್ಯಕ್ಕಾಗಿಯೇ ನಾಟಕಗಳೆಂದು ಬಿಂಬಿತವಾಗಿರಲಿಲ್ಲ. ಹೌದು ಆಗ ಅಕ್ಷರಶಃ  ಹಾಸ್ಯರಸ ಋಷಿಗಳಿದ್ದರು.    ಸಂಸ್ಕೃತಿಯ ಸದವಕಾಶ ಮತ್ತು ಸೌಲಭ್ಯಗಳ ಕುರಿತು ಸಣ್ಣದೊಂದು ನಿದರ್ಶನ ಇಲ್ಲಿ ಉಲ್ಲೇಖಿಸುವೆ. ಅಮೆರಿಕೆಯ “ಅಕ್ಕ” ಫೆಸ್ಟಿವಲ್ ಸೇರಿದಂತೆ ಬಹುಪಾಲು ಅವಕಾಶಗಳು ಬೆಂಗಳೂರು ಕಡೆಯವರಿಗೇ ದಕ್ಕುತ್ತವೆ. ಅದಕ್ಕೆಲ್ಲ ದೊಡ್ಡಮಟ್ಟದ ಲಾಬಿ. ಯಾಕಂದರೆ ಬೆಂಗಳೂರು ಗು-ಲಾಬಿ ನಗರ ಅಲ್ಲವೇ ? ಹೀಗಾಗಿ ಮತ್ತೆ, ಮತ್ತೆ ಸಿಕ್ಕವರಿಗೇ ಮತ್ತೆ ಮತ್ತೆ ಅವಕಾಶಗಳು. ಒಂದು ಡಜನ್ನಿಗೂ ಹೆಚ್ಚಿಗಿರುವ ಅಕಾಡೆಮಿಗಳು, ಅಲ್ಲದೆ ಪ್ರಾಧಿಕಾರ, ಬಹುಪಾಲು ಪ್ರತಿಷ್ಠಾನಗಳು ಬೆಂಗಳೂರಿನಲ್ಲಿಯೇ ಗೂಟ ಹೊಡೆದುಕೊಂಡಿವೆ. ವಾಸ್ತವವಾಗಿ ಈಗ ಆಗಿರುವುದು ಕರ್ನಾಟಕದ ರಾಜಕೀಯ ಏಕೀಕರಣ. ಅದರಲ್ಲೂ ಎರಡು ಪ್ರಮುಖ ಜಾತಿಗಳ ಏಕೀಕರಣ. ಸಾಂಸ್ಕೃತಿಕ ಏಕೀಕರಣ ಆಗಬೇಕಿದೆ. ಅದರ ಮೂಲಕ ಸಮಗ್ರ ಕರ್ನಾಟಕದ ಸಾಂಸ್ಕೃತಿಕ ವಿಕೇಂದ್ರೀಕರಣದ  ಸಂಪನ್ನತೆ ಸಮೃದ್ಧಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ನೀಡಿರುವ “ಸಾಂಸ್ಕೃತಿಕ ನೀತಿ ವರದಿ”ಯನ್ನು ಜಾರಿಗೆ ತರಬೇಕಿದೆ. ಸೋಜಿಗದ ಸಂಗತಿ ಎಂದರೆ ಯಾವುದೇ ಸರಕಾರಗಳು ಅಸ್ತಿತ್ವಕ್ಕೆ ಬಂದಾಗಲೂ ಕನ್ನಡದ ಅಸ್ಮಿತೆ ಹಾಗೂ ಅಭಿವೃದ್ಧಿ ಕುರಿತಾದ ಇಂತಹ ಜನಸಂಸ್ಕೃತಿಪರ  ವರದಿಗಳನ್ನು ನೇಪಥ್ಯಕ್ಕೆ ನುಸುಳಿಸುವ ಹುನ್ನಾರಗಳು ಜಾಣತನದಿಂದಲೇ ಜರುಗುತ್ತವೆ.    ಕೆಲವು ಅಕಾಡೆಮಿಗಳು ಸಾಂಸ್ಕೃತಿಕ ಕ್ರಿಯಾಶೀಲತೆ ಕಳೆದುಕೊಂಡು ಸರಕಾರಿ ಕಚೇರಿಗಳಂತಾಗಿ ಅವು ಪ್ರಶಸ್ತಿಗಳನ್ನು ನೀಡುವ ಯಂತ್ರಗಳಾಗಿವೆ. ಮತ್ತೆ ಕೆಲವು ನೀಡಿದ ಪ್ರಶಸ್ತಿ ವಾಪಸು ಪಡೆಯುವ ನಿರ್ದಯ ಸ್ಥಿತಿ ತಲುಪಿವೆ. ಅವುಗಳ ಏಕತಾನತೆ ಮತ್ತು ಇತರೆ ಚಟುವಟಿಕೆಗಳ ಕುರಿತು ಪ್ರತ್ಯೇಕವಾಗಿ ಇನ್ನೊಮ್ಮೆ ಬರೆದರಾಯಿತು. ಈ ಬಾರಿಯಂತು ಹಣದ ಕೊರತೆ ಎಂದು ಅವು ಕೊರಗುವಂತಾಗಿದೆ. ಸರಕಾರ ಯಾವ ಪಕ್ಷದ್ದೇ ಇರಲಿ ಕೆಲವರಿಗೆ ಕೆಲವು ಅಕಾಡೆಮಿಗಳ ಸದಸ್ಯತ್ವ ಖಾಯಂ. ಇಂತಹ ಅವಕಾಶವಾದಿಗಳ ಕುರಿತು ಸರ್ಕಾರ ಮತ್ತು ಇಲಾಖೆ ಎಚ್ಚರ ವಹಿಸಬೇಕಿದೆ. ಇನ್ನೊಂದೆಡೆ  ಕೋಟಿ, ಕೋಟಿ ಹಣ ಖರ್ಚುಮಾಡುವ ರಂಗಾಯಣಗಳು ಏಕತಾನೋತ್ಸವಗಳ ಕೊರೋನಾ ರೋಗದಿಂದ ಬಳಲುತ್ತಿವೆ. ದಶಕಗಳೇ ಕಳೆದರೂ ಜನ ಸಾಮಾನ್ಯರಿಗೆ ರಂಗಾಯಣಗಳ ಪೂರ್ಣ ಪರಿಚಯವೇ ಆಗಿಲ್ಲ. ಜಾಗತಿಕ ಮಟ್ಟದಲ್ಲಿ ಗುರುತರಗೊಂಡಿರುವ ಮೈಸೂರು ರಂಗಾಯಣ  ಜಿಲ್ಲೆಯಾಚೆ ಹೊರ ಜಿಲ್ಲೆಯ ಸಾಮಾನ್ಯ ರಂಗಾಸಕ್ತರ ಗಮನ ಸೆಳೆಯಲಿಲ್ಲ. ಇನ್ನು ಅವುಗಳ ರಂಗ ಸಂಸ್ಕೃತಿಯ ಲಾಭದ ವಿಷಯ ಬಹುದೂರದ ಮುಗಿಲಮಾತು. ಶೇಕಡಾ ಹತ್ತರಷ್ಟು ಜನರನ್ನೂ ರಂಗಾಯಣಗಳು ತಲುಪಿಲ್ಲ. ಜನಸಾಮಾನ್ಯರಿಗೆ ಇವರ ನಾಟಕಗಳು ಅರ್ಥವಾಗುವುದಿಲ್ಲ. ಸಾಮಾನ್ಯರಿಗಾಗಿ ರಂಗಾಯಣ ಅಲ್ಲ  ಬುದ್ದಿಜೀವಿಗಳಿಗೆ ರಂಗಾಯಣ ಎನ್ನುವಂತಾಗಿದೆ. ಅದಕ್ಕೆಂದೇ ಕೆಲವರ ಕಣ್ಣಿಗೆ ರಂಗಾಯಣಗಳು ಬಿಳಿಯಾನೆಗಳಂತೆ ಹೊಳೆಯುತ್ತಿವೆ.  ಜನಮಾನಸದಲ್ಲಿ ಕಂಪನಿ ಶೈಲಿಯ ವೃತ್ತಿ ನಾಟಕಗಳು ಇವತ್ತಿಗೂ ಜನಜನಿತ. ದುರಂತವೆಂದರೆ ಅವು ಸದಭಿರುಚಿ ಬೆಳೆಸುವ ರಂಗಪರಂಪರೆಯಿಂದ ದೂರ ಸರಿದಿವೆ. ಸೋಜಿಗವೆಂದರೆ ಇದುವೇ ಪ್ರಜಾಸತ್ತಾತ್ಮಕ  ರಂಗಸಂಸ್ಕೃತಿಯ ಗೆಲುವು‌ ಎಂಬಂತಾಗಿದೆ.   ಮೊನ್ನೆ, ಮೊನ್ನೆಯಷ್ಟೇ ನಿಧನರಾದ ಪಾಟೀಲ ಪುಟ್ಟಪ್ಪನಂಥವರು, ಅವರ ಪೂರ್ವದ ಕೆ. ವಿ. ಪುಟ್ಟಪ್ಪ, ದ. ರಾ. ಬೇಂದ್ರೆ, ಡಾ. ರಾಜಕುಮಾರ್ ಅಂಥವರು ಸರಕಾರದ ಸಾಂಸ್ಕೃತಿಕ ಮತ್ತು ಕನ್ನಡ ವಿರೋಧಿ ನೀತಿಗಳ ಕುರಿತು ಮಾತನಾಡಿದರೆ ಅಂದು ಪ್ರಭುತ್ವ ಕಣ್ಣು, ಕಿವಿ ತೆರೆದು ಗಂಭೀರವಾಗಿ ಆಲಿಸುತ್ತಿತ್ತು. ಕೂಡಲೇ ವಿಧಾನಸೌಧದ ಮೂರನೇ ಮಹಡಿ ಸೂಕ್ತ ಪರಿಹಾರಕ್ಕೆ  ಮುಂದಾಗುತ್ತಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಸರ್ಕಾರದ ಇಂತಹ ಅಸಡ್ಡೆತನಗಳ ಬಗ್ಗೆ ಯಾರಾದರೂ  ಧ್ವನಿ ಎತ್ತಿದರೆ ಸಾಕು, ಅದು ಯಾರ ಧ್ವನಿ ?, ಯಾವ ಧ್ವನಿ ? ಅದು ಎಡನೋ, ಬಲನೋ ? ಎಂದು ಅನುಮಾನಿಸುವ ಮಟ್ಟ ಮುಟ್ಟಿರುವುದು ಬಹುದೊಡ್ಡ ಸಾಂಸ್ಕೃತಿಕ ದುರಂತ. ಇದು ಕನ್ನಡ ಸಂಸ್ಕೃತಿಯ ಕಡೆಗಣನೆ ಮಾತ್ರವಲ್ಲ. ಕನ್ನಡ ಭಾಷೆ, ಸಂಸ್ಕೃತಿ ಮಾತ್ರವಲ್ಲ ಒಟ್ಟು ಬದುಕಿನ ಮೇಲೆ ಬೀಸುತ್ತಿರುವ ವಿಷಮ ಪಾರಮ್ಯದ ಗಾಳಿಯ ದುರಿತಕಾಲವೆಂದೇ ಭಾವಿಸಬೇಕಾಗುತ್ತದೆ. **********

ಚರ್ಚೆ Read Post »

ಇತರೆ

ಪ್ರಸ್ತುತ

ಇದು  ಲಾಕ್ಡೌನ್ ಸಮಯ ರೇಶ್ಮಾ ಗುಳೇದಗುಡ್ಡಾಕರ್ ಕರೋನಾದ ತಲ್ಲಣ ದಿನದಿನಕ್ಕೂ ಅಗಾಧವಾಗಿ ವ್ಯಾಪಿಸುತ್ತಿದೆ .     ಲಾಕ್ ಡೌನ್ ನಿಂದ ಸೀಲ್ ಡೌನ್ಗೆ ನಾವು ಸಿದ್ದರಾಗುತ್ತಿದ್ದೇವೆ .  ಪ್ರಾಣಿಗಳು ಸ್ವಚ್ಚಂದವಾಗಿ ಸಂಚರಿಸುತ್ತಾ ತಮ್ಮ ಸ್ವಾತಂತ್ರ್ಯ ಅನುಭವಿಸುತ್ತಿವೆ. ಮತ್ತೊಂದೆಡೆ ಇಡೀ ದೇಶದಲ್ಲೇ ವಾಯುಮಾಲಿನ್ಯ ಗಣನೀಯವಾಗಿ ತಗ್ಗಿದೆ.!! ನಮ್ಮ ರಾಷ್ಟ್ರದ ರಾಜಧಾನಿ ದೆಹಲಿ ಒಂದು ಕಾಲದಲ್ಲಿ ಹವಾಮಾನ ವೈಪರೀತ್ಯದಿಂದ ತತ್ತರಿಸಿ ಹೋಗಿತ್ತು .ಈಗ ಅದು ಹಳೆ ಮಾತು ಬಿಡಿ . ಮಹಾನಗರಿಗಳು ಮೌನವಾಗಿವೆ.  ಸದಾ ಜನಜಂಗುಳಿಯಿಂದ ಕೂಡಿ ನಿಶ್ಯಬ್ದತೆಯನ್ನು ಮರೆತ ನಗರಿಗಳು ಇಂದು ಸ್ತಬ್ದವಾಗಿವೆ .ನರನಿಗೆ ಸೂಕ್ಷ್ಮ ಜೀವಿಯೊಂದು ಸೆಡ್ಡು ಹೊಡೆದು ಅವನ ಬಂಧಿಯಾಗಿಸಿದೆ .!? ನವಿಲುಗಳು ಹೊರ ಬಂದು ನರ್ತಿಸುತ್ತಿವೆ .! ಜಿಂಕೆಗಳು ,ಕಾಡು ಪ್ರಾಣಿಗಳು ವಾಹನಗಳ ಭಯವಿಲ್ಲದೆ ರಸ್ತೆ ಯಲ್ಲಿ ಸಂಚರಿಸುತ್ತಿವೆ . ಸೂಕ್ಷ್ಮವಾಗಿ  ಪರಿಸ್ಥಿತಿಯನ್ನು ಅವಲೋಕಿಸಿದಾಗ ಮಾನವ ಬಂಧಿಯಾದ ಆಗಾಧ ಬುದ್ಧಿಶಕ್ತಿ ಇದ್ದರೂ, ಪ್ರಾಣಿಗಳು ಸ್ವಂತ್ರವಾದವು .   ನೆರೆ , ಭೂಕಂಪ , ಸುನಾಮಿ ಯಂತಹ ಪ್ರಕೃತಿ ವಿಕೋಪ ಕಲಿಸದ ಪಾಠ ಸೂಕ್ಷ್ಮಾಣು ಜೀವಿ ಕಲಿಸಿತು . ವಿಶ್ವವನ್ನೆ ಒಂದು ಕುಟುಂಬ ಮಾಡಿ ಸಾವು ನೋವು ಎಲ್ಲರಿಗೂ ಒಂದೇ .ಎಂಬ ಮಂತ್ರ ಹೇಳಿತು .    ಸಾಂಕ್ರಾಮಿಕ ರೋಗಗಳು ಮನುಕುಲಕ್ಕೆ ಹೊಸದಲ್ಲ.  ಇತಿಹಾಸದ ಪುಟ ತೆರೆದು ನೋಡಿದಾಗ ಕಾಲರ ,ಸಿಡುಬು ಮೂಂತಾದ ರೋಗಗಳು ಮನುಕುಲಕ್ಕೆ ಮಾರಿಯಾಗಿ ಹೊಸ ಅನ್ವೇಷಣೆಯ.  ಉದಯಕ್ಕೆ ಕಾರಣವಾದವು, ಸಾಧನೆಯ ದಾರಿ ತೋರಿದವು ಎಂದರೆ ತಪ್ಪಾಗಲಾರದು . ಎರಡು ಶತಮಾನಗಳ ಹಿಂದೆ ಸಿಡುಬು ರೋಗ ಜನರ ಬದುಕನ್ನು ಕಸಿದಿತ್ತು .ಅಗ ಎಡ್ವರ್ಡ್‌ ಜನ್ನರ್ ಸಿಡುಬಿಗೆ ಲಸಿಕೆ ಅನ್ವೇಷಣೆ ಮಾಡಿದರು ಇದು  .ಹಲವಾರು ಜೀವಗಳನ್ನು ಉಳಿಸಲು ಕಾರಣವಾಯಿತು. ಇಂದು ಕೊರೊನಾ ವಿಶ್ವದಾದ್ಯಂತ ತನ್ನ ಅರ್ಭಟ ಮುಂದುವರೆಸಿದೆ . ಜನರ ಆರ್ಥಿಕ ,ಸಾಮಾಜಿಕ, ಮಾನಸಿಕ ,ದೈಹಿಕ ವಲಯಗಳ ಮೇಲೆ ಗಂಭೀರ ಪ್ರಮಾಣದ ಬದಲಾವಣೆಗೆ ಕಾರಣವಾಗಿದೆ ..! ಪರಿಣಾಮ ಲಾಕ್ ಡೌನ್ ಉಂಟಾಗಿದೆ .  ಮನೆಯಲ್ಲಿ ಇರುವದೇ  ಹಲವರಿಗೆ ಒಂದು ಸವಾಲು .ಗೃಹಿಣಿ ಯರಿಗೆ ಲಾಕ್ಡೌನ್ ಸೀಲ್ ಡೌನ್ ಹೆಚ್ಚು ವ್ಯತ್ಯಾಸ ಇಲ್ಲ .ಏಕೆಂದರೆ ಅಡುಗೆ ಮನೆಗೆ ರಜೆ ಘೋಷಣೆ  ಸಾದ್ಯವಿಲ್ಲ .ಬದಲಾಗಿ ಕೆಲಸ ಹೆಚ್ಚಿದೆ .ಮತ್ತೆ ಹಲವರಿಗೆ ಕಡಿಮೆಯಾಗಿದೆ.  ಲೋಕೋ ಬಿನ್ನರುಚಿಃ ಅಲ್ಲವೆ ? ನಮಗಾಗಿ ನಮ್ಮವರಿಗಾಗಿ ನಾವು ಮನೆಯಲ್ಲಿ ಉಳಿಯುವದು ಒಂದು ಜವಾಬ್ದಾರಿ .ನಾವು ಉಳಿಯೊಣ ಇತರರನ್ನು ಉಳಿಸೋಣ .ಸಾಮೂಹಿಕವಾಗಿ ಸೇರುವ ಸ್ಥಳಗಳನ್ನು ನಿಷೇಧಿಸೋಣ ನಮ್ಮವರ ಹಿತಕ್ಕಾಗಿ ಪ್ರಾರ್ಥನೆ, ಪೂಜೆ ಎಲ್ಲವನ್ನು ಮನೆಯಲ್ಲೇ ಮಾಡೋಣ .      ಸಾದ್ಯ ವಾದರೆ ಓದು ,ಕಲಿಕೆ ,ಬರವಣಿಗೆ ಎಂಬ ಹತ್ತು ಹಲವು ಬಗೆಯಲ್ಲಿ ನಾವು ನಮ್ಮನ್ನು ತೊಡಗಿಸಿಕೊಳ್ಳೋಣ  .ನಮ್ಮ ಚಟುವಟಿಕೆಗಳು ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತವೆ .ಆಸಕ್ತಿ ಬದ್ದತೆ ನಮ್ಮನ್ನು ಉತ್ತುಂಗಕ್ಕೆ ಒಯ್ಯುವುದರಲ್ಲಿ ಸಂಶಯವೇ ಇಲ್ಲ . ಬದುಕಿನಲ್ಲಿ ಬದಲಾವಣೆ ನಿರಂತರ .ಈ ಬದಲಾವಣೆಯನ್ನು ಋಣಾತ್ಮಕ ಅಥವಾ ಧನಾತ್ಮಕವಾಗಿ ನೋಡುವದು ನಮ್ಮ ಮನದ ನೋಟದಲ್ಲಿದೆ . ಹೀಗಾಗಿ ಅನಿವಾರ್ಯತೆಯನ್ನು ನಾವು ಸದುಪಯೋಗ ಪಡಿಸಿಕೊಳ್ಳೋಣ . ದಿನದಿನಕ್ಕೆ ಕರೋನಾ ತನ್ನ ವ್ಯಾಪ್ತಿ ಯನ್ನು ಹೆಚ್ಚಿಸಿಕೊಳ್ಳುತ್ತಿದೆ . ನಾವು ನಿಷೇಧವನ್ನು ಸಂಪೂರ್ಣವಾಗಿ ಬೆಂಬಲಿಸಿ ಪಾಲಿಸೋಣ  ಇಲ್ಲವಾದರೆ ಪರಿಸ್ಥಿತಿ ಮತ್ತಷ್ಟು ಬಿಕ್ಕಟ್ಟಾಗುತ್ತದೆ . ಎಲ್ಲವೂ ನಮ್ಮ ಮನಸ್ಥಿಯನ್ನು ಅವಲಂಬಿಸಿದೆ ಮತ್ತಷ್ಟು ಮಗದಷ್ಟು ಕಲಿಯೋಣ ಮನೆಯಲಿ ಇರೋಣ ಕರೋನ ಓಡಿಸೋಣ ‌. *******

ಪ್ರಸ್ತುತ Read Post »

ಇತರೆ

ಗೊಂಬೆಯೇ ಏನು ನಿನ್ನ ಮಹಿಮೆಯೇ?

ಗೊಂಬೆಯೇ ಏನು ನಿನ್ನ ಮಹಿಮೆಯೇ? ನಾಗರೇಖಾ ಗಾಂವಕರ್ ಗೊಂಬೆಯೇ ಏನು ನಿನ್ನ ಮಹಿಮೆಯೇ? ಆಕೆ ಮುದ್ದು ಮುದ್ದಾದ ಗೊಂಬೆ. ಎಂಥ ಚೆಂದ ಅಂದ. ಅದೆಂತಹ ನುಣುಪು.. ಒನಪು.. ನವಿರು ಹೊಂಬಣ್ಣದ ಮೈಗಂಪು. ಗೊಂಬೆ ಬಂಗಾರದ ಗೊಂಬೆ. ಹೀಗೆ ಹೇಳುವುದು ಸುಂದರವಾದ ಹುಡುಗಿಗೆ ಮಾತ್ರ ಎಂಬುದು ನನಗೆ ಸುಮಾರು ಏಳೆಂಟು ವರ್ಷಗಳಾದಾಗ ಅರಿವಾಗತೊಡಗಿತ್ತು. ಆದರೆ ನನ್ನ ಒಂದೇ ದುಃಖ ನನಗ್ಯಾರೂ ಹಾಗೇ ಕರೆಯುತ್ತಲೇ ಇಲ್ಲವಲ್ಲ ಎಂಬ ಕೊರಗು. ಹತ್ತು ಹಲವು ಬಾರಿ ನನ್ನ ಅಕ್ಕಂದಿರಿಗೆ ಆ ಪದವಿ ಸಿಕ್ಕಾಗಲೆಲ್ಲಾ ನನ್ನ ಹೊಟ್ಟೆಗ್ಯಾರೋ ಚೂರಿಯಿಂದ ಇರಿದಂತೆ, ಕರಳು ಕತ್ತರಿಸಿದಂತೆ, ಸಣ್ಣ ಕಿಚ್ಚು  ದೇಹದ ತುಂಬಾ ವ್ಯಾಪಿಸಿ ಹೊತ್ತಿಕೊಂಡಂತೆ. ಗೊಂಬೆಯಂತಾಗುವುದು ಹೇಗೆ? ನನ್ನ ಮೊರೆ ಕೇಳುವವರ್ಯಾರು? ಗೊಂಬೆಯಂತಹ ನುಣುಪು ಚರ್ಮವನ್ನು ರೇಷ್ಮೆಗೂದಲನ್ನು ಪಡೆಯುವುದು ಹೇಗೆ? ಅದೆಷ್ಟೋ ಬಾರಿ ಈ ವಿಚಾರಗಳು ಮನಸ್ಸನ್ನು ಕದಡಿ, ಮೂರು ಹೊತ್ತು ಅದನ್ನೆ ಯೋಚಿಸುವಂತೆ ಮಾಡಿಬಿಡುತ್ತಿದ್ದವು.  ನನ್ನಜ್ಜಿ ಹೇಳುತ್ತಿದ್ದ ರಾಜಕುಮಾರಿಯ ಕಥೆಯಲ್ಲಿ ಬಡ ಹುಡುಗಿಯೊಬ್ಬಳು ದೇವರ ಅನುಗ್ರಹದಿಂದ ಹೊಂಬಣ್ಣದ ಮೈಕಾಂತಿಯನ್ನು, ಚಿನ್ನದ ಕೂದಲನ್ನು ಹೊಂದಿ, ಸುಂದರಿಯಾದದ್ದು, ರಾಜಕುಮಾರನೊಬ್ಬ ಆಕೆಯನ್ನೇ ವರಿಸಿದ್ದು, ಇಂತಹ ಅನೇಕ ಕಥೆಗಳು ಸದಾ ನನ್ನ ತಲೆಯಲ್ಲಿ ಗುಂಯ್ಗುಡುತ್ತಿದ್ದವು. ಹರೆಯಕ್ಕೆ ಬರುತ್ತಲೇ ಗೊಂಬೆಯಂತಾಗುವ ಇರಾದೆ ಕಡಿಮೆಯಾಗುವ ಬದಲು ಹೆಚ್ಚೇ ಆಯಿತೆನ್ನಿ. ಗೊಂಬೆಯಂತೆ ಕಾಣಬೇಕೆಂಬ ಹಂಬಲ ಹೆಚ್ಚುತ್ತ ನಾ ಪ್ರಾರ್ಥಿಸದ ದೇವರಿಲ್ಲ. ಹರಕೆ ಹೊರದ ಗುಡಿಗಳಿಲ್ಲ. ಪೀಚಲು ದೇಹದ ನಾನು ಬಣ್ಣದಲ್ಲೂ ಗೋದಿ ಗೋದಿ. ಅಮ್ಮನೊಂದಿಗೆ ಊರ ಗುಡಿಗಳಿಗೆ ಹೋದಾಗಲೆಲ್ಲಾ ದೇವರ ಮುಂದೆ ನಿಂತು ಊದುಬತ್ತಿ ಬೆಳಗಿಸುತ್ತಿದ್ದದ್ದು, ನನ್ನ ಮೈ ಬಣ್ಣ ಹುಣ್ಣಿಮೆಯ ಚಂದಿರನಂತೆ ಆಗಲೆಂದು, ‘ಗೊಂಬೆ’ ಎಂದು ಎಲ್ಲರೂ ನನ್ನ ಕರೆಯುವಂತಾಗಲೆಂದೇ ಆಗಿತ್ತು. ಊರದೇವಿ ಮಾತ್ರ ಅಲ್ಲದೇ ನಮ್ಮೂರ ಕಾಯ್ವ ಬೀರದೇವ, ಹಾಗೂ ರಾಕೇಶ್ವರರು ನನ್ನನ್ನು ಗೊಂಬೆಯನ್ನಾಗಿಸುವ ಭರವಸೆ ಕೊಟ್ಟಿದ್ದರು. ಹಾಗಿತ್ತು ನನ್ನ ಹರಕೆಗಳು. ಬೇಡಿದರೆ ದೇವರನ್ನೇ ಬೇಡಬೇಕಂತೆ. ಕೊಟ್ಟರ ಕೊಡತಾನ ಶಿವನೆಲ್ಲ, ಕೊಡವ್ರ ಹೊಟ್ಟಮಾತು ಶಿವಬಲ್ಲ ಎಲ್ಲೋ ಕೇಳಿದ ಕವಿವಾಣಿ ಅದು ಸತ್ಯವೆನಿಸಿತ್ತು. ಕೊನೆಗೂ ಒಂದು ದಿನ ನಾನು ಗೊಂಬೆಯಂತೆ ಕಂಡಿದ್ದೆ. ಅದ್ಯಾದಾಗ ಅಂತಾ ಗೊತ್ತಾ? ಅದೇ ನನ್ನ ಮದುವೆಯ ದಿನ. ಒಂದೀಡಿ ದಿನ ನಮ್ಮನೆಯಲ್ಲಿಯೇ ಠಿಕಾಣಿ ಹೂಡಿದ ಬ್ಯೂಟಿಷಿಯನ್ ನಮ್ಮ ಹಳ್ಳಿಯ ಮನೆಯಲ್ಲಿ ಅದೆಂಥದ್ದೋ ಖುಷಿಪಟ್ಟಿದ್ದಳು. ತೆಂಗಿನ ತೋಟದ ಮಧ್ಯೆಯ ನಮ್ಮ ಮನೆಯಲ್ಲಿ ಪಟ್ಟಣದ ನಿವಾಸಿಯಾದ ಆಕೆಗೆ ಯಾವುದೋ ರೆಸಾರ್ಟನಲ್ಲಿ ಉಳಿದುಕೊಂಡ ಅನುಭವ ಕೊಟ್ಟಿತ್ತಂತೆ. ಆದರೂ ರಾತ್ರಿಯೆಲ್ಲ ಒಂದೇ ಸಮ ವಿಚಾರಿಸುತ್ತಲೂ ಇದ್ದಳು. ಇಲ್ಲೆಲ್ಲೂ ಆನೆ ಹುಲಿ ರಾತ್ರಿ ಸಮಯದಲ್ಲಿ ಬರುವುದಿಲ್ಲ ಅಲ್ಲವೇ? ನಿಮಗೆ ರಾತ್ರಿ ಇಲ್ಲಿ ಹೆದರಿಕೆ ಆಗಲ್ವೆ? ಅನ್ನುತ್ತ ಅದೂ ಇದೂ ಪ್ರಶ್ನೆ ಕೇಳಿದ್ದಳು. ನಮಗೋ ನಡುರಾತ್ರಿ ಬೇಕಾದರೂ ನೈಸರ್ಗಿಕ ಕ್ರೀಯೆಗಳ ಜರೂರು ಬಂದಾಗಲೆಲ್ಲಾ ಹಳ್ಳಕ್ಕೇ ಹೋಗಿ ಗೊತ್ತು. ಒಂದು ಟಾರ್ಚು ಹಿಡಿದು ಮನೆ ಪಕ್ಕೆಯ ಹಳ್ಳಕ್ಕೆ ಹೊರಟು ಆರಾಂ ಆಗಿ ಕೂತು ಮುಗಿಸಿ ಬರುವವರೆಗೂ ಯಾವ ಅಂಜಿಕೆ ಗಿಂಜಿಕೆ ಕಾಡುತ್ತಿರಲಿಲ್ಲ. ಆದರೆ ದೆವ್ವದ ಹೆಸರೆತ್ತಿದರೆ ಮಾತ್ರ ಯೌವನಕ್ಕೆ ಬಂದ ಮೇಲೂ ಸಣ್ಣದಾಗಿ ಮೈ ರೋಮಗಳು ಹೆದರಿಕೆಯಿಂದ ನಿಮಿರಿನಿಲ್ಲುತ್ತಿದ್ದವು. ಬ್ಯೂಟಿಷಿಯನ್ ಒಂದು ದಿನವನ್ನೂ ಒಂದರ್ಥದಲ್ಲಿ ಭಯದ ನೆರಳಿನ ರೋಮಾಂಚನದಲ್ಲಿಯೇ ಕಳೆದಳು. ಆಕೆ ಬಂದ ದಿನ ಅಂದರೆ ಮದುವೆಯ ಹಿಂದಿನ ದಿನ ಅದೇ ಅರಿಸಿನ ಹಚ್ಚುವ ದಿನ ಅಂತಾರಲ್ಲ.. ಅಂದು ಅಲ್ಪಸ್ವಲ್ಪ ಮೇಕಪ್ ಮಾಡಿದ್ದಳು. ಮುಖದ ಮೇಲಿನ ರೋಮಗಳನ್ನೆಲ್ಲಾ ಅದೆಂಥದ್ದೋ ವ್ಯಾಕ್ಸಿಂಗ್ ಅಂತ ಹೇಳಿ ಕಿತ್ತು ತೆಗೆದಿದ್ದಳು. ನನಗೆ ಆ ದಿನ ನನ್ನ ಮುಖ ನಾರದ ಮುನಿಯ ಮುಖದಂತೆ ಕಾಣುತ್ತಿತ್ತು. ಮಾರನೇ ದಿನವೇ ಮದುವೆ. ಮುಂಜಾನೆ ಚಹ ಕುಡಿದು ಸ್ನಾನ ಮುಗಿಸಿ ಬಂದ ನನ್ನ  ಹಿಡಿದು ಕೂತವಳು ನನ್ನ ಮುಖವನ್ನು ಟಿಸ್ಯೂ ಪೇಪರಿಂದ ಚೆನ್ನಾಗಿ ಒರೆಸಿ, ಕೊಳೆ ತೆಗೆದು, ನಂತರ ಬಗೆಬಗೆಯ ಕ್ರೀಮುಗಳನ್ನು ಒಂದಾದ ಮೇಲೊಂದು ಬಳಿದು ಇದ್ದ ಸಣ್ಣಪುಟ್ಟ ಕಲೆಗಳು ಎಲ್ಲೂ ಕಾಣದಂತೆ ಮೇಕಪ್ಪು ಹಾಕಿಬಿಟ್ಟಳು. ಹುಬ್ಬು ಕಣ್ಣುಗಳಿಗೆಲ್ಲಾ ಕಾಜಲ್ ಮಸ್ಕರಾ ಮತ್ತಿಕೊಂಡರೆ ತುಟಿಗೆ ಲಿಪಸ್ಟಿಕ್ ಹಚ್ಚಿ ಹೊಳೆಯುಂತೆ ಕಾಣಲು ಗ್ಲೋಸ್ ಮೆತ್ತಿದ್ದಳು. ನನ್ನ ಗೊಂಬೆಯಂತೆಯೇ ಅಲಂಕರಿಸಿಬಿಟ್ಟಳು. ನಾನು ಮದುವೆಯ ಖುಷಿಗಿಂತ ಈ ಕಲ್ಪನೆಯಲ್ಲಿಯೇ  ಹೆಚ್ಚು ಖುಷಿಯಾಗಿದ್ದೆ. ಅನ್ನಿ!. ಕನ್ನಡಿಯಲ್ಲಿ ಮಂಜಿನಷ್ಟು ಬೆಳ್ಳಗೆ ಹೊಳೆವ ನನ್ನ ಮುಖ ನೋಡಿ ನನಗೇ ನಂಬಲಾಗಿರಲಿಲ್ಲ. ಆದರೆ ಬಣ್ಣ ಮೆತ್ತಿದ ಮುಖ ಕಿಲಕಿಲ ಎನ್ನುವ ಸಹಜ ಮುಖದಂತೆ ಆರಾಂ ಎನ್ನಿಸುತ್ತಿರಲಿಲ್ಲ. ಲಿಪಸ್ಟಿಕ್ ಭಾರಕ್ಕೆ ಕೆಂಪಾದ ತುಟಿಗಳ ಮುಚ್ಚಲಾಗುತ್ತಿರಲಿಲ್ಲ. ನಕ್ಕರೂ ನಕ್ಕಂತಾಗುತ್ತಿರಲಿಲ್ಲ. ಆದರೆ ಚಿಕ್ಕಂದಿನ ಕನಸು ಮಾತ್ರ ನನಸಾಗಿತ್ತು. ಏನಕೇನ ಪ್ರಕಾರೇಣ ಸುಂದರ ಗೊಂಬೆ ಉದ್ಭವಃ ಅಂತೂ ದೇವರು ಕೊನೆಗೂ ನನ್ನ ಹರಕೆ ಪೂರೈಸಿದ್ದ. ನನ್ನ ಗೊಂಬೆ ಪುರಾಣ ಇಷ್ಟಕ್ಕೇ ಮುಗಿಯಲಿಲ್ಲ. ಗೊಂಬೆಯಂತಿಲ್ಲದ ನಾನು ಕಡೇ ಪಕ್ಷ ಒಂದು ಗೊಂಬೆಯನ್ನಾದರೂ ಹೊಂದಿದ್ದೆ ಎಂದರೆ ನೀವು ನಂಬಲೇಬೇಕು. ಊರಲ್ಲಿ ಜಾತ್ರೆ ಹಬ್ಬಗಳೇನಾದರೂ ಇದ್ದಾಗಲೇ ಬರುವ ಗೊಂಬೆಯಂಗಡಿಯೆಂದರೆ ನನಗೆ ಪಂಚಪ್ರಾಣ. ಈಗಲ್ಲ ಒಂದಾನೊಂದು ಕಾಲದಲ್ಲಿ. ಗೊಂಬೆಯಾಡಿಸುವುದೆಂದರೆ ಅದೇ ಹುಮ್ಮಸ್ಸು. ನಮ್ಮ ಪಕ್ಕದ ಮನೆಯ ಮಾಸ್ತರ ರಾಮಣ್ಣನ ಮಗಳ ಬಳಿ ಯಾವಾಗಲೂ ಬಗೆಬಗೆಯ ಗೊಂಬೆಗಳಿರುತ್ತಿದ್ದವು. ಆಕೆಯನ್ನು ಕಾಡಿ ಬೇಡಿ ಇಸಿದುಕೊಂಡು ಆಡುತ್ತಿದ್ದೆ. ಆದರೆ ನನ್ನ ಬಳಿ  ಗೊಂಬೆಗಳಿರಲಿಲ್ಲ. ನನ್ನಪ್ಪ ಆಟಿಕೆ ಗೊಂಬೆಗಳಿಗೆ, ಇಲ್ಲ ಸಾಮಾನುಗಳಿಗೆ ಹಣ ಹಾಕಿ ತೆಗೆಸಿಕೊಡುವಷ್ಟು ಶ್ರೀಮಂತನೂ ಆಗಿರಲಿಲ್ಲ. ಅಲ್ಲದೇ ಹಣ ಇದ್ದರೂ ಆಟಕ್ಕೆಲ್ಲ ಉದ್ದಕ್ಕೂ ಬಿದ್ದುಕೊಂಡಿರುವ ಗದ್ದೆ ಬಯಲಿರುವಾಗ ಈ ಗೊಂಬೆ ಹಿಡಿದು ಆಡುವುದು ಏನು ಚೆನ್ನ? ಎನ್ನುವ ಜಾಯಮಾನದವನಾಗಿದ್ದರು.  ಆಟಿಕೆಗಳಿಗೆ ಸುಮ್ಮನೇ ಹಣ ಖರ್ಚು ಎಂದು ಲೆಕ್ಕ ಹಾಕುವ ದಿನಮಾನಗಳವು. ಹೆತ್ತವರು ಇದ್ದ ಮೂವರು ಹೆಣ್ಣು ಮಕ್ಕಳ ಮದುವೆ ಮಾಡಿಕೊಟ್ಟು ಕೈತೊಳೆದುಕೊಂಡರೆ ಸಾಕು ಈ ಜನ್ಮ ಎಂಬಷ್ಟರ ಮಟ್ಟಿಗೆ ವರದಕ್ಷಿಣೆಯ ಹಾವಳಿಗೆ ಬೇಸತ್ತ ದಿನಗಳಾಗಿದ್ದವು. ಕೆಲವೊಮ್ಮೆ ಮಕ್ಕಳ ಬಯಕೆಯನ್ನು ಇಡೇರಿಸಲಾಗದ ಅಸಹಾಯಕತೆಗೆ ನಿಟ್ಟುಸಿರು ಬಿಡುವ ಅವರನ್ನು ಹೆಚ್ಚು ಸತಾಯಿಸುತ್ತಿರಲಿಲ್ಲ ನಾವು. ಆದರೂ ಅಂದೊಮ್ಮೆ ನನ್ನ ಅಪ್ಪನ ಜೊತೆ ಸಂತೆಗೆ ಹೋದಾಗ, ಪೇಟೆ ಬೀದಿಯ ಸಾಲು ಸಾಲು ಅಂಗಡಿಗಳು ಬರಿಯ ಬೊಂಬೆಗಳನ್ನು ಮಾರುತ್ತಿದ್ದವು. ನನ್ನ ಹಠಕ್ಕೋ, ಕೈಯಲ್ಲಿ ಆ ದಿನ ಒಂದಿಷ್ಟು ಹಣ ಇದ್ದದ್ದಕ್ಕೋ ಅಪ್ಪ ಪ್ರೀತಿಯಿಂದಲೇ ಒಂದು ಗೊಂಬೆ  ಕೊಡಿಸಿದ್ದರು. ಆ ಕಾಲಕ್ಕೆ 25 ರೂ ಕೊಟ್ಟು ಖರೀದಿಸಿದ ಗೊಂಬೆ ಅದಾಗಿತ್ತು.  ನನಗೆ ಹೆಣ್ಣು ಗೊಂಬೆಗಳೆಂದರೆ ಇಷ್ಟವಾಗಿತ್ತು. ಯಾಕೆಂದರೆ ಅವುಗಳಿಗೆ  ಚಂದದ ಫ್ರಾಕುಗಳು ಇರುತ್ತಿದ್ದವಲ್ಲಾ.? ನುಣೂಪಾದ ಕೂದಲು, ಮಿಟುಕಿಸುವ ಕಣ್ಣು ಎಲ್ಲವೂ ಚೆಂದ. ಆದರೆ ಆ ದಿನ ನನಗೆ ದಕ್ಕಿದ್ದು ಹೆಣ್ಣು ಗೊಂಬೆಯಲ್ಲ. ಬದಲಿಗೆ ಸಣ್ಣ ಪೋರನ ಗೊಂಬೆ. ಅದಕ್ಕೆ ಸಣ್ಣ ಚೊಣ್ಣ ಬಿಟ್ಟರೆ ಮೇಲಂಗಿ ಇರಲಿಲ್ಲ.ಚೊಣ್ಣವನ್ನು ತೆಗೆದು ಹಾಕಿ ಮಾಡಬಹುದಿತ್ತು.  ಅದು ಬಾಲ್ಯದಲ್ಲಿ ನನ್ನ ಪ್ರಾಣವಾಗಿತ್ತು. ಥೇಟ್  ತಾಯಿ ತನ್ನ ಮಗುವನ್ನು ಲಾಲಿಸಿದಂತೆ ನಾನದನ್ನು ಲಾಲಿಸುತ್ತಿದ್ದೆ. ನಾನದರ ತಾಯಿಯಾಗಿದ್ದೆ. ಅದಕ್ಕೆ ಹಾಲೂಡಿಸುವುದು, ಮೂತ್ರಮಾಡಿಸುವುದು, ಹುಷಾರಿಲ್ಲದಿದ್ದರೆ ಡಾಕ್ಟರ ಕಡೆಗೆ ಕರೆದೊಯ್ಯುವುದು, ಅದೂ ಅಲ್ಲದೇ ಬಹಿರ್ದೆಸೆಗೆ ಕೊಂಡೊಯ್ದು ಪ್ರಕ್ಷಾಳನ ಮಾಡಿಸುವುದು ಎಲ್ಲವನ್ನೂ ಥೇಟ್ ಅಮ್ಮನಂತೆ ನಟಿಸುತ್ತಿದ್ದೆ. ಅದು ಯಾರೂ ನನ್ನ ಗಮನಿಸುತ್ತಿಲ್ಲ ಎಂದು ಗ್ರಹಿಸಿಕೊಂಡಾಗ ಮಾತ್ರ. ಒಂದು ದಿನ ಶಾಲೆಗೆ ರಜಾ ದಿನವಾಗಿತ್ತು. ನಾನು ಯಾರೂ ಕಾಣದ ಜಾಗ ಹುಡುಕಿ ಕೂತು ನನ್ನ ಬಾಲಗೊಂಬೆಯನ್ನು ತೋಳಲ್ಲಿ ಒರಗಿಸಿಕೊಂಡು ಅಮ್ಮನಾಗಿ ಹಾಲುಣಿಸುತ್ತಾ ಲಾಲಿ ಹಾಡುತ್ತಿದೆ. ನನ್ನಣ್ಣ ಅಲ್ಲಿಗೆ ಬಂದಿರುವುದ ಗಮನಿಸದಷ್ಟು ನಾನು ತಲ್ಲೀನೆ. ಅಮ್ಮನಲ್ಲವೇ? ಮಕ್ಕಳೇ ಆಕೆಯ ಬದುಕಲ್ಲವೇ? ನನ್ನ ಗೊಂಬೆ ಬಾಲ ನನ್ನನ್ನೇ ನೋಡುತ್ತಿರುವಂತೆ, ನಗುತ್ತಿರುವಂತೆ ನನಗನ್ನಿಸಿತ್ತು. ನನ್ನ ಮಳ್ಳಾಟವನ್ನು ಕಂಡ ನನ್ನಣ್ಣ ನಗು ತಡೆಯದೇ ಗಹಗಹಿಸಿ ನಗಲಾರಂಭಿಸಿದ. ಆ ಸದ್ದಿಗೆ ಮನೆಮಂದಿಯೆಲ್ಲಾ ಅಲ್ಲಿ ಜಮಾಯಿಸಿದ್ದರು. ನಾನಾದರೋ ನಾಚಿಕೆಯಿಂದ ತೋಯ್ದು ತೊಪ್ಪೆಯಾಗಿದ್ದೆ. ಮಾಸ್ತರ ರಾಮಣ್ಣನ ಮಗಳ ಬಳಿ ಹಲವು ಗೊಂಬೆಗಳಿದ್ದರೆ, ನನ್ನ ಬಳಿ ಇದ್ದದ್ದು ಇದೊಂದೇ ಗೊಂಬೆಯಾಗಿತ್ತು. ನಮ್ಮ ಮನೆಮುಂದಿನ ರಸ್ತೆ ದಾಟಿದರೆ ಸಿಗುವ ಹಾಲಕ್ಕಿ ಕೇರಿಯ ಸುಕ್ರಿ ಕೂಡಾ ನಮ್ಮ ವಾರಗೆಯವಳೇ ಆಗಿದ್ದಳು. ರಾಮಣ್ಣನ ಮಗಳು ಜ್ಯೋತಿ ತನ್ನ ಗೊಂಬೆಗಳನ್ನು ಆಡಲು ತರುವಾಗ ಧಿಮಾಕು ಮಾಡುತ್ತಿದ್ದಳು. ತನ್ನ ಬಳಿ ಮಾತ್ರ ಬಗೆಬಗೆಯ ಗೊಂಬೆ ಇರುವುದು ಆಕೆಗೆ ದೊಡ್ಡಸ್ತಿಕೆಯಾಗಿತ್ತು. ಆದರೆ ಪಾಪ ಸುಕ್ರಿ ಬಡವಳು. ಸಪ್ಪೆ ಮುಖ ಹಾಕಿ ನಮ್ಮ ಬೊಂಬೆಗಳನ್ನೆ ನೋಡುತ್ತ ಇರುತ್ತಿದ್ದಳು. ಆಗಾಗ ನಾನು ನನ್ನ ಬಾಲನನ್ನು ಆಕೆಯ ಕೈಗಿತ್ತರೂ, ಆಕೆ ಎಲ್ಲಾದರೂ ನನ್ನ ಮಗನ ಕರೆದೊಯ್ದರೆ  ಎಂಬ ಹೆದರಿಕೆಗೆ ಬೇಗನೇ ಇಸಿದುಕೊಳ್ಳುತ್ತಿದ್ದೆ. ಒಂದು ಸರ್ತಿ ಊರಿನ ಅಗಸೆಬಾಗಿಲಲ್ಲಿ ಇರುವ ನರಸಿಂಹ ದೇವಸ್ಥಾನದ ಜಾತ್ರೆಗೆ ಹೊರಟಿದ್ದೆವು. ಅದು ಪ್ರತಿ ವರ್ಷ ನಡೆಯುವ ಜಾತ್ರೆ. ದೇವರಿಗೆ ಹಣ್ಣುಕಾಯಿ ಮಾಡಿಸಿ, ಹರಕೆ ಇದ್ದರೆ ತೀರಿಸಿಕೊಂಡು, ದೇವರ ಪ್ರಸಾದ ಉಂಡು ಬರುವ ಕ್ರಮ. ನಂತರ ಬರುವ ಬೆಂಡು ಬತ್ತಾಸು ಅಂಗಡಿ, ಬೊಂಬೆಯಂಗಡಿ, ಬಳೆಯಂಗಡಿಗೆ ಹೆಣ್ಮಕ್ಕಳ ಟೋಳಿ ಸುತ್ತುವರೆಯುತ್ತಿತ್ತು. ಆ ದಿನ ಸುಕ್ರಿ ತನ್ನ ತಂದೆಯ ಕೈಹಿಡಿದು ಜಗ್ಗುತ್ತಿದ್ದಳು. ತನಗೊಂದು ಗೊಂಬೆ ಕೊಡಿಸೆಂದು ಅಂಗಲಾಚುತ್ತಿದ್ದಳು. ಬಡವನಾದ ಆತ ತನ್ನ ಅಂಗಿಯ ಕಿಸೆಯಲ್ಲಿ ಚಿಲ್ಲರೆ ಹುಡುಕುತ್ತಿದ್ದ. ಎಲ್ಲಾ ಒಟ್ಟಾಗಿಸಿದರೂ ಅಂಗಡಿಯಾತ ಹೇಳಿದ ಹದಿಮೂರು ರೂಪಾಯಿಗಳು ಅಲ್ಲಿರಲಿಲ್ಲ. ಮಗಳ ಚಿಕ್ಕ ಆಸೆಯನ್ನು ಪೂರೈಸಲಾಗದ ಹತಾಶೆಗೋ ಏನೋ?  ಅವಳಪ್ಪ ಅವಳನ್ನೇ ಮತ್ತೆ ಬೈಯತೊಡಗಿದ. ಮನೀಲಿ ಏಡೆಡು [ಎರಡೆರಡು] ಬೊಂಬ್ಯವು ಬಿದ್ಕಂಡ್ಯೋ! ಜೇಮಂತೇ ಇರ್ವವು. ಅವ್ನೇ ಆಡ್ಸು. ಇದೆಂಥಕೆ? ಅವ್ನಾ ಸಮತ್ನಾಗೇ ನೋಡ್ಕಣುಕೇ ಆಗುದಿಲ್ಲಾ.. ನೀಂಕಡೆ. ಅವ್ರ ಸಂತೀಗೇ ಜಗಳಾಡ್ತೇ ಕುಳ್ತೀ. ಸುಮ್ನೇ ನಡೀ ಮನೀಗೇ ಎನ್ನುತ್ತ ಜಾರಿದ ತನ್ನ ಹಪ್ಪಾದ ಹಳೆ ಮುಂಡು ಎತ್ತಿ ತೊಡೆವರೆಗೂ ಕಟ್ಟಿಕೊಂಡು ಭರಭರ ಮನೆಯ ಕಡೆ ನಡೆಯಲಾರಂಭಿಸಿದ. ಆಕೆ ಮಾತಿಲ್ಲದೇ ತಂದೆಯ ಹಿಂಬಾಲಿಸಿದ್ದಳು. ಆಕೆ ಮ್ಲಾನತೆಯಿಂದ ಕಳೆಗುಂದಿದ್ದಳು. ಜನನಿಬಿಡ ಆ ಜಾತ್ರೆ ಗದ್ದಲದಲ್ಲಿ ಪಿಳಪಿಳ ಕಣ್ಣು ಬಡಿಯುತ್ತಿದ್ದರೂ ಆಕೆಯ ನಿಯಂತ್ರಣ ಮೀರಿ ಕಣ್ಣೀರು ಉಕ್ಕಿತ್ತು. ಆಕೆಯನ್ನು ದೂರದಿಂದಲೇ ಗಮನಿಸುತ್ತಿದ್ದ ನನ್ನ ಕಣ್ಣುಗಳಲ್ಲೂ ಅನಿಯಂತ್ರಿತವಾಗಿ ಜಿನುಗಿದ ಹನಿ. ನಮ್ಮನೆಯ ಪರಿಸ್ಥಿತಿ ಆಕೆ ಮನೆಯ ಸ್ಥಿತಿಗಿಂತ ಕೊಂಚ ಅಷ್ಟೇ ಚೆನ್ನಾಗಿತ್ತು. ಹಾಗಾಗಿ ಆಕೆಯ ಭಾವನೆಗಳು ನನ್ನದೂ ಆಗಿದ್ದವಲ್ಲ. ನಾವು ಗೊಂಬೆ ಆಡಿಸುತ್ತಿದ್ದೆವೋ ಇಲ್ಲ ಗೊಂಬೆಯೇ ನಮ್ಮನ್ನು ಆಡಿಸುತ್ತಿತ್ತೋ? ಮೇಲೆ ಕೂತವನ ಕರಾಮತ್ತೋ? ಗೊಂಬೆ ಎಂಬ ಗಾರುಡಿಗ ಕಾಡಿದ್ದು ಇದಿಷ್ಟೇ ಅಲ್ಲ. ಇನ್ನೊಂದು ಸ್ವಾರಸ್ಯವಿದೆ ಕೇಳಿ. ಮೂವರು ಹೆಣ್ಣು ಮಕ್ಕಳು ಮೂವರು ಸುಪುತ್ರರ ತಂದೆ ನನ್ನಪ್ಪ. ಇದ್ದ ಹಣದಲ್ಲಿಯೇ ಆಗಾಗ ಅದೂ ಇದೂ ತಿಂಡಿಗಳ ತಂದು ಮಕ್ಕಳಿಗೂ, ಮಕ್ಕಳ ತಾಯಿಗೂ ಖುಷಿಪಡಿಸುವ ಜಾಯಮಾನದವರು. ಹಾಗೇ ತಂದಾಗಲೆಲ್ಲಾ ಆನೆ ಹೊಟ್ಟೆಗೆ ಕಾಸಿನ ಮಜ್ಜಿಗೆ  ಅನ್ನೋ ಹಾಗೆ ನಮಗೆ ಕೊಟ್ಟಷ್ಟೂ ಸಾಲುತ್ತಿರಲಿಲ್ಲ. ಇನ್ನೂ ತಿನ್ನುವ ಆಸೆ. ಅದಕ್ಕೆ ಅದೇನೇನೋ ಉಪಾಯಗಳು. ಅಂತಹ ಉಪಾಯದಲ್ಲಿ ಬೆರಕಿ ನನ್ನ ದೊಡ್ಡಕ್ಕ. ಅಪ್ಪ ಅದೊಂದು ದಿನ ಬೆಳಗಾವಿಯಿಂದ ಬರುತ್ತಾ ಹಾಲಿನ ಕುಂದಾ ತಂದಿದ್ದರು. ಆಕೆಗೆ ಕೊಟ್ಟಿದ್ದು ಸಾಲದಾಗಿತ್ತು. ತನ್ನ ಪಾಲಿನದನ್ನು ಗಬಗಬ ತಿಂದು ಮುಗಿಸಿದವಳಿಗೆ ಇನ್ನೂ ತಿನ್ನುವ ಆಸೆ ಹುಟ್ಟಿರಬೇಕು. ಅದೇನೋ ಉಪಾಯ ಹೊಂಚಿದ್ದು, ಮನೆ ಕಿಬಳಿಯಲ್ಲಿ ಬೆಳೆದ ಕೆಸುವಿನ ಗಿಡಗಳ ನಡುವೆ ಅದ್ಯಾವುದೋ ಹಳೆಯ ಸಣ್ಣ

ಗೊಂಬೆಯೇ ಏನು ನಿನ್ನ ಮಹಿಮೆಯೇ? Read Post »

ಇತರೆ

ಪ್ರಸ್ತುತ

ಮೊಬೈಲ್ ಡೆವಿಲ್ ಆದೀತು ಜೋಕೆ:– ವಿದ್ಯಾ ಶ್ರೀ ಬಿ. ಮೊಬೈಲ್ ಡೆವಿಲ್ ಆದೀತು ಜೋಕೆ. ಮಾನವ ಇಂದು ನಾಗರಿಕತೆಯ ಕಡೆ ಭರದಿಂದ ಸಾಗಿದ್ದಾನೆ. ಹಿಂದೆ ಅನಾಗರೀಕನಾಗಿದ್ದ ಅವನಲ್ಲಿ ಆದಿಮಾನವನಿದ್ದ. ಈಗ ನಾಗರಿಕನಾಗಿದ್ದಾನೆ, ಗ್ರಹದಿಂದ ಗ್ರಹಕ್ಕೆ ಹೋಗಿ ಬರುತ್ತಿದ್ದಾನೆ. ಸಮುದ್ರದ ಆಳವನ್ನು ಕೊರೆದಿದ್ದಾನೆ. ಭೂಮಿಯ ಒಡಲನ್ನು ಬರಿದು ಮಾಡಿದ್ದಾನೆ, ಕಾಂಕ್ರೀಟ್ ಜಂಗಲ್ ಸೃಷ್ಟಿಸಿದ್ದಾನೆ .ಕನಸಿನ ಕೂಸಾದ ಕಂಪ್ಯೂಟರ್ ನಿರ್ಮಿಸಿ ಬಿಡುತ್ತಿದ್ದಾನೆ. ಶಸ್ತ್ರಾಸ್ತ್ರ ಅಣ್ವಸ್ತ್ರದ ಜನಕನೂ ಆಗಿದ್ದಾನೆ. ರೋಬೋಟ್ ಮಾನವ ಕ್ಲೋನಿಂಗ್ ತಳಿಯ ಸೃಷ್ಟಿಕರ್ತನಾಗಿ ಹೀಗೇ ಅವನ ಮಹತ್ತರ ಸಾಧನೆಯನ್ನು ಪಟ್ಟಿಮಾಡುತ್ತ ಹೋಗಬಹುದು ಇವೆಲ್ಲದರೊಂದಿಗೆ ಮೊಬೈಲ್ ಅವನ ಸಾಧನೆಗಳ ಕಿರೀಟದಲ್ಲಿ ವಜ್ರದ ಹರಳಿನಂತೆ ಒಪ್ಪುತ್ತಿದೆ. ಐದು ಆರು ವರ್ಷಗಳ ಹಿಂದೆ ಸಂಪರ್ಕ ಅಷ್ಟೇನೂ ಸುಲಭವಾಗಿರಲಿಲ್ಲ ಸಂಪರ್ಕ ಇಂದು ಅತಿ ಸುಲಭ. ಫೋನ್ ಸಂಪರ್ಕಕ್ಕಾಗಿ ಗುಂಡಿ ತೋಡಬೇಕಾಗಿಲ್ಲ. ಕಂಬ ನಿಲ್ಲಿಸುವ ಅಗತ್ಯವಿಲ್ಲ ತಂತಿ ಎಳೆಯುವ ಪ್ರಮೇಯವಿಲ್ಲ. ಸೊಂಟದ ಮೇಲಿನ ಮಗುವಿನಂತೆ ಎತ್ತಿಕೊಂಡು ಹೋಗಲು ಭಾರವಿಲ್ಲ. ಮೈಸೂರು ಸ್ಯಾಂಡಲ್ ಸೋಪ್ಗಿಂತಲೂ ಚಿಕ್ಕದಾದ ಉಪಕರಣವನ್ನು ಜೇಬಿಗಿಳಿಸಿ ಕೊಂಡು ಎಲ್ಲಿಗೆ ಬೇಕಾದರೂ ಹೋಗಬಹುದು. ಪ್ರಯಾಣಿಸುತ್ತಾ ಮಾತನಾಡಬಹುದು ಎಲ್ಲೆಂದರಲ್ಲಿ ಯಾವಾಗ ಬೇಕಾದರೂ ಬಳಸಬಹುದು. ಹತ್ತು ಇಪ್ಪತ್ತು ವರ್ಷಗಳ ಹಿಂದೆ ಯಾವುದಾದರೊಂದು ದೇವರ ನಾಮಸ್ಮರಣೆಯನ್ನು ಕೇಳುತ್ತಿದ್ದ ಕಿವಿಗಳನ್ನು ಮೊಬೈಲ್ ಫೋನ್ ಅಲಂಕರಿಸಿವೆ. ಮೊಬೈಲ್ ಇಲ್ಲದಿದ್ದರೆ ಜೀವನಕ್ಕೆ ಅರ್ಥ ಇಲ್ಲದಂತಾಗಿದೆ ಅದು ಅಪೂರ್ಣ ಬದುಕು ಎನಿಸಿದಂತಾಗಿದೆ. ಅಲ್ಲದೆ ಅತ್ಯಾಧುನಿಕ ಜಗತ್ತಿಗೆ ಅದು ತುಂಬಾ ಅವಶ್ಞಕ ಅದು ಇಲ್ಲದಿದ್ದರೆ ಬದುಕು ನಡೆಯುವುದೇ ಇಲ್ಲವೆಂಬ ಅನಿವಾರ್ಯತೆ ಬಂದಿದೆ ಸಂಬಂಧ ಪರಸ್ಪರ ಪ್ರೀತಿ ಪ್ರೇಮ ತುರ್ತು ಸಮಾಚಾರ ಒಳ್ಳೆಯದು-ಕೆಟ್ಟದ್ದು ಎಲ್ಲದಕ್ಕೂ ಅದು ಬಳಕೆ ಆಗುತ್ತಿದೆ. 10 ನಿಮಿಷ 20 ನಿಮಿಷ ಅರ್ಧಗಂಟೆ ಹೀಗೆ ಗಂಟೆಗಟ್ಟಲೆ ಹರಟುವುದು ಉಂಟು ಈ ಹಿಂದೆ ಮಧ್ಯ ಕುಡಿದವನನ್ನು ಅನಾಗರಿಕ ಎನ್ನುತ್ತಿದ್ದರು ಇಂದು ಮೊಬೈಲ್ ಫೋನ್. ಇಲ್ಲದವನನ್ನು ಹೀಗೆ ಭಾವಿಸಲಾಗುತ್ತಿದೆ ಮಗುವಿನಿಂದ ಹಿಡಿದು ಮುದುಕ ಮುದುಕಿಯರವರೆ ವರ್ತಮಾನದಿಂದ ಧಾರ್ಮಿಕತೆಯವರೆಗೂ ಅದರ ಬಳಕೆ. ಮೊಬೈಲ್ ಫೋನಿನಿಂದ ಒಳ್ಳೆಯದನ್ನು ಮಾಡಬಹುದು ಅದರಂತೆ ಕೆಟ್ಟದ್ದನ್ನು ಸಹ ಮೊಬೈಲ್ ಫೋನಿನ ಅತೀವ ಸಂಭಾಷಣೆ ಕಿವಿಗಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಸದಾಕಾಲ ಏನೋ ಮುಳುಗುತ್ತಿರುವ ಅನುಭವವಾಗುತ್ತದೆ. ಮೊಬೈಲ್ ಫೋನ್ ತರುವ ಸಂದೇಶ ಮಾನಸಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮೊದಲೇ ಆಧುನಿಕ ಮಾನವ ಒತ್ತಡದ ಮಾನವ ಆಗಿದ್ದು. ಮೊಬೈಲ್ ಫೋನ್ ಮತ್ತಷ್ಟು ಅದನ್ನು ಹೆಚ್ಚಿಸುತ್ತದೆ, ಕೆಲವರು ಕರೆಗಳು ಬೇಡವೆಂದು ಬಂದ್ ಮಾಡಿಬಿಡುತ್ತಾರೆ ಅದೆಷ್ಟು ಕರೆಗಳು ಬಂದಿರುವುದು ಗಮನಕ್ಕೆ ಬಂದು ಏನು ಆ ಕಡೆಯಿಂದ ಸಂದೇಶವಿತ್ತು ಎಂದು ಬಂದ್ ಮಾಡಿದರೆ ಸಂಪರ್ಕ ಬೆಳೆಸಲು ಮುಂದಾಗುತ್ತಾರೆ. ಎಲ್ಲಿಂದಲೋ ಬರುವ ಫೋನ್ ಕರೆಯೊಂದು ಮನಸ್ಸನ್ನು ಕೆಡಿಸುವ ಸಂಭವವಿದೆ. ಪ್ರಶಾಂತವಾಗಿದ್ದ ಮನಸ್ಸು ಕೆಲ ನಿಮಿಷಗಳಲ್ಲಿ ಅಶಾಂತವಾಗಿ ಬಿಡುತ್ತದೆ. ಮನಸ್ಸಿನ ಅದುಮಿಟ್ಟ ಅದೆಷ್ಟು ಭಾವನೆಗಳನ್ನು ಮೊಬೈಲ್ ಫೋನ್ ಮೂಲಕ ಹೊರ ಹಾಕಬಹುದಾಗಿದೆ. ನಾವು ನೀವು ಸುಮ್ಮನಿರಬಹುದು ಆದರೆ ಫೋನ್ ಕರೆಗಳು ಬರುತ್ತಲೇ ಇರುತ್ತವೆ. ಬಂದು ಮನಸ್ಸಿನ ಮೇಲೆ ಅಪ್ಪಳಿಸುತ್ತಲೇ ಹೋಗುತ್ತವೆ. ಒಬ್ಬನು ಎಷ್ಟೇ ಉತ್ತಮ ನಾ ಉತ್ತಮವಾಗಿರಬೇಕೆಂದರೆ ಬರುವ ಒಂದು ಕರೆ ಆತನನ್ನು ತಪ್ಪು ಹಾದಿಗೆ ಎಳೆಯಲು ಕಾರಣ ಆಗುತ್ತದೆ. ಮುಖ್ಯವಾಗಿ ಶಾಂತ ವಾತಾವರಣದಿಂದ ದೂರ ಉಳಿಯಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಶಾಂತಿ ಸಮಾಧಾನ ಸಹನೆಗೆ ಒಳಗಾಗುವುದು ದುಸ್ತರವಾಗಿರುವಾಗ ಮೊಬೈಲ್ ಫೋನು ಮತ್ತಷ್ಟು ಶಾಂತಿಯನ್ನು ಕಳೆಯುತ್ತದೆ ತನ್ನೆಲ್ಲ ಭಾವನೆಗಳನ್ನು ಅದರಿಂದ ವ್ಯಕ್ತಪಡಿಸಬಹುದಾದ ಒಂದು ಒತ್ತಡದ ವಾತಾವರಣ ನಿರ್ಮಾಣವಾಗುತ್ತದೆ. ಮತ್ತು ಶಾಂತಚಿತ್ತ ಇಲ್ಲವಾಗುತ್ತದೆ ಆದ್ದರಿಂದ ಅದು ಆಧುನಿಕ ಮಾನವನಿಗೆ ಗಂಟು ಬಿದ್ದ ಬೇತಾಳ. ಅದು ಮೊಬೈಲ್ ಅಲ್ಲ ಅನೇಕ ಸಾರಿ ಅದು ಡೆವಿಲ್ ಆಗಿ ಕಾಡುತ್ತದೆ. *********

ಪ್ರಸ್ತುತ Read Post »

ಇತರೆ

ಅವನಿಗೆ ನಾಳೆ ಬಾ ಎನ್ನಿ

ಕೊರೋನಾ ಅವನಿಗೆ ನಾಳೆ ಬಾ ಎನ್ನಿ ಡಿ.ಯಶೋದಾ ಕೊರೋನಾ ಅವನಿಗೆ ನಾಳೆ ಬಾ ಎನ್ನಿ ಇತ್ತೀಚೆಗೆ ಪ್ರತಿದಿವಸ ಅವನು ಕನಸಿನಲ್ಲಿ ಬರುತ್ತಾನೆ, ತನ್ನ ಜೊತೆ ಬಂದುಬಿಡು ಎಂದು ಬಲವಂತ ಮಾಡುತ್ತಾನೆ, ನನಗೂ ಅವನೊಂದಿಗೆ ಹೋಗಿಬಿಡುವ ಮನಸ್ಸಾಗುತ್ತಿದೆ.ನಿಜ ಹೇಳಬೇಕೆಂದರೆ ಹಗಲೆಲ್ಲಾ ಅವನನ್ನೇ ನೆನಪಿಸಿಕೊಳ್ಳುತ್ತಿರುತ್ತೇನೆ, ಇರುಳಲ್ಲಿ ಅವನು ಬಂದು ಕರೆಯುತ್ತಾನೆ. ಇಲ್ಲಿ ಇದ್ದು ನಾನು ಮಾಡುವುದಾದರೂ ಏನಿದೆ? ಹೋಗಿಬಿಡಲೇ?…ಹೋಗಿಬಿಡಲೇ ಎಂದು ಕೇಳುವ ಆಕೆಯಮನಸ್ಸು ಅರ್ಥವಾಗಿತ್ತು ಹಾಗೆಯೇ ನನ್ನ ಮನಸ್ಸುಆರ್ದ್ರವಾಯಿತು.. ಕರೆಯುವವನು ಜೀವ ಕೊಡುವವನಾಗಿದ್ದರೆ ಹೋಗಿಬಿಡು ಎನ್ನಬಹುದಿತ್ತು, ಆದರೆ ಜೀವ ತೆಗೆಯುವವನ ಜೊತೆ ಕಳುಹಿಸುವುದು ಹೇಗೆ? ಇನ್ನೊಬ್ಬರದು ಇನ್ನೂ ವಿಚಿತ್ರ ಲೆಕ್ಕಾಚಾರ- ಹಿಂದೆಯೆಲ್ಲ ನನಗೆ ಸರಿಯಾದ ಕಾರಣ ದೊರೆತಿರಲಿಲ್ಲ. ಈಗ ನನಗೆ ಬರೆದಿಡಲು ಒಂದು ಒಳ್ಳೆಯ ಕಾರಣವಿದೆ, ಇದನ್ನು ಬಹಳಷ್ಟು ಜನ ಒಪ್ಪಿಕೊಳ್ಳಬಹುದು. ಹಾಗಾಗಿ ನಾನು ಅದಕ್ಕೆ ಪ್ರಯತ್ನಿಸಲೇಬೇಕು.ಅವರ ಸ್ಪಷ್ಟ ನುಡಿಗಳು ನನ್ನನ್ನು ಬೆಚ್ಚುಬೀಳಿಸಿದವು. ಇಂಥ ಪ್ರಕರಣಗಳು ಒಂದು, ಎರಡು ಮಾತ್ರವಲ್ಲ. ಕೊರೊನಾ ಲಾಕ್ಡೌನ್ನಿಂದಾಗಿ ಯಾರನ್ನೂ ಭೇಟಿಯಾಗದ ಕಾರಣ ಆನ್ಲೈನ್ನಲ್ಲೇ ಕೌನ್ಸೆಲಿಂಗ್ ನಡೆಯುತ್ತಿದ್ದು,ಕೌನ್ಸೆಲಿಂಗ್ ಮೊರೆ ಹೋಗುತ್ತಿರುವವರೂ ಹೆಚ್ಚಾಗಿದ್ದಾರೆ. ಕೆಲವು ಮಹಿಳೆಯರು ಈ ರೀತಿ,ಜೀವನದಿಂದ ವಿಮುಕ್ತರಾಗಿ ಸಾವಿನ ಬಗ್ಗೆ ಆಸಕ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಕೆಲವರಂತೂ ಈಗ ಆತ್ಮಹತ್ಯೆಗೆ ದೇವರೇ ತಮಗೆ ದಾರಿ ತೋರಿಸಿದ್ದಾನೆ ಎನ್ನುತ್ತಿದ್ದಾರೆ. ಇಡೀ ವಿಶ್ವವೇ ಕೊರೊನಾ ಮಾರಕ ರೋಗದ ಮುಕ್ತಿಗಾಗಿ ಶ್ರಮಿಸುತ್ತಿದೆ. ವೈದ್ಯೋ ನಾರಾಯಣೋ ಹರಿಃ ಎನಿಸಿಕೊಂಡವರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಇತರರ ಪ್ರಾಣ ಉಳಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಸಂಬಂಧಿಸಿದವರೆಲ್ಲಾ ಟೊಂಕ ಕಟ್ಟಿ ಶ್ರಮಿಸುತ್ತಿದ್ದಾರೆ. ಜೀವ ಉಳಿಸಿಕೊಳ್ಳುವುದೇ ಒಂದು ಸಾಧನೆ ಎಂಬ ರೀತಿಯಲ್ಲಿ ಎಲ್ಲರೂ ಬದುಕುತ್ತಿರುವಾಗ ಇದಕ್ಕೆ ವ್ಯತಿರಿಕ್ತವಾಗಿ ತಮಗೆ ಸಾಯಲು ಒಂದು ಕಾರಣ ಸಿಕ್ಕಿತೆಂದು, ಸಾವಿನ ಕನಸೇ ಬೀಳುತ್ತದೆಂದು, ಯಮ ಬಂದು ಕರೆಯುತ್ತಿದ್ದಾನೆಂದು, ಇಲ್ಲಿಯವರೆಗೂ ಹೇಗೋ ಬದುಕಿದ್ದಾಯಿತು, ಇನ್ನು ಬದುಕುವುದು ಬೇಡ ಎಂದು ಕೊರೊನಾವನ್ನೇ ನೆಪ ಮಾಡಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸುವುದು ಯಾರೂ ಒಪ್ಪುವಂತಹದ್ದಲ್ಲ. ಸಹಜ ಸಾವಲ್ಲದೆ ಅನಾರೋಗ್ಯ, ಅಪಘಾತ, ಇನ್ನಿತರ ಸಂಧರ್ಭಗಳಲ್ಲೂ ಅವುಗಳಿಂದ ತಪ್ಪಿಸಿಕೊಂಡು ಸಾವನ್ನು ದೂರ ಮಾಡಿಕೊಳ್ಳುವುದೇ ಜೀವನದ ಸಾರ್ಥಕತೆ. ಹೀಗಿರುವಾಗ ಆತ್ಮಹತ್ಯೆ ಸರಿಯೇ? ಕೊರೊನಾ ಸಲುವಾಗಿ ಎಲ್ಲಾ ಕಡೆ ಲಾಕ್ಡೌನ್ ಆಗಿರುವ ಹಿನ್ನೆಲೆಯಲ್ಲಿ ಕೆಲವರು ತೀವ್ರ ಖಿನ್ನತೆಗೆ ಗುರಿಯಾಗಿದ್ದಾರೆ. ಇವರಲ್ಲಿ ಕೆಲವರು ಮೊದಲಿನಿಂದಲೂ ಖಿನ್ನತೆಗೆ ಒಳಗಾದವರು, ಇನ್ನೂ ಕೆಲವರು ಇತ್ತೀಚೆಗೆ ಖಿನ್ನತೆಗೆ ಹತ್ತಿರವಾಗುತ್ತಿರುವವರು. ಕೊರೊನಾ ಯಾರೋ ಒಬ್ಬರ ಮೇಲೆ ದಾಳಿ ಮಾಡಿಲ್ಲ, ಇಡೀ ವಿಶ್ವವನ್ನೇ ಆಕ್ರಮಿಸಿಕೊಂಡಿದೆ. ಇಂತಹ ಸಂಕ್ರಮಣ ಕಾಲದಲ್ಲಿ ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳದೇ, ಆರೋಗ್ಯಕ್ಕಷ್ಟೇ ಗಮನಕೊಟ್ಟು, ಎಚ್ಚರಿಕೆಯಿಂದ ಜೀವ ಕಾಪಾಡಿಕೊಡರೆ ಮುಂದೆ ಜೀವನ. ಆತ್ಯಹತ್ಯೆಯ ಕುರಿತು ಯೋಚಿಸುತ್ತಿರುವವರ ಬಗ್ಗೆ ಅವರ ಕುಟುಂಬ ಸದಸ್ಯರು, ಆಪ್ತರಿಗೆ ಮೊದಲು ಗೊತ್ತಾಗುತ್ತದೆ. ತಕ್ಷಣ ಗಮನ ವಹಿಸಿದರೆ ಆತ್ಮಹತ್ಯೆ ತಡೆಗಟ್ಟಬಹುದು. ವ್ಯಕ್ತಿ ಅನುಭವಿಸುತ್ತಿರುಬಹುದಾದ ತಳಮಳ, ಕಷ್ಟಗಳ ಬಗ್ಗೆ ತಿರಸ್ಕಾರದಿಂದ ನೋಡದೆ, ಅವರನ್ನು ಗಂಭೀರವಾಗಿ ಪರಿಗಣಿಸಿ, ಸಾಂತ್ವನ ನೀಡಬೇಕಾಗುತ್ತದೆ ಯಾವುದೋ ಒಂದು ಸಂದರ್ಭದಲ್ಲಿ ಕೆಲವರಿಗೆ ಆ ರೀತಿ ತೀವ್ರವಾಗಿ ಅನಿಸಬಹುದು, ಸರಿಯಾದ ಮಾರ್ಗದರ್ಶನ, ಅಗತ್ಯವಿರುವವರಿಗೆ ಚಿಕಿತ್ಸೆ ಸಿಕ್ಕ ಮೇಲೆ ಆಆಲೋಚನೆಯಿಂದ ದೂರಾಗುತ್ತಾರೆ . ವಿವಿಧ ರೀತಿಯ ನ್ಯೂನತೆಗಳಿಂದ ಹುಟ್ಟಿದ ಹಲವಾರು ಜನರು ಯಾವುದೇ ಸಮಸ್ಯೆ ಇರದವರಿಗಿಂತಲೂ ಚೆನ್ನಾಗಿ ಬದುಕುತ್ತಿರುವ ಉದಾಹರಣೆಗಳಿವೆ. ಅಪಘಾತಗಳಿಂದ ದೈಹಿಕ ತೊಂದರೆಗಳಿಗೆ ತುತ್ತಾದವರೂ ಸಹ ನ್ಯೂನತೆಗಳನ್ನೇ ಅಪ್ಪಿಕೊಂಡು ಬದುಕನ್ನು ಒಪ್ಪಮಾಡಿಕೊಂಡಿದ್ದಾರೆ. ನಾನು ಪಡುವ ಕಷ್ಟ ಯಾರಿಗೂ ಇಲ್ಲ ಎಂದು ಹೇಳಲಾಗುವುದಿಲ್ಲ, ಎಲ್ಲರಿಗೂ ಕಷ್ಟವೇ. ಒಬ್ಬೊಬ್ಬರದು ಒಂದೊಂದು ಬಗೆ. ಈಗ ಕೊರೊನಾದಿಂದ ನಮ್ಮ ಜೀವನ ಕ್ರಮದಲ್ಲಿ ಸ್ವಲ್ಪ ಏರುಪೇರು ಆಗಿರುವುದು ನಿಜ. ಅದರಿಂದ ನಾವು ಇನ್ನಷ್ಟು ಗಟ್ಟಿಗೊಳ್ಳಬೇಕು. ಈ ಪರಿಸ್ಥಿತಿಯಿಂದ ಪಾರಾಗಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಎಚ್ಚರಿಕೆಯೇ ಗುರಿ, ಸ್ವಚ್ಛತೆಯೇ ಬದುಕು, ಆರೋಗ್ಯವಾಗಿ ಬದುಕುವುದೇ ಈಗ ದೊಡ್ಡ ಸಾಧನೆಯಾಗಿದೆ; ಎಲ್ಲರೂಸಾಧಕರಾಗೋಣ. ಪ್ರತಿದಿನ ಒಂದಿಬ್ಬರು ಆತ್ಮೀಯರೊಡನೆ ಮಾತುಕತೆ, ಅವರು ಇಂದಿನ ಸಂಧರ್ಭದಲ್ಲಿ ಹೇಗೆ ತಮ್ಮ ದಿನಚರಿಯನ್ನು ರೂಢಿಸಿಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು, ತೀರ ಕಷ್ಟದಲ್ಲಿರುವವರ ಪರಿಸ್ಥಿತಿಯ ಅವಲೋಕನ, ಸಾಧ್ಯವಾಗುವುದಾದರೆ ಈ ಸಂದರ್ಭದ ಕಾರಣವಾಗಿ ಸಂಕಷ್ಟಕ್ಕೆ ಗುರಿಯಾದವರಿಗೆ ಕೈಯಲ್ಲಾದ ಸಹಾಯ ಮಾಡುವುದು… ಈ ಮೂಲಕ ಜೀವನ ಉತ್ಸಾಹವನ್ನು ಕಾಯ್ದಿಟ್ಟುಕೊಂಡು ಮುಂದಿನ ದಾರಿಯ ಬಗ್ಗೆ ಯೋಚಿಸಬೇಕು. ನೀವು ಎಷ್ಟು ಎಚ್ಚರಿಕೆಯಿಂದ ಇರುತ್ತೀರೋ ಅಷ್ಟು ನೀವು ಸುರಕ್ಷಿತರು ಹಾಗೂ ನಿಮ್ಮ ಸುತ್ತಮುತ್ತಲಿನವರು ಸುರಕ್ಷಿತರಾಗಿರುತ್ತಾರೆ. ನೀವು ಬದುಕಿದ್ದರಲ್ಲವೇ ಎಲ್ಲಾ? ಹಾಗಾಗಿ ಯಾವತ್ತೂ ಯಮನನ್ನು ನೆನಪಿಸಿಕೊಳ್ಳಬೇಡಿ, ಕರೆಯಬೇಡಿ, ಅವನು ಕರೆದಾಗೆಲ್ಲಾ ನಾಳೆ ಬಾ ಎನ್ನಿ. ************* ನಾಳೆ ಬಾ ಎನ್ನಿ **************                                

ಅವನಿಗೆ ನಾಳೆ ಬಾ ಎನ್ನಿ Read Post »

ಇತರೆ

ವಿದಾಯ

ಚಂದ್ರಕಾಂತ ಕುಸನೂರು ಖ್ಯಾತ ಸಾಹಿತಿ, ಚಿತ್ರ ಕಲಾವಿದ ಮತ್ತು ಹೈಕು ಗಾರುಡಿಗ ಚಂದ್ರಕಾಂತ ಕುಸನೂರು..! ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ಇಂದು ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕನ್ನಡ ಸಾಹಿತ್ಯದಲ್ಲಿ ಅಸಂಗತ ನಾಟಕ ಮತ್ತು ಜಪಾನಿ ಮಾದರಿಯ ಹೈಕುಗಳನ್ನು ಪರಿಚಯಿಸಿದ್ದರು ಅವರು. ಹೈಕು ಮಾದರಿಯ ಕವಿತೆಗಳನ್ನು ಸಹ ಕನ್ನಡಕ್ಕೆ ಪರಿಚಯಿಸಿದ್ದರು… ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ನಾಲ್ವರು ಗಂಡುಮಕ್ಕಳು ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ. ಕಲಬುರಗಿ ಮೂಲದ ಅವರು ಕೆಲ ದಶಕಗಳಿಂದ ಬೆಳಗಾವಿಯಲ್ಲಿ ವಾಸವಾಗಿದ್ದರು. ಚಂದ್ರಕಾಂತ ಕುಸನೂರ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗೂ ರಂಗಕರ್ಮಿಗಳು. ಅವರು 1931ರಲ್ಲಿ ಕಲಬುರ್ಗಿಯ ಕುಸನೂರಲ್ಲಿ ಜನಿಸಿದವರು. ಎಂ.ಎ; ಬಿ.ಇಡಿ ಪದವಿಗಳನ್ನು ಪಡೆದಿದ್ದಾರೆ ಅವರು. ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಕಲಬುರ್ಗಿಯಲ್ಲಿ “ರಂಗ ಮಾಧ್ಯಮ”ಎಂಬ ನಾಟಕ ಸಂಸ್ಥೆಯ ಸ್ಥಾಪಕರೂ ಅವರು. ಕನ್ನಡದಲ್ಲಿ ಅಬ್ಬರ್ಡ್ ಮಾದರಿ ನಾಟಕಗಳನ್ನು ರಚಿಸಿದ್ದಾರೆ ಅವರು… 1975ರಲ್ಲಿ “ಯಾತನಾ ಶಿಬಿರ” ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರವೂ ಲಭಿಸಿದೆ. 1992ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿಯೂ ಲಭಿಸಿಗಿದೆ ಅವರಿಗೆ. 2006ನೆಯ ಸಾಲಿನಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ ಕೂಡ ದೊರೆತಿದೆ… ಬಹುಮುಖಿ ಸಾಹಿತಿ ಅವರು– ವಿದೂಷಕ’, ‘ಆನಿ ಬಂತಾನಿ’, ‘ದಿಂಡಿ’ಯಂಥ ಅಸಂಗತ ನಾಟಕಗಳಿಂದ; ‘ಯಾತನಾ ಶಿಬಿರ’, ‘ಚರ್ಚ್‌ಗೇಟ್‌’, ‘ಗೋಹರಜಾನ್‌’, ‘ಮಾಲತಿ ಮತ್ತು ನಾನು’ ಇತ್ಯಾದಿ ಕಾದಂಬರಿಗಳಿಂದ; ಸಣ್ಣ ಕತೆಗಳಿಂದ; ಅನುವಾದಗಳಿಂದ ಸಹೃದಯರಲ್ಲಿ ಸ್ಥಾನ ಪಡೆದಿರುವ ಚಂದ್ರಕಾಂತ ಕುಸನೂರ ಅವರು ಚಿತ್ರಕಲಾವಿದರೆಂಬುದೂ ಬಹುಜನರಿಗೆ ಗೊತ್ತಿರಲಿಕ್ಕಿಲ್ಲ… ಅವರು ಯಾರೆದುರೂ ಹಾಗೆ ಹೇಳಿಕೊಳ್ಳುವ ಸ್ವಭಾವದವರಲ್ಲ ಎಂದ ಮೇಲೆ ಗೊತ್ತಾಗುವುದಾದರೂ ಹೇಗೆ? ಅವರ ನಿಕಟವರ್ತಿಗಳು, ಗೆಳೆಯರು ಮುಂದಾಗಿದ್ದರಿಂದ ಅವರು ಬರೆದ ಕೃತಿಗಳು ಪ್ರಕಟವಾದವು. ಕಲಾಕೃತಿಗಳು ಪ್ರದರ್ಶನಗೊಂಡವು..! ಇನ್ನೂ ಪ್ರಕಟವಾಗದ ಹಸ್ತಪ್ರತಿಗಳು, ಕಲಾಕೃತಿಗಳು ಅವರ ಭಂಡಾರದಲ್ಲಿ ಇವೆ. ಜಾಗದ ಕೊರತೆಯಿಂದ ಎಷ್ಟೋ ಚಿತ್ರಗಳನ್ನು ಸುಟ್ಟು ಹಾಕಿದ್ದೂ ಇದೆ. ಕುಸನೂರರು ಹೇಳುವುದೇನೆಂದರೆ ‘ನಾನು ವೈಯಕ್ತಿಕ ಖುಷಿಗಾಗಿ ಬರೆಯುತ್ತೇನೆ. ಚಿತ್ರ ಬಿಡಿಸುತ್ತೇನೆ. ನನ್ನ ಪಾಲಿಗೆ ಭಾಷೆ, ಬಣ್ಣದ ಜೊತೆಗಿನ ಅಭಿವ್ಯಕ್ತಿಯೇ ಲಿಬರೇಶನ್‌. ಕಲೆಯ ಅನುಸಂಧಾನದಲ್ಲಿ ನಾನು ದೈಹಿಕ, ಮಾನಸಿಕ ಒತ್ತಡಗಳಿಂದ ಬಿಡುಗಡೆಯಾಗುತ್ತೇನೆ. ಆನಂದ ಅನುಭವಿಸುತ್ತೇನೆ. ತುಂಬ ಕಷ್ಟದ ಸಂದರ್ಭದಲ್ಲಿ, ಬದುಕಿನ ಅತಂತ್ರ ಸ್ಥಿತಿಯಲ್ಲಿ ಈ ಕಲೆಗಳು ನನ್ನ ಕೈಹಿಡಿದಿವೆ. ನನ್ನ ವ್ಯಕ್ತಿತ್ವ ರೂಪಿಸಿವೆ’ ಎಂದು ಸಾದರಪಡಿಸಿದ್ದರು ಚಂದ್ರಕಾಂತ ಕುಸನೂರವರು..! ಈ ನಿಲುವಿನಿಂದಾಗಿಯೇ ಅವರು ತಾನು ಸಾಹಿತಿ, ಕಲಾವಿದನೆಂದು ಹೇಳಿಕೊಳ್ಳುವುದಕ್ಕೂ ಮುಜುಗರ ಪಡುದ್ದತ್ತಿರು. ಅವರು ಬರೆದ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಲಲಿತಕಲಾ ಅಕಾಡೆಮಿಗಳಿಂದ ಪುಸ್ತಕ ಬಹುಮಾನಗಳು ಬಂದಿವೆ. ಜೊತೆಗೆ ಮೂರೂ ಅಕಾಡೆಮಿಗಳ ಗೌರವ ಪ್ರಶಸ್ತಿಗಳೂ ಬಂದಿವೆ. ಈ ತರಹದ ಗೌರವಕ್ಕೆ ಪಾತ್ರರಾದ ಸಾಹಿತಿ, ಕಲಾವಿದ ಇವರೊಬ್ಬರೇ ಇರಬಹುದು..! ಚಂದ್ರಕಾಂತ ಕುಸನೂರ ಎತ್ತರದ ನಿಲುವು. ಗಂಭೀರ ಮುಖ. ಸಮೀಪಕ್ಕೆ ಹೋಗಿ ಮಾತಾಡಿದರೆ ಗೊತ್ತಾಗುವುದು ಅವರ ಮೃದುವಾದ ಮಾತು, ಸ್ನೇಹಕ್ಕೆ ಹಂಬಲಿಸುವ ಮನಸ್ಸು. ಕುಸನೂರರು ಹುಟ್ಟಿ ಬೆಳೆದದ್ದು ಕಲಬುರ್ಗಿಯಲ್ಲಿ. ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕರು. ಒಂದು ಸಣ್ಣ ಹಳ್ಳಿಯಲ್ಲಿ ಇರುತ್ತಿದ್ದರು. ಇವರು ಕಲಬುರ್ಗಿಯ ಕಕ್ಕನ ಅಂದರೆ ಚಿಕ್ಕಪ್ಪನ ಮನೆಯಲ್ಲಿದ್ದು ಓದಿದರು. ದೊಡ್ಡ ಕುಟುಂಬ, ದುಡಿಯುವವ ಒಬ್ಬನಾದರೆ, ಕೂತು ಉಣ್ಣುವವರು ಬಹಳ. ಕಷ್ಟದಲ್ಲಿಯೇ ಓದಿದವರು ಅವರು. ಆಗ ಆ ಊರಿನಲ್ಲಿ ಉರ್ದು ಮುಷಾಯರ್‌, ಹಿಂದಿ ಕವಿಗೋಷ್ಠಿಗಳು ಬಹಳ. ಆ ಪರಿಸರದ ಪ್ರೇರಣೆಯಿಂದ ಕುಸನೂರರು ಹಿಂದಿಯಲ್ಲಿ ಕವಿತೆ, ಕತೆ ಬರೆಯಲು ಪ್ರಾರಂಭಿಸಿದರು… ಒಮ್ಮೆ ಧಾರವಾಡದಲ್ಲಿ ಜರುಗಿದ ಬಹುಭಾಷಾ ಕವಿಗೋಷ್ಠಿಗೆ ಹೋದರು. ಇವರ ಹಿಂದಿ ಕವಿತೆ ಕೇಳಿದ ವರಕವಿ ಬೇಂದ್ರೆಯವರು ‘ಕನ್ನಡದಲ್ಲಿ ಕವಿತಾ ಬರಿ’ ಎಂದು ಅಪ್ಪಣೆ ಮಾಡಿದರು. ಅಲ್ಲಿವರೆಗೆ ಕನ್ನಡ ಓದಲು, ಬರೆಯಲು ಬಾರದ ಕುಸನೂರರು ಕನ್ನಡ ಕಲಿತು, ಕವಿತೆ ಬರೆದರು. ಶಾಂತರಸರ ಸ್ನೇಹ, ಸಹಕಾರದಲ್ಲಿ ‘ನಂದಿ ಕೋಲ’ ಎಂಬ ಮೊದಲ ಕವನ ಸಂಕಲನ ಪ್ರಕಟವಾಯಿತು..! ಹಿಂದಿ, ಉರ್ದು ಕವಿತೆಗೆ ಹೋಲಿಸಿದರೆ ಅವರಿಗೆ ಕನ್ನಡ ಅಭಿವ್ಯಕ್ತಿ ಕಷ್ಟವೆನಿಸುತ್ತಿತ್ತು. ಅದಕ್ಕಾಗಿಯೇ ಆರಂಭದಲ್ಲಿ ಕಡಿಮೆ ಕಾವ್ಯ ಪಂಕ್ತಿಯ ಜಪಾನಿನ ಹೈಕುವಿನಂಥ ರೂಪದಲ್ಲಿ ಪ್ರಯೋಗ ಮಾಡಿ ಕನ್ನಡಕ್ಕೆ ಹೈಕುಗಳನ್ನು ಪರಿಚಯಿಸಿದರು… ಹಾಗೆಯೇ ಅಸಂಗತ ನಾಟಕಗಳ ರಚನೆ, ಪಾಶ್ಚಾತ್ಯ ಸಾಹಿತ್ಯದ ವಿಪುಲ ಓದಿನಿಂದಾಗಿ ಕುಸನೂರರ ಬರವಣಿಗೆ ಹೊಸ ಮೆರುಗು ಪಡೆಯಿತು. ನವ್ಯ ಸಾಹಿತ್ಯದ ಸಂದರ್ಭದಲ್ಲಿ ಗಮನಾರ್ಹ ಎನಿಸಿತು… ಕುಸನೂರ ಅವರು ಉರ್ದು, ಹಿಂದಿ, ಕನ್ನಡ, ಮರಾಠಿ, ಇಂಗ್ಲಿಷ್‌ ಭಾಷೆಗಳನ್ನು ಚೆನ್ನಾಗಿ ಮಾತನಾಡುತ್ತಿದ್ದರು. ಓದುತ್ತಿದ್ದರು. ಬರೆಯುತ್ತಿದ್ದರು ಕೂಡ. ಸಂಸ್ಕೃತದ ಅಭ್ಯಾಸವೂ ಇತ್ತು. ಬೆಳಗಾವಿಗೆ ಬಂದ ಮೇಲೆ ಮರಾಠಿ ಕಲಿತು, ಕವಿತೆ, ಕಥೆ ಬರೆದರು ಚಂಕಾಂತ ಕೂಸನುರರು. ಅನಂತಮೂರ್ತಿಯವರ ‘ಸಂಸ್ಕಾರ’, ಆಲನಹಳ್ಳಿಯವರ ‘ಕಾಡು’ ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದಾರೆ ಅವರು… ಕನ್ನಡದಲ್ಲಂತೂ ಎಪ್ಪತ್ತಕ್ಕೂ ಹೆಚ್ಚು ರಚನೆಗಳನ್ನು ಮಾಡಿದ್ದಾರೆ. ಬಹುಭಾಷೆಗಳ ಜೊತೆಗಿನ ಈ ಹೊಕ್ಕು ಬಳಕೆ, ಆಟ ಒಡನಾಟವಿದ್ದಾಗಲೂ ನಿವೃತ್ತಿಯ ನಂತರ ಚಿತ್ರಕಲೆ ಅವರನ್ನು ಆವರಿಸಿಕೊಂಡಿತು. ವಿದ್ಯಾರ್ಥಿಯಾಗಿದ್ದಾಗಲೇ ಈ ಕಲೆ ಅವರನ್ನು ಆಕರ್ಷಿಸಿತು. ನೂತನ ವಿದ್ಯಾಲಯದಲ್ಲಿ ಓದುವಾಗ ಚಿತ್ರಕಲೆ ಕಡ್ಡಾಯ ವಿಷಯವಾಗಿತ್ತು. ಅದನ್ನು ಶಂಕರರಾವ್‌ ಆಳಂದಕರ ಕಲಿಸುತ್ತಿದ್ದರು. ಅವರು ಸುಪ್ರಸಿದ್ಧ ಕಲಾವಿದ ಎಸ್‌.ಎಂ.ಪಂಡಿತರಿಗೆ ಗುರುಗಳಾಗಿದ್ದರು. ಅವರ ಬಣ್ಣ, ರೇಖೆಗಳ ಆಟ ಸುಂದರವಾಗಿತ್ತಂತೆ. ಅವರ ಚಿತ್ರ ನೋಡಿ ಇವರಿಗೂ ಬಿಡಿಸಬೇಕು ಎನಿಸುತ್ತಿತ್ತು. ಆದರೆ ಬಣ್ಣ, ಬ್ರಷ್‌ ಖರೀದಿಸುವ ಸ್ಥಿತಿ ಅವಗಿರಲಿಲ್ಲ..! ಸಹಪಾಠಿ ಗುರುಪಾದಪ್ಪ ಧಂಗಾಪುರ (ಈಗ ಇವರು ಮುಂಬಯಿಯಲ್ಲಿ ಪ್ರಸಿದ್ಧ ಕಲಾವಿದರಾಗಿದ್ದಾರೆ) ನೆರವಾಗುತ್ತಿದ್ದರು. ಅಲ್ಲಿಂದ ಆ ಕಲೆಯ ಆಸಕ್ತಿ ಅವರಲ್ಲಿ ಗುಪ್ತಗಾಮಿನಿಯಾಗಿಯೇ ಉಳಿಯಿತು. ಅದು ಪ್ರಕಟವಾಗಿ ಧುಮ್ಮಿಕ್ಕುವಂತಾದದ್ದು ನಿವೃತ್ತಿಯ ನಂತರ. ಕುಸನೂರರ ಚಿಂತನೆ, ಸೃಜನಶೀಲತೆಗೆ ಒಗ್ಗಿದ್ದು ಅಮೂರ್ತ ಚಿತ್ರಕಲೆ. ಕೆಂಪು, ಹಸಿರು, ಹಳದಿ ಬಣ್ಣಗಳ ರಭಸ. ಅವುಗಳ ಸಂಯೋಜನೆಯಿಂದ ಅವರ ಕಲಾಕೃತಿಗಳು ಆಕರ್ಷಕವಾಗಿರುತ್ತವೆ, ಕಣ್ಣಿಗೆ ಸುಖ ನೀಡುತ್ತವೆ. ತಮ್ಮಷ್ಟಕ್ಕೇ ತೆಗೆದು ಮನೆಯಲ್ಲಿ ಪೇರಿಸಿಡುತ್ತಿದ್ದರು. ಒಂದು ಸಾರಿ ತರುಣ ಕಲಾವಿದರು ಅವರ ಮನೆಗೆ ಹೋಗಿ ನೋಡಿ ಬೆರಗಾದರು… ಪ್ರದರ್ಶನವಿಲ್ಲದೇ ಹಾಗೇ ದೂಳು ತಿನ್ನುತ್ತ ಬಿದ್ದುಕೊಂಡಿದ್ದ ಅವುಗಳನ್ನು ಹೊರಕ್ಕೆ ಎಳೆದು ಅಲ್ಲಲ್ಲಿ ಪ್ರದರ್ಶನಕ್ಕೆ ಏರ್ಪಾಟು ಮಾಡಿದರು. ಬೆಂಗಳೂರು, ಮುಂಬಯಿ, ಕೋಲ್ಕತ್ತ, ದೆಹಲಿಗಳಲ್ಲಿ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಕೆಲವು ಮಾರಾಟವಾಗಿವೆ. ಬಂದ ದುಡ್ಡಿನಲ್ಲಿ ಮತ್ತೆ ಬಣ್ಣ, ಕ್ಯಾನ್ವಾಸ್‌ ಖರೀದಿಸಿ ಕಲಾಕೃತಿಗಳ ರಚನೆಯಲ್ಲಿಯೇ ಆನಂದ ಅನುಭವಿಸುವುದು ಕುಸನೂರರ ಸ್ವಭಾವ. ಅವರ ಪ್ರಕಾರ ಅನುಭವದ ಅಭಿವ್ಯಕ್ತಿ ಚಿತ್ರಕಲೆಯಲ್ಲಿ ಹೇಗೆ ಸಾಧ್ಯವೋ ಹಾಗೆ ಭಾಷೆಯಲ್ಲಿ ಸಾಧ್ಯವಿಲ್ಲ. ಒಂದೊಂದು ಭಾಷೆಗೂ ನಿರ್ದಿಷ್ಟ ವ್ಯಾಕರಣವಿದೆ. ಒಂದು ಶಿಸ್ತು ಇದೆ. ಸಾಹಿತಿಯಾದವನು ಅದರ ಮಿತಿಯಲ್ಲಿಯೇ ಬರೆಯಬೇಕು… ಅದಕ್ಕಿರುವ ಓದುಗರ ಬಳಗವೂ ಸೀಮಿತವಾಗಿರುತ್ತದೆ. ಇದಕ್ಕೆ ಹೋಲಿಸಿದಾಗ ಚಿತ್ರಕಲೆ ಅಭಿವ್ಯಕ್ತಿಯ ಸಶಕ್ತ ಮಾಧ್ಯಮ ಎನಿಸುತ್ತದೆ. ಅದನ್ನು ನೋಡುವ ರಸಿಕರ ಬಳಗವೂ ದೊಡ್ಡದು ಇದೆ… ‘ ‘ಚಿತ್ರಕಲೆಯಲ್ಲಿ ನಾನು ಹೆಚ್ಚು ಸ್ವಾತಂತ್ರ್ಯ ಅನುಭವಿಸುತ್ತೇನೆ. ಸಂತೋಷವನ್ನು ಕೂಡ’ ಎಂದು ಕುಸನೂರ ಚಿತ್ರಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಕಲಾಕೃತಿಗಳು, ಬಣ್ಣದ ಹೊಂದಾಣಿಕೆ, ಅವುಗಳ ಪರಿಣಾಮ, ಕಲಾವಿದರ ವ್ಯಕ್ತಿತ್ವದ ಬಗ್ಗೆ ಪ್ರೇಕ್ಷಕರ ರಸಗ್ರಹಣ ಕುರಿತು ಕುಸನೂರರು ಸೊಗಸಾಗಿ ಮಾತನಾಡುತ್ತಿದ್ದರು. ಆ ಕುರಿತು ಆಳವಾಗಿ ಅಧ್ಯಯನ ಮಾಡಿದ್ದರು ಅವರು… ಇವರು ಬರೆದ ‘ಕಲೆ: ಅನುಭವ, ಅನುಭಾವ’ ಕೃತಿಗೆ ಲಲಿತ ಕಲಾ ಅಕಾಡೆಮಿಯ ಪುಸ್ತಕ ಬಹುಮಾನವೂ ದೊರೆತಿದೆ. ಇವರ ‘ಕಲಾನುಭವ’ ಎಂಬ ಕೃತಿಯನ್ನು ಅಕಾಡೆಮಿಯೇ ಪ್ರಕಟಿಸಿತು..! ಚಂದ್ರಕಾಂತ ಕುಸನೂರರಿಗೆ ಅಂತಿಮ ನಮನ— ಬೆಳಗಾವಿಯ ರಾಣಿ ಚನ್ನಮ್ಮ ನಗರದ ಎರಡನೇ ಹಂತದಲ್ಲಿರುವ ಸ್ವಗೃಹದಲ್ಲಿ ಶನಿವಾರ ರಾತ್ರಿ ನಿಧನರಾಗಿದ್ದ ನಾಡಿನ ಹಿರಿಯ ಸಾಹಿತಿ ಚಂದ್ರಕಾಂತ ಕುಸನೂರ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಭಾನುವಾರ ಬೆಳಗಿನ ಜಾವ 2ಗಂಟೆ ಸುಮಾರಿಗೆ ಶಾಹಪುರ ಸ್ಮಶಾನ ಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಗ್ನಿಸ್ಪರ್ಶ ಮಾಡಿ ನೆರವೇರಿಸಲಾಯಿತು. ಕಿರಿಯ ಮಗ ಗುರುರಾಜ ಕುಸನೂರ ಅಗ್ನಿಸ್ಪರ್ಶ ಮಾಡಿದರು. ಕೊವಿಡ್-,19 ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ವಿಧಿಗಳನ್ನು ಪೂರೈಸಲಾಯಿತು. ಕುಟುಂಬ ವರ್ಗದವರು, ಸಾಹಿತಿಗಳು, ಒಡನಾಡಿಗಳು, ಚಿತ್ರಕಲಾವಿದ ಬಾಳು ಸದಲಗೆ, ಸಾಹಿತಿಗಳಾದ ಶಿರೀಶ ಜೋಶಿ, ಬಿ.ಕೆ. ಕುಲಕರ್ಣಿ, ಬ್ಯಾಂಕ್ ನ ನಿವೃತ್ತ ಅಧಿಕಾರಿ ರಘುನಾಥ ಮುತಾಲಿಕ, ಮಾಜಿ ನಗರ ಸೇವಕಿ ಶೀಲಾ ದೇಶಪಾಂಡೆ ಮತ್ತು ನಾಗರಿಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನಮನ ಸಲ್ಲಿಸಿದರು. ಚಂದ್ರಕಾಂತ ಕುಸನೂರ ಅವರ ನಿಧನಕ್ಕೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ… ********* ಕೆ.ಶಿವು.ಲಕ್ಕಣ್ಣವರ –

ವಿದಾಯ Read Post »

ಇತರೆ

ಪ್ರಸ್ತುತ

ಕೋರೋನದ ತಲ್ಲಣಗಳು ಎನ್ . ಶೈಲಜಾ ಹಾಸನ,   ಕೋರೋನದ ತಲ್ಲಣಗಳು ಸರಾಗವಾಗಿ ಹರಿಯುತ್ತಿದ್ದ ಬದುಕಿನ ಬಂಡಿ ಕನಸಿನಲ್ಲಿಯೂ ನೆನೆಸದಂತೆ ನಿಂತು ಬಿಟ್ಟಿತು.ಅದೇನಾಗಿ ಹೋಯಿತೋ,ಕಂಡರಿಯದ ವೈರಾಣವೊಂದು ಇಡಿ ಪ್ರಪಂಚವನ್ನೆ ತಲ್ಲಣಗೊಳಿಸಿಬಿಟ್ಟಿದೆ. ದೂರದ ಅದ್ಯಾವುದೋ ದೇಶದಲ್ಲಿ ಅದೆಷ್ಟೋ ಪ್ರಾಣಗಳನ್ನು ತೆಗೆಯುತ್ತಿದೆ , ಅದೆಷ್ಟೋ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ ಅಂತೆ ಅಂತ ದೃಶ್ಯ ಮಾಧ್ಯಮಗಳಲ್ಲಿ ನೋಡುತ್ತಾ ಅಯ್ಯೋ ಪಾಪ ಅಂತ ಕನಿಕರ ಪಡುತ್ತಿರುವಾಗಲೆ ದಿಢೀರನೆ ನಮ್ಮ ದೇಶಕ್ಕೂ ಆ ಕ್ಷುದ್ರ ವೈರಸ್ ಬಂದು ಅಪ್ಪಳಿಸಿದೆ ಅಂತ ಗೊತ್ತಾದಾಗ ದಿಗಿಲು ಹುಟ್ಟಿಸಿದ್ದು ನಿಜಾ.ದಿನದಿನಕ್ಕೂ ಅದರ ಹಾವಳಿ ಹೆಚ್ಚಾದಾಗ ಮನೆಯಿಂದ ಹೊರಬರಲು ಆತಂಕವಾದರೂ ಉದ್ಯೋಗದ ನಿಮಿತ್ತ ಹೊರ ಹೋಗಲೇ ಬೇಕಿತ್ತು. ಸ್ವಂತ ವಾಹನವಿದ್ದರೂ ಬಸ್ ನಿಲ್ದಾಣದಲ್ಲಿ ಬಿಟ್ಟು, ನೂರಾರು ಜನ ಪ್ರಯಾಣಿಸುವ ಬಸ್ ನಲ್ಲಿ ಹೋಗುವಾಗ ಜೀವ ಕೈಯಲ್ಲಿಟ್ಟು ಕೊಂಡು ಹೋಗಬೇಕಾಗಿತ್ತು. ಉದ್ಯೋಗ ನಿಮಿತ್ತ ಪಯಣಿಸುವ ಹಾದಿ ರಾಷ್ಟ್ರೀಯ ಹೆದ್ದಾರಿ ಆದ್ದರಿಂದ ಸ್ವಂತ ವಾಹನದಲ್ಲಿ ಹೋಗಲು ಒಬ್ಬಳೆ ಪತ್ನಿಯನ್ನು ಕಳಿಸಲು ಪತಿಗೆ ಹಾಗು ಒಬ್ಬಳೆ ಅಮ್ಮನಿರುವ ಮಗಳಿಗೆ ಆತಂಕ. ಹಾಗಾಗಿ ಬಸ್ ನಲ್ಲಿ ಪ್ರಯಾಣ ಅನಿವಾರ್ಯ. ಬಸ್ಸಿಳಿದು ಶಾಲೆ ತಲುಪಿದ ಕೂಡಲೆ ಸೋಪಿನಿಂದ ಕೈ ತೊಳೆದು ನಂತರವೆ ಮುಂದಿನ ಕೆಲಸ.ಯಾರಾದರೂ ಕೆಮ್ಮು ಶೀತ ಜ್ವರ ಅಂದರೆ ಎದೆಯಲಿ ಪುಕ ಪುಕ.ಕರ್ತವ್ಯ ಮುಗಿಸಿ ಮತ್ತೆ ಬಸ್ಸಿನಲ್ಲಿ ಪ್ರಯಾಣ.ಮನೆಗೆ ಬಂದ ಕೂಡಲೆ ಮತ್ತೆ ಸೋಪಿನಿಂದ ತಿಕ್ಕಿ ತಿಕ್ಕಿ ಕೈ ತೊಳೆದು ಕೊಂಡ ಮೇಲೆ ಅಡುಗೆ ಮನೆ ಪ್ರವೇಶ. ಆ ಆತಂಕದ ದಿನಗಳಲ್ಲಿ ಅಂತೂ ಇಡೀ ದೇಶವೇ ಲಾಕ್ ಡೌನ್ ಅಂತ ಸರ್ಕಾರ ಘೋಷಿಸಿ ಬಿಟ್ಟಾಗ ಆತಂಕದ ನಡುವೆಯೂ ನಿರಾಳ ಭಾವ. ಈಗ ಮನೆಯವರೆಲ್ಲ ಮನೆಯಲ್ಲಿಬಂದಿಗಳು.ಹೊರಹೋಗುವಂತಿಲ್ಲ,ಯಾರೂ ಮನೆಗೆ ಬರುವಂತೆ ಇಲ್ಲ.ದಿನಾ ಟಿ.ವಿ.ನೋಡುವುದು, ಅಡುಗೆ ಮಾಡಿ ತಿನ್ನುವುದು, ಮನೆಕೆಲಸ ಮಾಡುವುದು, ಓದುವುದು, ಬರೆಯುವುದು, ಈ ರೀತಿಯ ಬದುಕು ಹೊಸದು.ಹಿಂದೆಲ್ಲ ವರ್ಷಕ್ಕೆ ಎರಡು ಬಾರಿ ತಿಂಗಾಳುಗಟ್ಟಲೆ ನಮ್ಮ ಇಲಾಖೆಯಲ್ಲಿ ರಜೆ ಸಿಗುತ್ತಿದ್ದರೂ, ಪ್ರವಾಸ, ಬಂಧು ಬಳಗದವರ ಮನೆಗೆ ಭೇಟಿ, ಅವರು ನಮ್ಮ ಮನೆಗೆ ಭೇಟಿ, ಶಾಪಿಂಗ್, ಹೋಟೆಲ್, ಮದುವೆ , ಗೃಹ ಪ್ರವೇಶ ಮುಂತಾದ ಕಾರ್ಯಕ್ರಮಗಳು ಹೀಗೆ ಮನೆಯಲ್ಲಿ ಇರುವುದೇ ಅಪರೂಪವಾಗಿತ್ತು. ಆದರೆ ಈ ರಜೆ ಹಾಗಲ್ಲ. ಇಡೀ ದಿನ ಮನೆಯಲ್ಲಿ ಸೆರೆ. ನನಗಂತೂ ಇಂತಹ ರಜೆಯಲ್ಲಿ ಮನೆಯಲ್ಲಿಯೇ ಇರುವುದು ಮೊದಲ ಬಾರಿ. ಮನದಲ್ಲಿ ಆತಂಕ, ತಳಮಳ, ಈ ವೈರಸ್ ನಿಂದಾಗಿ ಇಡೀ ಜೀವನದಲ್ಲಿ ಒಮ್ಮೆಯಾದರೂ ಕಾಣ ಸಿಗದ ಅನಿಶ್ಚಿತತೆಯ, ಉದ್ವೇಗದ ಅನುಭವ ಇದು.ಅಸಾಧ್ಯ ಎನಿಸಿದ ಎಲ್ಲವನ್ನೂ ಸಾಧ್ಯವಾಗಿಸಿದ ಸಂದರ್ಭದಲ್ಲಿ ಬದುಕು ಜನಗಳಿಗೆ ಏನೇನೋ ಕಲಿಸಿದೆ.ಏನಿಲ್ಲದಿದ್ದರೂ ಬದುಕುವ ಛಲ ,ಸಾವಿರಾರು ಮೈಲು ದೂರ ನಡೆದು ಬದುಕು ಉಳಿಸಿಕೊಳ್ಳುವ ಶಕ್ತಿ, ತಾಳ್ಮೆ, ನೂರಾರು ಸಂಕಷ್ಟಗಳಿಗೆ ಮಿಡಿಯುವ ಮನಸ್ಸುಗಳು,ಜಾತಿ,ಕುಲ,ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಅನ್ನೋ ವಾಸ್ತವ ,ಶುಭ್ರ ಆಕಾಶ,ಮಲೀನತೆಯಿಂದ ಹೊರಬಂದ ಪರಿಸರ, ಮನುಷ್ಯರಿಲ್ಲದ ರಸ್ತೆಗಳಲ್ಲಿ ನಿರಾಂತಕವಾಗಿ ಕುಣಿದಾಡುತ್ತಿರುವ ಪ್ರಾಣಿ ಪಕ್ಷಿಗಳು ಇವೆಲ್ಲವೂ ಆಶಾದಾಯಕವೆ ಆಗಿದೆ. ಪ್ರಾಣವನ್ನು ಒತ್ತೆ ಇಟ್ಟು ರೋಗಿಗಳನ್ನು ಬದುಕಿಸಲು ತಮ್ಮವರೆಲ್ಲರಿಂದಲೂ ದೂರವಿದ್ದೂ ಕಷ್ಟಪಡುತ್ತಿರುವ ವೈದ್ಯ ದೇವರುಗಳು, ನರ್ಸ್ಗಳು,ದಾದಿಗಳು, ಆರೋಗ್ಯ ಇಲಾಖೆ ಯವರು,ಕಾನೂನು ಕಾಪಾಡುತ್ತಿರುವ ಪೋಲೀಸರು, ಕಷ್ಟಗಳಿಗೆ ಮರುಗಿ ಸಹಾಯ ಹಸ್ತ ನೀಡುತ್ತಿರುವ ಕರುಣಾಮಯಿಗಳು, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ಪಂದಿಸುತ್ತಿರುವ ಮಾನವೀಯತೆಯ ಸಕಾರಮೂರ್ತಿಗಳು.ಈ ಸಂಕಷ್ಟದಿಂದ ಪಾರಾಗಲು ದುಡಿಯುವ ಮಂತ್ರಿ ಮಹೋದಯರು, ರಾಜಕಾರಣಿ ಗಳು ಇವರೆಲ್ಲರ ಪರಿಶ್ರಮ ಸಂಕಷ್ಟ ದಿನಗಳಲ್ಲಿ ವ್ಯರ್ಥ ವಾಗದ ಸಾರ್ಥಕ ವಾಗಲಿ. ಆದರೆ, ಕೆಲವು ಮೂರ್ಖರಿಂದ ಅಸಹಕಾರ, ವಾಪಾಸು ಕಳ್ಳಿಯಂತೆ ಕೊರೋನ ವೈರಸ್ಸಿಗಿಂತ ವೇಗವಾಗಿ ಹಬ್ಬಿ ಸಮಾಜದ ಸ್ವಾಸ್ಥ್ಯ ಕದಡುತ್ತಿರುವ ಕೋಮುವಾದ, ಒಳಗೊಳಗೆ ಸ್ಫೋಟಗೊಳ್ಳಲು ಸಿದ್ದವಾಗಿರುವ ಕುದಿಯುತ್ತಿರುವ ಮನಸ್ಸುಗಳು , ಕೆಲಸವಿಲ್ಲದೆ ,ತಿನ್ನಲು ಅನ್ನವಿಲ್ಲದೆ ಅತಂತ್ರಗೊಂಡಿರುವ , ನಿರ್ಗತಿಕ ಕೆಲಸಗಾರರು, ಕನಿಷ್ಠ ಸವಲತ್ತುಗಳನ್ನು ಪಡೆಯಲು ಹೆಣಗಾಡುತ್ತಿರುವ ಕಾರ್ಮಿಕರು, ತಮ್ಮದಲ್ಲದ ತಪ್ಪಿಗೆ ರೋಗ ಅಂಟಿಸಿಕೊಂಡು ಸಾವಿನ ಕೂಪಕ್ಕೆ ಬೀಳುತ್ತಿರುವ ಕೆಲ ದುರಾದೃಷ್ಟ ವಂತರು, ನಿರ್ಲಕ್ಷ್ಯದಿಂದ ,ದುರಾಂಕಾರದಿಂದ , ಧರ್ಮಾಂಧ ತೆಯಿಂದ ರೋಗ ಅಂಟಿಸುತ್ತಿರುವ ನೀಚರು ಇವೆಲ್ಲವನ್ನೂ ಈ ಸಂದರ್ಭದಲ್ಲಿ ನೋಡುತ್ತಾ, ನೋಡುತ್ತಾ ಮನಸ್ಸಿನಲ್ಲೇ ತಳಮಳಿಸುವಂತಾಗಿದೆ. ಎಲ್ಲವನ್ನೂ ನೋಡುತ್ತಾ ಕಲಿಯಬೇಕಾದ ಸಮಯ.ಎಲ್ಲವು ಇದ್ದು ಏನೂ ಇಲ್ಲದ ಭಾವ. ಕಷ್ಟದ ದಿನಗಳಲ್ಲಿ ಎಲ್ಲರಿಗೂ ಒದಗಿ ಬರಲಾರದ ಅಸಹಾಯಕತೆ ಕಾಡುತ್ತಿರುವುದು ನಿಜವೇ ಆಗಿದೆ. ಮುಂದೇನು ಅನ್ನುವ ಅನಿಶ್ಚಿತತೆ, ಈ ಮಹಾ ಖಾಯಿಲೆಯಿಂದ ಇಷ್ಟೇಲ್ಲಾ ಎಚ್ಚರಿಕೆ ವಹಿಸಿಯೂ ಬದುಕುತ್ತೇವೆಯೋ, ಬದುಕಿದರೂ ಮುಂದೇನು ಸಂಕಷ್ಟಗಳು ಕಾಡುತ್ತವೆಯೊ, ಮತ್ತೆ ಹಿಂದಿನಂತೆ ಇರಲು ಸಾಧ್ಯವೇ.ಆರ್ಥಿಕವಾಗಿ ಅದೆಷ್ಟೋ ವರ್ಷಗಳ ಹಿಂದಕ್ಕೆ ಹೋಗಬೇಕಾಗಿದೆಯೋ.ಎಲ್ಲವನ್ನು ಸರಿಪಡಿಸಲು ಇನ್ನೂ ಅದೆಷ್ಟು ವರ್ಷಗಳು ಬೇಕಾಗುತ್ತವೆಯೋ.ಊಹಿಸಿಕೊಳ್ಳಲೇ ದಿಗಿಲಾಗುತ್ತದೆ. ಕೆಳವರ್ಗದ, ಮೇಲುವರ್ಗದ, ಸರ್ಕಾರಿ, ಖಾಸಗಿ ವರ್ಗದ ನೌಕರರು,ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ಉದ್ಯೋಗಿ ಗಳು, ಸಣ್ಣ ಪುಟ್ಟ ಕೈಗಾರಿಕೆಗಳ ಮಾಲೀಕರು, ಪತ್ರಿಕೆಗಳ ಮಾಲಿಕರು,ಅಲ್ಲಿ ಕೆಲಸಗಾರರು, ಕಟ್ಟಡ ನಿರ್ಮಾಣ ಕೆಲಸ ಮಾಡುವ ಪತ್ರಕರ್ತರು , ಕೆಲಸದವರು,ರೈತರು, ಹೋಟೆಲ್ ಉದ್ಯಮ ಒಂದೇ ಎರಡೇ ಇವರೆಲ್ಲರ ಪರಿಸ್ಥಿತಿ ಮುಂದೆ ಏನಾಗಬಹುದು, ಯಾವ ರೀತಿಯ ಆರ್ಥಿಕ ಸಂಕಷ್ಟದ ಬಿರುಗಾಳಿ ಬೀಸ ಬಹುದು ಎಂಬುದನ್ನು ಊಹಿಸಿದರೆ ಎದೆ ನಡುಗುತ್ತದೆ.ಪ್ರಾಯಶ ಕೊರೋನ ವೈರಸ್ ಧಾಳಿಯ ಸಾವಿಗಿಂತಲೂ ನಂತರದ ದಿನಗಳಲ್ಲಿ ಬದುಕುವ ದಾರಿ ಮುಚ್ಚಿ ಹೋಗಿ ಸಾವು ಬಯಸುವ ಸಂಖ್ಯೆ ಹೆಚ್ಚಾಗುವ ಭಯ ಕಾಡದೆ ಇರದು.ಈ ಎಲ್ಲಾ ಭಯಗಳು ನಡುವೆಯೂ ಭರವಸೆಯ ಬೆಳಕನ್ನು ಹಿಡಿದು ಬದುಕಲೇ ಬೇಕಾಗಿದೆ.ಒಳ್ಳೆಯದಾಗಬಹುದು ಅನ್ನೂ ನಿರೀಕ್ಷೆಯಲಿ ಇವತ್ತಿನ ಆತಂಕದ ದಿನಗಳನ್ನು ತಳ್ಳಬೇಕಾಗಿದೆ. *****************************

ಪ್ರಸ್ತುತ Read Post »

You cannot copy content of this page